ಪತಿಯ ಕೊನೆಯ ಸಿನಿಮಾ ನೋಡಿ ಮೇಘನಾ ರಾಜ್ ಹೇಳಿದ್ದು ಹೀಗೆ
Meghana Raj: ದಿವಂಗತ ನಟ ಚಿರಂಜೀವಿ ಸರ್ಜಾ ಅವರ ಕೊನೆಯ ಸಿನಿಮಾ 'ರಾಜಮಾರ್ತಾಂಡ' ಇಂದು ಬಿಡುಗಡೆ ಆಗಿದೆ. ಧ್ರುವ ಸರ್ಜಾರ ಹುಟ್ಟುಹಬ್ಬದಂದು ಈ ಸಿನಿಮಾ ಬಿಡುಗಡೆ ಆಗಿದ್ದು, ಧ್ರುವ, ಮೇಘನಾ ರಾಜ್, ಚಿರು ಕುಟುಂಬದ ಸದಸ್ಯರು ಒಟ್ಟಿಗೆ ಸಿನಿಮಾ ನೋಡಿದ್ದಾರೆ.
ದಿವಂಗತ ನಟ ಚಿರಂಜೀವಿ ಸರ್ಜಾ (Chiranjeevi Sarja) ಅವರ ಕೊನೆಯ ಸಿನಿಮಾ ‘ರಾಜಮಾರ್ತಾಂಡ’ ಇಂದು ಬಿಡುಗಡೆ ಆಗಿದೆ. ಧ್ರುವ ಸರ್ಜಾರ ಹುಟ್ಟುಹಬ್ಬದಂದು ಈ ಸಿನಿಮಾ ಬಿಡುಗಡೆ ಆಗಿದ್ದು, ಧ್ರುವ, ಮೇಘನಾ ರಾಜ್, ಚಿರು ಕುಟುಂಬದ ಸದಸ್ಯರು ಒಟ್ಟಿಗೆ ಸಿನಿಮಾ ನೋಡಿದ್ದಾರೆ. ಕಾಮಿಡಿ ಆಕ್ಷನ್ ಸಿನಿಮಾ ಆಗಿರುವ ‘ರಾಜಮಾರ್ತಾಂಡ’ ಸಿನಿಮಾ ವೀಕ್ಷಿಸಿ ಬಂದ ಮೇಘನಾ ರಾಜ್ (Meghana Raj), ಚಿರು ಸದಾ ನಗುತ್ತಿದ್ದವರು, ತನ್ನ ಸುತ್ತಲಿರುವವರು ಸಹ ಖುಷಿಯಾಗಿರಬೇಕು, ನಗುತ್ತಿರಬೇಕು ಎಂದು ಬಯಸುತ್ತಿದ್ದವರು, ಅವರ ಕೊನೆಯ ಸಿನಿಮಾದಲ್ಲಿಯೂ ಅವರು ಖುಷಿಯನ್ನೇ ಹಂಚಿದ್ದಾರೆ. ಅವರ ಅಭಿಮಾನಿಗಳು ಸಹ ಸಿನಿಮಾ ನೋಡಿ ಖುಷಿಯಾಗಬೇಕು ಎಂಬುದೇ ಅವರ ಆಸೆಯಾಗಿತ್ತು ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Oct 06, 2023 10:30 PM
Latest Videos