ಬುದ್ಧಿಮಾಂದ್ಯನಂತೆ ನಟಿಸಿ ಕಳುವು ಮಾಡುತ್ತಿದ್ದವನಲ್ಲಿ ಸಿಕ್ಕಿದ್ದು ರೂ. 50 ಲಕ್ಷ ಮೌಲ್ಯದ ಮೊಬೈಲ್ ಫೋನ್ಗಳು!
ಬಸ್ ನಿಲ್ದಾಣಗಳಲ್ಲಿ ಬುದ್ಧಿಮಾಂದ್ಯನ ಹಾಗೆ ನಟಿಸಿ ಮೊಬೈಲ್ ಫೋನ್, ಪರ್ಸ್ ಹಾಗೂ ಇನ್ನಿತರ ಸಾಮಾನುಗಳನ್ನು ಎಗರಿಸುತ್ತಿದ್ದ. ಹಾಗೆ ಮಾಡಿ ಅವನು ಏನೆಲ್ಲ, ಎಷ್ಟೆಲ್ಲ ಕದ್ದಿದ್ದಾನೆ ಅಂತ ನೋಡಿ. ಅವನನಲ್ಲಿದ್ದಿದ್ದು 50 ಲಕ್ಷ ರೂ. ಗಿಂತ ಹೆಚ್ಚು ಮೌಲ್ಯದ ವಿವಿಧ ಬ್ರ್ಯಾಂಡ್ ನ ಸುಮಾರು 150 ಮೊಬೈಲ್ ಫೋನ್ ಗಳು!
ಹೊಸಕೋಟೆ: ಈ ಕಳ್ಳನನ್ನು (thief) ಗಮನಿಸಿ. ಇವನು ಕಳ್ಳತನ ಮಾಡಲು ಉಪಯೋಗಿಸುವ ಬುದ್ಧಿಯನ್ನು ಒಳ್ಳೆಯ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರೆ ನಿಸ್ಸದೇಹವಾಗಿ ಉತ್ತಮ ಹಾಗೂ ಮರ್ಯಾದಸ್ಥ ಬದುಕು ನಡೆಸುತ್ತಾ ಆರಾಮವಾಗಿರಬಹುದಿತ್ತು. ಅಂದಹಾಗೆ, ಬುದ್ಧಿಮಾಂದ್ಯನ (mentally deranged) ಹಾಗೆ ನಟಿಸಿ ಕಳುವುಗಳನ್ನು ಮಾಡುತ್ತಿದ್ದ ಬುದ್ಧಿವಂತ ಕಳ್ಳನ ಹೆಸರು ವಿನಯ್ (Vinay). ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಪೊಲೀಸರು ವಿನಯ್ ನನ್ನು ಬಂಧಿಸಿ ಅವನು ಕಳುವು ಮಾಡಿದ್ದ ಲಕ್ಷಲಕ್ಷ ಬೆಲೆ ಬಾಳುವ ವಸ್ತುಗಳನ್ನು ಬರಾಮತ್ತು ಮಾಡಿಕೊಂಡಿದ್ದಾರೆ. ಆಗಲೇ ಹೇಳಿದಂತೆ ಕಳ್ಳತನಕ್ಕೆ ವಿನಯ್ ವಿನೂತನ ಮಾರ್ಗ ಅಳವಡಿಸಿಕೊಂಡಿದ್ದ ಮಾರಾಯ್ರೇ. ಬಸ್ ನಿಲ್ದಾಣಗಳಲ್ಲಿ ಬುದ್ಧಿಮಾಂದ್ಯನ ಹಾಗೆ ನಟಿಸಿ ಮೊಬೈಲ್ ಫೋನ್, ಪರ್ಸ್ ಹಾಗೂ ಇನ್ನಿತರ ಸಾಮಾನುಗಳನ್ನು ಎಗರಿಸುತ್ತಿದ್ದ. ಹಾಗೆ ಮಾಡಿ ಅವನು ಏನೆಲ್ಲ, ಎಷ್ಟೆಲ್ಲ ಕದ್ದಿದ್ದಾನೆ ಅಂತ ನೋಡಿ. ಅವನನಲ್ಲಿದ್ದಿದ್ದು 50 ಲಕ್ಷ ರೂ. ಗಿಂತ ಹೆಚ್ಚು ಮೌಲ್ಯದ ವಿವಿಧ ಬ್ರ್ಯಾಂಡ್ ನ ಸುಮಾರು 150 ಮೊಬೈಲ್ ಫೋನ್ ಗಳು! ಅದಕ್ಕೇ ಹೇಳಿದ್ದು ವಿನಯ್ ಪ್ರಳಯಾಂತಕ ಬುದ್ಧಿಯನ್ನು ಬೇರೆ ಕೆಲಸಗಳಲ್ಲಿ ತೊಡಗಿಸಿದ್ದರೆ, ಇವತ್ತಿನ ಸ್ಥಿತಿ ಎದುರಿಸುತ್ತರಿಲಿಲ್ಲ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪಾರ್ಲಿಮೆಂಟ್ ಕಚೇರಿಯಲ್ಲಿ ಇವತ್ತು ಸಹ ಹೆಚ್ಡಿಕೆಯನ್ನು ಭೇಟಿಯಾದ ಸತೀಶ್

Video: ಬೆಂಗಳೂರಿನಲ್ಲಿ ಭಯಾನಕ ಸಿಲಿಂಡರ್ ಸ್ಫೋಟ, ವ್ಯಕ್ತಿ ಜಸ್ಟ್ ಮಿಸ್

ಸ್ಥಳೀಯ ಸಂಸ್ಥೆಗಳ ಚುನಾವಣೆ ಬ್ಯಾಲಟ್ ಪೇಪರ್ ಮೂಲಕ ನಡೆಸುವ ಚಿಂತನೆ: ಆಯುಕ್ತ

ಹೊಸ ಧಾರಾವಾಹಿಯಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ ಚಂದು ಗೌಡ-ಕಾವ್ಯಾ ಮಹಾದೇವ್
