ಇ-ಆಸ್ತಿ ಸಾಫ್ಟ್‌ವೇರ್ ದುರ್ಬಳಕೆ: 100ಕ್ಕೂ ಹೆಚ್ಚು ಫ್ಲಾಟ್‌ಗಳಿಗೆ ಅಕ್ರಮ ಇ-ಖಾತಾ ಮಂಜೂರು; ಇಬ್ಬರು ಜಿಬಿಎ ಹಿರಿಯ ಅಧಿಕಾರಿಗಳ ಅಮಾನತು
ಬೆಂಗಳೂರಿನಲ್ಲಿ ಇ-ಖಾತಾ ಅಕ್ರಮದ ಆರೋಪದ ಮೇಲೆ GBA ಇಬ್ಬರು ಹಿರಿಯ ಕಂದಾಯ ಅಧಿಕಾರಿಗಳನ್ನು ಅಮಾನತುಗೊಳಿಸಿದೆ. 'ಇ-ಆಸ್ತಿ' ತಂತ್ರಾಂಶದ ದುರ್ಬಳಕೆ ಮೂಲಕ 100ಕ್ಕೂ ಹೆಚ್ಚು ಅಕ್ರಮ ಫ್ಲಾಟ್‌ಗಳಿಗೆ ನಿಯಮಬಾಹಿರವಾಗಿ ಇ-ಖಾತಾ ಮಂಜೂರು ಮಾಡಲಾಗಿದೆ. ಇದು ಗಂಭೀರ ದುಡ್ರ್ವರ್ತನೆ ಎಂದು GBA ಖಂಡಿಸಿದೆ. ಭಾರಿ ಅಕ್ರಮ ಬೆಳಕಿಗೆ ಬಂದಿದ್ದು, ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗಿದೆ. ಸಾರ್ವಜನಿಕ ನಂಬಿಕೆ ಕಾಯಲು GBA ಬದ್ಧವಾಗಿದೆ.

ಬೆಂಗಳೂರು, ನ.6: ಬೆಂಗಳೂರಿನ ‘ಇ-ಆಸ್ತಿ’ ತಂತ್ರಾಂಶದಲ್ಲಿದ್ದ ಬ್ಯಾಂಕ್ ಹರಾಜು ನಿಯಮಾವಳಿಯ ಅವಕಾಶವನ್ನು ದುರ್ಬಳಕೆ ಮಾಡಿಕೊಂಡು ನಿಯಮಬಾಹಿರವಾಗಿ ನಿರ್ಮಿಸಲಾಗಿದ್ದ 100ಕ್ಕೂ ಹೆಚ್ಚು ಫ್ಲಾಟ್‌ಗಳಿಗೆ ಅಕ್ರಮವಾಗಿ ‘ಇ-ಖಾತಾ’ (e-khata) ನೀಡಿದ್ದ ಆರೋಪದ ಮೇಲೆ ಬೃಹತ್ ಬೆಂಗಳೂರು ಪ್ರಾಧಿಕಾರದ (GBA) ಇಬ್ಬರು ಹಿರಿಯ ಕಂದಾಯ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.
ಅಮಾನತುಗೊಂಡ ಅಧಿಕಾರಿಗಳನ್ನು ಬೆಂಗಳೂರು ಪೂರ್ವ ಮಹಾನಗರ ಪಾಲಿಕೆಯ ಪ್ರಭಾರ ಕಂದಾಯ ಅಧಿಕಾರಿ ಬಸವರಾಜ್ ಮಗಿ ಹಾಗೂ ಬೆಂಗಳೂರು ಪಶ್ಚಿಮ ಮಹಾನಗರ ಪಾಲಿಕೆಯ ಪ್ರಭಾರ ಕಂದಾಯ ಅಧಿಕಾರಿ ಲೋಕಮಾತಾ ಡಿ.ಎಸ್ ಎಂದು ಗುರುತಿಸಲಾಗಿದೆ. ಅಧಿಕಾರಿಗಳ ಈ ಕೃತ್ಯವನ್ನು “ಗಂಭೀರ ದುಡ್ರ್ವರ್ತನೆ, ಅಪರಾಧಿಕ ಅಕ್ರಮ ಹಾಗೂ ಸಂಪೂರ್ಣ ಸ್ವೀಕಾರಾರ್ಹವಲ್ಲದ್ದು” ಎಂದು ಜಿಬಿಎ ತನ್ನ ಅಮಾನತು ಆದೇಶದಲ್ಲಿ ತೀವ್ರವಾಗಿ ತಳೆದಿದೆ.
ಕೆಆರ್ ಪುರಂ ಮತ್ತು ಕೆಂಗೇರಿ ವಲಯಗಳ ಆಸ್ತಿ ದಾಖಲೆಗಳನ್ನು ಕೂಲಂಕುಷವಾಗಿ ಪರಿಶೀಲಿಸಿದಾಗ ಈ ಭಾರಿ ಅಕ್ರಮ ಬೆಳಕಿಗೆ ಬಂದಿದೆ. ಬ್ಯಾಂಕ್‌ಗಳಲ್ಲಿ ಸಾಲ ತೀರಿಸದ ಸುಸ್ತಿದಾರರ ಆಸ್ತಿಗಳನ್ನು ಸರ್ಫೇಸಿ ಕಾಯ್ದೆ ಅಡಿಯಲ್ಲಿ ವಶಪಡಿಸಿಕೊಂಡು ಹರಾಜು ಹಾಕಿದಾಗ ಆಸ್ತಿ ದಾಖಲೆಗಳನ್ನು ವರ್ಗಾಯಿಸಲು ಜಿಬಿಎ ‘ಇ-ಆಸ್ತಿ’ ತಂತ್ರಾಂಶದಲ್ಲಿ ವಿಶೇಷ ಹಿಂಬಾಗಿಲ ಸೌಲಭ್ಯ ಕಲ್ಪಿಸಿತ್ತು. ಆದರೆ, ಅಮಾನತುಗೊಂಡ ಇಬ್ಬರೂ ಅಧಿಕಾರಿಗಳು ಇವು ಸರ್ಫೇಸಿ ಮಾರಾಟ ಪ್ರಮಾಣಪತ್ರಗಳು ಅಲ್ಲದಿದ್ದರೂ ಸಹ, ಸಾಮಾನ್ಯ ಕ್ರಯಪತ್ರಗಳು ಮತ್ತು ಇತರ ದಾಖಲೆಗಳನ್ನು ಬಳಸಿಕೊಂಡು ಸಾಫ್ಟ್‌ವೇರ್ ದುರ್ಬಳಕೆ ಮೂಲಕ ಅಕ್ರಮವಾಗಿ ಇ-ಖಾತಾ ಮಂಜೂರು ಮಾಡಿದ್ದಾರೆ. ಬಸವರಾಜ್ ಮಗಿ ಸುಮಾರು 98 ಅರ್ಜಿದಾರರಿಗೆ ಹಾಗೂ ಲೋಕಮಾತಾ ಸುಮಾರು 6 ಪ್ರಕರಣಗಳಿಗೆ ಅಕ್ರಮವಾಗಿ ಇ-ಖಾತಾ ಅನುಮೋದಿಸಿದ್ದಾರೆ. ಕಂದಾಯ ನಿರೀಕ್ಷಕರು ನಕಾರಾತ್ಮಕ ವರದಿ ನೀಡಿದ್ದಾಗ್ಯೂ ಅಧಿಕಾರಿಗಳು ಈ ಅರ್ಜಿಗಳನ್ನು ಪುರಸ್ಕರಿಸಿರುವುದು ಆದೇಶದಲ್ಲಿ ಉಲ್ಲೇಖವಾಗಿದೆ.
ಇದನ್ನೂ ಓದಿ: ಖಾಸಗಿ ಶಾಲೆಗಳಿಗೆ ಟಕ್ಕರ್ ನೀಡಲು ಸರ್ಕಾರ ಪ್ಲಾನ್: ಎಲ್ಲಾ ಸರ್ಕಾರಿ ಶಾಲೆಗಳಲ್ಲೂ ಇಂಗ್ಲಿಷ್ ಮೀಡಿಯಂ ಆರಂಭ
ಅಧಿಕಾರಿಗಳು ಜಿಬಿಎ ನಿಯಮಗಳು 2024ರ ಅಡಿಯಲ್ಲಿ ಹೊರಡಿಸಲಾದ ಕನಿಷ್ಠ 3 ಸುತ್ತೋಲೆಗಳನ್ನು ಹಾಗೂ ಪ್ರಮಾಣಿತ ಕಾರ್ಯಾಚರಣೆ ವಿಧಾನವನ್ನು ಸಂಪೂರ್ಣವಾಗಿ ಉಲ್ಲಂಘಿಸಿದ್ದಾರೆ. ಈ ಪ್ರಕರಣದ ಕುರಿತು ಸ್ಪಷ್ಟನೆ ನೀಡಿರುವ ಜಿಬಿಎ, “ನಾವು ಯಾವುದೇ ರೀತಿಯ ವಂಚನೆಯನ್ನು ಸಹಿಸುವುದಿಲ್ಲ ಮತ್ತು ಸಾರ್ವಜನಿಕ ನಂಬಿಕೆಯನ್ನು ಕಳೆದುಕೊಳ್ಳಲು ಬಿಡುವುದಿಲ್ಲ. ನೌಕರರ ಸಂಘವೇನಾದರೂ ಈ ಅಮಾನತು ವಿರುದ್ಧ ಪ್ರತಿಭಟನೆಗೆಿಳಿದರೆ, ಅದು ಅತ್ಯಂತ ಆಘಾತಕಾರಿ ಹಾಗೂ ವಂಚನೆ ಮತ್ತು ಕಾನೂನು ಉಲ್ಲಂಘನೆಯನ್ನು ಸಮರ್ಥಿಸಿಕೊಂಡಂತೆ ಆಗುತ್ತದೆ” ಎಂದು ಖಡಕ್ ಎಚ್ಚರಿಕೆ ನೀಡಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




