16,000 ಅಡಿ ಎತ್ತರದ ಪರ್ವತ ಹತ್ತುವಾಗ ದಿಢೀರ್ ಮುಟ್ಟು: ಟಿಶ್ಯೂ ಪೇಪರ್, ಮೆಡಿಕಲ್ ಟೇಪ್‌ನಿಂದ ಪ್ಯಾಡ್ ತಯಾರಿಸಿದ ಯುವತಿ

ಭಾರತದ ಪರ್ವತಾರೋಹಿ ಯೋಗೇಶ್ವರಿ ಬೋಹರೆ ಹಿಮಾಲಯದ 16,000 ಅಡಿ ಎತ್ತರದಲ್ಲಿ ಅನಿರೀಕ್ಷಿತ ಮುಟ್ಟಿನ ಸಮಸ್ಯೆಗೆ ಸಿಲುಕಿದಾಗ, ಟಿಶ್ಯೂ ಪೇಪರ್ ಮತ್ತು ಮೆಡಿಕಲ್ ಟೇಪ್ ಬಳಸಿ ತಾತ್ಕಾಲಿಕ ಪ್ಯಾಡ್ ತಯಾರಿಸಿದರು. ಈ ವೀಡಿಯೋ ವೈರಲ್ ಆಗಿದ್ದು, ಮಹಿಳಾ ಪರ್ವತಾರೋಹಿಗಳ ಮುಟ್ಟಿನ ಆರೋಗ್ಯ ಮತ್ತು ಸುರಕ್ಷತಾ ನಿಯಮಗಳ ಕುರಿತು ಚರ್ಚೆ ಹುಟ್ಟುಹಾಕಿದೆ. ಐಎಮ್‌ಎಫ್ ಮಾರ್ಗಸೂಚಿಗಳಲ್ಲಿ ಸ್ಯಾನಿಟರಿ ಪ್ಯಾಡ್‌ಗಳ ಕೊರತೆಯನ್ನು ಇದು ಎತ್ತಿ ತೋರಿಸಿದೆ, ತುರ್ತು ಕಿಟ್‌ಗಳಲ್ಲಿ ಇವುಗಳ ಸೇರ್ಪಡೆಗೆ ಕರೆ ನೀಡಿದೆ.

16,000 ಅಡಿ ಎತ್ತರದ ಪರ್ವತ ಹತ್ತುವಾಗ ದಿಢೀರ್ ಮುಟ್ಟು: ಟಿಶ್ಯೂ ಪೇಪರ್, ಮೆಡಿಕಲ್ ಟೇಪ್‌ನಿಂದ ಪ್ಯಾಡ್ ತಯಾರಿಸಿದ ಯುವತಿ
ಯೋಗೇಶ್ವರಿ ಬೋಹರೆ
Image Credit source: Tv9 kannada

Updated on: Nov 06, 2026 | 3:29 PM

ದೆಹಲಿ, ನ.6: ಸಮುದ್ರ ಮಟ್ಟದಿಂದ ಬರೋಬ್ಬರಿ 16,000 ಅಡಿ ಎತ್ತರದ ಹಿಮಾವೃತ ಪರ್ವತ ಶಿಖರ, ಚಳಿ, ಶೂನ್ಯ ತಾಪಮಾನ… ಇಂತಹ ಕ್ಲಿಷ್ಟಕರ ವಾತಾವರಣದಲ್ಲಿ ಪರ್ವತಾರೋಹಣ ನಡೆಸುತ್ತಿದ್ದಾಗ ದಿಢೀರನೇ ಮುಟ್ಟು (Menstruation) ಆರಂಭವಾದರೆ, ಕೈಯಲ್ಲಿ ಕನಿಷ್ಠ ಸ್ಯಾನಿಟರಿ ಪ್ಯಾಡ್‌ಗಳೂ ಇಲ್ಲದಿದ್ದರೆ ಏನು ಮಾಡುವುದು? ಹತ್ತಿರದಲ್ಲಿ ಯಾವುದೇ ಅಂಗಡಿಗಳಿಲ್ಲ, ಸಹಾಯಕ್ಕೆ ಯಾರೂ ಇಲ್ಲ ಮತ್ತು ಇನ್ನು 4-5 ದಿನಗಳ ಕಾಲ ಅದೇ ಶಿಖರದಲ್ಲಿ ಕಳೆಯಬೇಕು. ಇಂತಹ ಕಠಿಣ ಪರಿಸ್ಥಿತಿಯನ್ನು ಭಾರತದ ಪರ್ವತಾರೋಹಿ ಯೋಗೇಶ್ವರಿ ಬೋಹರೆ ಅತ್ಯಂತ ದಿಟ್ಟತನ ಹಾಗೂ ಜಾಣ್ಮೆಯಿಂದ ನಡೆದುಕೊಂಡಿದ್ದಾರೆ.

ತಮ್ಮ ಬಳಿ ಲಭ್ಯವಿದ್ದ ಟಿಶ್ಯೂ ಪೇಪರ್ ಮತ್ತು ಮೆಡಿಕಲ್ ಟೇಪ್ ಬಳಸಿ ಆಕೆಯು ತಯಾರಿಸಿದ ಮೇಕ್‌ಶಿಫ್ಟ್ (ತಾತ್ಕಾಲಿಕ) ಸ್ಯಾನಿಟರಿ ಪ್ಯಾಡ್‌ನ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಪ್ರಕೃತಿಯ ಮಡಿಲಿನಲ್ಲಿ ಮಹಿಳಾ ಪರ್ವತಾರೋಹಿಗಳ ಋತುಚಕ್ರದ ಆರೋಗ್ಯ ಮತ್ತು ಭದ್ರತಾ ನಿಯಮಗಳ ಕುರಿತು ದೊಡ್ಡ ಚರ್ಚೆಗೆ ನಾಂದಿ ಹಾಡಿದೆ.

Loading...

ಇಲ್ಲಿದೆ ನೋಡಿ ಇನ್ಸ್ಟಾಗ್ರಾಮ್​​ ವಿಡಿಯೋ:

ಇನ್‌ಸ್ಟಾಗ್ರಾಮ್‌ನಲ್ಲಿ ತಮಗಾದ ಅನುಭವವನ್ನು ಹಂಚಿಕೊಂಡ ಯೋಗೇಶ್ವರಿ, ಪರ್ವತಾರೋಹಣದ ಕ್ಯಾಂಪ್ ತಲುಪಿದ ರಾತ್ರಿ ಇದ್ದಕ್ಕಿದ್ದಂತೆ ಮುಟ್ಟು ಆರಂಭವಾಗಿತ್ತು. ತುರ್ತು ಪರಿಸ್ಥಿತಿಯಲ್ಲಿ ಬಳಸಲು ಪ್ಯಾಡ್‌ಗಳಿರಲಿಲ್ಲ, ಜತೆಗೆ ನೆರವಿಗೆ ಸುತ್ತಮುತ್ತ ಯಾವುದೇ ಮಹಿಳೆಯರೂ ಇರಲಿಲ್ಲ. ತಕ್ಷಣವೇ ತಮ್ಮ ಪ್ರಥಮ ಚಿಕಿತ್ಸಾ ಪೆಟ್ಟಿಗೆಯಲ್ಲಿದ್ದ (First Aid Kit) ಮೆಡಿಕಲ್ ಟೇಪ್ ಹಾಗೂ ಟಿಶ್ಯೂ ಪೇಪರ್‌ಗಳನ್ನು ಮಡಚಿ, ದಪ್ಪಗೆ ಮಾಡಿ ಅಂಚುಗಳನ್ನು ಟೇಪ್‌ನಿಂದ ಸೀಲ್ ಮಾಡಿ ತಾತ್ಕಾಲಿಕ ಸ್ಯಾನಿಟರಿ ಪ್ಯಾಡ್ ತಯಾರಿಸಿದರು. “ಇದು ಕೆಲಸ ಮಾಡುತ್ತದೆಯೋ ಇಲ್ಲವೋ ನೋಡೋಣ” ಎಂದು ಕ್ಯಾಮೆರಾ ಮುಂದೆ ಪ್ರದರ್ಶಿಸಿದರು.

ಇದನ್ನೂ ಓದಿ: ಇ-ಆಸ್ತಿ ಸಾಫ್ಟ್‌ವೇರ್ ದುರ್ಬಳಕೆ: 100ಕ್ಕೂ ಹೆಚ್ಚು ಫ್ಲಾಟ್‌ಗಳಿಗೆ ಅಕ್ರಮ ಇ-ಖಾತಾ ಮಂಜೂರು; ಇಬ್ಬರು ಜಿಬಿಎ ಹಿರಿಯ ಅಧಿಕಾರಿಗಳ ಅಮಾನತು

ಕಠಿಣ ಪರಿಸ್ಥಿತಿಯಲ್ಲಿ ಹೇಗೆ ಬದುಕಬೇಕು, ಪರಿಸ್ಥಿತಿಗೆ ತಕ್ಕಂತೆ ಹೇಗೆ ಹೊಂದಿಕೊಳ್ಳಬೇಕು ಮತ್ತು ಉಪಾಯ ಹುಡುಕಬೇಕು ಎಂಬುದನ್ನು ಕಲಿಸುತ್ತವೆ. ಕಠಿಣ ಹವಾಮಾನ, ದುರ್ಗಮ ಹಾದಿಗಳಿಗೆ ಸಿದ್ಧರಾಗುವ ಪರ್ವತಾರೋಹಿಗಳು ಮುಟ್ಟಿನ ಸವಾಲುಗಳನ್ನು ಚರ್ಚಿಸುವುದೇ ಇಲ್ಲ” ಎಂದು ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಯೋಗೇಶ್ವರಿ ಅವರ ಈ ವಿಡಿಯೋ ಪ್ರಕಟವಾದ ಬೆನ್ನಲ್ಲೇ ಭಾರತದ ರಾಷ್ಟ್ರೀಯ ಪರ್ವತಾರೋಹಣ ಸಂಸ್ಥೆಯಾದ ‘ಇಂಡಿಯನ್ ಮೌಂಟೇನಿಯರಿಂಗ್ ಫೌಂಡೇಶನ್’ (IMF) ನ ಮಾರ್ಗಸೂಚಿಗಳ ಬಗ್ಗೆ ಪ್ರಶ್ನೆಗಳು ಎದ್ದಿವೆ.

ಪರ್ವತಾರೋಹಣ ಏಜೆನ್ಸಿಗಳು ಹಾಗೂ ಆಯೋಜಕರಿಗೆ ಐಎಮ್‌ಎಫ್ ಬಿಡುಗಡೆ ಮಾಡಿರುವ ಸುರಕ್ಷತಾ ಮಾರ್ಗಸೂಚಿಯಲ್ಲಿ ಪ್ರಥಮ ಚಿಕಿತ್ಸಾ ಸಾಧನಗಳು, ಆಮ್ಲಜನಕ ಮುಂತಾದ ಅಗತ್ಯ ವಸ್ತುಗಳ ಪಟ್ಟಿ ಇದೆಯಾದರೂ, ಮಹಿಳೆಯರ ಸ್ಯಾನಿಟರಿ ಪ್ಯಾಡ್‌ಗಳು ಅಥವಾ ಮುಟ್ಟಿನ ನೈರ್ಮಲ್ಯ ವಸ್ತುಗಳನ್ನು ಕಡ್ಡಾಯ ಪಟ್ಟಿಯಲ್ಲಿ ಸೇರಿಸಲಾಗಿಲ್ಲ. 16,000 ಅಡಿ ಎತ್ತರದ ಸೂಕ್ಷ್ಮ ವಾತಾವರಣದಲ್ಲಿ ಬಳಸಿದ ಪ್ಯಾಡ್‌ಗಳ ವಿಲೇವಾರಿ, ಶುದ್ಧ ನೀರು ಹಾಗೂ ಬದಲಾಯಿಸಲು ಗೌಪ್ಯ ಜಾಗದ ವ್ಯವಸ್ಥೆಯ ಕುರಿತು ಕಟ್ಟುನಿಟ್ಟಿನ ನಿಯಮಗಳ ಕೊರತೆಯಿದೆ.

ಮಹಿಳೆಯರು ಸಾಗರ, ಬಾಹ್ಯಾಕಾಶ ಹಾಗೂ ಹಿಮಾಲಯದ ತುದಿಯಲ್ಲೂ ಸಾಹಸ ಮೆರೆಯುತ್ತಿರುವ ಈ ಯುಗದಲ್ಲಿ, ಮುಟ್ಟು ಎಂಬುದು ಅತ್ಯಂತ ನೈಸರ್ಗಿಕ ಜೈವಿಕ ಪ್ರಕ್ರಿಯೆಯಾಗಿದೆ. ಹವಾಮಾನ ಅಥವಾ ಹಾದಿಯ ನಕ್ಷೆಯನ್ನು ಪರಿಶೀಲಿಸುವಷ್ಟೇ ಸಾಧಾರಣವಾಗಿ ಪರ್ವತಾರೋಹಣ ತಂಡಗಳ ತುರ್ತು ಕಿಟ್‌ಗಳಲ್ಲಿ ಸ್ಯಾನಿಟರಿ ಪ್ಯಾಡ್‌ಗಳು, ಮುಟ್ಟಿನ ಕಪ್‌ಗಳು ಹಾಗೂ ವೈಯಕ್ತಿಕ ನೈರ್ಮಲ್ಯ ವಸ್ತುಗಳನ್ನು ಸೇರ್ಪಡೆಗೊಳಿಸುವುದು ಕಡ್ಡಾಯವಾಗಬೇಕು ಎಂಬ ಸಾರ್ವಜನಿಕ ಒತ್ತಾಯ ಕೇಳಿಬಂದಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

 

Published On - 3:28 pm, Fri, 6 November 26

ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
Loading...
Unable to load recommendations.
Follow Us