ಮಹಿಳೆಯರಲ್ಲಿ ಈ ಸಮಸ್ಯೆಗಳು ಹೃದಯಾಘಾತದ ಲಕ್ಷಣಗಳೂ ಆಗಿರಬಹುದು!

ಹೃದಯಾಘಾತದಿಂದ ಬಳಲುತ್ತಿರುವ ವ್ಯಕ್ತಿಗೆ ಎದೆ ನೋವು ಕಾಣಿಸಿಕೊಳ್ಳುವುದು ಸಾಮಾನ್ಯ ಲಕ್ಷಣಗಳಲ್ಲಿ ಒಂದಾಗಿದೆ. ಮಹಿಳೆಯರ ಹೃದಯಾಘಾತದ ಲಕ್ಷಣಗಳು ಪುರುಷರಿಗಿಂತ ಭಿನ್ನವಾಗಿರುವುದರಿಂದ ಮಹಿಳೆಯರಲ್ಲಿ ಹೃದಯಾಘಾತದ ಲಕ್ಷಣಗಳು ಯಾವ ರೀತಿ ಇರುತ್ತವೆ ಎಂಬ ಮಾಹಿತಿ ಇಲ್ಲಿದೆ.

ಮಹಿಳೆಯರಲ್ಲಿ ಈ ಸಮಸ್ಯೆಗಳು ಹೃದಯಾಘಾತದ ಲಕ್ಷಣಗಳೂ ಆಗಿರಬಹುದು!
ಹೃದಯಾಘಾತImage Credit source: iStock
Follow us
ಸುಷ್ಮಾ ಚಕ್ರೆ
|

Updated on: Sep 13, 2023 | 7:35 PM

ಇತ್ತೀಚಿನ ದಿನಗಳಲ್ಲಿ ಎಲ್ಲಾ ವಯೋಮಾನದವರಲ್ಲಿ ಹೃದ್ರೋಗಗಳು ಹೆಚ್ಚಾಗುತ್ತಿವೆ. ಮೊದಲೆಲ್ಲ 60 ವರ್ಷ ಮೇಲ್ಪಟ್ಟವರಲ್ಲಿ ಹೃದಯಾಘಾತದ ಪ್ರಕರಣ ಹೆಚ್ಚಿರುತ್ತಿತ್ತು. ಆದರೆ, ಈಗ 30 ವರ್ಷ ಮೇಲ್ಪಟ್ಟವರೇ ಹೆಚ್ಚು ಹೃದಯಾಘಾತಕ್ಕೆ ಬಲಿಯಾಗುತ್ತಿರುವುದು ಆತಂಕಕಾರಿ ಸಂಗತಿ. ಪುರುಷರು ಮತ್ತು ಮಹಿಳೆಯರಲ್ಲಿ ಹೃದಯಾಘಾತದ ರೋಗಲಕ್ಷಣಗಳು ವಿಭಿನ್ನವಾಗಿರಬಹುದು. ಸಂಶೋಧನೆ ಪ್ರಕಾರ, ಪುರುಷರಿಗಿಂತಲೂ ಮಹಿಳೆಯರು ಹೃದಯಾಘಾತವನ್ನು ಅನುಭವಿಸುವ ಅಪಾಯ ಹೆಚ್ಚು.

ಹೃದಯಾಘಾತದಿಂದ ಬಳಲುತ್ತಿರುವ ವ್ಯಕ್ತಿಗೆ ಎದೆ ನೋವು ಕಾಣಿಸಿಕೊಳ್ಳುವುದು ಸಾಮಾನ್ಯ ಲಕ್ಷಣಗಳಲ್ಲಿ ಒಂದಾಗಿದೆ. ಮಹಿಳೆಯರ ಹೃದಯಾಘಾತದ ಲಕ್ಷಣಗಳು ಪುರುಷರಿಗಿಂತ ಭಿನ್ನವಾಗಿರುವುದರಿಂದ ಮಹಿಳೆಯರಲ್ಲಿ ಹೃದಯಾಘಾತದ ಲಕ್ಷಣಗಳು ಯಾವ ರೀತಿ ಇರುತ್ತವೆ ಎಂಬ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ನೀವು ವರ್ಕ್​ಔಟ್ ಮಾಡುವವರಾಗಿದ್ದರೆ ಈ ಆಹಾರಗಳನ್ನು ಮಿಸ್ ಮಾಡಬೇಡಿ

ಮಹಿಳೆಯರಲ್ಲಿ ಹೃದಯಾಘಾತದ ವೇಳೆ ಎದೆ ನೋವು ಯಾವಾಗಲೂ ತೀವ್ರವಾಗಿರುವುದಿಲ್ಲ. ಮಹಿಳೆಯರು ಸಾಮಾನ್ಯವಾಗಿ ಹೃದಯಾಘಾತದ ನೋವನ್ನು ಎದೆಯಲ್ಲಿ ಬಿಗಿತ ಅಥವಾ ಒತ್ತಡ ಎಂದು ವಿವರಿಸುತ್ತಾರೆ. ಹಾಗೇ, ಎದೆ ನೋವು ಯಾವಾಗಲೂ ಹೃದಯಾಘಾತವನ್ನು ಸೂಚಿಸುವುದಿಲ್ಲ.

ಮಹಿಳೆಯರಲ್ಲಿ ಹೃದಯಾಘಾತದ ಲಕ್ಷಣಗಳು ಹೀಗಿವೆ…

1. ದೇಹದ ಮೇಲ್ಭಾಗದಲ್ಲಿ ನೋವು: ಮಹಿಳೆಯರು ಎದೆಯಲ್ಲಿ ಮಾತ್ರವಲ್ಲದೆ ಬೆನ್ನು, ಕುತ್ತಿಗೆ, ದವಡೆ ಅಥವಾ ಭುಜದಂತಹ ಮೇಲ್ಭಾಗದ ಇತರ ಭಾಗಗಳಲ್ಲಿ ಅಸ್ವಸ್ಥತೆ ಅಥವಾ ನೋವನ್ನು ಅನುಭವಿಸಬಹುದು.

2. ಉಸಿರಾಟದ ತೊಂದರೆ: ಮಹಿಳೆಯರು ಉಸಿರಾಟದ ತೊಂದರೆಯನ್ನು ಹೃದಯಾಘಾತದ ಪ್ರಮುಖ ಲಕ್ಷಣವಾಗಿ ಅನುಭವಿಸುವ ಸಾಧ್ಯತೆಯಿದೆ. ಕೆಲವೊಮ್ಮೆ ಎದೆಯ ನೋವು ಇಲ್ಲದೆ ಕೇವಲ ಉಸಿರಾಟದ ತೊಂದರೆ ಉಂಟಾಗಬಹುದು.

3. ವಾಕರಿಕೆ ಅಥವಾ ವಾಂತಿ: ಎದೆನೋವು ತೀವ್ರವಾಗಿರದಿದ್ದರೂ ಸಹ ಮಹಿಳೆಯರಲ್ಲಿ ವಾಕರಿಕೆ ಅಥವಾ ವಾಂತಿ ಹೃದಯಾಘಾತದ ಲಕ್ಷಣವಾಗಿರಬಹುದು.

ಇದನ್ನೂ ಓದಿ: ಗೋಡಂಬಿ ತಿನ್ನಿ, ಹೃದಯಾಘಾತದಿಂದ ದೂರವಿರಿ!

4. ವಿಪರೀತ ಆಯಾಸ: ಮಹಿಳೆಯರು ಅಗಾಧವಾದ ಆಯಾಸವನ್ನು ಅನುಭವಿಸಬಹುದು. ಅದು ಹೃದಯಾಘಾತಕ್ಕೂ ಮೊದಲು ಕೆಲವು ದಿನಗಳು, ವಾರಗಳು ಅಥವಾ ತಿಂಗಳುಗಳವರೆಗೆ ಇರುತ್ತದೆ.

5. ಬೆವರುವುದು: ಬೆವರುವಿಕೆ, ಆಗಾಗ್ಗೆ ತಲೆತಿರುಗುವಿಕೆ ಮಹಿಳೆಯರಲ್ಲಿ ಹೃದಯಾಘಾತದ ಲಕ್ಷಣವಾಗಿರಬಹುದು.

6. ಅಜೀರ್ಣ ಅಥವಾ ಎದೆಯುರಿ: ಕೆಲವು ಮಹಿಳೆಯರು ಹೃದಯಾಘಾತದ ಲಕ್ಷಣಗಳನ್ನು ಅಜೀರ್ಣ ಅಥವಾ ಎದೆಯುರಿ ಎಂದು ತಪ್ಪಾಗಿ ಭಾವಿಸಬಹುದು.

7. ನಿದ್ರಾಹೀನತೆ: ನಿದ್ರಿಸಲು ತೊಂದರೆ, ವಿವರಿಸಲಾಗದ ಆತಂಕ ಕೆಲವೊಮ್ಮೆ ಮಹಿಳೆಯರಲ್ಲಿ ಹೃದಯಾಘಾತಕ್ಕೆ ಮುಂಚಿತವಾಗಿ ಕಾಣಿಸಿಕೊಳ್ಳಬಹುದು.

8. ಕೆಳ ಎದೆ ಅಥವಾ ಹೊಟ್ಟೆಯ ಮೇಲ್ಭಾಗದಲ್ಲಿ ನೋವು: ಕೆಲವು ಮಹಿಳೆಯರು ಕೆಳ ಎದೆ ಅಥವಾ ಹೊಟ್ಟೆಯ ಮೇಲ್ಭಾಗದಲ್ಲಿ ಅಸ್ವಸ್ಥತೆ ಅಥವಾ ನೋವನ್ನು ಅನುಭವಿಸಬಹುದು. ಇದನ್ನು ಜೀರ್ಣಕಾರಿ ಸಮಸ್ಯೆಗಳಿಂದ ಉಂಟಾಗಿರುವ ನೋವು ಎಂದು ತಪ್ಪಾಗಿ ಗ್ರಹಿಸಬಹುದು.

ಇನ್ನಷ್ಟು ಆರೋಗ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ