Stroke Reason :ಕಾಫಿ, ಸೋಡಾ ಪಾರ್ಶ್ವವಾಯುವಿಗೆ ಕಾರಣವಾಗಬಹುದು, ಸಂಶೋಧನೆಯಿಂದ ಬಹಿರಂಗ

| Updated By: ಅಕ್ಷಯ್​ ಪಲ್ಲಮಜಲು​​

Updated on: Oct 12, 2024 | 9:44 AM

ಕಾರ್ಬೊನೇಟೆಡ್ ಪಾನೀಯಗಳು ಮತ್ತು ಕೃತಕ ಹಣ್ಣಿನ ರಸಗಳನ್ನು ಸೇವಿಸುವುದರಿಂದ ನಮ್ಮ ದೇಹದಲ್ಲಿ ಪಾರ್ಶ್ವವಾಯು ಅಪಾಯ ಹೆಚ್ಚಾಗುತ್ತದೆ ಎಂಬುದು ನಿಮಗೆ ತಿಳಿದಿದೆಯೇ? ಅದಲ್ಲದೆ ಇದರ ಜೊತೆಗೆ ಒಬ್ಬ ವ್ಯಕ್ತಿಯು ಪ್ರತಿದಿನ ನಾಲ್ಕು ಕಪ್ ಗಿಂತ ಹೆಚ್ಚು ಕಾಫಿ ಕುಡಿದರೆ, ಅದು ಪಾರ್ಶ್ವವಾಯುವಿಗೆ ಕಾರಣವಾಗಬಹುದು ಎಂದು ಮತ್ತೊಂದು ಅಧ್ಯಯನವು ಆಘಾತಕಾರಿ ವಿಷಯವನ್ನು ಬಹಿರಂಗಪಡಿಸಿದೆ. ಈ ಸಂಶೋಧನೆ ಹೇಳುವ ಪ್ರಕಾರ ಪ್ರತಿನಿತ್ಯ ನಾಲ್ಕು ಕಪ್ ಕಾಫಿಗಿಂತ ಹೆಚ್ಚು ಕುಡಿದರೆ, ಪಾರ್ಶ್ವವಾಯು ಅಪಾಯವು ಅನೇಕ ಪಟ್ಟು ಹೆಚ್ಚಾಗುತ್ತದೆ. ಇದಲ್ಲದೆ, ಜನರು ತಂಪು ಪಾನೀಯಗಳನ್ನು ಕುಡಿಯಲು ಇಷ್ಟಪಡುತ್ತಾರೆ. ಆದರೆ ಇದು ಕೂಡ ಆರೋಗ್ಯಕ್ಕೆ ಹಾನಿಕಾರಕ. ಹಾಗಾದರೆ ಇವು ಯಾವ ರೀತಿಯಲ್ಲಿ ಅಪಾಯಕಾರಿ? ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಯಾವ ವಿಧಾನಗಳನ್ನು ಅನುಸರಿಸಬೇಕು ಎಂಬುದನ್ನು ತಿಳಿದುಕೊಳ್ಳಿ.

Stroke Reason :ಕಾಫಿ, ಸೋಡಾ ಪಾರ್ಶ್ವವಾಯುವಿಗೆ ಕಾರಣವಾಗಬಹುದು, ಸಂಶೋಧನೆಯಿಂದ ಬಹಿರಂಗ
ಸಾಂದರ್ಭಿಕ ಚಿತ್ರ
Follow us on

ಹೃದಯದ ಆರೋಗ್ಯದ ವಿಷಯಕ್ಕೆ ಬಂದಾಗ ನಾವು ಏನನ್ನು ಸೇವನೆ ಮಾಡುತ್ತೇವೆ, ಕುಡಿಯುತ್ತೇವೆ ಎಂಬುದರ ಬಗ್ಗೆ ವಿಶೇಷ ಗಮನ ಹರಿಸುವುದು ಮುಖ್ಯವಾಗುತ್ತದೆ. ಕಾರ್ಬೊನೇಟೆಡ್ ಪಾನೀಯಗಳು ಮತ್ತು ಕೃತಕ ಹಣ್ಣಿನ ರಸಗಳನ್ನು ಸೇವಿಸುವುದರಿಂದ ನಮ್ಮ ದೇಹದಲ್ಲಿ ಪಾರ್ಶ್ವವಾಯು ಅಪಾಯ ಹೆಚ್ಚಾಗುತ್ತದೆ ಎಂಬುದು ನಿಮಗೆ ತಿಳಿದಿದೆಯೇ? ಅದಲ್ಲದೆ ಇದರ ಜೊತೆಗೆ ಒಬ್ಬ ವ್ಯಕ್ತಿಯು ಪ್ರತಿದಿನ ನಾಲ್ಕು ಕಪ್ ಗಿಂತ ಹೆಚ್ಚು ಕಾಫಿ ಕುಡಿದರೆ, ಅದು ಪಾರ್ಶ್ವವಾಯುವಿಗೆ ಕಾರಣವಾಗಬಹುದು ಎಂದು ಮತ್ತೊಂದು ಅಧ್ಯಯನವು ಆಘಾತಕಾರಿ ವಿಷಯವನ್ನು ಬಹಿರಂಗಪಡಿಸಿದೆ. ಈ ಸಂಶೋಧನೆ ಹೇಳುವ ಪ್ರಕಾರ ಪ್ರತಿನಿತ್ಯ ನಾಲ್ಕು ಕಪ್ ಕಾಫಿಗಿಂತ ಹೆಚ್ಚು ಕುಡಿದರೆ, ಪಾರ್ಶ್ವವಾಯು ಅಪಾಯವು ಅನೇಕ ಪಟ್ಟು ಹೆಚ್ಚಾಗುತ್ತದೆ. ಇದಲ್ಲದೆ, ಜನರು ತಂಪು ಪಾನೀಯಗಳನ್ನು ಕುಡಿಯಲು ಇಷ್ಟಪಡುತ್ತಾರೆ. ಆದರೆ ಇದು ಕೂಡ ಆರೋಗ್ಯಕ್ಕೆ ಹಾನಿಕಾರಕ. ಹಾಗಾದರೆ ಇವು ಯಾವ ರೀತಿಯಲ್ಲಿ ಅಪಾಯಕಾರಿ? ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಯಾವ ವಿಧಾನಗಳನ್ನು ಅನುಸರಿಸಬೇಕು ಎಂಬುದನ್ನು ತಿಳಿದುಕೊಳ್ಳಿ.

ಸಂಶೋಧನೆ ಏನು ಹೇಳುತ್ತದೆ?

ಮೆಕ್ಮಾಸ್ಟರ್ ವಿಶ್ವವಿದ್ಯಾಲಯ ಕೆನಡಾ ಮತ್ತು ಗಾಲ್ವೇ ವಿಶ್ವವಿದ್ಯಾಲಯಗಳು ಕಾಫಿ ಅಥವಾ ಇತರ ಸಕ್ಕರೆ ಪಾನೀಯಗಳ ಬಗ್ಗೆ ಸಂಶೋಧನೆ ನಡೆಸಿವೆ. ಇದರ ಪ್ರಕಾರ, ಕಾರ್ಬೊನೇಟೆಡ್ ಪಾನೀಯಗಳು ಅಥವಾ ಕೃತಕ ಹಣ್ಣಿನ ರಸಗಳನ್ನು ಆಗಾಗ ಕುಡಿಯುವುದರಿಂದ ಪಾರ್ಶ್ವವಾಯು ಅಪಾಯವನ್ನು ಶೇಕಡಾ 37 ರಷ್ಟು ಹೆಚ್ಚಿಸುತ್ತದೆ. ಮತ್ತೊಂದು ಅಧ್ಯಯನದ ಪ್ರಕಾರ, ಸಕ್ಕರೆಯಿಂದ ತಯಾರಿಸಿದ ಕಾರ್ಬೊನೇಟೆಡ್ ಪಾನೀಯಗಳು ಪಾರ್ಶ್ವವಾಯು ಅಪಾಯವನ್ನು ಶೇಕಡಾ 22 ರಷ್ಟು ಹೆಚ್ಚಿಸುತ್ತವೆ. ಈ ಸಂಶೋಧನೆಯನ್ನು ಜರ್ನಲ್ ಆಫ್ ಸ್ಟ್ರೋಕ್ ಮತ್ತು ಇಂಟರ್ನ್ಯಾಷನಲ್ ಜರ್ನಲ್ ಆಫ್ ಸ್ಟ್ರೋಕ್ನಲ್ಲಿ ಪ್ರಕಟಿಸಲಾಗಿದೆ. ಈ ಯೋಜನೆಯಲ್ಲಿ 27 ದೇಶಗಳ 27 ಸಾವಿರ ಜನರು ಭಾಗಿಯಾಗಿದ್ದರು. ಅದರಲ್ಲಿ 13,500 ಜನರು ಮೊದಲ ಬಾರಿಗೆ ಪಾರ್ಶ್ವವಾಯು ಅಪಾಯವನ್ನು ಎದುರಿಸಿದ್ದಾರೆ. ಹಾಗಾದರೆ ಪಾರ್ಶ್ವವಾಯುವಿನ ಅಪಾಯವನ್ನು ಹೆಚ್ಚಿಸುವ ಈ ಪಾನೀಯಗಳಲ್ಲಿ ಏನಿದೆ? ಇದು ಆರೋಗ್ಯಕ್ಕೆ ಹಾನಿ ಮಾಡಲು ಕಾರಣವೇನು?

ಈ ಪಾನೀಯಗಳು ಪಾರ್ಶ್ವವಾಯುವಿನ ಅಪಾಯವನ್ನು ಹೆಚ್ಚಿಸಲು ಕಾರಣವೇನು?

ತಜ್ಞರ ಪ್ರಕಾರ, ಮೆದುಳಿನ ಯಾವುದೇ ಭಾಗಕ್ಕೆ ರಕ್ತ ಪೂರೈಕೆ ಕಡಿತವಾದಾಗ ಅಥವಾ ಮೆದುಳಿನ ಕೋಶಗಳು ಹಾನಿಗೊಳಗಾದಾಗ ವ್ಯಕ್ತಿಯು ಪಾರ್ಶ್ವವಾಯುವಿಗೆ ಒಳಗಾಗುತ್ತಾನೆ. ಇಂತಹ ಪರಿಸ್ಥಿತಿಯಲ್ಲಿ, ಇಸ್ಕೀಮಿಕ್ ಪಾರ್ಶ್ವವಾಯು ಸಂಭವಿಸಬಹುದು, ಇದು ಸಾಮಾನ್ಯವಾಗಿ ರಕ್ತ ಹೆಪ್ಪುಗಟ್ಟುವಿಕೆಯಿಂದ ಉಂಟಾಗುತ್ತದೆ. ಇದು ಮೆದುಳಿನಲ್ಲಿ ಆಂತರಿಕ ರಕ್ತಸ್ರಾವಕ್ಕೆ ಕಾರಣವಾಗುತ್ತದೆ. ಕೃತಕ ಹಣ್ಣಿನ ಪಾನೀಯಗಳು ಹೆಚ್ಚುವರಿ ಸಕ್ಕರೆ ಮತ್ತು ಸಂರಕ್ಷಕಗಳನ್ನು ಹೊಂದಿರುತ್ತವೆ ಎಂದು ಈ ಸಂಶೋಧನೆ ಕಂಡು ಹಿಡಿದಿದೆ. ಇದನ್ನು ಅತಿಯಾಗಿ ಕುಡಿಯುವುದರಿಂದ ಸಕ್ಕರೆ ಮಟ್ಟ ಹೆಚ್ಚಾಗುತ್ತದೆ. ಈ ಕಾರಣದಿಂದಾಗಿ, ಪಾರ್ಶ್ವವಾಯುವಿನ ಅಪಾಯವೂ ಗಮನಾರ್ಹವಾಗಿ ಹೆಚ್ಚಾಗುತ್ತದೆ. ಮಹಿಳೆಯರು ಮತ್ತು ಬೊಜ್ಜು ಅಥವಾ ಇತರ ಕಾಯಿಲೆಗಳಿಂದ ಬಳಲುತ್ತಿರುವ ಜನರಲ್ಲಿ ಪಾರ್ಶ್ವವಾಯುವಿನ ಸಾಧ್ಯತೆಗಳು ಹೆಚ್ಚಾಗಿರುತ್ತದೆ.

ನೀವು ಯಾವ ರೀತಿಯ ಪಾನೀಯಗಳನ್ನು ಕುಡಿಯಬಹುದು

ಕಾಫಿ ಅಥವಾ ಚಹಾವನ್ನು ಬಿಟ್ಟುಬಿಡಲು ಸಾಧ್ಯವಿಲ್ಲ. ಆದರೆ ಅವುಗಳನ್ನು ಸೇವನೆ ಮಾಡುವುದನ್ನು ಖಂಡಿತವಾಗಿಯೂ ಕಡಿಮೆ ಮಾಡಬಹುದು. ಅದಲ್ಲದೆ ಇದರ ಪರ್ಯಾಯವಾಗಿ ನೀವು ಗ್ರೀನ್ ಟೀ ಮತ್ತು ಗಿಡಮೂಲಿಕೆ ಚಹಾವನ್ನು ಬಳಸಬಹುದು ಏಕೆಂದರೆ ಅವು ಹಾನಿಕಾರಕವಲ್ಲ ಎಂದು ಹೇಳಲಾಗುತ್ತದೆ. ಹಾಲಿನ ಬದಲು, ಬಾದಾಮಿ, ಸೋಯಾ ಅಥವಾ ಓಟ್ಸ್ ನಿಂದ ತಯಾರಿಸಿದ ಹಾಲನ್ನು ಕುಡಿಯಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ