ಟೊಮೆಟೊ ಮೇಲಿದ್ದ ಕಳ್ಳರ ಕಣ್ಣು ಈಗ ಶುಂಠಿಯ ಮೇಲೆ, ಬೈಲುಕುಪ್ಪೆ ಟಿಬೆಟಿಯನ್ ಶಿಬಿರದ ತೋಟಗಳಿಂದ ಶುಂಠಿ ಕಳ್ಳತನ
ನಿಮಗೂ ಗೊತ್ತಿರುವ ಹಾಗೆ ಶುಂಠಿಯ ಬೆಲೆ ಕೈಗೆಟುಕದಷ್ಟು ಮೇಲಕ್ಕೇರಿದೆ. ಹಾಗಾಗಿ ಮೊನ್ನೆಯವರೆಗೆ ಟೊಮೆಟೊ ಕದಿಯುತ್ತಿದ್ದ ಕಳ್ಳರು ಈಗ ಶುಂಠಿ ಕದಿಯಲಾರಂಭಿಸಿದ್ದಾರೆ. ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಟಿಬೆಟಿಯನ್ ಶಿಬಿರದಲ್ಲಿ ಅಲ್ಲಿನ ನಿವಾಸಿಗಳು ಶುಂಠಿ ಬೆಳೆಯುತ್ತಾರೆ. ಕಳ್ಳರು ತೋಟಗಳಿಗೆ ನುಗ್ಗಿ ಶುಂಠಿ ಲೂಟಿ ಮಾಡುತ್ತಿದ್ದಾರೆ.
ಮೈಸೂರು: ಕಳ್ಳತನದ (theft) ಪ್ಯಾಟರ್ನ್ ಈಗ ಬದಲಾದಂತಿದೆ ಮಾರಾಯ್ರೇ. ಆಫ್ ಕೋರ್ಸ್ ವಿಶ್ವದಲ್ಲಿ ಎಲ್ಲ ವಸ್ತುಗಳ ಕಳ್ಳತನ ಆಗುತ್ತದೆ, ಅದು ಬೇರೆ ವಿಷಯ. ಆದರೆ ಮಾರುಕಟ್ಟೆಯಲ್ಲಿ ಯಾವುದಾದರೂ ತರಕಾರಿ, ಮಸಾಲೆ ಪ್ರದಾರ್ಥದ ಬೆಲೆ ಗಗನಕ್ಕೇರಿದಾಗ ಅದು ಬೆಳೆಯುತ್ತಿರುವ ಹೊಲ-ಗದ್ದೆ, ತೋಟಗಳಿಗೆ ರಾತ್ರೋರಾತ್ರಿ ನುಗ್ಗಿ ಕಳ್ಳತನ ಮಾಡುವುದು ಕಳ್ಳರು (thieves) ತಮ್ಮ ವೃತ್ತಿಗೆ ಅಳವಡಿಸಿಕೊಂಡಿರುವ ಹೊಸ ವಿಧಾನ. ಏನಾಗಿದೆಯೆಂದರೆ, ನಿಮಗೂ ಗೊತ್ತಿರುವ ಹಾಗೆ ಶುಂಠಿಯ ಬೆಲೆ ಕೈಗೆಟುಕದಷ್ಟು ಮೇಲಕ್ಕೇರಿದೆ. ಹಾಗಾಗಿ ಮೊನ್ನೆಯವರೆಗೆ ಟೊಮೆಟೊ ಕದಿಯುತ್ತಿದ್ದ ಕಳ್ಳರು ಈಗ ಶುಂಠಿ (ginger) ಕದಿಯಲಾರಂಭಿಸಿದ್ದಾರೆ. ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಟಿಬೆಟಿಯನ್ ಶಿಬಿರದಲ್ಲಿ (Tibetian Camp) ಅಲ್ಲಿನ ನಿವಾಸಿಗಳು ಶುಂಠಿ ಬೆಳೆಯುತ್ತಾರೆ. ಕಳ್ಳರು ತೋಟಗಳಿಗೆ ನುಗ್ಗಿ ಶುಂಠಿ ಕದಿಯತೊಡಗಿದ್ದು, ಬೈಲುಕುಪ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸುತ್ತಿರುವುದನ್ನು ಗಮನಿಸಬಹುದು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ