ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಹೆಚ್ಚಿದ ಸರಗಳ್ಳರ ಹಾವಳಿ; ಬೆಚ್ಚಿಬಿದ್ದ ನಾರಿಮಣಿಯರು

ಜಿಲ್ಲೆಯ ದೊಡ್ಡಬಳ್ಳಾಪುರ ಮತ್ತು ದೇವನಹಳ್ಳಿ ಗ್ರಾಮೀಣ ಭಾಗಕ್ಕೆ ಇದೀಗ ಸರಗಳ್ಳರು ಬಂದಿದ್ದಾರೆ. ಓಡಾಡುವುದಿರಲಿ ನೆಮ್ಮದಿಯಿಂದ ಮನೆ ಮುಂದೆ ಒಂಟಿಯಾಗಿ ನಿಲ್ಲುವುದಕ್ಕೂ ಭಯ ಪಡುವಂತ ಪರಿಸ್ಥಿತಿ ನಿರ್ಮಾಣವಾಗಿದ್ದು, ಒಂದೇ ವಾರದಲ್ಲಿ ನಾಲ್ಕು ಕಡೆ ಕಳ್ಳರು ಕೈಚಳಕ ತೋರಿಸುವ ಮೂಲಕ ಆತಂಕವನ್ನ ಸೃಷ್ಟಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಹೆಚ್ಚಿದ ಸರಗಳ್ಳರ ಹಾವಳಿ; ಬೆಚ್ಚಿಬಿದ್ದ ನಾರಿಮಣಿಯರು
ಸಾಂದರ್ಭಿಕ ಚಿತ್ರ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: Dec 09, 2022 | 8:16 AM

ಬೆಂಗಳೂರು ಗ್ರಾಮಾಂತರ: ದೊಡ್ಡಬಳ್ಳಾಪುರ ಮತ್ತು ದೇವನಹಳ್ಳಿ ಗ್ರಾಮೀಣ ಭಾಗಕ್ಕೆ ಬಂದ ಸರಗಳ್ಳರು ಕ್ಷಣ ಮಾತ್ರದಲ್ಲೆ ಮಹಿಳೆಯರ ಚಿನ್ನದ ಸರ ಎಗರಿಸಿ ಎಸ್ಕೇಪ್ ಆಗಿದ್ದಾರೆ. ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣ ನಿವಾಸಿಯಾದ ವಿಜಯಮ್ಮ ಎನ್ನುವವರು ಮಂಗಳವಾರ ಮನೆ ಬಳಿ ನಿಂತಿದ್ದಾರೆ. ಈ ವೇಳೆ ಮನೆ ಮುಂದೆ ಸ್ವಲ್ಪ ದೂರದಲ್ಲೆ ಬೈಕ್ ನಿಲ್ಲಿಸಿದ ಇಬ್ಬರು ಅಪರಿಚತರು ಮೊದಲಿಗೆ ಬೈಕ್ ಕೆಟ್ಟ ರೀತಿ ಡ್ರಾಮ ಮಾಡಿದ್ದು, ನಂತರ ಮನೆ ಮುಂದೆ ಬಂದು ಕ್ಷಣ ಮಾತ್ರದಲ್ಲೆ ವೃದ್ದೆಯ ಕತ್ತಿನಲ್ಲಿದ್ದ 50 ಗ್ರಾಂ ತೂಕದ ಮಾಂಗಲ್ಯ ಸರಕಿತ್ತುಕೊಂಡು ಎಸ್ಕೇಪ್ ಆಗಿದ್ದಾರೆ.

ಕಳೆದ ಕೆಲ ತಿಂಗಳುಗಳಿಂದಷ್ಟೇ ಸಿಟಿಯಲ್ಲಿ ಸದ್ದು ಮಾಡಿದ್ದ ಬ್ಲಾಕ್ ಪಲ್ಸರ್ ಸರಗಳ್ಳರ ಹಾವಳಿ ಇದೀಗ ಸಿಟಿ ಔಟ್ ಸ್ಕಟ್ಸ್​ಗೆ ಎಂಟ್ರಿಕೊಟ್ಟಿದೆ. ಮಹಿಳೆಯರು ಒಂಟಿಯಾಗಿ ಓಡಾಡುವುದಕ್ಕೆ ಮನೆ ಮುಂದೆ ನಿಲ್ಲುವುದಕ್ಕೂ ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ವಾರ ದೊಡ್ಡಬಳ್ಳಾಪುರ ನಗರದ ಬಸವೇಶ್ವರ ನಗರದ ಯಶೋದಮ್ಮ ಎಂಬುವವರ ಮನೆ ಮುಂದಿನ ರಸ್ತೆಯಲ್ಲಿ ವಾಕಿಂಗ್ ಮಾಡುತ್ತಿದ್ದು, ಹಿಂದಿನಿಂದ ಬೈಕ್​ನಲ್ಲಿ ಬಂದ ಇಬ್ಬರು 45 ಗ್ರಾಂ ತೂಕದ ಚಿನ್ನದ ಸರ ಖದೀಯಲು ಯತ್ನಿಸಿದ್ದರು. ಅಲ್ಲದೆ 3 ದಿನಗಳ ಹಿಂದೆ ತಾಲೂಕಿನ ಬಾಶೆಟ್ಟಹಳ್ಳಿಯಲ್ಲಿ ಹಾಲು ತರುವುದಕ್ಕೆ ಹೋಗುತ್ತಿದ್ದ ನಿರ್ಮಲ ಎಂಬುವವರ ಬಳಿಗೆ ಬಂದ ಇಬ್ಬರು ಅನಾಮದೇಯ ವ್ಯಕ್ತಿಗಳು ನಿರ್ಮಲ ಅವರ ಕುತ್ತಿಗೆಗೆ ಕೈ ಹಾಕಿ ಮಾಂಗಲ್ಯ ಸರ ಕಸಿದಿದ್ದರು. ಈ ವೇಳೆ ಮಹಿಳೆ ಚೈನ್ ಗಟ್ಟಿಯಾಗಿ ಹಿಡಿದುಕೊಂಡ ಕಾರಣ ಅರ್ಧ ಚೈನ್ ಕಿತ್ತುಕೊಂಡು ಮಹಿಳೆ ಮೇಲೆ ಹಲ್ಲೆ ನಡೆಸಿ ಆರೋಪಿಗಳು ಎಸ್ಕೇಪ್ ಆಗಿದ್ದರು.

ಹೀಗಾಗಿ ಪದೇ ಪದೇ ದೊಡ್ಡಬಳ್ಳಾಪುರ ದೇವನಹಳ್ಳಿಯಲ್ಲಿ ಬೈಕ್​ನಲ್ಲಿ ಬರುತ್ತಿರುವ ಸರಗಳ್ಳರು ಒಂಟಿ ಮಹಿಳೆಯರನ್ನೆ ಟಾರ್ಗೆಟ್ ಮಾಡಿಕೊಂಡು ಸರಗಳ್ಳತನ ಮಾಡುತ್ತಿದ್ದಾರೆ. ಇನ್ನು ಪದೇ ಪದೇ ಈ ರೀತಿ ಒಂಟಿ ಮಹಿಳೆಯರ ಬಳಿ ಸರಗಳ್ಳತನ ಮಾಡುತ್ತಿರುವುದು ಮಹಿಳೆಯರಲ್ಲಿ ಆತಂಕ ಮೂಡಿಸಿದ್ದು ಒಂಟಿಯಾಗಿ ಓಡಾಡುವುದಕ್ಕೆ ಭಯ ಆಗುತ್ತಿದೆ ಎಂದು ಪೊಲೀಸರ ವಿರುದ್ದ ಮಹಿಳೆಯರು ಅಸಮಧಾನ ಹೊರ ಹಾಕಿದ್ದಾರೆ.

ಇದನ್ನೂ ಓದಿ:ಸರಗಳ್ಳತನ ಹಾಗೂ ನಕಲಿ ನೋಟುಗಳ ತಯಾರಿಕಾ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳ ಬಂಧನ

ಒಟ್ಟಾರೆ ಇಷ್ಟು ದಿನ ನೆಮ್ಮದಿಯಾಗಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಹಿಳೆಯರಿಗೆ ಇದೀಗ ಪದೇ ಪದೇ ಸರಗಳ್ಳತನ ಪ್ರಕರಣಗಳು ವರದಿಯಾಗುತ್ತಿರುವುದು ಸಹಜವಾಗಿಯೇ ಆತಂಕವನ್ನ ಹೆಚ್ಚಿಸಿದೆ. ಇನ್ನಾದರು ಹಿರಿಯ ಅಧಿಕಾರಿಗಳು ಇತ್ತ ಗಮನಹರಿಸಿ ಸರಗಳ್ಳರ ಹೆಡೆಮುರಿಕಟ್ಟುವ ಮೂಲಕ ಮಹಿಳೆಯರ ಆತಂಕವನ್ನು ದೂರ ಮಾಡುವ ಕೆಲಸ ಮಾಡಬೇಕಾಗಿದೆ.

ವರದಿ: ನವೀನ್ ಟಿವಿ9 ದೇವನಹಳ್ಳಿ

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ