ಮಧುಮೇಹ (Diabetes) ದೀರ್ಘಕಾಲದ ಕಾಯಿಲೆಯಾಗಿದೆ. ಒಂದು ಬಾರಿ ಮಧುಮೇಹಕ್ಕೆ ತುತ್ತಾದ ಮೇಲೆ ಅದನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲ. ಆದರೆ ಅದನ್ನು ಹತೋಟಿಯಲ್ಲಿಡಬಹುದು. ದೇಹದಲ್ಲಿ ಸರಿಯಾದ ಪ್ರಮಾಣದಲ್ಲಿ ಇನ್ಸುಲಿನ್ (Insulin) ಉತ್ಪಾದನೆಯಾಗದಿದ್ದರೆ ಅಥವಾ ಉತ್ಪತ್ತಿಯಾದ ಇನ್ಸುಲಿನ್ ದೇಹಕ್ಕೆ ಪರಿಣಾಮಕಾರಿಯಾಗಿ ಉಪಯೋಗವಾಗದಿದ್ದರೆ ಮಧುಮೇಹಕ್ಕೆ ಕಾರಣವಾಗುತ್ತದೆ. ಆದಷ್ಟು ಆಹಾರಗಳಿಂದಲೇ ಮಧುಮೇಹವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. ಅಥವಾ ಕೆಲವು ನೈಸರ್ಗಿಕವಾಗಿ ಸಿಗುವ ಪದಾರ್ಥಗಳ (Natural Herbs) ಬಳಕೆಯಿಂದ ಮಧುಮೇಹವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. ಈ ಕುರಿತು ಮೆಡಿಕಲ್ ನ್ಯೂಸ್ ಟುಡೆ ವರದಿ ಮಾಡಿದೆ. ಇಲ್ಲಿವೆ ನೋಡಿ ಸಲಹೆಗಳು
ಆಲೋವೆರಾ
ಆಲೋವಾರಾ ಚರ್ಮದ ಆರೋಗ್ಯಕ್ಕೆ ಉತ್ತಮ ಎನ್ನುವುದು ಎಲ್ಲರಿಗೂ ತಿಳಿದ ವಿಷಯ ಆದರೆ. ಅಧ್ಯಯನದ ಪ್ರಕಾರ ಅಲೋವೆರಾ ಟೈಪ್ 2 ಮಧುಮೇಹ ನಿಯಂತ್ರಣಕ್ಕೂ ಸಹಕಾರಿಯಾಗಿದೆ. ಅಲೋವೆರಾದಲ್ಲಿರುವ ಆ್ಯಂಟಿಆಕ್ಸಿಡೆಂಟ್ ಅಂಶಗಳು ದೇಹದಲ್ಲಿನ ರಕ್ತದ ಬೀಟಾ ಕಣಗಳನ್ನು ರಕ್ಷಿಸುತ್ತದೆ. 2016 ಅಧ್ಯಯನದ ಪ್ರಕಾರ ಆಲೋವೆರಾ ರಕ್ತದಲ್ಲಿ ಗ್ಲೂಕೋಸ್ ಹಾಗೂ ಹಿಮೋಗ್ಲೋಬಿನ್ ಅನ್ನು ನಿಯಂತ್ರಿಸುತ್ತದೆ, ಅಧ್ಯಯನವನ್ನು ಮುಂದುವರೆಸಿದ ವಿಜ್ಞಾನಗಳು ಆಲೋವೆರಾವು ದೇಹದಲ್ಲಿ ಇನ್ಸುಲಿನ್ ಪ್ರಮಾಣವನ್ನು ಹೆಚ್ಚಿಸುತ್ತದೆ ಮತ್ತು ಆರೋಗ್ಯವನ್ನು ಸುಧಾರಿಸುತ್ತದೆ. ಅಲ್ಲದೆ ಕಿಡ್ನಿ ಸಮಸ್ಯೆ, ಡಿಪ್ರೆಶನ್ ನಂತಹ ಸಮಸ್ಯೆಗಳಿಂದ ದೂರವಿಡಲು ನೆರವಾಗುತ್ತದೆ.
ದಾಲ್ಚಿನಿ
ಟೈಪ್ 2 ಮಧುಮೇಹದ ನಿಯಂತ್ರಣಕ್ಕೆ ದಾಲ್ಚಿನಿ ಸಹಕಾರಿಯಾಗಿದೆ ಎಂದು ಅಧ್ಯಯನವೊಂದು ಹೇಳಿದೆ. ದಾಲ್ಚಿನಿ ಸೇವನೆಯಿಂದ ರಕ್ತದಲ್ಲಿನ ಗ್ಲೂಕೋಸ್ ಪ್ರಮಾಣ ನಿಯಂತ್ರಣದಲ್ಲಿರುತ್ತದೆ ಜತೆಗೆ ದೇಹಕ್ಕೆ ಬೇಕಾದ ಇನ್ಸುಲಿನ್ಅನ್ನು ಪೂರೈಸುತ್ತದೆ ಎಂದು 2019ರ ಅಧ್ಯಯನದಲ್ಲಿ ಪತ್ತೆ ಮಾಡಲಾಗಿದೆ. ಆದರೆ ಈ ಅಧ್ಯಯನವನ್ನು ಯಾವುದೇ ಮಧುಮೇಹ ಇರುವ ವ್ಯಕ್ತಿಯ ಮೆಲೆ ನಡೆಸದ ಕಾರಣ ಮಧುಮೇಹಿಗಳು ದಾಲ್ಚನಿಯನ್ನು ಬಳಸುವ ಮೊದಲು ನಿಮ್ಮ ವೈದ್ಯರನ್ನು ಸಂಪರ್ಕಿಸುವುದು ಒಳಿತ್ತು. ಎಕೆಂದರೆ ಪ್ರತಿಯೊಬ್ಬರಿಗೂ ಮಧುಮೇಹ ವಿವಿಧ ಹಂತಗಳಲ್ಲಿ ಇರುತ್ತದೆ. ಆದ್ದರಿದಂದ ಬಳಕೆಯ ಮೊದಲು ವೈದ್ಯರನ್ನು ಸಂಪರ್ಕಿಸುವುದು ಒಳಿತು ಎನ್ನುತ್ತಾರೆ ತಜ್ಞರು.
ಹಾಗಲಕಾಯಿ
ಚೀನಾ ಮತ್ತು ಭಾರತದಲ್ಲಿ ಅನಾದಿಕಾಲದಿಂದಲೂ ಹಾಗಲಕಾಯಿಯನ್ನು ಬಳಕೆ ಮಾಡಲಾಗುತ್ತಿದೆ. ಹಾಗಲಕಾಯಿ ಔಷಧಿಯ ಗುಣವುಳ್ಳ ತರಕಾರಿಯೂ ಹೌಧು. ಮಧುಮೇಹ ತಡೆಗೆ ಹಾಗಲಕಾಯಿ ಸಹಕಾರಿ ಎನ್ನುವುದನ್ನು ಅಧ್ಯಯನದಲ್ಲಿ ಸಾಬೀತಾಗಿದೆ. 90 ಮಂದಿ ಮಧುಮೇಹಿಗಳ ಮೇಲೆ ಈ ಅಧ್ಯಯನ ನಡೆಸಲಾಗಿದ್ದು, ಯಾವುದೇ ರೀತಿಯ ಮಧುಮೇಹವನ್ನೂ ಕೂಡ ಹಾಗಲಕಾಯಿ ನಿಯಂತ್ರಿಸಬಹುದು ಎಂದು ಕಂಡುಬಂದಿದೆ. ಹೀಗಾಗಿ ಹಾಗಲಕಾಯಿಯನ್ನು ಜ್ಯೂಸ್ ಅಥವಾ ಇನ್ನಿತರ ಪದಾರ್ಥಗಳ ರೀತಿಯಲ್ಲಿಯೂ ಬಳಸಬಹುದಾಗಿದೆ.
ಮೆಂತ್ಯೆ ಕಾಳು
ಟೈಪ್ 2 ಮಧುಮೇಹ ಸೇರಿದಂತೆ ಎಲ್ಲಾ ರೀತಿಯ ಸಕ್ಕರೆ ಕಾಯಿಲೆಯನ್ನು ನಿಯಂತ್ರಿಸಲು ಮೆಂತ್ಯೆ ಸಹಕಾರಿ ಎಂದು ಬರೋಬ್ಬರಿ 3 ವರ್ಷಗಳ ಅಧ್ಯಯನ ನಡೆಸಿ ವಿಜ್ಞಾನಿಗಳು ಸಾಬೀತುಪಡಿಸಿದ್ದಾರೆ. ದೇಹದಲ್ಲಿ ಮಧುಮೆಹಕ್ಕೆ ಕಾರಣವಾಗುವ ಅಂಶಗಳನ್ನು ತಡೆಗಟ್ಟಿ ದೇಹವನ್ನು ಅರೋಗ್ಯವಾಗಿಡುವಂತೆ ಮಾಡುತ್ತದೆ. ಒಟ್ಟು 66 ಮಧುಮೇಹ ಇರುವ ಜನರಿಗೆ ಪ್ರತಿದಿನ ದಿನಕ್ಕೆ 2 ಬಾರಿ ಮೆಂತೆಯನ್ನು ತಿನ್ನಿಸುವ ಮೂಲಕ ಅಧ್ಯಯವನ್ನು ಮಾಡಲಾಗಿತ್ತು. ಫಲಿತಾಂಶವಾಗಿ ಮೆಂತೆ ಸಕ್ಕರೆ ಕಾಯಿಲೆಯನ್ನು ನಿಯಂತ್ರಿಸುತ್ತದೆ ಎಂದು ವರದಿಯನ್ನು ನೀಡಲಾಗಿದೆ.
ಮಧುನಾಶಿನಿ (Gymnema)
ಭಾರತದಲ್ಲಿ ಹೆಚ್ಚಾಗಿ ದೊರೆಯುವ ಮಧುನಾಶಿನಿ ಗಿಡದ ಎಲೆಗಳು ಟೈಪ್ 1 ಮತ್ತು ಟೈಪ್ 2 ಮಧುಮೇಹ ನಿಯಂತ್ರಣಕ್ಕೆ ಸಹಕಾರಿಯಾಗಿದೆ. 2013ರಲ್ಲಿ ನಡೆಸಿದ ಅಧ್ಯಯನದಲ್ಲಿ ಮಧುನಾಶಿನಿ ಎಲೆಗಳು ಮಹತ್ವವನ್ನು ಕಂಡುಕೊಳ್ಳಲಾಗಿದೆ. 18 ತಿಂಗಳುಗಳ ಕಾಲ ಎಲೆಯನ್ನು ಬಳಕೆ ಮಾಡಿದರೆ ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಣಕ್ಕೆ ಬಂದು ಮಧುಮೇಹ ನಿಯಂತ್ರದಲ್ಲಿರುತ್ತದೆ ಎನ್ನಲಾಗಿದೆ.
ಶುಂಠಿ
ಪುರಾತನ ಕಾಲದಿಂದಲೂ ಶುಂಠಿಯನ್ನು ಅಜೀರ್ಣ ನಿವಾರಣೆಗೆ ಮತ್ತು ಚಯಾಪಚಯ ಕ್ರಿಯೆಗಳು ಸರಿಯಾಗಿಸಲು ಬಳಸಲಾಗುತ್ತಿದೆ. 2015ರಲ್ಲಿ ನಡೆಸಿದ ಅಧ್ಯಯನವೊಂದು ಶುಂಠಿ ಮಧುಮೇಹ ನಿಯಂತ್ರಣಕ್ಕೂ ಸಹಕಾರಿ ಎಂದು ಹೇಳಲಾಗಿದೆ. ಶುಂಠಿಯ ಸೇವನೆಯಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರದಲ್ಲಿದ್ದು, ಇನ್ಸುಲಿನ್ ಉತ್ಪಾದನೆಯನ್ನೂ ಮಾಡುತ್ತದೆ ಎನ್ನಲಾಗಿದೆ. ಹೀಗಾಗಿ ನೀವು ಶುಂಠಿಯನ್ನು ಟೀ ಅಥವಾ ಶುಂಠಿಯನ್ನು ಇತರ ಆಹಾರ ಪದಾರ್ಥಗಳೊಂದಿಗೂ ಬಳಸಬಹುದಾಗಿದೆ.
ಇಲ್ಲಿರುವ ಸಲಹೆಗಳು ಟಿವಿ9 ಡಿಜಿಟಲ್ ಅಭಿಪ್ರಾಯವಾಗಿರುವುದಿಲ್ಲ. ಮೆಡಿಕಲ್ ನ್ಯೂಸ್ ಟುಡೆ ವರದಿಯನ್ನು ಆಧರಿಸಿ ಮಾಹಿತಿಯನ್ನು ನೀಡಲಾಗಿದೆ. ಈ ಸಲಹೆಗಳನ್ನು ಅಳವಡಿಸಿಕೊಲ್ಳುವ ಮೊದಲು ವೈದ್ಯರನ್ನು ಸಂಪರ್ಕಿಸಿ)
ಇದನ್ನೂ ಓದಿ:
Weight Loss Tips: ಬೇಗ ತೂಕ ಕಡಿಮೆಯಾಗಲು ಮೊಟ್ಟೆ ತಿನ್ನಬೇಕಾ? ಪನೀರ್ ಒಳ್ಳೆಯದಾ?