AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿಲೀಂಧ್ರ ಸೋಂಕುಗಳು ಅಥವಾ ಫಂಗಲ್ ಇನ್‌ಫೆಕ್ಷನ್ಸ್: ವಿಧಗಳು, ಕಾರಣಗಳು ಮತ್ತು ಸರಳ ಚಿಕಿತ್ಸಾ ವಿಧಾನಗಳು

Fungal Infections; ಫಂಗಲ್ ಇನ್‌ಫೆಕ್ಷನ್‌ಗಳು ಮಾನವರ ದೇಹದ ವಿವಿಧ ಭಾಗಗಳ ಮೇಲೆ ಪ್ರಭಾವ ಬೀರಬಲ್ಲವು. ಆ ಮೂಲಕ ವಿವಿಧ ರೀತಿಯ ರೋಗಲಕ್ಷಣಗಳು ಮತ್ತು ಸಂಕೀರ್ಣತೆಗಳನ್ನು ಉಂಟುಮಾಡಬಲ್ಲವು. ಫಂಗಲ್ ಇನ್‌ಫೆಕ್ಷನ್‌ಗಳ ವಿಧಗಳು, ಕಾರಣಗಳು ಮತ್ತು ಲಭ್ಯವಿರುವ ಚಿಕಿತ್ಸೆಗಳ ಕುರಿತು ಒಂದಷ್ಟು ಸ್ಪಷ್ಟ ಮಾಹಿತಿ ಇಲ್ಲಿದೆ.

ಶಿಲೀಂಧ್ರ ಸೋಂಕುಗಳು ಅಥವಾ ಫಂಗಲ್ ಇನ್‌ಫೆಕ್ಷನ್ಸ್: ವಿಧಗಳು, ಕಾರಣಗಳು ಮತ್ತು ಸರಳ ಚಿಕಿತ್ಸಾ ವಿಧಾನಗಳು
ಸಾಂದರ್ಭಿಕ ಚಿತ್ರ
Follow us
TV9 Web
| Updated By: Ganapathi Sharma

Updated on: Sep 14, 2023 | 8:15 AM

ಶಿಲೀಂಧ್ರ ಸೋಂಕುಗಳನ್ನು (Fungal infections) ಮೈಕಾಸಿಸ್ ಎಂದೂ ಕರೆಯಲಾಗುತ್ತದೆ. ಇವು ವಿವಿಧ ಬಗೆಯ ಶಿಲೀಂಧ್ರಗಳಿಂದ ತಲೆದೋರುವ ಸಾಮಾನ್ಯ ಆರೋಗ್ಯ ಸಮಸ್ಯೆಯಾಗಿದೆ. ಬ್ಯಾಕ್ಟೀರಿಯಲ್ ಅಥವಾ ವೈರಲ್ ಇನ್‌ಫೆಕ್ಷನ್‌ಗಳ ರೀತಿ ಗಮನ ಸೆಳೆಯದಿದ್ದರೂ, ಸರಿಯಾದ ಚಿಕಿತ್ಸೆ ಒದಗಿಸದಿದ್ದರೆ ಫಂಗಲ್ ಇನ್‌ಫೆಕ್ಷನ್‌ಗಳು ಆರೋಗ್ಯದ ಮೇಲೆ ಭಾರೀ ಪರಿಣಾಮ ಬೀರಬಲ್ಲವು. ಈ ಲೇಖನ ಫಂಗಲ್ ಇನ್‌ಫೆಕ್ಷನ್‌ಗಳ ವಿಧಗಳು, ಕಾರಣಗಳು ಮತ್ತು ಲಭ್ಯವಿರುವ ಚಿಕಿತ್ಸೆಗಳ ಕುರಿತು ಒಂದಷ್ಟು ಸ್ಪಷ್ಟ ಮಾಹಿತಿಗಳನ್ನು ಒದಗಿಸಲಿದೆ.

ಫಂಗಲ್ ಇನ್‌ಫೆಕ್ಷನ್‌ಗಳ ವಿಧಗಳು

ಫಂಗಲ್ ಇನ್‌ಫೆಕ್ಷನ್‌ಗಳು ಮಾನವರ ದೇಹದ ವಿವಿಧ ಭಾಗಗಳ ಮೇಲೆ ಪ್ರಭಾವ ಬೀರಬಲ್ಲವು. ಆ ಮೂಲಕ ವಿವಿಧ ರೀತಿಯ ರೋಗಲಕ್ಷಣಗಳು ಮತ್ತು ಸಂಕೀರ್ಣತೆಗಳನ್ನು ಉಂಟುಮಾಡಬಲ್ಲವು. ಇಲ್ಲಿ ಒಂದಷ್ಟು ಸಾಮಾನ್ಯವಾದ ಫಂಗಲ್ ಇನ್‌ಫೆಕ್ಷನ್‌ಗಳ ವಿಧಗಳನ್ನು ಗಮನಿಸೋಣ;

ಅಥ್ಲೀಟ್ಸ್ ಫೂಟ್:

ಈ ಸೋಂಕು ಕಾಲುಗಳನ್ನು, ಅದರಲ್ಲೂ ಬೆರಳುಗಳ ನಡುವಿನ ಪ್ರದೇಶವನ್ನು ಗುರಿಯಾಗಿಸುತ್ತದೆ. ಇದರ ಪರಿಣಾಮವಾಗಿ ತುರಿಕೆ, ಕೆಂಪಾಗುವಿಕೆ ಮತ್ತು ಚರ್ಮದಲ್ಲಿ ಬಿರುಕು ಕಾಣಿಸಿಕೊಳ್ಳುತ್ತದೆ. ಇದು ಸಾಮಾನ್ಯವಾಗಿ ಲಾಕರ್ ರೂಮ್‌ನಂತಹ ತೇವ ಹೊಂದಿರುವ ವಾತಾವರಣದಲ್ಲಿ ತಲೆದೋರುತ್ತದೆ.

ಯೀಸ್ಟ್ ಇನ್‌ಫೆಕ್ಷನ್:

ಈ ಸೋಂಕು ಮಹಿಳೆಯರನ್ನು ಹೆಚ್ಚಾಗಿ ಬಾಧಿಸುವ ರೀತಿಯದ್ದಾಗಿದ್ದು, ಯೋನಿಯಂತಹ ಬೆಚ್ಚಗಿನ, ತೇವಾಂಶಯುತ ಭಾಗದಲ್ಲಿ ಉಂಟಾಗುತ್ತದೆ. ಇದು ತುರಿಕೆ, ಉರಿ ಹಾಗೂ ಅಸಹಜ ಸ್ರಾವವನ್ನು ಉಂಟುಮಾಡುತ್ತದೆ.

ರಿಂಗ್‌ವರ್ಮ್:

ಇದರ ಹೆಸರು ರಿಂಗ್‌ವರ್ಮ್ ಎಂದಾಗಿದ್ದರೂ, ಈ ಸೋಂಕು ಹುಳಗಳಿಂದ ಬರುವ ಸೋಂಕಲ್ಲ. ಇದೊಂದು ಶಿಲೀಂಧ್ರದ ಸೋಂಕಾಗಿದ್ದು, ಚರ್ಮದ ಮೇಲೆ ಕೆಂಪಾದ, ವೃತ್ತಾಕಾರದ ದದ್ದಿನ ರೀತಿ ಕಂಡುಬರುತ್ತದೆ.

ಉಗುರಿನ (ನೇಲ್) ಫಂಗಸ್:

ಇದನ್ನು ಒನಿಕೋಮಿಕಾಸಿಸ್ ಎಂದೂ ಕರೆಯಲಾಗುತ್ತದೆ. ಈ ಸೋಂಕು ಕೈ ಮತ್ತು ಕಾಲಿನ ಬೆರಳುಗಳ ಉಗುರುಗಳನ್ನು ಬಾಧಿಸುತ್ತದೆ. ಇದರಿಂದ ಬಾಧಿತವಾದ ಉಗುರುಗಳು ದಪ್ಪವಾಗಿ, ದುರ್ಬಲಗೊಂಡು, ತಮ್ಮ ಬಣ್ಣ ಕಳೆದುಕೊಳ್ಳುತ್ತವೆ.

ಜಾಕ್ ಇಚ್:

ಅಥ್ಲೀಟ್ಸ್ ಫೂಟ್ ರೀತಿಯಲ್ಲೇ ಇರುವ ಜಾಕ್ ಇಚ್ ತೊಡೆಸಂಧಿನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಇದು ತುರಿಕೆ, ಕೆಂಪಾಗುವಿಕೆ ಮತ್ತು ದದ್ದು ಉಂಟಾಗುವಂತೆ ಮಾಡುತ್ತದೆ.

ಫಂಗಲ್ ನ್ಯುಮೋನಿಯಾ;

ಉಸಿರಾಡುವ ವೇಳೆ ಒಳಗೆಳೆದುಕೊಂಡ ಶಿಲೀಂಧ್ರ ಬೀಜಕಗಳು ಶ್ವಾಸಕೋಶದ ಸೋಂಕಿಗೆ ಕಾರಣವಾಗಬಲ್ಲವು. ಆ ಮೂಲಕ ಕೆಮ್ಮು, ಉಸಿರಾಟದ ತೊಂದರೆ, ಹಾಗೂ ಜ್ವರದಂತಹ ಸಮಸ್ಯೆಗಳನ್ನು ಉಂಟುಮಾಡಬಲ್ಲವು.

ಕ್ಯಾಂಡಿಡಿಯಾಸಿಸ್:

ಈ ಸೋಂಕು ಬಾಯಿ, ಜನನಾಂಗ ಸೇರಿದಂತೆ, ದೇಹದ ವಿವಿಧ ಭಾಗಗಳಲ್ಲಿ ಕಾಣಿಸಿಕೊಳ್ಳಬಲ್ಲದು. ಇದನ್ನು ಕ್ಯಾಂಡಿಡಾ ಶಿಲೀಂಧ್ರ ಉಂಟುಮಾಡುತ್ತದೆ.

ಶಿಲೀಂಧ್ರ ಸೋಂಕುಗಳಿಗೆ ಕಾರಣಗಳು

ಶಿಲೀಂಧ್ರಗಳು ಎಲ್ಲಾ ಕಡೆಯೂ ಇರುತ್ತವೆ. ಅವುಗಳಲ್ಲಿ ಕೆಲವು ಮಾದರಿಯ ಶಿಲೀಂಧ್ರಗಳು ಬೆಳೆಯಲು ಸರಿಯಾದ ಸನ್ನಿವೇಶ ಲಭಿಸಿದಾಗ ಸೋಂಕು ಉಂಟುಮಾಡುತ್ತವೆ. ಶಿಲೀಂಧ್ರ ಸೋಂಕುಗಳಿಗೆ ಸಾಮಾನ್ಯ ಕಾರಣಗಳು ಮತ್ತು ಅಪಾಯಗಳು ಈ ಕೆಳಗಿನಂತಿವೆ:

ಬೆಚ್ಚನೆಯ ಮತ್ತು ತೇವಾಂಶ ವಾತಾವರಣಗಳು: ಶಿಲೀಂಧ್ರಗಳು ತೇವಾಂಶಭರಿತ, ಬೆಚ್ಚನೆಯ ಸ್ಥಳಗಳಲ್ಲಿ ಬೆಳೆಯುತ್ತವೆ. ಆದ್ದರಿಂದಲೇ ಕಾಲುಗಳು, ತೊಡೆಸಂಧು ಮತ್ತು ಕಂಕುಳು ಸೋಂಕಿನ ಅಪಾಯ ಹೊಂದಿರುತ್ತವೆ.

ದುರ್ಬಲ ರೋಗನಿರೋಧಕ ವ್ಯವಸ್ಥೆ: ಎಚ್ಐವಿ/ಏಡ್ಸ್ ಹೊಂದಿರುವ, ಅಥವಾ ಕೀಮೋಥೆರಪಿ ಚಿಕಿತ್ಸೆ ಪಡೆಯುತ್ತಿರುವ ಜನರು ದುರ್ಬಲ ರೋಗನಿರೋಧಕ ವ್ಯವಸ್ಥೆ ಹೊಂದಿದ್ದು, ಅವರಿಗೆ ಶಿಲೀಂಧ್ರ ಸೋಂಕುಗಳು ಬೇಗ ತಗಲುವ ಸಾಧ್ಯತೆ ಇರುತ್ತದೆ.

ಮಧುಮೇಹ: ಹೆಚ್ಚಿನ ರಕ್ತದ ಸಕ್ಕರೆ ಅಂಶ ಹೊಂದಿರುವವರಲ್ಲಿ ಶಿಲೀಂಧ್ರಗಳು ಬೆಳೆದು, ಸೋಂಕುಗಳನ್ನು ಉಂಟುಮಾಡಬಲ್ಲವು.

ಆ್ಯಂಟಿಬಯಾಟಿಕ್‌ಗಳು ಮತ್ತು ಸ್ಟಿರಾಯಿಡ್‌ಗಳು: ಈ ಔಷಧಗಳು ದೇಹದಲ್ಲಿರುವ ಸೂಕ್ಷ್ಮಜೀವಿಗಳ ಸಮತೋಲನ ತಪ್ಪಿಸಿ, ಶಿಲೀಂಧ್ರಗಳು ಬೆಳೆಯಲು ಅನುಕೂಲಕರ ವಾತಾವರಣ ಕಲ್ಪಿಸುತ್ತವೆ.

ಶಿಲೀಂಧ್ರ ಸೋಂಕುಗಳಿಗೆ ಚಿಕಿತ್ಸೆಗಳು

ಖುಷಿಯ ವಿಚಾರವೇನೆಂದರೆ, ಶಿಲೀಂಧ್ರ ಸೋಂಕುಗಳಿಗೆ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಬಹುದು. ಇದರ ಚಿಕಿತ್ಸೆ ಸಾಮಾನ್ಯವಾಗಿ ಸೋಂಕಿನ ವಿಧ ಹಾಗೂ ತೀವ್ರತೆಯನ್ನು ಅನುಸರಿಸಿರುತ್ತದೆ.

ಆ್ಯಂಟಿ ಫಂಗಲ್ ಕ್ರೀಮ್‌ಗಳು ಮತ್ತು ಮುಲಾಮುಗಳು: ಇವುಗಳನ್ನು ಔಷಧ ಅಂಗಡಿಗಳಿಂದ ನೇರವಾಗಿ, ಅಥವಾ ವೈದ್ಯರ ಸೂಚನೆಯ ಮೇರೆಗೆ ಪಡೆದುಕೊಂಡು, ನೇರವಾಗಿ ಸೋಂಕಿತ ಪ್ರದೇಶಕ್ಕೆ ಹಚ್ಚುವ ಮೂಲಕ ಶಿಲೀಂಧ್ರವನ್ನು ತೊಲಗಿಸಬಹುದು.

ಆ್ಯಂಟಿ ಫಂಗಲ್ ಔಷಧಗಳು: ಹೆಚ್ಚು ತೀವ್ರತೆ ಹೊಂದಿರುವ ಸೋಂಕುಗಳಿಗೆ ನಿಮ್ಮ ವೈದ್ಯರು ಸೇವಿಸುವಂತಹ ಔಷಧವನ್ನೂ ನೀಡಬಹುದು. ಆ ಔಷಧಗಳು ದೇಹದಾದ್ಯಂತ ಕಾರ್ಯಾಚರಿಸಿ, ಶಿಲೀಂಧ್ರವನ್ನು ಹೋಗಲಾಡಿಸುತ್ತವೆ.

ದೇಹವನ್ನು ಸ್ವಚ್ಛ, ತೇವರಹಿತವಾಗಿಡುವುದು: ಸೋಂಕಿತ ಪ್ರದೇಶವನ್ನು ಒಣಗಿದಂತೆ ಇಡುವುದು ಸೇರಿದಂತೆ, ಉತ್ತಮ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದರಿಂದ ಶಿಲೀಂಧ್ರಗಳು ಇನ್ನಷ್ಟು ಬೆಳೆಯದಂತೆ, ಹರಡದಂತೆ ತಡೆಗಟ್ಟಬಹುದು.

ಔಷಧೀಯ ಶ್ಯಾಂಪುಗಳು: ನೆತ್ತಿಯಲ್ಲಿ ಉಂಟಾಗುವ ಶಿಲೀಂಧ್ರ ಸೋಂಕುಗಳನ್ನು ನಿವಾರಿಸಲು ಆ್ಯಂಟಿ ಫಂಗಲ್ ಅಂಶಗಳನ್ನು ಒಳಗೊಂಡಿರುವ ಔಷಧೀಯ ಶ್ಯಾಂಪೂಗಳು ನೆರವಾಗುತ್ತವೆ.

ಜೀವನಶೈಲಿಯ ಬದಲಾವಣೆ: ಬಿಗಿಯಾದ ಬಟ್ಟೆಗಳ ಬಳಕೆ ಕಡಿಮೆ ಮಾಡುವುದು, ಆ್ಯಂಟಿ ಫಂಗಲ್ ಪೌಡರ್‌ಗಳ ಬಳಕೆ, ಉತ್ತಮ ಆಹಾರ ಸೇವನೆ ಶಿಲೀಂಧ್ರ ಸೋಂಕಿನ ತಡೆಗಟ್ಟುವಿಕೆ ಮತ್ತು ನಿವಾರಣೆಯಲ್ಲಿ ನೆರವಾಗುತ್ತದೆ.

ಶಿಲೀಂಧ್ರ ಸೋಂಕುಗಳು ನಮಗೆ ಯಾವಾಗಲೂ ತಿಳಿದಿರುವುದಿಲ್ಲವಾದರೂ, ಅವುಗಳನ್ನು ಸರಿಯಾಗಿ ಪರೀಕ್ಷಿಸದಿದ್ದರೆ ನಮ್ಮ ಆರೋಗ್ಯದ ಮೇಲೆ ಭಾರೀ ಪರಿಣಾಮ ಬೀರಬಲ್ಲವು. ಅವುಗಳ ವಿಧಗಳು, ಕಾರಣಗಳು ಹಾಗೂ ಲಭ್ಯ ಚಿಕಿತ್ಸೆಗಳನ್ನು ತಿಳಿಯುವುದರಿಂದ ಅವುಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ. ಉತ್ತಮ ನೈರ್ಮಲ್ಯ ಕಾಪಾಡಿಕೊಳ್ಳುವುದರಿಂದ, ಅಪಾಯಗಳ ಕುರಿತು ಜಾಗರೂಕವಾಗಿರುವುದರಿಂದ, ಅವಶ್ಯಕತೆ ಇದ್ದಾಗ ವೈದ್ಯಕೀಯ ನೆರವು ಪಡೆದುಕೊಳ್ಳುವುದರಿಂದ ನಾವು ಶಿಲೀಂಧ್ರ ಸೋಂಕಿನಿಂದ ದೂರವಿದ್ದು, ಹೆಚ್ಚು ಆರೋಗ್ಯಯುತ, ಆರಾಮದಾಯಕ ಜೀವನ ನಡೆಸಬಹುದು.

ಡಾ. ವಸುಧಾ ಪೌಲ್, ಎಂಬಿಬಿಎಸ್, ಎಂಡಿ, ಡಿಎಚ್ಎ, ಎಂಆರ್‌ಸಿಪಿ

(ಲೇಖಕರು: ಕನ್ಸಲ್ಟೆಂಟ್ – ಇಂಟರ್‌ನಲ್ ಮೆಡಿಸಿನ್, ಕಾವೇರಿ ಆಸ್ಪತ್ರೆ, ಇಲೆಕ್ಟ್ರಾನಿಕ್ ಸಿಟಿ, ಬೆಂಗಳೂರು)

ಸಿಟಿಲೈಟ್ಸ್: ದುನಿಯಾ ವಿಜಯ್ ಪುತ್ರಿ ಮೋನಿಷಾ ನಟನೆಯ ಸಣ್ಣ ಝಲಕ್ ಇಲ್ಲಿದೆ
ಸಿಟಿಲೈಟ್ಸ್: ದುನಿಯಾ ವಿಜಯ್ ಪುತ್ರಿ ಮೋನಿಷಾ ನಟನೆಯ ಸಣ್ಣ ಝಲಕ್ ಇಲ್ಲಿದೆ
Live: ವಿದೇಶಾಂಗ ಇಲಾಖೆಯಿಂದ ತುರ್ತು ಸುದ್ದಿಗೋಷ್ಠಿ
Live: ವಿದೇಶಾಂಗ ಇಲಾಖೆಯಿಂದ ತುರ್ತು ಸುದ್ದಿಗೋಷ್ಠಿ
ಸೀಸನ್​ ಮಧ್ಯ ನಾಯಕನನ್ನು ಬದಲಿಸಿದ್ದ ಆರ್​ಸಿಬಿ
ಸೀಸನ್​ ಮಧ್ಯ ನಾಯಕನನ್ನು ಬದಲಿಸಿದ್ದ ಆರ್​ಸಿಬಿ
ಪಾಕಿಸ್ತಾನದಿಂದ ಕದನವಿರಾಮ ಉಲ್ಲಂಘನೆ; ಪೇಶಾವರದಲ್ಲಿ ಭಾರತ ಪ್ರತಿದಾಳಿ
ಪಾಕಿಸ್ತಾನದಿಂದ ಕದನವಿರಾಮ ಉಲ್ಲಂಘನೆ; ಪೇಶಾವರದಲ್ಲಿ ಭಾರತ ಪ್ರತಿದಾಳಿ
ಜಮ್ಮುವಿನಲ್ಲಿ ಪಾಕ್​ನಿಂದ ಶೆಲ್ ದಾಳಿ; ಓರ್ವ ಯೋಧ ಸಾವು, 7 ಸೈನಿಕರಿಗೆ ಗಾಯ
ಜಮ್ಮುವಿನಲ್ಲಿ ಪಾಕ್​ನಿಂದ ಶೆಲ್ ದಾಳಿ; ಓರ್ವ ಯೋಧ ಸಾವು, 7 ಸೈನಿಕರಿಗೆ ಗಾಯ
ಕದನ ವಿರಾಮ ಉಲ್ಲಂಘನೆ: ಪಾಕಿಸ್ತಾನದಿಂದ ಭಾರತದ ಮೇಲೆ ಮತ್ತೆ ದಾಳಿ
ಕದನ ವಿರಾಮ ಉಲ್ಲಂಘನೆ: ಪಾಕಿಸ್ತಾನದಿಂದ ಭಾರತದ ಮೇಲೆ ಮತ್ತೆ ದಾಳಿ
ಭಾರತೀಯ ಸೇನೆ ಸಂವಿಧಾನಿಕ ಮೌಲ್ಯಗಳಲ್ಲಿ ವಿಶ್ವಾಸ ಹೊಂದಿದೆ: ಸೋಫಿಯಾ ಖುರೇಷಿ
ಭಾರತೀಯ ಸೇನೆ ಸಂವಿಧಾನಿಕ ಮೌಲ್ಯಗಳಲ್ಲಿ ವಿಶ್ವಾಸ ಹೊಂದಿದೆ: ಸೋಫಿಯಾ ಖುರೇಷಿ
ಯುದ್ಧ ಬೇಡ ಅಂತ ನಾನು ಹೇಳಿದ್ದಕ್ಕೆ ದೊಡ್ಡ ಯುದ್ಧವೇ ಆಗಿತ್ತು: ಸಿದ್ದರಾಮಯ್ಯ
ಯುದ್ಧ ಬೇಡ ಅಂತ ನಾನು ಹೇಳಿದ್ದಕ್ಕೆ ದೊಡ್ಡ ಯುದ್ಧವೇ ಆಗಿತ್ತು: ಸಿದ್ದರಾಮಯ್ಯ
ಒಂದನ್ನು ಜೈಸಲಮ್ಮೇರ್​ನಲ್ಲಿ ಪುಡಿಗಟ್ಟಿದರೆ ಮತ್ತೊಂದನ್ನು ಸಿರ್ಸಾದಲ್ಲಿ
ಒಂದನ್ನು ಜೈಸಲಮ್ಮೇರ್​ನಲ್ಲಿ ಪುಡಿಗಟ್ಟಿದರೆ ಮತ್ತೊಂದನ್ನು ಸಿರ್ಸಾದಲ್ಲಿ
ಎಲ್ಲ ಸರಿಯಾದ ಬಳಿಕ ಊರಿಗೆ ವಾಪಸ್ಸು ಬರುತ್ತೇವೆ ಎನ್ನುತ್ತಿರುವ ಜನ
ಎಲ್ಲ ಸರಿಯಾದ ಬಳಿಕ ಊರಿಗೆ ವಾಪಸ್ಸು ಬರುತ್ತೇವೆ ಎನ್ನುತ್ತಿರುವ ಜನ