Banana Hair Pack: ಮಿರಿಮಿರಿ ಮಿಂಚುವ ದಟ್ಟ ದಪ್ಪ ಕೂದಲು ನಿಮ್ಮದಾಗಬೇಕಾ.. ಬಾಳೆಹಣ್ಣಿನಿಂದ ಹೀಗೆ ಮಾಡಿ

ಇತ್ತೀಚೆಗೆ ಮಾಲಿನ್ಯ ತುಂಬಾ ಹೆಚ್ಚಾಗಿದೆ. ಈ ಕಾರಣದಿಂದಾಗಿ, ಕೂದಲು ತನ್ನ ಬಣ್ಣ ಮತ್ತು ಹೊಳಪನ್ನು ಕಳೆದುಕೊಳ್ಳುತ್ತಿದೆ. ಅಲ್ಲದೆ ಇಂದಿನ ದಿನಗಳಲ್ಲಿ ಸೇವಿಸುವ ಆಹಾರದಿಂದ ಕೂದಲು ಶಕ್ತಿ ಕಳೆದುಕೊಳ್ಳುತ್ತಿದೆ. ಇಂತಹ ಸಮಸ್ಯೆಗಳೆಲ್ಲ ಮಂಗಳ ಹಾಡಿ, ಕೂದಲನ್ನು ಬಲವಾಗಿ ಮತ್ತು ಹೊಳೆಯುವಂತೆ ಮಾಡಲು ಬಾಳೆಹಣ್ಣು ಬಹಳಷ್ಟು ಸಹಾಯ ಮಾಡುತ್ತದೆ.

Banana Hair Pack: ಮಿರಿಮಿರಿ ಮಿಂಚುವ ದಟ್ಟ ದಪ್ಪ ಕೂದಲು ನಿಮ್ಮದಾಗಬೇಕಾ.. ಬಾಳೆಹಣ್ಣಿನಿಂದ ಹೀಗೆ ಮಾಡಿ
ಮಿರಿಮಿರಿ ಮಿಂಚುವ ದಟ್ಟ ದಪ್ಪ ಕೂದಲು ನಿಮ್ಮದಾಗಬೇಕಾ
Follow us
TV9 Web
| Updated By: ಸಾಧು ಶ್ರೀನಾಥ್​

Updated on: Sep 14, 2023 | 6:06 AM

ಸೊಂಪಾಗಿ ಬೆಳೆದ ತಮ್ಮ ಕೂದಲನ್ನು ಯಾರುತಾನೇ ಇಷ್ಟಪಡುವುದಿಲ್ಲ? ಜಡೆ ಜುಟ್ಟು ಹುಡುಗಿಯರಿಗೆ ವಿಶೇಷವಾಗಿ ಆಕರ್ಷಕವಾಗಿರುತ್ತದೆ. ಕೆಲವರು ತಮ್ಮ ಕೂದಲನ್ನು ಸೊಂಪಾಗಿ ಬೆಳೆಸಲು ತುಂಬಾ ಕಷ್ಟಪಡುತ್ತಾರೆ. ಈಗಂತೂ ಮಳೆಗಾಲ. ಈ ಸಮಯದಲ್ಲಿ ಎಷ್ಟೇ ಮುಂಜಾಗ್ರತೆ ವಹಿಸಿದರೂ.. ಕೂದಲು ಉದುರುವುದು ಸಹಜ. ಹಾಗಾಗಿ ಮನೆಯಲ್ಲಿಯೇ ಸಿಗುವ ಸಾಮಾಗ್ರಿಗಳೊಂದಿಗೆ ಚಿಕ್ಕ ಚಿಕ್ಕ ಸಲಹೆಗಳನ್ನು ಅನುಸರಿಸಿ ನಿಮ್ಮ ಕೂದಲನ್ನು ಉಳಿಸಿಕೊಳ್ಳಬಹುದು. ಒಳ್ಳೆಯ ಕೂದಲು ಇದ್ದಾಗ ಪುರುಷರು ಮತ್ತು ಮಹಿಳೆಯರು ಇಬ್ಬರೂ ಸುಂದರವಾಗಿ ಕಾಣುತ್ತಾರೆ. ಬಾಳೆ ಹಣ್ಣು ಕೂಡ ಕೂದಲಿನ ಆರೋಗ್ಯವನ್ನ ಕಾಪಾಡುತ್ತದೆ. ಈ ಬಾಳೆಹಣ್ಣಿನಿಂದ ಹೇರ್ ಪ್ಯಾಕ್ ಮಾಡಿ ಹಚ್ಚಿದರೆ ಕೂದಲು ದಟ್ಟವಾಗಿ ಬೆಳೆಯುತ್ತದೆ. ಹಾಗದರೆ ಬಾಳೆಹಣ್ಣು ಹೇರ್ ಪ್ಯಾಕ್ ಎಂದರೇನು? ತಯಾರಿಸುವುದು ಹೇಗ? ಈಗ ತಿಳಿಯೋಣ.

ಬಾಳೆಹಣ್ಣು ಆರೋಗ್ಯಕ್ಕೆ ಮಾತ್ರವಲ್ಲದೆ ಕೂದಲಿಗೆ ಪೋಷಣೆಯನ್ನು ನೀಡುತ್ತದೆ. ಇತ್ತೀಚಿನ ದಿನಗಳಲ್ಲಿ ಮಾಲಿನ್ಯ ತುಂಬಾ ಹೆಚ್ಚಾಗಿದೆ. ಈ ಕಾರಣದಿಂದಾಗಿ, ಕೂದಲು ತನ್ನ ಬಣ್ಣ ಮತ್ತು ಹೊಳಪನ್ನು ಕಳೆದುಕೊಳ್ಳುತ್ತಿದೆ. ಅಲ್ಲದೆ ಇಂದಿನ ದಿನಗಳಲ್ಲಿ ಸೇವಿಸುವ ಆಹಾರದಿಂದ ಕೂದಲು ಶಕ್ತಿ ಕಳೆದುಕೊಳ್ಳುತ್ತಿದೆ. ಇಂತಹ ಸಮಸ್ಯೆಗಳೆಲ್ಲ ಮಂಗಳ ಹಾಡಿ, ಕೂದಲನ್ನು ಬಲವಾಗಿ ಮತ್ತು ಹೊಳೆಯುವಂತೆ ಮಾಡಲು ಬಾಳೆಹಣ್ಣು ಬಹಳಷ್ಟು ಸಹಾಯ ಮಾಡುತ್ತದೆ.

ಬಾಳೆಹಣ್ಣಿನ ಹೇರ್ ಪ್ಯಾಕ್ : ಈ ಪ್ಯಾಕ್ ಮಾಡಿಕೊಳ್ಳುವ ಮೊದಲು ಚಿಕ್ಕ ಬೌಲ್ ತೆಗೆದುಕೊಳ್ಳಿ. ಬಾಳೆಹಣ್ಣಿನ ತುಂಡುಗಳು, ಸ್ವಲ್ಪ ಹರಳೆಣ್ಣೆ, ಮೊಸರು, ಅಲೋವೆರಾ ಜೆಲ್ ಸೇರಿಸಿ ಒಮ್ಮೆ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಇದನ್ನು ಬೇರುಮಟ್ಟದಿಂದ ಕೂದಲಿನ ತುದಿಗೆ ಹಚ್ದಬೇಕು. ಈ ಪ್ಯಾಕ್ ಅನ್ನು ಅರ್ಧ ಗಂಟೆಯವರೆಗೆ ಇರಿಸಿ ಮತ್ತು ನಿಮ್ಮ ತಲೆಯನ್ನು ಶಾಂಪೂ ಬಳಸಿ ತೊಳೆಯಿರಿ. ನಿರಂತರವಾಗಿ ನೀವು ಹೀಗೆಯೇ ಮುಂದುವರಿಸಿದರೆ, ನೀವು ಉತ್ತಮ ಫಲಿತಾಂಶಗಳನ್ನು ನೋಡುತ್ತೀರಿ.

ಬಾಳೆಹಣ್ಣು ಪ್ಯಾಕ್‌ನ ಪ್ರಯೋಜನಗಳು: ಈ ಪ್ಯಾಕ್‌ನಲ್ಲಿ ಸೇರಿಸಲಾದ ಮೊಸರು ಕೂದಲನ್ನು ಹೊಳೆಯುವಂತೆ ಮಾಡುತ್ತದೆ. ತಲೆಹೊಟ್ಟು ಸಮಸ್ಯೆಗಳು ಕಡಿಮೆಯಾಗುತ್ತವೆ. ಕೂದಲು ಬುಡಸಮೇತ ಬಲಗೊಳ್ಳುತ್ತವೆ. ಹರಳೆಣ್ಣೆ (ಕ್ಯಾಸ್ಟರ್ ಆಯಿಲ್) ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಇದರಲ್ಲಿರುವ ಪೋಷಕಾಂಶಗಳು ಕೂದಲನ್ನು ಸ್ಟ್ರಾಂಗ್ ಮಾಡುತ್ತದೆ. ಹಿಂದಿನ ಕಾಲದಲ್ಲಿ ಕ್ಯಾಸ್ಟರ್ ಆಯಿಲ್ ಅನ್ನು ಯಥೇಚ್ಛವಾಗಿ ಕೂದಲಿಗೆ ಹಚ್ಚುತ್ತಿದ್ದರು.

ಅಲೋವೆರಾ ಕೂಡ ಕೂದಲಿನ ಪೋಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದರ ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು ಮತ್ತು ಆಂಟಿಮೈಕ್ರೊಬಿಯಲ್ ಪ್ರೋಟಿಯೋಲೈಟಿಕ್ ಕಿಣ್ವಗಳ ಗುಣಲಕ್ಷಣಗಳು ಕೂದಲಿನ ತುರಿಕೆ ಮತ್ತು ತಲೆಹೊಟ್ಟನ್ನು ಕಡಿಮೆ ಮಾಡುತ್ತದೆ.

ಹೆಚ್ಚಿನ ಆರೋಗ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್