ಕೇಂದ್ರದ ಬರ ಅಧ್ಯಯನ ತಂಡ ಬಿಸಿಲಲ್ಲಿ ತಿರುಗುತ್ತಾ ರೈತರ ಹಾಳಾದ ಬೆಳೆ ವೀಕ್ಷಿಸುತ್ತಿದ್ದರೆ ಸ್ಥಳೀಯ ಅಧಿಕಾರಿಗಳು ಕಾರುಗಳಲ್ಲಿ ನಿದ್ರಿಸುತ್ತಿದ್ದರು!

ಕೇಂದ್ರದ ಬರ ಅಧ್ಯಯನ ತಂಡ ಬಿಸಿಲಲ್ಲಿ ತಿರುಗುತ್ತಾ ರೈತರ ಹಾಳಾದ ಬೆಳೆ ವೀಕ್ಷಿಸುತ್ತಿದ್ದರೆ ಸ್ಥಳೀಯ ಅಧಿಕಾರಿಗಳು ಕಾರುಗಳಲ್ಲಿ ನಿದ್ರಿಸುತ್ತಿದ್ದರು!

ಅರುಣ್​ ಕುಮಾರ್​ ಬೆಳ್ಳಿ
|

Updated on: Oct 06, 2023 | 7:33 PM

ರೈತರ ವಿಷಯದಲ್ಲಿ ಈ ಪಾಟಿ ಅಸಡ್ಡೆಯೇ? ರೈತ ಹಾಳಾದರೇನು ನನಗೆ ಸಂಬಳದ ಜೊತೆ ಗಿಂಬಳ ಸಿಗುತ್ತಲ್ಲ, ಸಾಕು ಅನ್ನೋ ಮನಸ್ಥಿತಿಯ ಅಧಿಕಾರಿಗಳಿಗೆ ಸರ್ಕಾರವೇ ಪಾಠ ಕಲಿಸಬೇಕು. ರೈತರು ಹತಾಷ ಸ್ಥಿತಿ ತಲುಪಲು ಕುಲಕರ್ಣಿ ಹಾಗೂ ನಿದ್ರಿಸುತ್ತಿರುವ ಮತ್ತೊಬ್ಬ ಅಧಿಕಾರಿಗಳೇ ಕಾರಣ. ಶೇಮ್ ಆನ್ ಯೂ ಆಫೀಸರ್ಸ್! ಕೇಂದ್ರದ ಅಧಿಕಾರಿಗಳು ನಿಮ್ಮ ಬಗ್ಗೆ ಏನು ಯೋಚಿಸಿಯಾರು ಎಂಬ ಪರಿಜ್ಞಾನವೂ ನಿಮಗಿಲ್ಲದೆ ಹೋಯಿತಲ್ಲ! ಥೂ ನಿಮ್ಮ ಮುಖಕ್ಕಿಷ್ಟು ಅಂತ ಉಗಿಯಲ್ವಾ ಅವರು?

ಗದಗ: ರಾಜ್ಯದಲ್ಲಿ ಭೀಕರ ಬರ (drought) ತಲೆದೋರಿರುವುದರಿಂದ ರಾಜ್ಯ ಸರ್ಕಾರ ಕೇಂದ್ರದ ನೆರವು ಕೇಳಿದೆ. ಇದೇ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಬರ ಅಧ್ಯಯನ (Central Team) ತಂಡವೊಂದನ್ನು ರಾಜ್ಯಕ್ಕೆ ಕಳಿಸಿದೆ. ಕೇಂದ್ರದ ಅಧಿಕಾರಿಗಳಿಗೆ ಬರದ ಸ್ಥಿತಿಯ ಬಗ್ಗೆ ಪ್ರತಿ ವಿಷಯವನ್ನು ವಿವರಿಸುವ ಜವಾಬ್ದಾರಿ ಸ್ಥಳೀಯ ಅಧಿಕಾರಿಗಳದ್ದಾಗಿರುತ್ತದೆ (local officers). ಇಂದು ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲ್ಲೂಕಿನ ದೊಡ್ಡೂರು ಗ್ರಾಮದಲ್ಲಿ ಕೇಂದ್ರದ ಅಧಿಕಾರಿಗಳು ಬಿಸಿಲಲ್ಲಿ ಹಾಳಾದ ಬೆಳೆಗಳ ವೀಕ್ಷಣೆ ನಡೆಸುತ್ತಾ ಕಂಗೆಟ್ಟಿರುವ ರೈತರ ಜೊತೆ ಸಮಾಲೋಚನೆ ನಡೆಸುತ್ತಿದ್ದರೆ, ಲಕ್ಷ್ಮೇಶ್ವರದ ತಹಸೀಲ್ದಾರ್ ಶ್ರೀನಿವಾಸ ಮೂರ್ತಿ ಕುಲಕರ್ಣಿ (Srinivas Murthy Kulkarni) ಹಾಗೂ ಮತ್ತೊಬ್ಬ ಸ್ಥಳೀಯ ಅಧಿಕಾರಿಯೊಬ್ಬ ವಾಹನದಲ್ಲಿ ಏಸಿ ಆನ್ ಮಾಡಿಕೊಂಡು ಗಡದ್ದಾಗಿ ನಿದ್ದೆ ಮಾಡುತ್ತಿದ್ದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಹೆಚ್ ಕೆ ಪಾಟೀಲ್ ಬಹಳ ಗಂಭೀರವಾಗಿ ಪರಗಣಿಸಬೇಕಿರುವ ಸಂಗತಿ ಇದು. ಇಂಥ ಸಂವೇದನಾಹೀನ ಆಧಿಕಾರಿಗಳಿಂದ ಅವರಿಗೆ ಉತ್ತಮ ಆಡಳಿತ ನೀಡಲಾಗದು. ರೈತರ ವಿಷಯದಲ್ಲಿ ಈ ಪಾಟಿ ಅಸಡ್ಡೆಯೇ? ರೈತ ಹಾಳಾದರೇನು ನನಗೆ ಸಂಬಳದ ಜೊತೆ ಗಿಂಬಳ ಸಿಗುತ್ತಲ್ಲ, ಸಾಕು ಅನ್ನೋ ಮನಸ್ಥಿತಿಯ ಅಧಿಕಾರಿಗಳಿಗೆ ಸರ್ಕಾರವೇ ಪಾಠ ಕಲಿಸಬೇಕು. ರೈತರು ಹತಾಷ ಸ್ಥಿತಿ ತಲುಪಲು ಕುಲಕರ್ಣಿ ಹಾಗೂ ನಿದ್ರಿಸುತ್ತಿರುವ ಮತ್ತೊಬ್ಬ ಅಧಿಕಾರಿಗಳೇ ಕಾರಣ. ಶೇಮ್ ಆನ್ ಯೂ ಆಫೀಸರ್ಸ್! ಕೇಂದ್ರದ ಅಧಿಕಾರಿಗಳು ನಿಮ್ಮ ಬಗ್ಗೆ ಏನು ಯೋಚಿಸಿಯಾರು ಎಂಬ ಪರಿಜ್ಞಾನವೂ ನಿಮಗಿಲ್ಲದೆ ಹೋಯಿತಲ್ಲ! ಥೂ ನಿಮ್ಮ ಮುಖಕ್ಕಿಷ್ಟು ಅಂತ ಉಗಿಯಲ್ವಾ ಅವರು?

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ