ಎಲ್ಲಾ ಕಾಲದಲ್ಲೂ ಸಿಗುವ ಹಣ್ಣುಗಳಲ್ಲಿ ಬಾಳೆಹಣ್ಣು (Banana) ಕೂಡ ಒಂದು. ಬಾಳೆಹಣ್ಣು ಕೂಡ ಆರೋಗ್ಯಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುವ ಸೂಪರ್ ಫುಡ್ ಆಗಿದೆ. ಬಾಳೆಹಣ್ಣು ತಿನ್ನುವುದರಿಂದ ದೇಹಕ್ಕೆ ತ್ವರಿತ ಶಕ್ತಿ ದೊರೆಯುವುದಲ್ಲದೆ ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ. ಅದಕ್ಕೆ ಕಾರಣವೆಂದರೆ ಬಾಳೆಹಣ್ಣಿನಲ್ಲಿ ಫೈಬರ್, ಜೀವಸತ್ವಗಳು, ಖನಿಜಗಳು, ಸಕ್ಕರೆ, ಮೆಗ್ನೀಸಿಯಮ್, ಪೊಟ್ಯಾಸಿಯಮ್ ಮತ್ತು ಕಾರ್ಬೋಹೈಡ್ರೇಟ್‌ಗಳಂತಹ ಪೋಷಕಾಂಶಗಳು ಸಮೃದ್ಧವಾಗಿರುವುದು. ಜೀರ್ಣಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುವ ಬಾಳೆಹಣ್ಣು ಕರುಳಿನ ಚಲನೆಯನ್ನು ಸಹ ನಿಯಂತ್ರಿಸುತ್ತದೆ. ಹಲವಾರು ಪೌಷ್ಟಿಕಾಂಶದ ಗುಣಗಳನ್ನು ಹೊಂದಿರುವ ಬಾಳೆ ಹಣ್ಣು ಸೇವಿಸುವುದರಿಂದ ಆರೋಗ್ಯಕ್ಕೆ ಅನೇಕ ರೀತಿಯಲ್ಲಿ ಪ್ರಯೋಜನಗಳಿವೆ (Benefits of Banana). ಅದೇ ರೀತಿ ದುಷ್ಪರಿಣಾಮವೂ (Side effects of bananas) ಇದೆ ಎಂಬುದು ನಿಮಗೆ ಗೊತ್ತೇ?
ಅತಿಯಾದರೆ ಅಮೃತವೂ ವಿಷ ಎಂಬಂತೆ ಬಾಳೆ ಹಣ್ಣು ಕೂಡ ಹೆಚ್ಚು ತಿಂದರೆ ಅದು ಇತರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಹೌದು, ಬಾಳೆಹಣ್ಣಿನಲ್ಲಿ ಸುಮಾರು 100 ಕ್ಯಾಲೋರಿಗಳಿವೆ. ದಿನಕ್ಕೆ ಎರಡಕ್ಕಿಂತ ಹೆಚ್ಚು ಬಾಳೆಹಣ್ಣು ತಿಂದರೆ ತೂಕ ಬೇಗ ಹೆಚ್ಚುತ್ತದೆ. ಅಷ್ಟೇ ಅಲ್ಲ, ಇದರಲ್ಲಿ ದೊರೆಯುವ ಪೊಟ್ಯಾಶಿಯಂ ಪ್ರಮಾಣವೂ ಹೆಚ್ಚು. ದೇಹಕ್ಕೆ ಅಗತ್ಯಕ್ಕಿಂತ ಹೆಚ್ಚು ಪೊಟ್ಯಾಸಿಯಮ್ ಸೇವಿಸುವುದರಿಂದ ತಲೆತಿರುಗುವಿಕೆ, ವಾಂತಿ ಮತ್ತು ನಾಡಿ ಬಡಿತ ಹೆಚ್ಚಾಗುತ್ತದೆ. ಇದು ಹೈಪರ್‌ಕೆಲೆಮಿಯಾದ ಲಕ್ಷಣವಾಗಿದೆ. ಕೆಲವೊಮ್ಮೆ ಇದು ಹೃದಯಾಘಾತಕ್ಕೂ ಕಾರಣವಾಗುತ್ತದೆ.
ಇದನ್ನೂ ಓದಿ: ತೂಕ ನಷ್ಟಕ್ಕೆ ಸೇಬು ಪರಿಣಾಮಕಾರಿ; 5 ದಿನದ ಆ್ಯಪಲ್ ಡಯಟ್ನಲ್ಲಿ ಈ ಆಹಾರಗಳು ಒಳಗೊಂಡಿರಲಿ
ಬಾಳೆಹಣ್ಣನ್ನು ಹೆಚ್ಚು ಸೇವಿಸುವುದರಿಂದ ಫ್ರಕ್ಟೋಸ್‌ನಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿಸಬಹುದು. ಅದಕ್ಕಾಗಿಯೇ ಮಧುಮೇಹ ಇರುವವರು ವೈದ್ಯರನ್ನು ಸಂಪರ್ಕಿಸಿದ ನಂತರವೇ ಅವುಗಳನ್ನು ತೆಗೆದುಕೊಳ್ಳಬೇಕು. ಕಿಡ್ನಿ ಸಂಬಂಧಿ ಸಮಸ್ಯೆಗಳಿದ್ದಲ್ಲಿ ಪೊಟ್ಯಾಶಿಯಂ ಅಧಿಕವಾಗಿರುವ ಆಹಾರವನ್ನು ಸೇವಿಸದಂತೆ ವೈದ್ಯರು ಸಲಹೆ ನೀಡುತ್ತಾರೆ. ಹಾಗಾಗಿ ಅಂತಹವರು ಬಾಳೆಹಣ್ಣಿನಿಂದ ದೂರವಿರಬೇಕು.
ಆರೋಗ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:01 am, Sat, 18 February 23