Red Banana: ಬೇಸಿಗೆಯಲ್ಲಿ ಕೆಂಪು ಬಾಳೆಹಣ್ಣು ಸೇವನೆಯಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?

|

Updated on: Feb 20, 2024 | 6:37 PM

ಕೆಂಪು ಬಾಳೆಹಣ್ಣಿನಲ್ಲಿ ವಿಟಮಿನ್ ಬಿ6 ಸಮೃದ್ಧವಾಗಿದೆ. ಇದು ಟ್ರಿಪ್ಟೊಫಾನ್ ಅನ್ನು ಸಿರೊಟೋನಿನ್ ಆಗಿ ಪರಿವರ್ತಿಸುತ್ತದೆ. ಸಿರೊಟೋನಿನ್ ಒಂದು ಉತ್ತಮ ಹಾರ್ಮೋನ್ ಆಗಿದ್ದು ಅದು ನಿಮ್ಮನ್ನು ಸಂತೋಷವಾಗಿರಿಸಲು ಸಹಾಯ ಮಾಡುತ್ತದೆ. ಇನ್ನಷ್ಟು ಪ್ರಯೋಜನಗಳನ್ನು ತಿಳಿದುಕೊಳ್ಳಿ.

Red Banana: ಬೇಸಿಗೆಯಲ್ಲಿ ಕೆಂಪು ಬಾಳೆಹಣ್ಣು ಸೇವನೆಯಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?
Red Bananas
Image Credit source: Pinterest
Follow us on

ಕೆಂಪು ಬಾಳೆಹಣ್ಣಿನ ಸಿಪ್ಪೆ ಕೆಂಪು ಬಣ್ಣದ್ದಾಗಿದ್ದರೂ ಕೂಡ ಒಳಗಿನ ತಿರುಳು ಸಾಮಾನ್ಯ ಬಾಳೆಹಣ್ಣಿನಂತೆಯೇ ಇರುತ್ತದೆ. ಇದನ್ನು ಹೆಚ್ಚಾಗಿ ಆಗ್ನೇಯ ಏಷ್ಯಾದಲ್ಲಿ ಬೆಳೆಯಲಾಗುತ್ತದೆ. ಇದು ಒಟ್ಟಾರೆ ಆರೋಗ್ಯವನ್ನು ಕಾಪಾಡಲು ಸಹಾಯಕವಾಗಿದೆ. ಇದು ಮಧುಮೇಹ ರೋಗಿಗಳಿಗೆ ವಿಶೇಷವಾಗಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಜೊತೆಗೆ ದೃಷ್ಟಿ ಸುಧಾರಿಸುವಲ್ಲಿ ಸಹಾಯಕವಾಗಿದೆ. ಇದು ರೋಗನಿರೋಧಕ ಶಕ್ತಿಯನ್ನು ಸಹ ಹೆಚ್ಚಿಸುತ್ತದೆ.

ನೈಸರ್ಗಿಕ ಸಕ್ಕರೆ:

ಕೆಂಪು ಬಾಳೆಹಣ್ಣು ಫ್ರಕ್ಟೋಸ್, ಸುಕ್ರೋಸ್, ಗ್ಲೂಕೋಸ್‌ನಂತಹ ನೈಸರ್ಗಿಕ ಸಕ್ಕರೆಗಳನ್ನು ಹೊಂದಿರುತ್ತದೆ. ಇವುಗಳು ನಿಮ್ಮನ್ನು ದಿನವಿಡೀ ಕ್ರಿಯಾಶೀಲವಾಗಿರಿಸಲು ಸಹಾಯ ಮಾಡುತ್ತದೆ. ಹಾಗಾಗಿ ಜಿಮ್ ನಲ್ಲಿ ಉತ್ತಮ ವರ್ಕೌಟ್ ಮಾಡಬೇಕಾದರೆ ಮೊದಲೇ ಈ ರೀತಿ ಕೆಂಪು ಬಾಳೆಹಣ್ಣಿನ ಜ್ಯೂಸ್ ಕುಡಿಯಬಹುದು.

ಖಿನ್ನತೆಯನ್ನು ತಡೆಯುತ್ತದೆ:

ಬಾಳೆಹಣ್ಣಿನಲ್ಲಿ ವಿಟಮಿನ್ ಬಿ6 ಸಮೃದ್ಧವಾಗಿದೆ. ಇದು ಟ್ರಿಪ್ಟೊಫಾನ್ ಅನ್ನು ಸಿರೊಟೋನಿನ್ ಆಗಿ ಪರಿವರ್ತಿಸುತ್ತದೆ. ಸಿರೊಟೋನಿನ್ ಒಂದು ಉತ್ತಮ ಹಾರ್ಮೋನ್ ಆಗಿದ್ದು ಅದು ನಿಮ್ಮನ್ನು ಸಂತೋಷವಾಗಿರಿಸಲು ಸಹಾಯ ಮಾಡುತ್ತದೆ. ಹಾಗಾಗಿ ಈ ಜ್ಯೂಸ್ ಕುಡಿಯುವುದರಿಂದ ಖಿನ್ನತೆಯನ್ನು ಬೇಗನೇ ಹೋಗಲಾಡಿಸಬಹುದು.

ಇದನ್ನೂ ಓದಿ: ಯುವಕರಲ್ಲಿ ಉಂಟಾಗುವ ಪಾರ್ಶ್ವವಾಯುವಿನಲ್ಲಿ ಒತ್ತಡ, ಹೈಪರ್​ಟೆನ್ಷನ್ ಪಾತ್ರವೇನು?

ತೂಕ ಇಳಿಸಲು ಸಹಾಯ ಮಾಡುತ್ತದೆ:

ನೀವು ದೀರ್ಘಕಾಲದವರೆಗೆ ತೂಕ ಇಳಿಸಿಕೊಳ್ಳಲು ಹೆಣಗಾಡುತ್ತಿದ್ದರೆ, ನಿಮ್ಮ ಆಹಾರದಲ್ಲಿ ಕೆಂಪು ಬಾಳೆಹಣ್ಣನ್ನು ಸೇರಿಸಿ. ಒಂದು ಹಣ್ಣು 90 ಕ್ಯಾಲೋರಿಗಳನ್ನು ಹೊಂದಿರುತ್ತದೆ. ಇದರಲ್ಲಿ ನಾರಿನಂಶವೂ ಅತಿ ಹೆಚ್ಚು. ಆದ್ದರಿಂದ ಸ್ವಲ್ಪ ಪ್ರಮಾಣದ ಜ್ಯೂಸ್‌ನಿಂದ ಅದು ನಿಮ್ಮ ಹೊಟ್ಟೆಯನ್ನು ತುಂಬುತ್ತದೆ. ಇದು ಹೆಚ್ಚು ಜಂಕ್ ಫುಡ್ ತಿನ್ನುವುದನ್ನು ತಡೆಯುತ್ತದೆ.

ಹೃದಯಕ್ಕೆ ಒಳ್ಳೆಯದು:

ಕಿತ್ತಳೆಯಲ್ಲಿ ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ಸಮೃದ್ಧವಾಗಿದೆ. ಇದು ಸೋಡಿಯಂ ಉಪ್ಪಿನ ಪರಿಣಾಮಗಳನ್ನು ಪ್ರತಿರೋಧಿಸುತ್ತದೆ. ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಹೀಗಾಗಿ ಎದೆನೋವು, ಪಾರ್ಶ್ವವಾಯು, ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಯುತ್ತದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ