ಫಂಗಲ್ ಇನ್​ಫೆಕ್ಷನ್ ಹೇಗೆ ಹರಡುತ್ತದೆ? ಇದನ್ನು ನಿಯಂತ್ರಿಸುವುದು ಹೇಗೆ?

Fungal Infections Causes: ಕೆಲವು ಶಿಲೀಂಧ್ರಗಳು ಯಾವುದೇ ತೊಂದರೆ ಉಂಟುಮಾಡುವುದಿಲ್ಲ. ಆದರೆ ಕೆಲವು ಶಿಲೀಂಧ್ರಗಳು ಅತ್ಯಂತ ಅಪಾಯಕಾರಿ ಮತ್ತು ಮಾರಣಾಂತಿಕ ಕಾಯಿಲೆಗಳಿಗೆ ಕಾರಣವಾಗಬಹುದು. ಶಿಲೀಂಧ್ರಗಳ ಸೋಂಕನ್ನು ಹರಡುವ ಕೆಲವು ಅಪಾಯಕಾರಿ ಅಂಶಗಳು ಹೀಗಿವೆ...

ಫಂಗಲ್ ಇನ್​ಫೆಕ್ಷನ್ ಹೇಗೆ ಹರಡುತ್ತದೆ? ಇದನ್ನು ನಿಯಂತ್ರಿಸುವುದು ಹೇಗೆ?
ಶಿಲೀಂಧ್ರ ಸೋಂಕು Image Credit source: iStock
Follow us
ಸುಷ್ಮಾ ಚಕ್ರೆ
|

Updated on: Sep 25, 2023 | 6:35 PM

ಮಳೆಗಾಲದಲ್ಲಿ ಅಥವಾ ಬಿರುಬೇಸಿಗೆಯಲ್ಲಿ ಫಂಗಲ್ ಇನ್​ಫೆಕ್ಷನ್ ಅಥವಾ ಶಿಲೀಂಧ್ರ ಸೋಂಕು ಹರಡುವುದು ಸಾಮಾನ್ಯ. ಈ ಶಿಲೀಂಧ್ರಗಳ ಸೋಂಕು ಯಾರ ಮೇಲೆ ಬೇಕಾದರೂ ಪರಿಣಾಮ ಬೀರಬಹುದು. ಇದು ದೇಹದ ಎಲ್ಲ ಭಾಗಗಳಲ್ಲಿಯೂ ಕಾಣಿಸಿಕೊಳ್ಳಬಹುದು. ಶಿಲೀಂಧ್ರಗಳು ಸೂಕ್ಷ್ಮಜೀವಿಗಳಾಗಿದ್ದು ಅವುಗಳು ಜೀವಕೋಶದ ಗೋಡೆಗಳಲ್ಲಿರುವ ಚಿಟಿನ್ ಎಂಬ ವಸ್ತುವಿನಿಂದ ರೂಪಿಸಲ್ಪಡುತ್ತವೆ. ಕೆಲವು ಶಿಲೀಂಧ್ರಗಳು ಯಾವುದೇ ತೊಂದರೆ ಉಂಟುಮಾಡುವುದಿಲ್ಲ. ಆದರೆ ಕೆಲವು ಶಿಲೀಂಧ್ರಗಳು ಅತ್ಯಂತ ಅಪಾಯಕಾರಿ ಮತ್ತು ಮಾರಣಾಂತಿಕ ಕಾಯಿಲೆಗಳಿಗೆ ಕಾರಣವಾಗಬಹುದು.

ವಿವಿಧ ರೀತಿಯ ಶಿಲೀಂಧ್ರಗಳು ಸೋಂಕನ್ನು ಉಂಟುಮಾಡಬಹುದು. ಕೆಲವೊಮ್ಮೆ ನಮಗೆ ಶಿಲೀಂಧ್ರ ಸೋಂಕು ತಗುಲಿದೆ ಎಂಬುದು ಕೂಡ ನಮಗೆ ಗೊತ್ತಾಗುವುದಿಲ್ಲ. ಫಂಗಲ್ ಸೋಂಕುಗಳು ಸಾಂಕ್ರಾಮಿಕವಾಗಬಹುದು. ಅವು ಒಬ್ಬರಿಂದ ಇನ್ನೊಬ್ಬರಿಗೆ ಹರಡಬಹುದು. ಅನೇಕ ಜನರು ತಮ್ಮ ಜೀವನದಲ್ಲಿ ಒಮ್ಮೆಯಾದರೂ ಶಿಲೀಂಧ್ರಗಳ ಸೋಂಕಿನಿಂದ ಬಳಲುತ್ತಾರೆ. ಕಳಪೆ ನೈರ್ಮಲ್ಯ, ಆರ್ದ್ರತೆ ಮತ್ತು ಬಿಸಿ ವಾತಾವರಣವು ಶಿಲೀಂಧ್ರಗಳ ಸೋಂಕಿನ ಸಂಭವನೀಯ ಕಾರಣಗಳಾಗಿವೆ.

ಡೈಪರ್ ರಾಶ್, ಅಥ್ಲೀಟ್ ಲೆಗ್, ಬಾಯಿಯ ಹುಣ್ಣು ಇವು ಸಾಮಾನ್ಯವಾದ ಶಿಲೀಂಧ್ರ ಸೋಂಕುಗಳ ಬಗೆಗಳಾಗಿವೆ. ಇದು ರಿಂಗ್‌ವರ್ಮ್ ಎಂಬ ಹೆಸರಿನಿಂದ ಕರೆಯಲ್ಪಟ್ಟರೂ ಇದು ಶಿಲೀಂಧ್ರವಾಗಿದೆ.

ಇದನ್ನೂ ಓದಿ: ಒತ್ತಡವೇ ನಿಮ್ಮ ಹೃದಯದ ಅತಿದೊಡ್ಡ ಶತ್ರು; ಯಾಕೆ ಗೊತ್ತಾ?

ಶಿಲೀಂಧ್ರಗಳ ಸೋಂಕನ್ನು ಹರಡುವ ಕೆಲವು ಅಪಾಯಕಾರಿ ಅಂಶಗಳು ಹೀಗಿವೆ…

– ಬಿಸಿ ಮತ್ತು ಆರ್ದ್ರ ವಾತಾವರಣದಲ್ಲಿ ವಾಸಿಸುವುದು. ಹೆಚ್ಚು ಬೆವರುವುದು ಅಥವಾ ಒದ್ದೆಯಾದ ಬಟ್ಟೆಗಳನ್ನು ಧರಿಸುವುದು ಶಿಲೀಂಧ್ರಗಳ ಸೋಂಕಿನ ಬೆಳವಣಿಗೆಗೆ ಕಾರಣವಾಗಬಹುದು.

– ಮಧುಮೇಹ, ಎಚ್‌ಐವಿ, ಕ್ಯಾನ್ಸರ್, ಮುಂತಾದ ಕಾಯಿಲೆಗಳಿಂದಾಗಿ ಕಡಿಮೆಯಾದ ರೋಗನಿರೋಧಕ ಶಕ್ತಿಯು ಶಿಲೀಂಧ್ರಗಳ ಸೋಂಕಿಗೆ ಕಾರಣವಾಗಬಹುದು.

– ಅಶುದ್ಧ ವಾತಾವರಣದಲ್ಲಿ ವಾಸಿಸುವುದು ಮತ್ತು ವೈಯಕ್ತಿಕ ನೈರ್ಮಲ್ಯವನ್ನು ಕಾಪಾಡಿಕೊಳ್ಳದಿರುವುದು ಶಿಲೀಂಧ್ರಗಳ ಸೋಂಕಿಗೆ ಕಾರಣವಾಗಬಹುದು.

– ಶುಚಿಯಾಗಿರದ ಸಾಕ್ಸ್ ಮತ್ತು ಒಳ ಉಡುಪುಗಳಂತಹ ಕೊಳಕು ಬಟ್ಟೆಗಳನ್ನು ಧರಿಸುವುದು ಶಿಲೀಂಧ್ರಗಳ ಸೋಂಕಿಗೆ ಕಾರಣವಾಗಬಹುದು.

– ತುಂಬಾ ಬಿಗಿಯಾದ ಬಟ್ಟೆಗಳನ್ನು ಧರಿಸುವುದರಿಂದ ಬೆವರುವಿಕೆಗೆ ಕಾರಣವಾಗಬಹುದು. ಇದು ಶಿಲೀಂಧ್ರಗಳ ಬೆಳವಣಿಗೆಗೆ ಅಗತ್ಯವಾದ ತೇವಾಂಶವನ್ನು ಒದಗಿಸುತ್ತದೆ.

ಇದನ್ನೂ ಓದಿ: ಲಿಫ್ಟ್​ ಬದಲು ಮೆಟ್ಟಿಲು ಹತ್ತುವುದರಿಂದ ಏನೆಲ್ಲ ಪ್ರಯೋಜನವಿದೆ ಗೊತ್ತಾ?

– ಸ್ಥೂಲಕಾಯತೆಯು ಶಿಲೀಂಧ್ರಗಳ ಸೋಂಕಿಗೆ ಕಾರಣವಾಗಬಹುದು. ಚರ್ಮದಲ್ಲಿ ತೇವಾಂಶವನ್ನು ಉಳಿಸಿಕೊಳ್ಳುವುದು ಶಿಲೀಂಧ್ರಕ್ಕೆ ಸಂತಾನೋತ್ಪತ್ತಿಯ ಜಾಗವನ್ನು ನೀಡುತ್ತದೆ.

– ಒತ್ತಡವು ನಮ್ಮ ರೋಗನಿರೋಧಕ ಶಕ್ತಿಯನ್ನು ಮತ್ತಷ್ಟು ದುರ್ಬಲಗೊಳಿಸಬಹುದು. ಇದು ಶಿಲೀಂಧ್ರಗಳ ಸೋಂಕಿಗೆ ಕಾರಣವಾಗುತ್ತದೆ.

– ಗರ್ಭಾವಸ್ಥೆಯಲ್ಲಿ ಹಾರ್ಮೋನುಗಳ ಬದಲಾವಣೆಗಳು ಯೋನಿ ಸೋಂಕುಗಳಿಗೆ ಕಾರಣವಾಗಬಹುದು.

ಶಿಲೀಂಧ್ರಗಳ ಸೋಂಕನ್ನು ತಡೆಗಟ್ಟಲು ನೀವು ಈ ಕೆಲವು ಮುನ್ನೆಚ್ಚರಿಕೆಗಳನ್ನು ಅನುಸರಿಸಬಹುದು…

– ಯಾವಾಗಲೂ ಸ್ವಚ್ಛವಾದ ಬಟ್ಟೆಗಳನ್ನು ಧರಿಸಿ. ಏಕೆಂದರೆ ಬಟ್ಟೆಯನ್ನು ತೊಳೆಯದಿದ್ದರೆ ಶಿಲೀಂಧ್ರಗಳು ದೀರ್ಘಕಾಲದವರೆಗೆ ಬಟ್ಟೆಗೆ ಅಂಟಿಕೊಳ್ಳುತ್ತವೆ.

– ತುಂಬಾ ಬಿಗಿಯಾದ ಬಟ್ಟೆಗಳನ್ನು ಧರಿಸಬೇಡಿ. ಏಕೆಂದರೆ ಇದು ನಿಮ್ಮ ಚರ್ಮಕ್ಕೆ ಗಾಳಿಯ ಹರಿವನ್ನು ಕಡಿಮೆ ಮಾಡುತ್ತದೆ. ಬೆವರುವಿಕೆಯನ್ನು ಹೆಚ್ಚಿಸುತ್ತದೆ. ಇದು ಒಟ್ಟಾಗಿ ಶಿಲೀಂಧ್ರಗಳ ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ. ಸ್ವಚ್ಛವಾದ ಕಾಟನ್ ಬಟ್ಟೆಗಳಿಗೆ ಆದ್ಯತೆ ನೀಡಿ.

– ಸೋಂಕು ಪೀಡಿತ ಪ್ರದೇಶವನ್ನು ತುರಿಸಿಕೊಳ್ಳಬೇಡಿ. ಏಕೆಂದರೆ ಅದು ಸೋಂಕನ್ನು ಉಲ್ಬಣಗೊಳಿಸುತ್ತದೆ ಮತ್ತು ಸೋಂಕು ಹರಡುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

– ಸೋಂಕಿರುವ ಪ್ರದೇಶವನ್ನು ದಿನಕ್ಕೆ ಕನಿಷ್ಠ 2 ರಿಂದ 3 ಬಾರಿ ತೊಳೆಯಿರಿ. ಇದು ಶಿಲೀಂಧ್ರಗಳ ಬೆಳವಣಿಗೆಯ ತೀವ್ರತೆಯನ್ನು ನಿಯಂತ್ರಿಸಬಹುದು.

– ಶಿಲೀಂಧ್ರದ ಸೋಂಕಿರುವ ಜಾಗವನ್ನು ಸಾಧ್ಯವಾದಷ್ಟು ಒಣಗಿಸಿಕೊಳ್ಳಿ. ಕಡಿಮೆ ತೇವಾಂಶವು ಶಿಲೀಂಧ್ರವು ಬೆಳೆಯಲು ಕಡಿಮೆ ಅವಕಾಶವನ್ನು ನೀಡುತ್ತದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ