ಲಿಫ್ಟ್ ಬದಲು ಮೆಟ್ಟಿಲು ಹತ್ತುವುದರಿಂದ ಏನೆಲ್ಲ ಪ್ರಯೋಜನವಿದೆ ಗೊತ್ತಾ?
Heart Health Tips: ಪ್ರತಿದಿನ ವಾಕಿಂಗ್ ಮಾಡಲು ನಿಮಗೆ ಸಮಯವಿಲ್ಲದಿದ್ದರೂ ನಿಮ್ಮ ಬಿಡುವಿಲ್ಲದ ದಿನಚರಿಯಲ್ಲಿ ಕೊಂಚ ಬದಲಾವಣೆ ಮಾಡಿಕೊಳ್ಳುವ ಮೂಲಕ ಕೊಲೆಸ್ಟ್ರಾಲ್ ಮತ್ತು ಅಧಿಕ ರಕ್ತದೊತ್ತಡದ ಅಪಾಯವನ್ನು ಕಡಿಮೆ ಮಾಡಬಹುದು. ಹಾಗೆ ಮಾಡಲು ಒಂದು ಮಾರ್ಗವೆಂದರೆ ಮೆಟ್ಟಿಲುಗಳನ್ನು ಹತ್ತಿ, ಇಳಿಯುವುದು.
ತಂತ್ರಜ್ಞಾನಗಳು, ಆಧುನಿಕ ಉಪಕರಣಗಳು ನಮ್ಮ ಜೀವನವನ್ನು ನಿಯಂತ್ರಿಸುತ್ತಿವೆ. ತಂತ್ರಜ್ಞಾನವು ನಮ್ಮ ಹೃದಯಗಳಿಗೆ ಅಪಾಯ ತಂದೊಡ್ಡಿದೆ. ದೈಹಿಕ ಚಟುವಟಿಕೆಯ ಕೊರತೆಯಿಂದ ದೇಹದ ರಕ್ತ ಸಂಚಲನೆಯಲ್ಲಿ ಹಲವಾರು ಬದಲಾವಣೆಗಳು ಉಂಟಾಗುತ್ತದೆ. ಕಳೆದ ದಶಕದಲ್ಲಿ ಅಧಿಕ ರಕ್ತದೊತ್ತಡ, ಮಧುಮೇಹ, ಸ್ಥೂಲಕಾಯತೆ, ಮತ್ತು ಅನೇಕ ಹೃದ್ರೋಗಗಳು ಸಾಕಷ್ಟು ಹೆಚ್ಚಾಗಿವೆ. ಹೃದಯರಕ್ತನಾಳದ ಸಮಸ್ಯೆ ವಿಶ್ವದ ಅತಿದೊಡ್ಡ ಆತಂಕವಾಗಿ ಪರಿಣಮಿಸಿದೆ.
ಹೀಗಾಗಿ, ವಾರದಲ್ಲಿ ಕನಿಷ್ಠ 150 ನಿಮಿಷಗಳ ಕಾಲ ಚುರುಕಾದ ನಡಿಗೆ ಮತ್ತು ಜಾಗಿಂಗ್‌ನಂತಹ ಸರಳ ವ್ಯಾಯಾಮಗಳನ್ನು ಮಾಡುವುದರಿಂದ ನಿಮ್ಮ ಹೃದಯದ ಜೀವನವನ್ನು ಹೆಚ್ಚಿಸಬಹುದು. ಇದು ದೀರ್ಘಕಾಲದವರೆಗೆ ನಿಮ್ಮನ್ನು ಆರೋಗ್ಯವಾಗಿಡುತ್ತದೆ ಎಂದು ಅಧ್ಯಯನಗಳು ತಿಳಿಸಿವೆ.
ಪ್ರತಿದಿನ ವಾಕಿಂಗ್ ಮಾಡಲು ನಿಮಗೆ ಸಮಯವಿಲ್ಲದಿದ್ದರೂ ಸಹ ನಿಮ್ಮ ಬಿಡುವಿಲ್ಲದ ದಿನಚರಿಯಲ್ಲಿ ಕೊಂಚ ಬದಲಾವಣೆ ಮಾಡಿಕೊಳ್ಳುವ ಮೂಲಕ ಕೊಲೆಸ್ಟ್ರಾಲ್ ಮತ್ತು ಅಧಿಕ ರಕ್ತದೊತ್ತಡದ ಅಪಾಯವನ್ನು ಕಡಿಮೆ ಮಾಡಬಹುದು. ಹಾಗೆ ಮಾಡಲು ಒಂದು ಮಾರ್ಗವೆಂದರೆ ಮೆಟ್ಟಿಲುಗಳನ್ನು ಹತ್ತಿ, ಇಳಿಯುವುದು. ಆದಷ್ಟು ಲಿಫ್ಟ್ ಬಳಸುವುದನ್ನು ತಪ್ಪಿಸಿ, ಮೆಟ್ಟಿಲುಗಳನ್ನು ಬಳಸುವುದರಿಂದ ಅನೇಕ ಪ್ರಯೋಜನಗಳಿವೆ.
ಇದನ್ನೂ ಓದಿ: Heart Attack: ಯುವಜನರಲ್ಲಿ ಹೃದಯಾಘಾತಕ್ಕೆ ಕಾರಣವೇನು?; ನೀವೂ ಈ ತಪ್ಪು ಮಾಡಬೇಡಿ
ಮೆಟ್ಟಿಲುಗಳನ್ನು ಹತ್ತಿ ಇಳಿಯುವುದನ್ನು ಅಭ್ಯಾಸ ಮಾಡಿಕೊಂಡರೆ ನಿಮ್ಮ ಹೃದಯ ಎಷ್ಟು ಆರೋಗ್ಯಕರವಾಗಿದೆ ಎಂಬುದು ನಿಮಗೇ ಗೊತ್ತಾಗುತ್ತದೆ ಎಂದು ಹೃದ್ರೋಗ ತಜ್ಞರು ಹೇಳುತ್ತಾರೆ. ಈ ಬಗ್ಗೆ ಪಿಎಸ್‌ಆರ್‌ಐ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ. ರವಿ ಪ್ರಕಾಶ್ ಮಾತನಾಡಿದ್ದು, ಮೆಟ್ಟಿಲನ್ನು ಹತ್ತುವುದು ಅತ್ಯುತ್ತಮ ಹೃದಯದ ವ್ಯಾಯಾಮವಾಗಿದೆ. ಏಕೆಂದರೆ ಇದು ನಿರಂತರವಾಗಿ ಕ್ಯಾಲೋರಿ ಬರ್ನ್ ಮಾಡುವ ಪ್ರಯೋಜನವನ್ನು ಹೊಂದಿದೆ ಎಂದಿದ್ದಾರೆ.
ಮೆಟ್ಟಿಲು ಹತ್ತುವುದು ಮತ್ತು ಇಳಿಯುವುದರಿಂದ ಹೃದಯಕ್ಕೆ ವ್ಯಾಯಾಮ ಸಿಗುತ್ತದೆ. ಇದು ನಿಮ್ಮ ಮೂಳೆಗಳಿಗೆ ಕೂಡ ಪ್ರಯೋಜನಕಾರಿಯಾಗಿದೆ ಮತ್ತು ಸ್ನಾಯುಗಳ ಬಲವನ್ನು ಹೆಚ್ಚಿಸುತ್ತದೆ. ಕ್ಯಾಲೋರಿ ಬರ್ನ್ ಆಗುವುದರಿಂದ ತೂಕವನ್ನು ಸಹ ಇಳಿಸಿಕೊಳ್ಳಬಹುದು ಎಂದು ಡಾ. ರವಿ ಪ್ರಕಾಶ್ ಹೇಳಿದ್ದಾರೆ.
ಆದರೆ, ಯಾವುದೇ ವ್ಯಾಯಾಮ ಮಾಡುವ ಮೊದಲು ಉಸಿರಾಟದ ತೊಂದರೆ, ಎದೆ ನೋವು ಮತ್ತು ಮೊಣಕಾಲು ನೋವುಗಳಿದ್ದರೆ ಆ ವ್ಯಾಯಾಮ ಮಾಡಬೇಡಿ. ಮೆಟ್ಟಿಲು ಹತ್ತಿ ಇಳಿಯುವಾಗಲೂ ಈ ತೊಂದರೆಗಳು ಎದುರಾದರೆ ನೀವು ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.
ಇದನ್ನೂ ಓದಿ: ಒತ್ತಡವೇ ನಿಮ್ಮ ಹೃದಯದ ಅತಿದೊಡ್ಡ ಶತ್ರು; ಯಾಕೆ ಗೊತ್ತಾ?
ನೀವು ಎಲಿವೇಟರ್ ಅಥವಾ ಲಿಫ್ಟ್ ಬದಲಿಗೆ ಮೆಟ್ಟಿಲುಗಳನ್ನು ಬಳಸುವುದರಿಂದ ಏನೆಲ್ಲ ಪ್ರಯೋಜನಗಳಿವೆ ಎಂಬ ಮಾಹಿತಿ ಇಲ್ಲಿದೆ.
– ನೀವು ಮೆಟ್ಟಿಲುಗಳನ್ನು ಹತ್ತಲು ಪ್ರಾರಂಭಿಸಿದಾಗ ನಿಮ್ಮ ಸ್ನಾಯುಗಳು ಪರಿಣಾಮಕಾರಿಯಾಗಿ ಕೆಲಸ ಮಾಡಲು ಹೆಚ್ಚಿನ ಆಮ್ಲಜನಕದ ಅಗತ್ಯವಿರುತ್ತದೆ. ಈ ಬೇಡಿಕೆಯನ್ನು ಪೂರೈಸಲು ನಿಮ್ಮ ಹೃದಯದ ಬಡಿತ ಹೆಚ್ಚಾಗುತ್ತದೆ. ಹೃದಯವು ರಕ್ತವನ್ನು ಹೆಚ್ಚು ವೇಗವಾಗಿ ಪಂಪ್ ಮಾಡುತ್ತದೆ. ಇದು ಕೆಲಸ ಮಾಡುವ ಸ್ನಾಯುಗಳಿಗೆ ಆಮ್ಲಜನಕ ಮತ್ತು ಪೋಷಕಾಂಶಗಳನ್ನು ನೀಡುತ್ತದೆ.
– ಹೃದಯದ ಸ್ನಾಯುವಿನ ವಾಲ್ಗಳು ಪ್ರತಿ ಬಡಿತದೊಂದಿಗೆ ಹೆಚ್ಚಿನ ಪ್ರಮಾಣದ ರಕ್ತವನ್ನು ತಳ್ಳಲು ಹೆಚ್ಚು ಬಲವಾಗಿ ಸಂಕುಚಿತಗೊಳ್ಳುತ್ತವೆ. ಈ ಹೆಚ್ಚಿದ ಬಲವು ದೇಹದ ಅಂಗಾಂಶಗಳಿಗೆ ಸಾಕಷ್ಟು ರಕ್ತದ ಹರಿವನ್ನು ನೀಡಲು ಸಹಾಯ ಮಾಡುತ್ತದೆ. ನೀವು ಮೆಟ್ಟಿಲುಗಳನ್ನು ಹತ್ತಲು ಬಳಸುವ ಕಾಲಿನ ಸ್ನಾಯುಗಳಿಗೂ ರಕ್ತ ಸಂಚಾರ ಹೆಚ್ಚಾಗುತ್ತದೆ.
– ರಕ್ತನಾಳಗಳನ್ನು ಹಿಗ್ಗಿಸುವ ಮೂಲಕ ರಕ್ತದ ಹರಿವಿನ ಹೆಚ್ಚಿದ ಬೇಡಿಕೆಗೆ ದೇಹವು ಪ್ರತಿಕ್ರಿಯಿಸುತ್ತದೆ. ವಾಸೋಡಿಲೇಷನ್ ಎಂದು ಕರೆಯಲ್ಪಡುವ ಈ ಪ್ರಕ್ರಿಯೆಯು ರಕ್ತದ ಹರಿವಿಗೆ ಪ್ರತಿರೋಧವನ್ನು ಕಡಿಮೆ ಮಾಡುತ್ತದೆ. ಇದರಿಂದಾಗಿ ರಕ್ತ ಸಂಚಲನೆ ಸ್ನಾಯುಗಳನ್ನು ತಲುಪಲು ಸುಲಭವಾಗುತ್ತದೆ.
– ಮೆಟ್ಟಿಲು ಹತ್ತುವುದರಿಂದ ನಿಮ್ಮ ಶ್ವಾಸಕೋಶಗಳು ಗಾಳಿಯಿಂದ ಆಮ್ಲಜನಕವನ್ನು ಹೊರತೆಗೆಯಲು ಮತ್ತು ನಿಮ್ಮ ರಕ್ತಕ್ಕೆ ವರ್ಗಾಯಿಸಲು ಹೆಚ್ಚು ಶ್ರಮಿಸುತ್ತವೆ. ಈ ಆಮ್ಲಜನಕಭರಿತವಾಗಿರುವ ರಕ್ತವನ್ನು ಹೃದಯದಿಂದ ಸ್ನಾಯುಗಳಿಗೆ ಪಂಪ್ ಮಾಡಲಾಗುತ್ತದೆ. ಅಲ್ಲಿ ದೈಹಿಕ ಚಟುವಟಿಕೆಗಾಗಿ ಶಕ್ತಿಯನ್ನು ಉತ್ಪಾದಿಸಲು ಬಳಸಲಾಗುತ್ತದೆ.