ಕ್ಯಾನ್ಸರ್ನೊಂದಿಗಿನ ಯುದ್ಧಅಷ್ಟು ಸುಲಭವಲ್ಲ. ಕ್ಯಾನ್ಸರ್ನಲ್ಲಿ ಹಲವು ವಿಧ. ಅವುಗಳಲ್ಲಿ ಒಂದು ಸ್ತನ ಕ್ಯಾನ್ಸರ್. ರೋಗ ನಿರೋಧಕ ಶಕ್ತಿಯನ್ನು ಕುಂದಿಸುತ್ತದೆ. ಹಾರ್ಮೋನ್, ಜೀವನಶೈಲಿ ಮತ್ತು ಪರಿಸರದ ಅಂಶಗಳು ಸ್ತನ ಕ್ಯಾನ್ಸರ್ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಎನ್ನುತ್ತಾರೆ ಸಂಶೋಧಕರು. ಹೀಗಾಗಿ ಜೀವನಶೈಲಿಯನ್ನು ಬದಲಿಸಿಕೊಂಡರೆ ಕ್ಯಾನ್ಸರ್ನ ಅಪಾಯವನ್ನು ತಡೆಗಟ್ಟಬಹುದು. ಕೆಲವು ದಿನನಿತ್ಯದ ಜೀವನಶೈಲಿಗಳು ಕ್ಯಾನ್ಸರ್ನ ಅಪಾಯವನ್ನು ಹೆಚ್ಚಸುತ್ತದೆ. ಹಾಗಾದರೆ ಯಾವಲ್ಲಾ ಅಭ್ಯಾಸಗಳು ಕ್ಯಾನ್ಸರ್ನ ಅಪಾಯವನ್ನು ಹೆಚ್ಚಿಸುತ್ತದೆ ಎನ್ನುವುದನ್ನು ತಿಳಿದುಕೊಳ್ಳಬೇಕು. ಇಲ್ಲಿದೆ ಮಾಹಿತಿ
ಜಂಕ್ ಫುಡ್ಗಳು:
ಜೀವನಶೈಲಿ ಬದಲಾಗಿದೆ. ಜಂಕ್ಫುಡ್ಗಳು ಪ್ರತಿನಿತ್ಯದ ಭಾಗವಾಗಿದೆ. ನಿರಂತರ ಜಂಕ್ಫುಡ್ಗಳ ಸೇವನೆಯಿಂದ ಕ್ಯಾನ್ಸರ್ ಅಪಾಯ ಹೆಚ್ಚು. ಸ್ತನ ಕ್ಯಾನ್ಸರ್ನ ನ ಅಪಾಯವೂ ಜಂಕ್ ಫುಡ್ಗಳಿಂದ ಅಧಿಕವಾಗಿರುತ್ತದೆ ಎನ್ನುತ್ತಾರೆ ತಜ್ಞರು. ಹೀಗಾಗಿ ಹಸಿರು ತರಕಾರಿಗಳ ಸೇವನೆ ಉತ್ತಮ ಆಹಾರವಾಗಿದೆ.
ವ್ಯಾಯಾಮ ಮಾಡದೇ ಇರುವುದು:
ದೇಹದಕ್ಕೆ ವ್ಯಾಯಾಮ ಅತೀ ಅಗತ್ಯವಾಗಿದೆ. ಇಡೀ ದಿನ ಕುಳಿತು ಕೆಲಸ ಮಾಡುವವರಿಗಂತೂ ಪ್ರತಿದಿನ ಕನಿಷ್ಠ ಅರ್ಧಗಂಟೆ ವ್ಯಾಯಾಮ ಅವಶ್ಯಕವಾಗಿರುತ್ತದೆ. ವ್ಯಾಯಮ ಮಾಡದೇ ಇರುವುದು ಕೂಡ ಸ್ತನ ಕ್ಯಾನ್ಸರ್ಗೆ ಕಾರಣವಾಗುತ್ತದೆ ಎನ್ನುವುದು ತಜ್ಞರ ಅಭಿಪ್ರಾಯ. ವಯಸ್ಕರು ವಾರಕ್ಕೆ 150 ನಿಮಿಷಗಳ ಮಧ್ಯಮ ಏರೋಬಿಕ್ ಚಟುವಟಿಕೆ ಅಥವಾ 75 ನಿಮಿಷಗಳ ಶ್ರಮದಾಯಕ ಏರೋಬಿಕ್ ಚಟುವಟಿಕೆಯನ್ನು ಮಾಡಬೇಕು. ಜತೆಗೆ ವಾರಕ್ಕೆ ಕನಿಷ್ಠ ಎರಡು ಬಾರಿ ವ್ಯಾಯಾಮದ ತರಬೇತಿ ಪಡೆದುಕೊಳ್ಳಬೇಕು ಎನ್ನುತ್ತದೆ ವೈದ್ಯಲೋಕ.
ಆಲ್ಕೋಹಾಲ್ ಸೇವನೆ:
ಆಲ್ಕೋಹಾಲ್ ನಿಮ್ಮ ಒತ್ತಡದ ಮಟ್ಟವನ್ನು ಕಡಿಮೆ ಮಾಡುತ್ತದೆ ಎನ್ನುವ ನಂಬಿಕೆಯಿದೆ. ಆದರೆ ಇದು ಸ್ತನ ಕ್ಯಾನ್ಸರ್ ಅಪಾಯವನ್ನೂ ಹೆಚ್ಚಿಸುತ್ತದೆ. ಸೇವಿಸುವ ಆಲ್ಕೋಹಾಲ್ ಪ್ರಮಾಣದೊಂದಿಗೆ ಅಪಾಯದ ಮಟ್ಟವು ಹೆಚ್ಚಾಗುತ್ತದೆ.
ಧೂಮಪಾನ:
ಸ್ತನ ಕ್ಯಾನ್ಸರ್ನ ಅಪಾಯವನ್ನು ಧೂಮಪಾನ ಹೆಚ್ಚಿಸುತ್ತದೆ. ಜತೆಗೆ ಇದು ಶ್ವಾಸಕೋಶದ ಕ್ಯಾನ್ಸರ್ಗೂ ಕಾರಣವಾಗುತ್ತದೆ. ಧೂಮಪಾನ ಮಾಡುವ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಅಪಾಯ ಹೆಚ್ಚು ಇತ್ತೀಚಿಗೆ ನಡೆದ ಅಧ್ಯಯಯನ ಸಾಬೀತುಪಡಿಸಿದೆ.
ರಾಸಾಯನಿಕ ವಸ್ತುಗಳ ಬಳಕೆ:
ರಾಸಾಯನಿಕ ವಸ್ತುಗಳ ಅತಿಯಾದ ಬಳಕೆಯಿಂದ ಸ್ತನ ಕ್ಯಾನ್ಸರ್ ಅಪಾಯ ಹೆಚ್ಚು. ಅವುಗಳಲ್ಲಿ ಕಾಸ್ಮೇಟಿಕ್ಸ್ ಅಥವಾ ಪ್ಲಾಸ್ಟಿಕ್ಗಳ ಅತಿಯಾದ ಬಳಕೆಯಿಂದಲೂ ಸ್ತನ ಕ್ಯಾನ್ಸರ್ ಬರುತ್ತದೆ ಎನ್ನಲಾಗಿದೆ.
ಗರ್ಭಧಾರಣೆ ವಿಳಂಬ:
35 ವರ್ಷಗಳ ನಂತರ ಗರ್ಭಧರಿಸುವ ಮಹಿಳೆಯರು ಮತ್ತು ಗರ್ಭಧಾರಣೆಯನ್ನು ಹೊಂದಿರದ ಮಹಿಳೆಯರು ನಿರಂತರವಾಗಿ ಈಸ್ಟ್ರೊಜೆನ್ ಹಾರ್ಮೋನ್ಗೆ ಒಡ್ಡಿಕೊಳ್ಳುತ್ತಾರೆ. ಅವರಿಗೆ ಸ್ತನ ಕ್ಯಾನ್ಸರ್ ಬರುವ ಅಪಾಯ ಹೆಚ್ಚು. ಯುವತಿಯರಿಗೆ 35 ವರ್ಷಕ್ಕಿಂತ ಮುಂಚಿತವಾಗಿ ಗರ್ಭಧರಿಸುವುದು ಸೂಕ್ತ ಸಮಯವಾಗಿದೆ.
ಸ್ತನ್ಯಪಾನ ಮಾಡಿಸದೇ ಇರುವುದು:
ಮಹಿಳೆ ಹಾಲುಣಿಸುವ ಸಮಯದಲ್ಲಿ ಈಸ್ಟ್ರೊಜೆನ್ ಮಟ್ಟಗಳು ಕಡಿಮೆಯಾಗಬಹುದು. ಸ್ತನ್ಯಪಾನ ಮಾಡಿಸುವ ಮಹಿಳೆಯರಿಗೆ ಸ್ತನ ಕ್ಯಾನ್ಸರ್ ಬರುವ ಅಪಾಯವು ಮಕ್ಕಳನ್ನು ಹೊಂದಿದ್ದರೂ ಸ್ತನ್ಯಪಾನ ಮಾಡದ ಮಹಿಳೆಯರಿಗಿಂತ 4.3 ಪ್ರತಿಶತದಷ್ಟು ಕಡಿಮೆಯಾಗಿದೆ. ಹೀಗಾಗಿ ಸ್ತನ್ಯಪಾನ ಮಾಡಿಸುವುದರಿಂದ ಸ್ತನ ಕ್ಯಾನ್ಸರ್ನ ಅಪಾಯವನ್ನು ಕಡಿಮೆ ಮಾಡಬಹುದು.
ಇದನ್ನೂ ಓದಿ:
ವಾಯುಮಾಲಿನ್ಯದಿಂದ ಹದಿಹರೆಯದವರಲ್ಲಿ ಹೆಚ್ಚುತ್ತಿದೆ ಖಿನ್ನತೆ ಸಮಸ್ಯೆ: ಅಧ್ಯಯನ
Published On - 10:30 am, Wed, 16 March 22