
ಆಹಾರ ಪದ್ಧತಿಯಲ್ಲಿ ಮಾಡಿಕೊಂಡಂತಹ ಅನೇಕ ಬದಲಾವಣೆಗಳಿಂದ ನಾನಾ ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ. ಮಾತ್ರವಲ್ಲ ಈ ರೀತಿಯ ಅಭ್ಯಾಸ ಕೆಲವರಲ್ಲಿ ಹೊಟ್ಟೆ ನೋವಿಗೂ ಕೂಡ ಕಾರಣವಾಗುತ್ತದೆ. ಬೆಳಿಗ್ಗೆ ಹೊಟ್ಟೆ ಸ್ವಚ್ಛವಾಗದಿದ್ದರೆ ದಿನವಿಡೀ ಒಂದು ರೀತಿಯ ಅಸ್ವಸ್ಥತೆ ಕಾಡುತ್ತದೆ. ಇದೆಲ್ಲದಕ್ಕೂ ನಾವು ಸೇವನೆ ಮಾಡುವಂತಹ ಆಹಾರಗಳೇ ಕಾರಣವಾಗಿರುತ್ತದೆ. ಇಂತಹ ಸಂದರ್ಭಗಳಲ್ಲಿ, ಕೆಲವು ನೈಸರ್ಗಿಕ ಮನೆಮದ್ದುಗಳು ಹೊಟ್ಟೆಯನ್ನು ಶುದ್ಧೀಕರಿಸಲು ಅದ್ಭುತವಾಗಿ ಕೆಲಸ ಮಾಡುತ್ತವೆ. ಆರೋಗ್ಯ ತಜ್ಞರು ಈ ರೀತಿ ಸಮಸ್ಯೆ ಕಂಡು ಬಂದಾಗ ಪ್ರತಿದಿನ ರಾತ್ರಿ ಒಂದು ಲೋಟ ಬೆಚ್ಚಗಿನ ಹಾಲು (milk) ಕುಡಿಯುವುದು ಪ್ರಯೋಜನಕಾರಿ ಎಂದು ಹೇಳುತ್ತಾರೆ. ಮಾತ್ರವಲ್ಲ ಇದು ಮಲಬದ್ಧತೆ, ಅಜೀರ್ಣ ಮತ್ತು ಆಮ್ಲೀಯತೆಯಂತಹ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದರೆ ಅಡುಗೆ ಮನೆಯಲ್ಲಿ ಲಭ್ಯವಿರುವ ಒಂದು ವಿಶಿಷ್ಟ ಮಸಾಲೆಯಾದ ಲವಂಗವನ್ನು ಹಾಲಿಗೆ (Clove milk) ಸೇರಿಸಿ ಕುಡಿಯುವುದರಿಂದ ಮತ್ತಷ್ಟು ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಹಾಗಾದರೆ ಇದರಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು? ಯಾಕೆ ಇದು ಒಳ್ಳೆಯದು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ