Pregnant Health: ಗರ್ಭಿಣಿಯರು ಸ್ಮೂಥಿ ಸೇವಿಸಬಹುದಾ?

ಗರ್ಭಿಣಿಯರು ತಮ್ಮ ಆಹಾರದಲ್ಲಿ ಎಲ್ಲ ರೀತಿಯ ಪೋಷಕಾಂಶಗಳಿರುವ ವಸ್ತುಗಳನ್ನು ಸೇರಿಸಿಕೊಂಡರೆ ಮಗುವಿನ ಬೆಳವಣಿಗೆಗೆ ಸಹಾಯಕವಾಗುತ್ತದೆ. ಹೀಗಾಗಿಯೇ, ಗರ್ಭಾವಸ್ಥೆಯಲ್ಲಿ ವೈವಿಧ್ಯಮಯ, ಪೌಷ್ಟಿಕ ಆಹಾರವನ್ನು ಸೇವಿಸಲು ಶಿಫಾರಸು ಮಾಡಲಾಗುತ್ತದೆ. ಹಾಗಾದರೆ, ಗರ್ಭಾವಸ್ಥೆಯಲ್ಲಿ ಮಹಿಳೆಯರು ಸ್ಮೂಥಿಯನ್ನು ಸೇವಿಸಬಹುದಾ?

Pregnant Health: ಗರ್ಭಿಣಿಯರು ಸ್ಮೂಥಿ ಸೇವಿಸಬಹುದಾ?
ಸ್ಮೂಥಿImage Credit source: iStock
Follow us
ಸುಷ್ಮಾ ಚಕ್ರೆ
|

Updated on: Feb 08, 2024 | 3:34 PM

ಗರ್ಭಿಣಿಯರು (Pregnants) ಸೇವಿಸುವ ಆಹಾರ ಅವರ ಮಗುವಿನ ಮೇಲೂ ಪರಿಣಾಮ ಬೀರುತ್ತದೆ. ಹೀಗಾಗಿ, ಗರ್ಭಿಣಿಯರ ಆಹಾರದ ಆಯ್ಕೆಯಲ್ಲಿ ಎಚ್ಚರ ವಹಿಸುವುದು ಅಗತ್ಯ. ಹಾಗಾದರೆ, ಗರ್ಭಿಣಿಯರು ಸ್ಮೂಥಿ (Smoothies) ಸೇವಿಸಬಹುದಾ? ಎಂಬ ಪ್ರಶ್ನೆ ನಿಮಗಿದ್ದರೆ ಅದಕ್ಕೆ ಉತ್ತರ ಇಲ್ಲಿದೆ. ಪ್ರಸವಪೂರ್ವ ಆಹಾರ ಪದ್ಧತಿಯ ಪ್ರಕಾರ, ಸ್ಮೂಥಿಗಳು ಕಾರ್ಬೋಹೈಡ್ರೇಟ್‌, ಕೊಬ್ಬು ಮತ್ತು ಪ್ರೋಟೀನ್‌ಗಳ ಸಮತೋಲಿತ ಮಿಶ್ರಣವನ್ನು ಹೊಂದಿರುತ್ತದೆ. ನಾವು ಒಂದು ಹೊತ್ತಿನ ಊಟ ಅಥವಾ ಲಘು ಆಹಾರದಲ್ಲಿ ಸೇವಿಸುವಷ್ಟೇ ಪೋಷಕಾಂಶಗಳನ್ನು ಸ್ಮೂಥಿ ಹೊಂದಿರುತ್ತದೆ.

ಸ್ಮೂಥಿ ಸೇವಿಸುವಾಗಿನ ಒಂದು ಸಮಸ್ಯೆಯೆಂದರೆ ಅವು ಕಾರ್ಬೋಹೈಡ್ರೇಟ್‌ಗಳಿಂದ ತುಂಬಿರುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ದೀರ್ಘಕಾಲದವರೆಗೆ ಸ್ಥಿರವಾಗಿಡಲು ಬೇಕಾದಷ್ಟು ಪ್ರೋಟೀನ್, ಕೊಬ್ಬು ಅಥವಾ ಫೈಬರ್ ಅಂಶವನ್ನು ಹೊಂದಿರುವುದಿಲ್ಲ. ಹೀಗಾಗಿ, ನಾವು ಸ್ಮೂಥಿ ತಯಾರಿಸುವಾಗ ಅದಕ್ಕೆ ಏನೆಲ್ಲ ಪದಾರ್ಥಗಳನ್ನು ಹಾಕುತ್ತೇವೆ ಎಂಬುದು ಕೂಡ ಮುಖ್ಯವಾಗುತ್ತದೆ. ಸ್ಮೂಥಿ ಅವರನ್ನು ದೀರ್ಘಕಾಲದವರೆಗೆ ತೃಪ್ತಿಪಡಿಸುತ್ತದೆ. ಹೀಗಾಗಿ, ಆರೋಗ್ಯಕರವಾಗಿ ಕೂಡ ಸ್ಮೂಥಿಯನ್ನು ಮಾಡಿಕೊಳ್ಳಬಹುದು.

ಪೌಷ್ಟಿಕ ತಜ್ಞರ ಪ್ರಕಾರ, ಪ್ರೋಟೀನ್ (ಕಾಲಜನ್ ಪ್ರೋಟೀನ್, ಪ್ರೋಟೀನ್ ಪುಡಿ, ಅಥವಾ ಗ್ರೀಕ್ ಮೊಸರು), ಕೊಬ್ಬು (ಕಡಲೆ ಬೆಣ್ಣೆ, ಆವಕಾಡೊ), ಫೈಬರ್ (ಚಿಯಾ ಬೀಜ, ಅಗಸೆಬೀಜ), ಉತ್ಕರ್ಷಣ ನಿರೋಧಕಗಳು (ಬೆರಿ, ಚೆರಿ) ಸೇರಿಸಿಕೊಂಡು ಸ್ಮೂಥಿ ತಯಾರಿಸಿಕೊಳ್ಳಬಹುದು. ಇದಕ್ಕೆ ಸಿಹಿ ಹಾಕದ ಬಾದಾಮಿ ಹಾಲು ಕೂಡ ಸೇರಿಸಿಕೊಳ್ಳಬಹುದು.

ಇದನ್ನೂ ಓದಿ: ನಾರ್ಮಲ್ ಡೆಲಿವರಿ ಆಗಲು ಗರ್ಭಿಣಿಯರು ರೂಢಿಸಿಕೊಳ್ಳಬೇಕಾದ 8 ಅಭ್ಯಾಸಗಳಿವು

ಮದರ್ಸ್ ಲ್ಯಾಪ್ ಐವಿಎಫ್ ಸೆಂಟರ್ ನವದೆಹಲಿ ಮತ್ತು ವೃಂದಾವನದ ವೈದ್ಯಕೀಯ ನಿರ್ದೇಶಕಿ, ಸ್ತ್ರೀರೋಗತಜ್ಞರಾದ ಡಾ. ಶೋಭಾ ಗುಪ್ತಾ ಅವರು ಗರ್ಭಾವಸ್ಥೆಯಲ್ಲಿ ಸ್ಮೂಥಿಗಳು ಪೌಷ್ಟಿಕಾಂಶದ ಆಯ್ಕೆಯಾಗಿದೆ ಎಂದು ಹೇಳಿದ್ದಾರೆ. ವಿವಿಧ ಹಣ್ಣುಗಳು, ತರಕಾರಿಗಳು ಮತ್ತು ಡೈರಿ ಅಥವಾ ಸಸ್ಯ ಆಧಾರಿತ ಹಾಲನ್ನು ಸೇರಿಸಿ ಸ್ಮೂಥಿ ತಯಾರಿಸಿಕೊಳ್ಳಬಹುದು. ಇದು ವಿಟಮಿನ್​ಗಳು, ಖನಿಜಗಳು ಮತ್ತು ಫೈಬರ್​ನಂತಹ ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತದೆ ಎಂದು ಹೇಳಿದ್ದಾರೆ.

ಯಾವ ರೀತಿಯ ಸ್ಮೂಥಿಗಳನ್ನು ಸೇವಿಸಬೇಕು?:

ಸ್ಮೂಥಿಗಳಲ್ಲಿ ವಿವಿಧ ಹಣ್ಣುಗಳನ್ನು ಸೇರಿಸುವುದರಿಂದ ವಿಟಮಿನ್ ಸಿ, ಪೊಟ್ಯಾಸಿಯಮ್ ಮತ್ತು ಫೋಲೇಟ್‌ನಂತಹ ಅಗತ್ಯವಾದ ಜೀವಸತ್ವಗಳನ್ನು ಪಡೆಯಬಹುದಾಗಿದೆ. “ಬೆರಿ ಹಣ್ಣುಗಳು, ಸಿಟ್ರಸ್ ಹಣ್ಣುಗಳು ಮತ್ತು ಬಾಳೆಹಣ್ಣುಗಳು ಅತ್ಯುತ್ತಮ ಆಯ್ಕೆಗಳಾಗಿವೆ. ಇದು ತಾಯಿ ಮತ್ತು ಮಗುವಿನ ಒಟ್ಟಾರೆ ಆರೋಗ್ಯಕ್ಕೆ ಕೊಡುಗೆ ನೀಡುತ್ತದೆ. ಪಾಲಕ್ ಅಥವಾ ಕೇಲ್‌ನಂತಹ ಹಸಿರು ಸೊಪ್ಪನ್ನು ಕೂಡ ಸೇರಿಸುವುದರಿಂದ ಸ್ಮೂಥಿಯ ಫೋಲೇಟ್ ಅಂಶವನ್ನು ಹೆಚ್ಚಿಸುತ್ತದೆ. ಇದು ಭ್ರೂಣದ ಬೆಳವಣಿಗೆಗೆ ನಿರ್ಣಾಯಕವಾಗಿದೆ ಎಂದು ಹೇಳಿದ್ದಾರೆ.

ಸ್ಮೂಥಿಗಳಲ್ಲಿ ಡೈರಿ ಅಥವಾ ಬಲವರ್ಧಿತ ಸಸ್ಯ ಆಧಾರಿತ ಹಾಲನ್ನು ಸೇರಿಸುವುದರಿಂದ ದೇಹಕ್ಕೆ ಸಾಕಷ್ಟು ಕ್ಯಾಲ್ಸಿಯಂ ಸಿಗುತ್ತದೆ. ಇದು ಮಗುವಿನ ಮೂಳೆ ಬೆಳವಣಿಗೆಗೆ ಮತ್ತು ತಾಯಿಯ ಮೂಳೆಯ ಆರೋಗ್ಯದ ನಿರ್ವಹಣೆಗೆ ಪ್ರಮುಖವಾಗಿದೆ.

ಇದನ್ನೂ ಓದಿ: Pregnant Health: ಗರ್ಭಿಣಿಯರು ಈ 8 ಹಣ್ಣುಗಳನ್ನು ಯಾಕೆ ತಿನ್ನಬಾರದು?

ಸ್ಮೂಥಿ ಮಾಡುವ ವಿಧಾನ:

– ಬೆರಿ ಹಣ್ಣುಗಳು, ಬಾಳೆ ಹಣ್ಣು, ಪಾಲಕ್ ಅಥವಾ ಕೇಲ್, ಗ್ರೀಕ್ ಮೊಸರು, ಹಾಲು ಮತ್ತು ಚಿಯಾ ಬೀಜಗಳನ್ನು ಬ್ಲೆಂಡರ್​ನಲ್ಲಿ ಹಾಕಿ.

– ಅದನ್ನು ನಯವಾಗಿ ಕ್ರೀಂ ರೀತಿ ಆಗುವವರೆಗೆ ಮಿಶ್ರಣ ಮಾಡಿ. ನಿಮಗೆ ದಪ್ಪವಾದ ಸ್ಮೂಥಿ ಬೇಕೆಂದರೆ ಹೆಚ್ಚು ಹಾಲು ಸೇರಿಸಬಹುದು.

– ಅದಕ್ಕೆ ಬೇಕಿದ್ದರೆ ಐಸ್ ಕ್ಯೂಬ್‌ಗಳನ್ನು ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ ಸೇವಿಸಿ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ಕೊಟ್ಟ ಮಾತಿನಂತೆ ಉಡುಗೊರೆ ಕಳಿಸಿದ ಕಿಚ್ಚ ಸುದೀಪ್, ಭಾವುಕಗೊಂಡ ಹನುಮಂತ
ಕೊಟ್ಟ ಮಾತಿನಂತೆ ಉಡುಗೊರೆ ಕಳಿಸಿದ ಕಿಚ್ಚ ಸುದೀಪ್, ಭಾವುಕಗೊಂಡ ಹನುಮಂತ
ಸರ್ಕಾರಿ ನೌಕರರಿಗೆ ಅನ್ನಭಾಗ್ಯ ಸ್ಕೀಮಿನ ಅಕ್ಕಿ ಕೊಡಬೇಕಿಲ್ಲ: ಸಿದ್ದರಾಮಯ್ಯ
ಸರ್ಕಾರಿ ನೌಕರರಿಗೆ ಅನ್ನಭಾಗ್ಯ ಸ್ಕೀಮಿನ ಅಕ್ಕಿ ಕೊಡಬೇಕಿಲ್ಲ: ಸಿದ್ದರಾಮಯ್ಯ
ಪರ್ತ್​ ಟೆಸ್ಟ್​ನಲ್ಲಿ ಸುಲಭ ಕ್ಯಾಚ್ ಕೈಚೆಲ್ಲಿದ ಕೊಹ್ಲಿ; ನೀವೇ ನೋಡಿ
ಪರ್ತ್​ ಟೆಸ್ಟ್​ನಲ್ಲಿ ಸುಲಭ ಕ್ಯಾಚ್ ಕೈಚೆಲ್ಲಿದ ಕೊಹ್ಲಿ; ನೀವೇ ನೋಡಿ
News9 Global Summit: ನ್ಯೂಸ್9 ಗ್ಲೋಬಲ್ ಸಮಿಟ್ ಎರಡನೇ ದಿನದ ಲೈವ್
News9 Global Summit: ನ್ಯೂಸ್9 ಗ್ಲೋಬಲ್ ಸಮಿಟ್ ಎರಡನೇ ದಿನದ ಲೈವ್
ವಿಪಕ್ಷ ನಾಯಕ ಅಶೋಕ ಮಾತಾಡುವ ವೈಖರಿ ವಿಷಾದಕರ: ಚಲುವರಾಯಸ್ವಾಮಿ
ವಿಪಕ್ಷ ನಾಯಕ ಅಶೋಕ ಮಾತಾಡುವ ವೈಖರಿ ವಿಷಾದಕರ: ಚಲುವರಾಯಸ್ವಾಮಿ
ಮಹಾರಾಷ್ಟ್ರದಲ್ಲಿ ಮಹಾವಿಕಾಸ್ ಅಘಾಡಿ ಅಧಿಕಾರಕ್ಕೆ ಬರಲಿದೆ: ಪರಮೇಶ್ವರ್
ಮಹಾರಾಷ್ಟ್ರದಲ್ಲಿ ಮಹಾವಿಕಾಸ್ ಅಘಾಡಿ ಅಧಿಕಾರಕ್ಕೆ ಬರಲಿದೆ: ಪರಮೇಶ್ವರ್
ಫ್ಯಾಷನ್ ಪ್ಯಾಂಟಿಗೆ ಹೊಲಿಗೆ ಹಾಕಿದ್ದಕ್ಕೆ ಯುವಕ ಆತ್ಮಹತ್ಯೆಗೆ ಯತ್ನ
ಫ್ಯಾಷನ್ ಪ್ಯಾಂಟಿಗೆ ಹೊಲಿಗೆ ಹಾಕಿದ್ದಕ್ಕೆ ಯುವಕ ಆತ್ಮಹತ್ಯೆಗೆ ಯತ್ನ
‘ಸಂಗೊಳ್ಳಿ ರಾಯಣ್ಣ’ ಮರು ಬಿಡುಗಡೆ, ಚಿತ್ರಮಂದಿರ ಖಾಲಿ: ಅಭಿಮಾನಿಗಳ ಆಕ್ರೋಶ
‘ಸಂಗೊಳ್ಳಿ ರಾಯಣ್ಣ’ ಮರು ಬಿಡುಗಡೆ, ಚಿತ್ರಮಂದಿರ ಖಾಲಿ: ಅಭಿಮಾನಿಗಳ ಆಕ್ರೋಶ
ಯತ್ನಾಳ್ ಮತ್ತು ವಿಜಯೇಂದ್ರ ನಡುವೆ ಪ್ರತಿಷ್ಠೆಯ ಹೋರಾಟ ನಡೆದಿದೆ: ಪಾಟೀಲ್
ಯತ್ನಾಳ್ ಮತ್ತು ವಿಜಯೇಂದ್ರ ನಡುವೆ ಪ್ರತಿಷ್ಠೆಯ ಹೋರಾಟ ನಡೆದಿದೆ: ಪಾಟೀಲ್