Men Health:ಪುರುಷರೇ ಎಚ್ಚರ, ಅತಿಯಾದ ಮೊಬೈಲ್ ಬಳಕೆಯಿಂದ ನಿಮ್ಮ ವೀರ್ಯ ಗುಣಮಟ್ಟದ ಮೇಲೆ ನೇರ ಪರಿಣಾಮ

| Updated By: ಅಕ್ಷಯ್​ ಪಲ್ಲಮಜಲು​​

Updated on: Mar 28, 2024 | 4:53 PM

Men Health: ಪುರಷರು ಹೆಚ್ಚು ಮೊಬೈಲ್​​​​​ ಉಪಯೋಗಿಸಿದರೆ ಆತನ ವೀರ್ಯದ ಸಾಂದ್ರತೆಯು ಪ್ರತಿ ಮಿಲಿಲೀಟರ್‌ಗೆ 15 ಮಿಲಿಯನ್‌ಗಿಂತ ಕಡಿಮೆಯಿದ್ದರೆ, ಸಂತಾನೋತ್ಪತ್ತಿಗೆ ಒಂದು ವರ್ಷಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಜೊತೆಗೆ, ವೀರ್ಯದ ಸಾಂದ್ರತೆಯು ಪ್ರತಿ ಮಿಲಿಲೀಟರ್‌ಗೆ 40 ಮಿಲಿಯನ್‌ಗಿಂತ ಕಡಿಮೆಯಿದ್ದರೆ, ಸಂತಾನೋತ್ಪತ್ತಿಯ ಸಾಧ್ಯತೆಗಳು ಕಡಿಮೆಯಾಗುತ್ತವೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಹೇಳಿದೆ.

Men Health:ಪುರುಷರೇ ಎಚ್ಚರ, ಅತಿಯಾದ ಮೊಬೈಲ್ ಬಳಕೆಯಿಂದ ನಿಮ್ಮ ವೀರ್ಯ ಗುಣಮಟ್ಟದ ಮೇಲೆ ನೇರ ಪರಿಣಾಮ
ಸಾಂದರ್ಭಿಕ ಚಿತ್ರ
Follow us on

ಮೊಬೈಲ್ ಫೋನ್‌ ಜನರ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬುದರ ಕುರಿತು ಇತ್ತೀಚಿನ ಅಧ್ಯಯನವು ಕೆಲವು ಆಶ್ಚರ್ಯಕರ ವಿಷಯಗಳನ್ನು ಬಹಿರಂಗಪಡಿಸಿದೆ. ಈ ಹಿಂದೆಯೂ ಇಂತಹ ಅಧ್ಯಯನಗಳು ನಡೆದಿದ್ದರೂ ಈ ಬಾರಿ ಪುರುಷ ಆರೋಗ್ಯದತ್ತ ಗಮನ ಹರಿಸಲಾಗಿದ್ದು ಹಲವು ಆತಂಕಕಾರಿ ಸಂಗತಿಗಳು ಮುನ್ನೆಲೆಗೆ ಬಂದಿವೆ. ಮೊಬೈಲ್ ಫೋನ್ ಬಳಕೆ ಪುರುಷರ ವೀರ್ಯದ ಗುಣಮಟ್ಟ ಮತ್ತು ಪ್ರಮಾಣವನ್ನು ಕಡಿಮೆ ಮಾಡುತ್ತದೆ , ಅಂದರೆ, ಇದು ವೀರ್ಯದ ಗುಣಮಟ್ಟ ಮತ್ತು ಪ್ರಮಾಣ ಎರಡರ ಮೇಲೆ ಪರಿಣಾಮ ಬೀರುತ್ತದೆ. ಅತಿಯಾದ ಫೋನ್​ ಬಳಕೆ ಪುರುಷರಲ್ಲಿ ಬಂಜೆತನಕ್ಕೆ ಕಾರಣವಾಗಬಹುದು ಎಂದು ತಿಳಿದುಬಂದಿದೆ. ವಿದ್ಯುತ್ಕಾಂತೀಯ ವಿಕಿರಣವನ್ನು ಉತ್ಪಾದಿಸುವ ಮೊಬೈಲ್ ಫೋನ್‌ಗಳ ಬಳಕೆಯು ವೀರ್ಯದ ಮೇಲೆ ಪರಿಣಾಮ ಬೀರುತ್ತದೆ ಮತ್ತು ಒಟ್ಟು ವೀರ್ಯಾಣು ಸಂಖ್ಯೆಯನ್ನು ಕಡಿಮೆ ಮಾಡುತ್ತದೆ ಎಂದು ಅಧ್ಯಯನವು ತೋರಿಸಿದೆ.

ಅಧ್ಯಯನದಲ್ಲಿ ಯಾವ ಅಂಶಗಳನ್ನು ಪರಿಗಣಿಸಲಾಗಿದೆ?

ಸ್ವಿಟ್ಜರ್ಲೆಂಡ್‌ನ ಜಿನೀವಾ ವಿಶ್ವವಿದ್ಯಾಲಯದ ತಂಡವು 2005 ಮತ್ತು 2018 ರ ನಡುವೆ ನೇಮಕಗೊಂಡ 18 ರಿಂದ 22 ವರ್ಷ ವಯಸ್ಸಿನ 2,886 ಪುರುಷರ ಡೇಟಾವನ್ನು ಆಧರಿಸಿ ಅಧ್ಯಯನವನ್ನು ನಡೆಸಿತು. ಡೇಟಾವು ಮೊಬೈಲ್ ಫೋನ್‌ಗಳ ಹೆಚ್ಚು ಬಳಕೆ ಮಾಡುವವರಲ್ಲಿ ಕಡಿಮೆ ವೀರ್ಯ ಸಾಂದ್ರತೆಯನ್ನು ತೋರಿಸಿದೆ.

ಇದನ್ನೂ ಓದಿ: ಋತುಬಂಧಕ್ಕೆ ದೇಹವನ್ನು ಸಿದ್ಧಪಡಿಸುವುದು ಹೇಗೆ?

ವಿಶ್ವ ಆರೋಗ್ಯ ಸಂಸ್ಥೆ (WHO) ಮಾನದಂಡಗಳ ಪ್ರಕಾರ, ಒಬ್ಬ ಪುರುಷನ ವೀರ್ಯದ ಸಾಂದ್ರತೆಯು ಪ್ರತಿ ಮಿಲಿಲೀಟರ್‌ಗೆ 15 ಮಿಲಿಯನ್‌ಗಿಂತ ಕಡಿಮೆಯಿದ್ದರೆ, ಸಂತಾನೋತ್ಪತ್ತಿಗೆ ಒಂದು ವರ್ಷಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಜೊತೆಗೆ, ವೀರ್ಯದ ಸಾಂದ್ರತೆಯು ಪ್ರತಿ ಮಿಲಿಲೀಟರ್‌ಗೆ 40 ಮಿಲಿಯನ್‌ಗಿಂತ ಕಡಿಮೆಯಿದ್ದರೆ, ಸಂತಾನೋತ್ಪತ್ತಿಯ ಸಾಧ್ಯತೆಗಳು ಕಡಿಮೆಯಾಗುತ್ತವೆ.

ಕಳೆದ ಐವತ್ತು ವರ್ಷಗಳಲ್ಲಿ ವೀರ್ಯಾಣು ಗುಣಮಟ್ಟ ಕುಸಿದಿದೆ ಎಂದು ಹಲವಾರು ಅಧ್ಯಯನಗಳು ತೋರಿಸಿವೆ. ವೀರ್ಯದ ಸಂಖ್ಯೆಯು ಪ್ರತಿ ಮಿಲಿಲೀಟರ್‌ಗೆ ಸರಾಸರಿ 99 ಮಿಲಿಯನ್ ವೀರ್ಯದಿಂದ ಪ್ರತಿ ಮಿಲಿಲೀಟರ್‌ಗೆ 47 ಮಿಲಿಯನ್‌ಗೆ ಇಳಿದಿದೆ ಎಂದು ವರದಿಯಾಗಿದೆ. ಈ ವಿದ್ಯಮಾನವು ಪರಿಸರ ಅಂಶಗಳು ಮತ್ತು ಜೀವನಶೈಲಿಯ ಅಭ್ಯಾಸಗಳಾದ ಆಹಾರ, ಮದ್ಯ, ಒತ್ತಡ, ಧೂಮಪಾನದ ಪರಿಣಾಮವಾಗಿದೆ ಎಂದು ನಂಬಲಾಗಿದೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ: