Zombie Deer Disease: ವೇಗವಾಗಿ ಹರಡುತ್ತಿದೆ ಜೊಂಬಿ ಡೀರ್ ರೋಗ; ಮನುಷ್ಯರಿಗೂ ಅಪಾಯವಿದೆಯೇ?

|

Updated on: Feb 20, 2024 | 4:54 PM

ಜೋಂಬಿ ಡೀರ್ ಡಿಸೀಸ್ ಜಿಂಕೆಗೆ ಹರಡುವ ಒಂದು ರೋಗವಾಗಿದೆ. ಇದನ್ನು ಕ್ರಾನಿಕ್ ವೇಸ್ಟಿಂಗ್ ಡಿಸೀಸ್ ಎಂದೂ ಕರೆಯಲಾಗುತ್ತದೆ. ಇದು ನರವೈಜ್ಞಾನಿಕ ಸ್ಥಿತಿಯಾಗಿದ್ದು, ಈ ಸೋಂಕಿಗೆ ಒಳಗಾದ ಪ್ರತಿಯೊಂದು ಪ್ರಾಣಿಯೂ ಸಾವನ್ನಪ್ಪುವ ಸಾಧ್ಯತೆ ಇರುತ್ತದೆ. ಹಾಗಾದರೆ, ಈ ರೋಗದಿಂದ ಮನುಷ್ಯರಿಗೂ ಅಪಾಯವಿದೆಯೇ? ಈ ಕಾಯಿಲೆ ಭಾರತಕ್ಕೂ ಕಾಲಿಟ್ಟಿದೆಯೇ? ಎಂಬಿತ್ಯಾದಿ ವಿವರ ಇಲ್ಲಿದೆ.

Zombie Deer Disease: ವೇಗವಾಗಿ ಹರಡುತ್ತಿದೆ ಜೊಂಬಿ ಡೀರ್ ರೋಗ; ಮನುಷ್ಯರಿಗೂ ಅಪಾಯವಿದೆಯೇ?
ಜಿಂಕೆ
Image Credit source: iStock
Follow us on

ನವದೆಹಲಿ: ಜೊಂಬಿ ಡೀರ್ ಕಾಯಿಲೆ (Zombie Deer Disease) ಅಮೆರಿಕಾದಲ್ಲಿ ವೇಗವಾಗಿ ಹರಡುತ್ತಿದೆ. ಇದರಿಂದ ಈ ಸಾಂಕ್ರಾಮಿಕ ರೋಗದ ಬಗ್ಗೆ ಜಗತ್ತಿನಾದ್ಯಂತ ವಿವಿಧ ದೇಶಗಳು ತಲೆಕೆಡಿಸಿಕೊಂಡಿವೆ. ವಿಜ್ಞಾನಿಗಳು ಈಗ ಈ ರೋಗವು ಜಿಂಕೆಗೆ ಮಾತ್ರವಲ್ಲದೆ ಮಾನವರಿಗೆ ಕೂಡ ತಗುಲಬಹುದು ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಕ್ರಾನಿಕ್ ವೇಸ್ಟಿಂಗ್ ಡಿಸೀಸ್ (CWD) ಅಮೆರಿಕಾದ ಹುಲ್ಲುಗಾವಲುಗಳಲ್ಲಿ ಸದ್ದಿಲ್ಲದೆ ಹರಡುತ್ತಿದೆ. ಜಿಂಕೆಗಳಲ್ಲಿ ಈ ರೋಗ ಹೆಚ್ಚಾಗಿ ಹರಡುತ್ತದೆ. ಈ ರೋಗ ಮುಖ್ಯವಾಗಿ ಉತ್ತರ ಅಮೆರಿಕಾದಲ್ಲಿ ಕಂಡುಬರುವ ಜಿಂಕೆ, ಎಲ್ಕ್, ಹಿಮಸಾರಂಗ, ಸಿಕಾ ಜಿಂಕೆ ಮೇಲೆ ಪರಿಣಾಮ ಬೀರುತ್ತದೆ.

ಈ ರೋಗವು ಪ್ರಿಯಾನ್‌ಗಳಿಂದ ಉಂಟಾಗುತ್ತದೆ. ಈ ರೋಗವು ಹೆಚ್ಚಾಗಿ ಪ್ರಾಣಿಗಳ ಮೇಲೆ ಪರಿಣಾಮ ಬೀರುತ್ತದೆ. ಮನುಷ್ಯರಿಗೂ ಅಪಾಯ ಉಂಟುಮಾಡುವ ಸಾಧ್ಯತೆಯಿದೆ. ಬಹಳ ದೀರ್ಘಕಾಲದವರೆಗೂ ಈ ರೋಗ ವಾಸಿಯಾಗುವುದಿಲ್ಲ. ಇದನ್ನು ಆರಂಭಿಕ ಹಂತದಲ್ಲಿ ಪತ್ತೆಹಚ್ಚುವುದು ಕೂಡ ಬಹಳ ಕಷ್ಟ ಎಂದು ತಜ್ಞರು ಹೇಳಿದ್ದಾರೆ.

ಇದನ್ನೂ ಓದಿ: Monkeypox: ಮಂಗನ ಕಾಯಿಲೆಯಿಂದ ಯಾರಿಗೆ ಅಪಾಯ ಜಾಸ್ತಿ?; ಮಂಕಿಫಾಕ್ಸ್​ನಿಂದ ಪಾರಾಗುವುದು ಹೇಗೆ?

ಜೊಂಬಿ ಡೀರ್ ರೋಗ ಹೇಗೆ ಹರಡುತ್ತದೆ?:

ಈ ರೋಗವು 2023ರವರೆಗೆ ಅಮೆರಿಕಾದ 31 ರಾಜ್ಯಗಳಲ್ಲಿ ಮತ್ತು ಕೆನಡಾದ 3 ಪ್ರಾಂತ್ಯಗಳಲ್ಲಿ ವರದಿಯಾಗಿದೆ. ನಾರ್ವೆ, ಫಿನ್‌ಲ್ಯಾಂಡ್ ಮತ್ತು ಸ್ವೀಡನ್‌ನಲ್ಲಿ ಹಿಮಸಾರಂಗ ಮತ್ತು ಇಲಿಗಳಲ್ಲಿ ಈ ರೋಗವನ್ನು ಪತ್ತೆಹಚ್ಚಲಾಗಿದೆ. ಇದನ್ನು ಮೊದಲು 1960ರ ದಶಕದಲ್ಲಿ ಗುರುತಿಸಲಾಯಿತು. ಮಲ, ಲಾಲಾರಸ, ರಕ್ತ ಅಥವಾ ಮೂತ್ರದಂತಹ ದೈಹಿಕ ದ್ರವಗಳ ಮೂಲಕ ಪ್ರಾಣಿಗಳ ನಡುವೆ ಹರಡುತ್ತದೆ ಎಂದು ವಿಜ್ಞಾನಿಗಳು ಶಂಕಿಸಿದ್ದಾರೆ. ಇದರ ಪ್ರಸರಣವು ಪ್ರಾಣಿಗಳ ನಡುವಿನ ನೇರ ಸಂಪರ್ಕದ ಮೂಲಕ ಅಥವಾ ಪರೋಕ್ಷವಾಗಿ ಪರಿಸರ ಮಾಲಿನ್ಯದ ಮೂಲಕ ಸಂಭವಿಸಬಹುದು. ಮಣ್ಣು, ಆಹಾರ ಅಥವಾ ನೀರಿನ ಮೇಲೆ ಕೂಡ ಇದು ಪರಿಣಾಮ ಬೀರುತ್ತದೆ.

ಇದನ್ನೂ ಓದಿ: Eye Care: ಕಣ್ಣಿನ ಆರೋಗ್ಯಕ್ಕೆ 10 ಸೂಪರ್‌ಫುಡ್‌ಗಳು ಇಲ್ಲಿವೆ

ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಆ್ಯಂಡ್ ಪ್ರಿವೆನ್ಷನ್ (ಸಿಡಿಎಸ್) ಪ್ರಕಾರ, ಸೋಂಕಿತ ಪ್ರಾಣಿ ರೋಗಲಕ್ಷಣಗಳನ್ನು ಅಭಿವೃದ್ಧಿಪಡಿಸಲು 1 ವರ್ಷ ತೆಗೆದುಕೊಳ್ಳಬಹುದು. ಇದು ತೀವ್ರವಾದ ತೂಕ ಇಳಿಯುವಿಕೆ (ಕ್ಷಯ), ಆಲಸ್ಯ ಮತ್ತು ಇತರ ನರವೈಜ್ಞಾನಿಕ ಲಕ್ಷಣಗಳನ್ನು ಒಳಗೊಂಡಿರುತ್ತದೆ. ಇದು ಎಲ್ಲಾ ವಯಸ್ಸಿನ ಪ್ರಾಣಿಗಳ ಮೇಲೆ ಪರಿಣಾಮ ಬೀರಬಹುದು ಮತ್ತು ಕೆಲವು ಸೋಂಕಿತ ಪ್ರಾಣಿಗಳು ಎಂದಿಗೂ ರೋಗವನ್ನು ಅಭಿವೃದ್ಧಿಪಡಿಸದೆ ಸಾಯಬಹುದು. ಆದರೆ, ಇಲ್ಲಿಯವರೆಗೆ ಮಾನವನಿಗೆ ಈ ಸೋಂಕು ತಗುಲಿದ ಬಗ್ಗೆ ಪುರಾವೆಗಳಿಲ್ಲ. ಆದರೆ, ಈ ರೋಗಕ್ಕೆ ಒಳಗಾದ ಸೋಂಕಿತ ಪ್ರಾಣಿಗಳಿಂದ ಮಾಂಸವನ್ನು ಸೇವಿಸುವ ಅಥವಾ ಸೋಂಕಿತ ಜಿಂಕೆ ಅಥವಾ ಎಲ್ಕ್‌ನಿಂದ ಮೆದುಳು ಅಥವಾ ದೇಹದ ದ್ರವಗಳೊಂದಿಗೆ ಸಂಪರ್ಕವನ್ನು ಹೊಂದಿರುವ ಕೋತಿಗಳಂತಹ ಸಸ್ತನಿಗಳಿಗೆ ರೋಗವು ಈ ರೋಗ ಹರಡುವ ಸಾಧ್ಯತೆಯಿದೆ ಎಂದು ಅಧ್ಯಯನ ಸೂಚಿಸುತ್ತದೆ.

ಹಲವಾರು ಪಾಶ್ಚಿಮಾತ್ಯ ದೇಶಗಳಲ್ಲಿ ಸೇವಿಸುವ ಜಿಂಕೆ ಮಾಂಸವು ಮಾನವರಿಗೆ ಹರಡುವ ರೋಗದ ದೊಡ್ಡ ಮೂಲಗಳಲ್ಲಿ ಒಂದಾಗಿರಬಹುದು. ಹೀಗಾಗಿ, ಜಿಂಕೆ ಮಾಂಸ ಸೇವಿಸದಂತೆ ಎಚ್ಚರಿಕೆ ನೀಡಲಾಗುತ್ತಿದೆ. ದಿ ಗಾರ್ಡಿಯನ್ ಪ್ರಕಾರ, ಜೊಂಬಿ ಡೀರ್ ಡಿಸೀಸ್ ಉತ್ತರ ಅಮೆರಿಕಾದಾದ್ಯಂತ ವೇಗವಾಗಿ ಹರಡುತ್ತಿದೆ. ಕೆನಡಾದ ಸಾಸ್ಕಾಚೆವಾನ್, ಆಲ್ಬರ್ಟಾ ಮತ್ತು ಕ್ವಿಬೆಕ್‌ನಲ್ಲಿ ಪ್ರಕರಣಗಳು ಪತ್ತೆಯಾಗಿವೆ. ಅಮೆರಿಕಾದಲ್ಲಿ ಯೆಲ್ಲೊಸ್ಟೋನ್ ನ್ಯಾಷನಲ್ ಪಾರ್ಕ್​ನಲ್ಲಿ ಮೊದಲ ಪ್ರಕರಣ ವರದಿಯಾಗಿದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:53 pm, Tue, 20 February 24