ವೆಸ್ಟ್ ನೈಲ್ ಜ್ವರ ಎಂದರೇನು? ಲಕ್ಷಣಗಳು ಹೇಗಿರುತ್ತದೆ? ಇದನ್ನು ತಡೆಗಟ್ಟುವುದು ಹೇಗೆ ತಿಳಿಯಿರಿ

ವೆಸ್ಟ್ ನೈಲ್ ಜ್ವರದ ಬಗ್ಗೆ ನೀವು ಕೇಳಿರಬಹುದು. ಕೇರಳದಲ್ಲಿ ಈ ಜ್ವರ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಆರೋಗ್ಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದು, ಸೊಳ್ಳೆ ನಿಯಂತ್ರಣ ಕ್ರಮಗಳನ್ನು ತೀವ್ರಗೊಳಿಸಿದ್ದಾರೆ. ಅದಲ್ಲದೆ ರಾಜ್ಯದಲ್ಲಿ ಶಿಗೆಲ್ಲಾ ಸೋಂಕಿನ ಪ್ರಕರಣಗಳೂ ಹೆಚ್ಚುತ್ತಿರುವುದರಿಂದ ಆರೋಗ್ಯ ಅಧಿಕಾರಿಗಳು ಹೆಚ್ಚಿನ ಎಚ್ಚರಿಕೆ ವಹಿಸಿದ್ದಾರೆ. ಹಾಗಾದರೆ ವೆಸ್ಟ್ ನೈಲ್ ಜ್ವರ ಯಾವ ರೀತಿ ಬರುತ್ತದೆ, ಲಕ್ಷಣಗಳು ಹೇಗಿರುತ್ತದೆ ಮತ್ತು ತಡೆಗಟ್ಟಲು ಏನು ಮಾಡಬಹುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ವೆಸ್ಟ್ ನೈಲ್ ಜ್ವರ ಎಂದರೇನು? ಲಕ್ಷಣಗಳು ಹೇಗಿರುತ್ತದೆ? ಇದನ್ನು ತಡೆಗಟ್ಟುವುದು ಹೇಗೆ ತಿಳಿಯಿರಿ
West Nile Virus
Image Credit source: Getty Images

Updated on: Jun 11, 2026 | 8:27 PM

ಕೇರಳದಲ್ಲಿ ವೆಸ್ಟ್ ನೈಲ್ ಜ್ವರ (West Nile Virus) ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಆರೋಗ್ಯ ಇಲಾಖೆ ರಾಜ್ಯಾದ್ಯಂತ ಹೆಚ್ಚಿನ ನಿಗಾವಹಿಸುತ್ತಿದೆ. ಅದಲ್ಲದೆ ರಾಜ್ಯದಲ್ಲಿ ಶಿಗೆಲ್ಲಾ ಸೋಂಕಿನ ಪ್ರಕರಣಗಳೂ ಹೆಚ್ಚುತ್ತಿರುವುದರಿಂದ ಆರೋಗ್ಯ ಅಧಿಕಾರಿಗಳು ಹೆಚ್ಚಿನ ಎಚ್ಚರಿಕೆ ವಹಿಸಿದ್ದಾರೆ. ಈ ಎರಡೂ ಕಾಯಿಲೆಗಳು ಪರಸ್ಪರ ಸಂಬಂಧ ಹೊಂದಿಲ್ಲದಿದ್ದರೂ, ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳ ಅಪಾಯ ಹೆಚ್ಚುತ್ತಿರುವುದರಿಂದ ಜನರು ಆದಷ್ಟು ಜಾಗರೂಕರಾಗಿರಬೇಕಾಗಿದೆ. ಹಾಗಾದರೆ ವೆಸ್ಟ್ ನೈಲ್ ಜ್ವರ ಯಾವ ರೀತಿ ಬರುತ್ತದೆ, ಲಕ್ಷಣಗಳು ಹೇಗಿರುತ್ತದೆ ಮತ್ತು ತಡೆಗಟ್ಟಲು ಏನು ಮಾಡಬಹುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ವೆಸ್ಟ್ ನೈಲ್ ಜ್ವರವು ಸೊಳ್ಳೆಗಳಿಂದ ಹರಡುವ ವೈರಲ್ ಸೋಂಕಾಗಿದೆ. ಸೋಂಕಿತ ಪಕ್ಷಿಗಳನ್ನು ಕಚ್ಚಿದ ಸೊಳ್ಳೆಗಳು ನಂತರ ಮಾನವರು ಅಥವಾ ಪ್ರಾಣಿಗಳನ್ನು ಕಚ್ಚುವ ಮೂಲಕ ವೈರಸ್ ಹರಡಿಸಬಹುದು. ಡೆಂಗ್ಯೂ ಅಥವಾ ಚಿಕನ್‌ಗುನ್ಯಾ ರೀತಿಯಷ್ಟು ಜನರಿಗೆ ತಿಳಿಯದಿದ್ದರೂ, ಕೆಲ ಸಂದರ್ಭಗಳಲ್ಲಿ ಇದು ಗಂಭೀರ ನರ ಸಂಬಂಧಿತ ಸಮಸ್ಯೆಗಳಿಗೆ ಕಾರಣವಾಗಬಹುದು. ಅದರಲ್ಲಿಯೂ ವೃದ್ಧರು ಮತ್ತು ರೋಗನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಅಪಾಯ ಹೆಚ್ಚು ಎನ್ನಲಾಗಿದೆ.

ವೆಸ್ಟ್ ನೈಲ್ ಜ್ವರದ ಲಕ್ಷಣಗಳು:

ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಸುಮಾರು 80% ಮಂದಿಯಲ್ಲಿ ಯಾವುದೇ ಲಕ್ಷಣಗಳು ಕಾಣಿಸದೇ ಇರಬಹುದು. ಉಳಿದವರಲ್ಲಿ ಕೆಳಗಿನ ಲಕ್ಷಣಗಳು ಕಂಡುಬರುವ ಸಾಧ್ಯತೆ ಇದೆ ಅವುಗಳಲ್ಲಿ ಜ್ವರ, ತಲೆನೋವು, ದೇಹದಲ್ಲಿ ನೋವು, ದೌರ್ಬಲ್ಯ, ವಾಂತಿ ಅಥವಾ ವಾಕರಿಕೆ, ಸಂಧಿ ನೋವು, ಚರ್ಮದ ಮೇಲೆ ಉರಿ ಅಥವಾ ಅಲರ್ಜಿ, ಲಿಂಫ್ ಗ್ರಂಥಿಗಳ ಉಬ್ಬರವು ಸಾಮಾನ್ಯವಾಗಿ ಸೋಂಕಿತ ಸೊಳ್ಳೆ ಕಚ್ಚಿದ ಕೆಲವು ದಿನಗಳಿಂದ ಎರಡು ವಾರಗಳೊಳಗೆ ಲಕ್ಷಣಗಳು ಕಾಣಿಸಬಹುದು.

ಇದನ್ನೂ ಓದಿ: ಏನಿದು ಶಿಗೆಲ್ಲೋಸಿಸ್ ಸೋಂಕು? ಕೇರಳದಲ್ಲಿ ಹೊಸ ವೈರಲ್ ಸೋಂಕಿಗೆ ಜನ ಹೆದರುತ್ತಿರುವುದಕ್ಕೆ ಕಾರಣವೇನು?

ಯಾವಾಗ ಗಂಭೀರವಾಗಬಹುದು?

ಕೆಲವರಲ್ಲಿ ಸೋಂಕು ಮೆದುಳು ಮತ್ತು ನರಮಂಡಲದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಕೆಳಗಿನ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು:

  • ತೀವ್ರ ಜ್ವರ
  • ಕುತ್ತಿಗೆ ಗಟ್ಟಿಯಾಗುವುದು
  • ಗೊಂದಲ ಅಥವಾ ವರ್ತನೆಯಲ್ಲಿ ಬದಲಾವಣೆ
  • ನಡುಕ
  • ಸ್ನಾಯು ದುರ್ಬಲತೆ
  • ಫಿಟ್ಸ್

ತಡೆಗಟ್ಟುವುದು ಹೇಗೆ?

ಈ ಸೋಂಕಿಗೆ ಮಾನವರಿಗಾಗಿ ವಿಶೇಷ ಔಷಧಿ ಅಥವಾ ಲಸಿಕೆ ಲಭ್ಯವಿಲ್ಲ. ಆದ್ದರಿಂದ ತಡೆಗಟ್ಟುವಿಕೆ ಅತ್ಯಂತ ಮುಖ್ಯವಾಗಿದೆ. ಹೆಚ್ಚಿನ ವಿಶ್ರಾಂತಿ ಪಡೆಯುವುದು, ನೀರನ್ನು ಹೆಚ್ಚಾಗಿ ಕುಡಿಯುವುದು ಮತ್ತು ಜ್ವರವನ್ನು ನಿಯಂತ್ರಣ ಮಾಡಬೇಕಾಗುತ್ತದೆ. ಸೊಳ್ಳೆ ನಿಯಂತ್ರಣಕ್ಕಾಗಿ ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ನೀರಿನ ಟ್ಯಾಂಕ್‌ಗಳನ್ನು ಮುಚ್ಚಿಡುವುದು, ಕಸದ ಡಬ್ಬಿ ಮತ್ತು ಟೈರ್‌ಗಳಲ್ಲಿ ನೀರು ನಿಲ್ಲದಂತೆ ಸ್ವಚ್ಛತೆ ಕಾಪಾಡುವುದು ಮುಖ್ಯ. ಅದರ ಜೊತೆಗೆ ಸೊಳ್ಳೆ ತಡೆಯುವ ಕ್ರೀಮ್ ಬಳಸುವುದು, ಕಿಟಕಿ ಮತ್ತು ಬಾಗಿಲುಗಳಿಗೆ ಜಾಲರಿ ಅಳವಡಿಸುವುದು, ಮನೆಯ ಸುತ್ತ ನೀರು ನಿಲ್ಲದಂತೆ ನೋಡಿಕೊಳ್ಳುವುದರಿಂದ ಸ್ವಲ್ಪ ಮಟ್ಟಿಗೆ ಸುರಕ್ಷಿತವಾಗಿರಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರೀತಿ ಭಟ್​, ಗುಣವಂತೆ

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
Follow Us