ಶ್ವಾಸಕೋಶದ ಕ್ಯಾನ್ಸರ್ ವಿಶ್ವಾದ್ಯಂತ ಕ್ಯಾನ್ಸರ್ ಸಂಬಂಧಿತ ಸಾವುಗಳಿಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಇದು ಸಾಮಾನ್ಯವಾಗಿ ಉಸಿರಾಟದ ಪ್ರದೇಶದ ಜೀವಕೋಶಗಳಲ್ಲಿ ಹರಡುತ್ತದೆ. ನಂತರ ಅದು ದೇಹದ ಇತರ ಭಾಗಗಳಿಗೆ ಹರಡುತ್ತದೆ. ಇಂದು ಶ್ವಾಸಕೋಶದ ಕ್ಯಾನ್ಸರ್ಗೆ ಸಂಬಂಧಿಸಿದ ಅಪಾಯಗಳು ಮತ್ತು ಅದನ್ನು ತಪ್ಪಿಸುವ ಮಾರ್ಗಗಳ ಬಗ್ಗೆ ಇಲ್ಲಿ ತಿಳಿದುಕೊಳ್ಳಿ.
ದ್ವಾರಕಾದ ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯಕೀಯ ಆಂಕೊಲಾಜಿಯ ಹಿರಿಯ ಸಲಹೆಗಾರ ಡಾ.ಆದಿತ್ಯ ವಿದುಷಿ ಅವರು ಹೇಳುವಂತೆ, ಯಾವುದೇ ರೀತಿಯ ಸಿಗರೇಟ್, ಬೀಡಿ ಅಥವಾ ಧೂಮಪಾನ ಮಾಡುವುದು ಶ್ವಾಸಕೋಶದ ಕ್ಯಾನ್ಸರ್‌ಗೆ ಸಾಮಾನ್ಯ ಕಾರಣವಾಗಿದೆ. ಧೂಮಪಾನಿಗಳಲ್ಲದವರಿಗೆ ಹೋಲಿಸಿದರೆ ಧೂಮಪಾನಿಗಳು 20 ಪಟ್ಟು ಅಪಾಯವನ್ನು ಹೊಂದಿರುತ್ತಾರೆ. ಧೂಮಪಾನವನ್ನು ತ್ಯಜಿಸುವುದರಿಂದ ಈ ಅಪಾಯವನ್ನು ಹೆಚ್ಚಿನ ಪ್ರಮಾಣದಲ್ಲಿ ಕಡಿಮೆ ಮಾಡಬಹುದು. ಸಮಾಲೋಚನೆ, ನಿಕೋಟಿನ್ ರಿಪ್ಲೇಸ್‌ಮೆಂಟ್ ಥೆರಪಿ ಮತ್ತು ಕೆಲವು ಕಡುಬಯಕೆ-ವಿರೋಧಿ ಔಷಧಿಗಳು ಧೂಮಪಾನಿಗಳಿಗೆ ಶಾಶ್ವತವಾಗಿ ಅಭ್ಯಾಸವನ್ನು ತೊರೆಯಲು ಸಹಾಯ ಮಾಡುತ್ತದೆ.
ಸೆಕೆಂಡ್ ಹ್ಯಾಂಡ್ ಹೊಗೆಗೆ ಒಡ್ಡಿಕೊಳ್ಳುವುದು, ಇದನ್ನು ನಿಷ್ಕ್ರಿಯ ಧೂಮಪಾನ ಎಂದೂ ಕರೆಯುತ್ತಾರೆ. ಮನರಂಜನಾ ಸ್ಥಳಗಳಲ್ಲಿ ಧೂಮಪಾನ ಮಾಡುವವದರಿಂದ ಅಂತರ ಕಾಯ್ದುಕೊಳ್ಳಿ. ಸಾರ್ವಜನಿಕ ಸ್ಥಳಗಳನ್ನು ಧೂಮಪಾನ ಮುಕ್ತ ವಲಯಗಳನ್ನಾಗಿ ಮಾಡಿ.
ವಾಯು ಮಾಲಿನ್ಯವು ಸಾರ್ವಜನಿಕ ಆರೋಗ್ಯಕ್ಕೆ ಮತ್ತು ಶ್ವಾಸಕೋಶದ ಕ್ಯಾನ್ಸರ್‌ಗೆ ಇದು ಗಮನಾರ್ಹ ಕಾರಣವಾಗಿದೆ. ವಾಹನ , ಏರ್ ಪ್ಯೂರಿಫೈಯರ್‌ಗಳನ್ನು ಬಳಸುವುದು, ಹೊರಾಂಗಣಕ್ಕೆ ಒಡ್ಡಿಕೊಳ್ಳುವುದನ್ನು ತಪ್ಪಿಸುವುದು ಮತ್ತು ಕಳಪೆ ಗಾಳಿಯ ಗುಣಮಟ್ಟದ ಸಮಯದಲ್ಲಿ ಮಾಸ್ಕ್ ಧರಿಸಿ.
ಇದನ್ನೂ ಓದಿ: ಬೆಳಿಗ್ಗೆ ಎದ್ದು ಜೇನುತುಪ್ಪಕ್ಕೆ ಈ ಬೀಜಗಳನ್ನು ಸೇರಿಸಿ ಸೇವನೆ ಮಾಡಿ, ಹೃದಯ ಆರೋಗ್ಯವಾಗಿರುತ್ತೆ
ಶ್ವಾಸಕೋಶದ ಕ್ಯಾನ್ಸರ್ ಸ್ಕ್ರೀನಿಂಗ್ ಅನ್ನು LDCT ಬಳಸಿ ನಡೆಸಲಾಗುತ್ತದೆ. ಇದು ಆರಂಭಿಕ ಹಂತದಲ್ಲಿ ಪತ್ತೆ ಹಚ್ಚಿ, ಶ್ವಾಸಕೋಶದ ಕ್ಯಾನ್ಸರ್ನಿಂದ ಗುಣಮುಖರಾಗಲು ಸಹಾಯ ಮಾಡುತ್ತದೆ. ಧೂಮಪಾನ ಮಾಡುವ 55 – 75 ವರ್ಷದ ಒಳಗಿನ ಪುರುಷರು ಸ್ಕ್ರೀನಿಂಗ್ ಮಾಡಿಸಿಕೊಳ್ಳುವುದು ಒಳ್ಳೆಯದು ಎನ್ನುತ್ತಾರೆ ಕ್ಯಾನ್ಸರ್ ತಜ್ಞರು.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:06 pm, Tue, 3 December 24