ಆಕ್ಸಿಜನ್ ಮಟ್ಟ ಅಳೆಯಲು ಆಕ್ಸಿಮೀಟರ್ ಬೇಕಿಲ್ಲ, ಮೊಬೈಲ್​ನಲ್ಲಿ ಈ ಆ್ಯಪ್ ಇದ್ದರೆ ಸಾಕು!

|

Updated on: May 23, 2021 | 7:34 PM

CarePlix Vitals: ವಿಶೇಷವೆಂದರೆ ಈಗಾಗಲೇ CarePlix Vitals ಆ್ಯಪ್​ನ್ನು 1200 ಜನರ ಮೇಲೆ ಪ್ರಯೋಗಿಸಿಯೇ ಬಿಡುಗಡೆ ಮಾಡಲಾಗಿದೆ. ತಜ್ಷ ವೈದ್ಯರ ಸಮ್ಮುಖದಲ್ಲೇ ಪರೀಕ್ಷೆ ನಡೆಸಲಾಗಿದ್ದು, ಶೇ 96ರಷ್ಟು ಖಚಿತ ಮಾಹಿತಿಯನ್ನು ಸಂಗ್ರಹಿಸುತ್ತದೆ.

ಆಕ್ಸಿಜನ್ ಮಟ್ಟ ಅಳೆಯಲು ಆಕ್ಸಿಮೀಟರ್ ಬೇಕಿಲ್ಲ, ಮೊಬೈಲ್​ನಲ್ಲಿ ಈ ಆ್ಯಪ್ ಇದ್ದರೆ ಸಾಕು!
ಪಲ್ಸ್​ ಆಕ್ಸಿಮೀಟರ್​
Follow us on

ಕೊವಿಡ್ 2ನೇ ಅಲೆಯ ಹೊಡೆತಕ್ಕೆ ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಕಂಗೆಡುವಂತಾಗಿದೆ. ಹಿಂದೆಂದಿಗಿಂತಳು ಹೆಚ್ಚು ಆರೋಗ್ಯದ ಸಮಸ್ಯೆಗಳನ್ನು ಮಾನವ ಸಂಕುಲ ಎದುರಿಸುತ್ತಿದೆ. ಕ್ಷಣಕ್ಷಣಕ್ಕೂ ದೇಹದೊಳಗೆ ಆಡುವ ಉಸಿರನ್ನೂ ಪದೇ ಪದೇ ಪರೀಕ್ಷೆ ಮಾಡಬೇಕಾದ ಸಂದರ್ಭವಿದು. ದೇಹದಲ್ಲಿ ಆಮ್ಲಜನಕದ ಮಟ್ಟವನ್ನು ಪರಿಶೀಲಿಸಲು ಸದ್ಯ ಉಪಯೋಗದಲ್ಲಿ ಇರುವ ಸಾಧನವೇ ಆಕ್ಸಿಮೀಟರ್. ಆದರೆ ಬಂದದ್ದೇ ಬಂತು ಎಂದು, ಈ ಪರಿಸ್ಥಿತಿಯಲ್ಲಿ ಆಕ್ಸಿಮೀಟರ್​ಗೆ ತಗಲುವ ಹಣವೂ ಸಹ ಕಡಿಮೆಯೇನಲ್ಲ. ಒಂದು ಉತ್ತಮ ಪಲ್ಸ್ ಆಕ್ಸಿಮೀಟರ್​ಗೆ ಈಗ 2 ಸಾವಿರಕ್ಕಿಂತ ಕಡಿಮೆಯಿಲ್ಲ. ಆದರೆ ದೇಹದ ಸ್ಯಾಚುರೇಶನ್ ಮಟ್ಟ ಅಳೆಯಲು ಬಳಸುವ ಆಕ್ಸಿಮೀಟರ್​ಗೆ ಪರ್ಯಾಯವಾಗಿ ಮೊಬೈಲ್ ಆ್ಯಪ್ ಒಂದನ್ನು ಬಳಸಬಹುದಾಗಿದೆ. ಯಾವ ಆ್ಯಪ್ ಅದು ಎಂದಿರಾ? ಅದುವೇ CarePlix Vitals.

ಕೋಲ್ಕತ್ತಾ ಮೂಲದ ಸ್ಟಾರ್ಟ್​ಅಪ್ ಕಂನಿಯೊಂದು ಹುಟ್ಟುಹಾಕಿರುವ ಈ ಆ್ಯಪ್ ರಕ್ತದಲ್ಲಿನ ಆಮ್ಲಜನಕದ ಪ್ರಮಾಣ, ನಾಡಿಮಿಡಿತ ಮತ್ತು ಉಸಿರಾಟದ ಏರಿಳಿತಗಳನ್ನು ದಾಖಲಿಸುತ್ತದೆ. ಸ್ಮಾರ್ಟ್​ಫೋನ್​ನ ಕ್ಯಾಮರಾದ ಎದುರು ನಿಮ್ಮ ಕೈಬೆರಳನ್ನು ಇಟ್ಟರೆ ಸಾಕು, ಒಂದೇ ಸೆಕೆಂಡಿನಲ್ಲಿ ಫ್ಲಾಶ್​ಲೈಟ್ ಆಗುತ್ತದೆ. ದೇಹದ ಆಕ್ಸಿಜನ್ ಸ್ಯಾಚುರೇಶನ್, ನಾಡಿಮಿಡಿತ ಮತ್ತು ಉಸಿರಾಟದ ಏರಿಳಿತದ ವಿವರಗಳು ಸ್ಮಾರ್ಟ್​ಫೋನ್​ನಲ್ಲಿ ಕಾಣಿಸುತ್ತದೆ.

ಇತರ ಆಕ್ಸಿಮೀಟರ್​ಗಳು ಇನ್ಫ್ರಾರೆಡ್ ಸೆನ್ಸಾರ್​ಗಳನ್ನು ಹೊಂದಿರುವುದನ್ನು ನೀವು ನೋಡಿರಬಹುದು. ಆದರೆ, ನಾವು ಅಭಿವೃದ್ಧಿಪಡಿಸಿರುವ ಆ್ಯಪ್ ಕೇವಲ ಸ್ಮಾರ್ಟ್​ಫೋನ್​ನ ಫ್ಲಾಶ್​ಲೈಟ್​ ಮತ್ತು ಕ್ಯಾಮರಾ ಮೂಲಕವೇ ಆರೋಗ್ಯದ ವಿವರಗಳನ್ನು ದಾಖಲಿಸುತ್ತದೆ. ಕೈಬೆರಳು ಕ್ಯಾಮರಾದ ಎದುರು ಸುಮಾರು 40 ಸೆಕೆಂಡುಗಳ ಇಟ್ಟಾಗ ಲೈಟ್ ಸೆನ್ಸೆಟಿವಿಟಿಯ ಮೂಲಕ ಪಿಪಿಜಿ ಗ್ರಾಫ್ ಸಂಗ್ರಹಿಸುತ್ತೇವೆ. ಅದರ ಮೂಲಕವೇ ನಾಡಿಮಿಡಿತ, ರಕ್ತದಲ್ಲಿನ ಆಮ್ಲಜನಕದ ಮಟ್ಟ ಮತ್ತು ಉಸಿರಾಟದ ಏರಿಳಿತದ ಪ್ರಮಾಣವನ್ನು ದಾಖಲಿಸಲು ಸಾಧ್ಯವಾಗುತ್ತದೆ ಎನ್ನುತ್ತಾರೆ ಆ್ಯಪ್​ನ ಅಭಿವೃದ್ಧಿಕಾರರು. ಕೃತಕ ಬುದ್ಧಿಮತ್ತೆಯನ್ನು ಉಪಯೋಗಿಸಿಕೊಂಡು ಈ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ.

ವಿಶೇಷವೆಂದರೆ ಈಗಾಗಲೇ CarePlix Vitals ಆ್ಯಪ್​ನ್ನು 1200 ಜನರ ಮೇಲೆ ಪ್ರಯೋಗಿಸಿಯೇ ಬಿಡುಗಡೆ ಮಾಡಲಾಗಿದೆ. ತಜ್ಷ ವೈದ್ಯರ ಸಮ್ಮುಖದಲ್ಲೇ ಪರೀಕ್ಷೆ ನಡೆಸಲಾಗಿದ್ದು, ಶೇ 96ರಷ್ಟು ಖಚಿತ ಮಾಹಿತಿಯನ್ನು ಸಂಗ್ರಹಿಸುತ್ತದೆ CarePlix Vitals.

(ಈ ಲೇಖನ ಕೇವಲ ಮಾಹಿತಿ ನೀಡುವ ಉದ್ದೇಶ ಹೊಂದಿದ್ದು,  ವೈದ್ಯರ ಸಲಹೆ ಮೇರೆಗೆ ಮಾತ್ರವೇ ಆರೋಗ್ಯದ ಕುರಿತು ನಿರ್ಧಾರ ಕೈಗೊಳ್ಳಬೇಕು)

ಇದನ್ನೂ ಓದಿ: ಕೊವಿಡ್ 3ನೇ ಅಲೆಯಿಂದ ಮಕ್ಕಳಿಗೆ ಹೆಚ್ಚಿನ ಅಪಾಯ, ಭಾರತದಲ್ಲಿ ತಯಾರಿಸಿದ ಮೂಗಿಗೆ ಹಾಕುವ ಲಸಿಕೆ ‘ಗೇಮ್ ಚೇಂಜರ್’ ಆಗುವ ಸಾಧ್ಯತೆ: ಸೌಮ್ಯ ಸ್ವಾಮಿನಾಥನ್

ರಾಜ್ಯದ ಆರೋಗ್ಯ ಕ್ಷೇತ್ರದಲ್ಲಿ ಗಮನಾರ್ಹ ಸುಧಾರಣೆಯಾಗಿದೆ: ಸಚಿವ ಡಾ.ಸುಧಾಕರ್
(this mobile app CarePlix Vitals gives blood oxygen level no need to oximeter)

Published On - 7:26 pm, Sun, 23 May 21