ಹೃದಯ ಸ್ತಂಭನವನ್ನು (Cardiac Arrest) ಅನುಭವಿಸುತ್ತಿರುವವರಿಗೆ ನಾವು ಸಹಾಯ ಮಾಡಬೇಕೆನಿಸುವುದು ಸಹಜ. ಆದರೆ, ಯಾವ ರೀತಿಯಲ್ಲಿ ಸಹಾಯ ಮಾಡಬೇಕೆಂದು ತಿಳಿದಿರುವುದಿಲ್ಲ. ನಮ್ಮ ಎದುರಲ್ಲೇ ಯಾರಿಗಾದರೂ ಹೃದಯ ಸ್ತಂಭನವಾದಾಗ ಅಥವಾ ನಮಗೆ ಗೊತ್ತಿರುವವರಿಗೆ ಯಾರಿಗಾದರೂ ಈ ಸಮಸ್ಯೆ ಉಂಟಾದಾಗ ಏನು ಮಾಡಬೇಕೆಂಬುದರ ಬಗ್ಗೆ ಮಾಹಿತಿ ಇಲ್ಲಿದೆ. ಈ ರೀತಿ ಮಾಡಿದರೆ ನೀವು ಆ ರೋಗಿಯ ಜೀವ ಉಳಿಸಬಹುದು.
ಪಾಲ್ಘರ್‌ನ ಅಧಿಕಾರಿ ಲೈಫ್‌ಲೈನ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ. ಪ್ರನಿಲ್ ಗಂಗುರ್ಡೆ ಅವರ ಪ್ರಕಾರ, ಹೃದಯ ಸ್ತಂಭನವನ್ನು ಗುರುತಿಸಲು ತ್ವರಿತವಾದ ವೀಕ್ಷಣೆ ಮತ್ತು ಕ್ರಮದ ಅಗತ್ಯವಿದೆ. ಏಕೆಂದರೆ ತಕ್ಷಣದ ಪ್ರಥಮ ಚಿಕಿತ್ಸೆಯು ಆ ರೋಗಿಯ ಜೀವ ಉಳಿಸುತ್ತದೆ.
ಇದನ್ನೂ ಓದಿ: Health Tips: ಕಾಲು ಸೆಳೆತ ಹೃದಯಾಘಾತದ ಎಚ್ಚರಿಕೆಯ ಸಂಕೇತವಾಗಿರಬಹುದು
ಹೃದಯ ಸ್ತಂಭನದ ಲಕ್ಷಣಗಳನ್ನು ಗುರುತಿಸುವುದು ಹೇಗೆ?:
ತಕ್ಷಣದ ಲಕ್ಷಣಗಳು: ಹಠಾತ್ ಕುಸಿತ, ನಾಡಿ ಮತ್ತು ಉಸಿರಾಟದ ತೊಂದರೆ ಮತ್ತು ಪ್ರಜ್ಞೆ ತಪ್ಪುವುದು.
ಎಚ್ಚರಿಕೆಯ ಚಿಹ್ನೆಗಳು: ಎದೆಯ ನೋವು, ಉಸಿರಾಟದ ತೊಂದರೆ, ದೌರ್ಬಲ್ಯ ಮತ್ತು ಅನಿಯಮಿತ ಹೃದಯ ಬಡಿತಗಳ ಬಗ್ಗೆ ಗಮನವಿರಲಿ. ವಿಶೇಷವಾಗಿ ಅಪಾಯಕಾರಿ ಅಂಶಗಳಿರುವ ವ್ಯಕ್ತಿಗಳಲ್ಲಿ ಈ ಬಗ್ಗೆ ಎಚ್ಚರ ವಹಿಸಿ.
ಹೃದಯ ಸ್ತಂಭನದ ಮೊದಲು ಮೇಲೆ ತಿಳಿಸಲಾದ ರೋಗಲಕ್ಷಣಗಳು ಕೆಲವೊಮ್ಮೆ ಕಂಡುಬಂದರೂ, ಯಾವುದೇ ಎಚ್ಚರಿಕೆಯಿಲ್ಲದೆ ಹಠಾತ್ ಹೃದಯ ಸ್ತಂಭನ ಕೂಡ ಕೆಲವೊಮ್ಮೆ ಸಂಭವಿಸುತ್ತದೆ. AEDs ಎಂದು ಕರೆಯಲ್ಪಡುವ ಪೋರ್ಟಬಲ್ ಸ್ವಯಂಚಾಲಿತ ಬಾಹ್ಯ ಡಿಫಿಬ್ರಿಲೇಟರ್‌ಗಳು ವಿಮಾನ ನಿಲ್ದಾಣಗಳು ಮತ್ತು ಶಾಪಿಂಗ್ ಮಾಲ್‌ಗಳು ಸೇರಿದಂತೆ ಅನೇಕ ಸಾರ್ವಜನಿಕ ಸ್ಥಳಗಳಲ್ಲಿ ಲಭ್ಯವಿದೆ. ನೀವು ಮನೆ ಬಳಕೆಗಾಗಿ ಇದನ್ನು ಖರೀದಿಸಬಹುದು.
ಇದನ್ನೂ ಓದಿ: Heart Failure: ವಯಸ್ಸಾದವರಲ್ಲಿ ಹೃದಯಾಘಾತದ ಲಕ್ಷಣಗಳೇನು?
ಹೃದಯ ಸ್ತಂಭನಕ್ಕೆ ಪ್ರಥಮ ಚಿಕಿತ್ಸೆ ನೀಡುವುದು ಹೇಗೆ?:
– ತುರ್ತು ವೈದ್ಯಕೀಯ ಸಹಾಯಕ್ಕಾಗಿ ತಕ್ಷಣ ಕರೆ ಮಾಡಿ.
– ಹೃದಯ ಸ್ತಂಭನಕ್ಕೊಳಗಾದ ವ್ಯಕ್ತಿಯ ಸುರಕ್ಷತೆಯನ್ನು ನೋಡಿಕೊಳ್ಳಿ. ಅವರನ್ನು ಅಂಗಾತವಾಗಿ ಮಲಗಿಸಿ, ಎದೆಯ ಮೇಲೆ ಕೈಯಿಂದ ಒತ್ತುವ ಮೂಲಕ ಶ್ವಾಸನಾಳವನ್ನು ಓಪನ್ ಮಾಡಲು ಪ್ರಯತ್ನಿಸಿ.
– CPR ಪ್ರಾರಂಭಿಸಿ. ನೀವು ತರಬೇತಿ ಪಡೆದಿದ್ದರೆ ನಿಮಿಷಕ್ಕೆ 100ರಿಂದ 120 ದರದಲ್ಲಿ 30 ಎದೆಯ ಸಂಕೋಚನಗಳೊಂದಿಗೆ CPR ಅನ್ನು ನಿರ್ವಹಿಸಿ.
– ನಿಮಗೆ ಲಭ್ಯವಿದ್ದರೆ AED (ಸ್ವಯಂಚಾಲಿತ ಬಾಹ್ಯ ಡಿಫಿಬ್ರಿಲೇಟರ್) ಬಳಸಿ. ಸುರಕ್ಷಿತ ಮತ್ತು ಪರಿಣಾಮಕಾರಿ ಬಳಕೆಗಾಗಿ ಸಾಧನದ ಸೂಚನೆಗಳನ್ನು ಅನುಸರಿಸಿ.
– ರೋಗಿಗೆ ಏನಾದರೂ ಗಾಯಗಳಾಗಿದೆಯೇ ಎಂದು ಪರಿಶೀಲಿಸಿ. ನೀವು CPR ತರಬೇತಿ ಪಡೆಯದಿದ್ದರೂ ಸಹ ಸರಿಯಾದ ಮಾದರಿಯಲ್ಲಿ ಎದೆಯ ಸಂಕೋಚನಗಳನ್ನು ಮಾಡಿದರೆ ಜೀವ ಉಳಿಸಬಹುದು.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ