ಗರ್ಭಧಾರಣೆ ಮತ್ತು ಪ್ರಸವಾನಂತರದ ಅವಧಿಯು ಮಹಿಳೆಯ ಪಾಲಿಗೆ ಬಹಳ ಮುಖ್ಯವಾದ ಹಂತವಾಗಿದೆ. ಮೊದಲ ಬಾರಿಗೆ ಗರ್ಭಿಣಿಯಾದವರು ಮಾನಸಿಕವಾಗಿ, ದೈಹಿಕವಾಗಿ ತಮ್ಮ ಮಗುವನ್ನು ಸಿದ್ಧವಾಗುವುದರ ಜೊತೆಗೆ ಮನೆಯನ್ನು ಯಾವ ರೀತಿ ಇಟ್ಟುಕೊಳ್ಳಬೇಕು, ಯಾವ ರೀತಿ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು, ಉತ್ತಮ ವೈದ್ಯರನ್ನು ಆಯ್ಕೆ ಮಾಡಿಕೊಳ್ಳುವುದು ಹೇಗೆಂಬುದರ ಬಗ್ಗೆ ಎಚ್ಚರ ವಹಿಸಬೇಕು. ಅಂಕಿಅಂಶಗಳು ಸೂಚಿಸುವಂತೆ, ಹೊಸ ತಾಯಂದಿರು ಸರಿಸುಮಾರು 1,400 ಗಂಟೆಗಳ ಆನ್‌ಲೈನ್‌ನಲ್ಲಿ ಕಾಲ ಕಳೆಯುತ್ತಾರೆ. ಆನ್‌ಲೈನ್‌ನಲ್ಲಿ ತಮ್ಮ ಶಿಶುಗಳ ಯೋಗಕ್ಷೇಮ ನೋಡಿಕೊಳ್ಳಲು ಏನು ಮಾಡಬೇಕೆಂದು ಸರ್ಚ್ ಮಾಡುತ್ತಾರೆ.
ಮೊದಲ ಬಾರಿ ಗರ್ಭಿಣಿಯಾದವರು ಈ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಿ.
1. ಸಾಕಷ್ಟು ನೀರಿನ ಸೇವನೆಯೊಂದಿಗೆ ಹೈಡ್ರೇಟೆಡ್ ಆಗಿರಿ. ಆಮ್ನಿಯೋಟಿಕ್ ದ್ರವವು ಬೆಳೆಯುತ್ತಿರುವ ಮಗುವನ್ನು ಸುತ್ತುವರೆದಿರುವ ಕಾರಣ ಮೊದಲ ಬಾರಿಗೆ ಗರ್ಭಿಣಿಯಾದವರಿಗೆ ಹೆಚ್ಚಿನ ನೀರಿನ ಸೇವನೆಯ ಅಗತ್ಯವಿರುತ್ತದೆ. ಗರ್ಭಾವಸ್ಥೆಯು ಸ್ವಾಭಾವಿಕವಾಗಿ ನಿಮ್ಮ ಜಲಸಂಚಯನ ಅಗತ್ಯಗಳನ್ನು ಹೆಚ್ಚಿಸುತ್ತದೆ, ಆದ್ದರಿಂದ ನಿರ್ಜಲೀಕರಣವನ್ನು ತಡೆಗಟ್ಟಲು ಪ್ರತಿದಿನ ಕನಿಷ್ಠ 10 ಕಪ್ ನೀರನ್ನು ಸೇವಿಸಿ.
ಇದನ್ನೂ ಓದಿ: Pregnant Health: ಗರ್ಭಿಣಿಯರು ಸ್ಮೂಥಿ ಸೇವಿಸಬಹುದಾ?
2. ಆರಾಮಾಗಿ ನಿದ್ರೆ ಮಾಡಿ. ಗರ್ಭಾವಸ್ಥೆಯಲ್ಲಿ ಆಯಾಸವು ಸಾಮಾನ್ಯ. ವಿಶೇಷವಾಗಿ ಮೊದಲ ತ್ರೈಮಾಸಿಕದಲ್ಲಿ ಸುಸ್ತು ಜಾಸ್ತಿ ಇರುತ್ತದೆ. ನಿಮ್ಮ ದೇಹಕ್ಕೆ ಶಕ್ತಿಯನ್ನು ತುಂಬಲು ಮತ್ತು ವಿಶ್ರಾಂತಿ ಪಡೆಯಲು ಈ ಸಮಯವನ್ನು ಬಳಸಿಕೊಳ್ಳಿ. ನಿಮ್ಮ ಮಗು ಬಂದ ನಂತರ ವಿಶ್ರಾಂತಿಗೆ ಅವಕಾಶಗಳು ಕಡಿಮೆ ಆಗುತ್ತದೆ. ಹೀಗಾಗಿ, ಆಗಾಗ ಸಣ್ಣ ನಿದ್ರೆಗಳನ್ನು ಮಾಡುತ್ತಿರಿ.
3. ಪ್ರಸವಪೂರ್ವ ಮಸಾಜ್‌ಗಳಿಗೆ ನೀವೇ ಚಿಕಿತ್ಸೆ ಮಾಡಿಕೊಳ್ಳಿ. ಗರ್ಭಾವಸ್ಥೆಯಲ್ಲಿ ವೃತ್ತಿಪರ ಪ್ರಸವಪೂರ್ವ ಮಸಾಜ್ಗಳನ್ನು ನಿಗದಿಪಡಿಸಿಕೊಳ್ಳಿ. ಈ ಮೃದುವಾದ ಮಸಾಜ್‌ಗಳು ಬೆನ್ನು ನೋವನ್ನು ನಿವಾರಿಸುತ್ತದೆ, ಗರ್ಭಾವಸ್ಥೆಯಲ್ಲಿ ಪ್ರಚಲಿತದಲ್ಲಿರುವ ತೊಂದರೆ, ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ ಮತ್ತು ಉರಿಯೂತದಿಂದ ಉಂಟಾಗುವ ಊತವನ್ನು ಕಡಿಮೆ ಮಾಡುತ್ತದೆ. ಆದರೆ, ಮೊದಲ ತ್ರೈಮಾಸಿಕದ ಆರಂಭಿಕ ಹಂತಗಳಲ್ಲಿ ಮಸಾಜ್ಗಳನ್ನು ಮಾಡಿಸಿಕೊಳ್ಳದಿರುವುದು ಒಳ್ಳೆಯದು.
4. ನಿಯಮಿತ ವ್ಯಾಯಾಮದ ದಿನಚರಿಯನ್ನು ನಿರ್ವಹಿಸಿ. ಮಧ್ಯಮ ತೀವ್ರತೆಯ ವ್ಯಾಯಾಮದಲ್ಲಿ ನಿಯಮಿತವಾಗಿ ತೊಡಗಿಸಿಕೊಳ್ಳುವುದು ಫಲವತ್ತತೆಯನ್ನು ಹೆಚ್ಚಿಸುತ್ತದೆ. ವಾಕಿಂಗ್, ಸೈಕ್ಲಿಂಗ್ ಅಥವಾ ತೋಟಗಾರಿಕೆಯಂತಹ ಚಟುವಟಿಕೆಗಳು ಪ್ರಯೋಜನಕಾರಿ ಆಯ್ಕೆಗಳಾಗಿವೆ. ಕಡಿಮೆ ಪ್ರಭಾವದ ವ್ಯಾಯಾಮಗಳು ಬೆನ್ನು ನೋವನ್ನು ನಿವಾರಿಸುತ್ತದೆ ಮತ್ತು ರಕ್ತಪರಿಚಲನೆಯನ್ನು ವರ್ಧಿಸುತ್ತದೆ.
ಇದನ್ನೂ ಓದಿ: ಗರ್ಭಿಣಿಯರು ಯಾವ ಮಸಾಲೆ ಸೇವಿಸಬೇಕು? ಯಾವುದನ್ನು ತಿನ್ನಬಾರದು?
5. ಗರ್ಭಧಾರಣೆಯ ಪೂರ್ವ ಆರೋಗ್ಯ ತಪಾಸಣೆಗೆ ಒಳಗಾಗಿ. ಆರೋಗ್ಯಕರ ಗರ್ಭಧಾರಣೆ ಮತ್ತು ಹೆರಿಗೆಗೆ ತಯಾರಿ ನಡೆಸಲು ಮಾರ್ಗದರ್ಶನ ಪಡೆಯಲು ನಿಮ್ಮ ವೈದ್ಯರೊಂದಿಗೆ ನಿಮ್ಮ ಗರ್ಭಧಾರಣೆಯ ಯೋಜನೆಗಳನ್ನು ಚರ್ಚಿಸಿ. ಫ್ಲೂ ವ್ಯಾಕ್ಸಿನೇಷನ್‌ಗೆ ಆದ್ಯತೆ ನೀಡಿ. ಜ್ವರದ ಇಂಜೆಕ್ಷನ್ ಪಡೆಯುವ ಮೂಲಕ ನಿಮ್ಮನ್ನು ಮತ್ತು ನಿಮ್ಮ ಹುಟ್ಟಲಿರುವ ಮಗುವನ್ನು ರಕ್ಷಿಸಿಕೊಳ್ಳಿ.
6. ಕೆಫೀನ್ ಸೇವನೆಯನ್ನು ಮಿತಿಗೊಳಿಸಿ. ಸಂಬಂಧಿತ ಆರೋಗ್ಯದ ಅಪಾಯಗಳನ್ನು ತಗ್ಗಿಸಲು ಗರ್ಭಾವಸ್ಥೆಯಲ್ಲಿ ಕೆಫೀನ್ ಸೇವನೆಯನ್ನು ಕಡಿಮೆ ಮಾಡಿ. ಕೆಫೀನ್‌ನ ನಿಧಾನ ಜೀರ್ಣಕ್ರಿಯೆಯು ಜರಾಯುವಿನ ಮೂಲಕ ಮಗುವಿನ ರಕ್ತಪ್ರವಾಹಕ್ಕೆ ಹಾದುಹೋಗಲು ಅನುವು ಮಾಡಿಕೊಡುತ್ತದೆ. ಇದು ಹೆಚ್ಚಿದ ಹೃದಯ ಬಡಿತ, ಹೆಚ್ಚಿದ ರಕ್ತದೊತ್ತಡ ಮುಂತಾದ ಪ್ರತಿಕೂಲ ಪರಿಣಾಮಗಳನ್ನು ಉಂಟುಮಾಡುತ್ತದೆ. ಅದರ ಬದಲು ಹಣ್ಣಿನ ಜ್ಯೂಸ್, ಗಿಡಮೂಲಿಕೆಗಳ ಪಾನೀಯವನ್ನು ಸೇವಿಸಿ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ