Heart Failure: ವಯಸ್ಸಾದವರಲ್ಲಿ ಹೃದಯಾಘಾತದ ಲಕ್ಷಣಗಳೇನು?

ಹೃದಯಾಘಾತವು ವಿವಿಧ ವಯೋಮಾನದ ಜನರ ಮೇಲೆ ಪರಿಣಾಮ ಬೀರುತ್ತದೆಯಾದರೂ ವಯಸ್ಸಾದವರಲ್ಲಿ ಮರಣದ ಸಾಧ್ಯತೆ ಹೆಚ್ಚಾಗಿರುತ್ತದೆ. ಹೃದಯಾಘಾತದ ಪ್ರಮಾಣವು ವಯಸ್ಸಾದವರಲ್ಲಿ ಹೆಚ್ಚಾಗುತ್ತದೆ ಎಂದು ತಜ್ಞರು ತಿಳಿಸಿದ್ದಾರೆ. ವಯಸ್ಸಾದವರಲ್ಲಿ ಹೃದಯಾಘಾತ ಹೆಚ್ಚಾಗಲು ಕಾರಣ ಇಲ್ಲಿದೆ.

Heart Failure: ವಯಸ್ಸಾದವರಲ್ಲಿ ಹೃದಯಾಘಾತದ ಲಕ್ಷಣಗಳೇನು?
ಹೃದಯ ವೈಫಲ್ಯImage Credit source: iStock
Follow us
|

Updated on: Feb 19, 2024 | 1:07 PM

ಮಕ್ಕಳಿಂದ ಹಿಡಿದು ವಯಸ್ಸಾದವರೆಗೂ ಹೃದಯಾಘಾತದ (Heart Attack) ಪ್ರಕರಣಗಳು ಹೆಚ್ಚುತ್ತಲೇ ಇವೆ. ಬೆಳೆಯುತ್ತಿರುವ ವಯಸ್ಸಿನಲ್ಲಿ ಹೃದಯರಕ್ತನಾಳದ ಕಾಯಿಲೆಗಳು, ಮೂತ್ರಪಿಂಡದ ಕಾರ್ಯಗಳು ಮತ್ತು ದೇಹದ ಜೀರ್ಣಕಾರಿ ಕಾರ್ಯಗಳು ನಿಧಾನವಾಗುತ್ತವೆ. 80ರಿಂದ 90 ವರ್ಷ ವಯಸ್ಸಿನ ವ್ಯಕ್ತಿಗಳಲ್ಲಿ ಹೃದಯ ವೈಫಲ್ಯದ (Heart Failure) ಸಾಧ್ಯತೆ ಸುಮಾರು 10ರಿಂದ 12 ಪಟ್ಟು ಹೆಚ್ಚಾಗುತ್ತದೆ ಎಂದು ಸಂಶೋಧನೆ ತಿಳಿಸುತ್ತದೆ.

ಹೃದಯ ವೈಫಲ್ಯ ಉಂಟಾದರೆ ಹೃದಯವು ರಕ್ತವನ್ನು ಪರಿಣಾಮಕಾರಿಯಾಗಿ ಪಂಪ್ ಮಾಡಲು ಸಾಧ್ಯವಾಗುವುದಿಲ್ಲ. ಇದು ದೇಹದಲ್ಲಿನ ಅಂಗಾಂಶಗಳಿಗೆ ಅಗತ್ಯವಿರುವ ಆಮ್ಲಜನಕ ಮತ್ತು ಪೋಷಕಾಂಶಗಳ ಪೂರೈಕೆಗೆ ಸಮಸ್ಯೆ ಉಂಟುಮಾಡುತ್ತದೆ. ಇದು ವ್ಯಕ್ತಿಗಳ ಮೇಲೆ ಪರಿಣಾಮ ಬೀರುವ ವಿವಿಧ ಹೃದಯ ಸಂಬಂಧಿ ಸಮಸ್ಯೆಗಳಲ್ಲಿ ಒಂದಾಗಿದೆ. ಹೃದಯರಕ್ತನಾಳದ ಕಾಯಿಲೆಗಳ ಹರಡುವಿಕೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ.

ಹೃದಯ ವೈಫಲ್ಯವು ವ್ಯಕ್ತಿಯ ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ ಬೀರುವ ಒಂದು ಸಮಸ್ಯೆಯಾಗಿದೆ. ಏಕೆಂದರೆ ಇದು ದೇಹದ ಇತರ ಕಾರ್ಯಗಳ ಮೇಲೆ ಪರಿಣಾಮ ಬೀರುತ್ತವೆ. ಉದಾಹರಣೆಗೆ, ಹೃದಯ ವೈಫಲ್ಯವು ಯಕೃತ್ತು ಅಥವಾ ಮೂತ್ರಪಿಂಡಗಳಿಗೆ ಹಾನಿಯನ್ನು ಉಂಟುಮಾಡುತ್ತದೆ. ಈ ಸಮಸ್ಯೆಯಿಂದ ಬಳಲುತ್ತಿರುವ ವ್ಯಕ್ತಿಯು ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕವಾಗಿಯೂ ಸಹ ಬಳಲುತ್ತಾರೆ. ಹೃದಯಾಘಾತಕ್ಕೆ ಕಾರಣವಾಗುವ ಅಂಶಗಳೆಂದರೆ ಪರಿಧಮನಿಯ ಕಾಯಿಲೆ, ಅಧಿಕ ರಕ್ತದೊತ್ತಡ, ತಂಬಾಕು ಸೇವನೆ, ಮೂತ್ರಪಿಂಡದ ಕಾಯಿಲೆಗಳು ಮತ್ತು ಮಧುಮೇಹ.

ಇದನ್ನೂ ಓದಿ: ಮಕ್ಕಳಲ್ಲಿ ಹೃದಯಾಘಾತ ಉಂಟಾಗುವ ಲಕ್ಷಣಗಳೇನು?

ಚಿಕಿತ್ಸೆಯನ್ನು ಪಡೆಯಲು ಹೃದಯಾಘಾತದ ರೋಗಲಕ್ಷಣಗಳನ್ನು ತಿಳಿದುಕೊಳ್ಳುವುದು ಕೂಡ ಮುಖ್ಯವಾಗಿದೆ.

ಆಯಾಸ: ವಯಸ್ಸಾದವರಲ್ಲಿ ಆಯಾಸವು ಸಾಮಾನ್ಯ ಸಮಸ್ಯೆಯಾಗಿದೆ. ಆದರೆ, ಇದು ಕೇವಲ ವಯಸ್ಸಾದವರಿಗೆ ಮಾತ್ರವಲ್ಲ ಎಲ್ಲರಿಗೂ ಉಂಟಾಗುತ್ತದೆ.

ಡಿಸ್ಪ್ನಿಯಾ: ಡಿಸ್ಪ್ನಿಯಾ ಎಂದರೆ ತಲೆ ಸುತ್ತಿದಂತಾಗುವುದು. ಇದು ವಿಶೇಷವಾಗಿ ವಯಸ್ಸಾದವರಲ್ಲಿ ಹೃದಯ ವೈಫಲ್ಯದ ಪ್ರಮುಖ ಲಕ್ಷಣವಾಗಿದೆ.

ನಿರಂತರ ಕೆಮ್ಮು ಮತ್ತು ಉಬ್ಬಸ: ನಿರಂತರವಾದ ಕೆಮ್ಮು ಹೆಚ್ಚಾಗಿ ಗುಲಾಬಿ ಬಣ್ಣದ ಕಫದಿಂದ ಕೂಡಿರುತ್ತದೆ.

ಗೊಂದಲ, ಸ್ಮರಣಶಕ್ತಿಯ ಕೊರತೆ: ಕಿರಿಕಿರಿ ಸೇರಿದಂತೆ ಜ್ಞಾಪಕ ಶಕ್ತಿಯ ಕೊರತೆ ಮುಂತಾದ ಇತರ ರೋಗಲಕ್ಷಣಗಳು ವಯಸ್ಸಾದವರಲ್ಲಿ ಹೃದಯ ವೈಫಲ್ಯದ ಕೆಲವು ಸಾಮಾನ್ಯ ಲಕ್ಷಣಗಳಾಗಿವೆ.

ಇದನ್ನೂ ಓದಿ: Heart Attack: ಹೃದಯಾಘಾತದ ಲಕ್ಷಣಗಳು ಮಹಿಳೆ- ಪುರುಷರಲ್ಲಿ ಬದಲಾಗುವುದೇಕೆ?

ಹದಗೆಡುತ್ತಿರುವ ಹೃದಯ ವೈಫಲ್ಯಕ್ಕೆ ಕಾರಣವಾಗುವ ಅಂಶಗಳು:

– ರಕ್ತಹೀನತೆಯು ದೇಹದ ಅಂಗಾಂಶಗಳಿಗೆ ಆಮ್ಲಜನಕವನ್ನು ಸಾಗಿಸಲು ದೇಹವು ಸಾಕಷ್ಟು ಆರೋಗ್ಯಕರ ಕೆಂಪು ರಕ್ತ ಕಣಗಳನ್ನು ಹೊಂದಿರದ ಸ್ಥಿತಿಯಾಗಿದೆ. ಇದು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ.

– ಸೂಚಿಸಿದ ಔಷಧವನ್ನು ತೆಗೆದುಕೊಳ್ಳದಿರುವುದು, ವೈದ್ಯರು ಸೂಚಿಸಿದಂತೆ ಔಷಧಿಗಳನ್ನು ತೆಗೆದುಕೊಳ್ಳದಿರುವುದು ಸಮಸ್ಯೆಯನ್ನು ಇನ್ನಷ್ಟು ಹದಗೆಡಿಸುತ್ತದೆ.

– ಸೋಡಿಯಂನ ಅತಿಯಾದ ಸೇವನೆ ಕೂಡ ಒಂದು ಕಾರಣ. ಸೋಡಿಯಂನಲ್ಲಿರುವ ಆಹಾರವು ಹೃದಯಾಘಾತದ ಲಕ್ಷಣಗಳನ್ನು ಇನ್ನಷ್ಟು ಹದಗೆಡಿಸುತ್ತದೆ. ಏಕೆಂದರೆ ಇದು ದ್ರವದ ಧಾರಣಕ್ಕೆ ಕಾರಣವಾಗಬಹುದು.

– ಜೀವನಶೈಲಿಯ ಆಯ್ಕೆಗಳು, ದೈಹಿಕ ಚಟುವಟಿಕೆಗಳ ಗಣನೀಯ ಕೊರತೆ, ಜಡ ಜೀವನಶೈಲಿ, ಧೂಮಪಾನ ಮತ್ತು ಮದ್ಯದ ಅತಿಯಾದ ಸೇವನೆಯು ಹೃದಯಾಘಾತಕ್ಕೆ ಕಾರಣವಾಗುವ ಕೆಲವು ಅಂಶಗಳಾಗಿವೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ