Monkeypox: ಮಂಗನ ಕಾಯಿಲೆಯಿಂದ ಯಾರಿಗೆ ಅಪಾಯ ಜಾಸ್ತಿ?; ಮಂಕಿಫಾಕ್ಸ್​ನಿಂದ ಪಾರಾಗುವುದು ಹೇಗೆ?

Monkey Fever: ಮಂಗನ ಕಾಯಿಲೆ ಇತ್ತೀಚೆಗೆ ಮತ್ತೆ ಮಲೆನಾಡಿನ ಜನರನ್ನು ಬಲಿತೆಗೆದುಕೊಳ್ಳುತ್ತಿರುವ ಸೋಂಕಾಗಿದೆ. ಪಶ್ಚಿಮಘಟ್ಟದ ಜಿಲ್ಲೆಗಳಾದ ಶಿವಮೊಗ್ಗ, ಉತ್ತರ ಕನ್ನಡ, ಚಿಕ್ಕಮಗಳೂರಿನಲ್ಲಿ ಈ ಮಂಗನ ಕಾಯಿಲೆ ಅಥವಾ ಮಂಕಿಫಾಕ್ಸ್​ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಈ ರೋಗದ ಅಪಾಯ ಯಾರಿಗೆ ಜಾಸ್ತಿ? ಇದರಿಂದ ಪಾರಾಗಲು ಅನುಸರಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳು ಯಾವುವು? ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

Monkeypox: ಮಂಗನ ಕಾಯಿಲೆಯಿಂದ ಯಾರಿಗೆ ಅಪಾಯ ಜಾಸ್ತಿ?; ಮಂಕಿಫಾಕ್ಸ್​ನಿಂದ ಪಾರಾಗುವುದು ಹೇಗೆ?
ಮಂಗನ ಕಾಯಿಲೆ
Follow us
ಸುಷ್ಮಾ ಚಕ್ರೆ
|

Updated on:Feb 09, 2024 | 5:36 PM

ಇತ್ತೀಚೆಗೆ ಮಂಗನಕಾಯಿಲೆಯ (Monkeypox) ಪ್ರಕರಣಗಳು ವಿಪರೀತ ಹೆಚ್ಚಾಗುತ್ತಿವೆ. ಈ ಮಂಕಿಫಾಕ್ಸ್​ (ಕೆಎಫ್‌ಡಿ) ಒಂದು ವೈರಲ್ ಹೆಮರಾಜಿಕ್ ಕಾಯಿಲೆಯಾಗಿದ್ದು, ಇದನ್ನು ಮೊದಲು 1957ರಲ್ಲಿ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಕ್ಯಾಸನೂರು ಅರಣ್ಯದಲ್ಲಿ ಗುರುತಿಸಲಾಯಿತು. ಅಂದಿನಿಂದ ಇದನ್ನು ಕ್ಯಾಸನೂರ್ ಫಾರೆಸ್ಟ್ ಡಿಸೀಸ್ (Kyasanur Forest Disease) ಎಂದೇ ಕರೆಯಲಾಗುತ್ತಿದೆ. ಇದು KFD ವೈರಸ್​ನಿಂದ ಉಂಟಾಗುತ್ತದೆ. ಸ್ಥಳೀಯವಾಗಿ ಇದನ್ನು ಮಂಗನ ಕಾಯಿಲೆ ಎಂದು ಕರೆಯಲಾಗುತ್ತದೆ.

ಮಂಗನ ಕಾಯಿಲೆ ಎಂಬುದು ಅಪಾಯಕಾರಿ ಸೋಂಕು. ಇದನ್ನು ಕ್ಯಾಸನೂರು ಅರಣ್ಯ ಕಾಯಿಲೆ (ಕೆಎಫ್‌ಡಿ) ಎಂದೂ ಕರೆಯುತ್ತಾರೆ. ಈ ವೈರಲ್ ಹೆಮರಾಜಿಕ್ ಜ್ವರವು ಭಾರತದಲ್ಲಿ ಜನರನ್ನು ಆವರಿಸಿದೆ. ಈ ರೋಗವು ಕರ್ನಾಟಕದಲ್ಲಿ ಇಬ್ಬರನ್ನು ಬಲಿ ತೆಗೆದುಕೊಂಡಿದೆ. ಮಂಕಿ ಜ್ವರವು ಸೋಂಕಿತ ಹುಳುಗಳ ಕಡಿತದ ಮೂಲಕ ಹರಡುವ ವೈರಸ್ ಆಗಿದೆ. ಸೋಂಕಿತ ಪ್ರಾಣಿಗಳ ಸಂಪರ್ಕದ ಮೂಲಕ ಮನುಷ್ಯರಿಗೆ ಈ ಅಪಾಯಕಾರಿ ವೈರಸ್‌ ಹರಡುತ್ತದೆ.

ಇದನ್ನೂ ಓದಿ: Mumps Virus: ಮಂಗನಬಾವು ಎಂದರೇನು?; ಈ ರೋಗ ಮಕ್ಕಳಿಗೆ ಅಪಾಯಕಾರಿಯೇ?

ಈ ಭಯಾನಕ ವೈರಸ್‌ನಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು, ನಿಮ್ಮ ದೈನಂದಿನ ಜೀವನದಲ್ಲಿ ಈ ಮುನ್ನೆಚ್ಚರಿಕೆಗಳನ್ನು ಅಳವಡಿಸಿಕೊಳ್ಳುವುದು ಅಗತ್ಯ.

ಮಂಗನ ಕಾಯಿಲೆಯ ಲಕ್ಷಣಗಳು:

ಹಠಾತ್ ಜ್ವರ, ತಲೆನೋವು, ವಾಂತಿ, ಹೊಟ್ಟೆ ನೋವು, ಸ್ನಾಯು ನೋವು ಮತ್ತು ಬೆನ್ನುನೋವು, ಚಳಿ, ಸುಸ್ತು ಮತ್ತು ಅತಿಸಾರ ಇವು ಮಂಗನ ಕಾಯಿಲೆಯ ಆರಂಭಿಕ ಲಕ್ಷಣಗಳಾಗಿವೆ. ರಕ್ತಸ್ರಾವದ ರೋಗಲಕ್ಷಣಗಳೊಂದಿಗೆ ತೀವ್ರವಾಗುವ ಈ ರೋಗವು ಜೀವಕ್ಕೆ ಆಪತ್ತು ಉಂಟುಮಾಡಬಹುದು. ಈ ವೈರಸ್‌ನ ಗೋಚರ ಲಕ್ಷಣಗಳು ಸಾಮಾನ್ಯವಾಗಿ ಸೋಂಕು ತಗುಲಿದ 2ರಿಂದ 7 ದಿನಗಳ ನಂತರ ಕಾಣಿಸಿಕೊಳ್ಳುತ್ತವೆ. ಮೂಗು, ಗಂಟಲು, ಒಸಡುಗಳು ಮತ್ತು ಕರುಳಿನಿಂದ ಸ್ವಲ್ಪ ರಕ್ತಸ್ರಾವದೊಂದಿಗೆ ಜ್ವರವು ಶುರುವಾಗಿ 12 ದಿನಗಳು ಅಥವಾ ಅದಕ್ಕಿಂತ ಹೆಚ್ಚು ಕಾಲ ಇರುತ್ತದೆ. ಕೆಲವೊಮ್ಮೆ ಇದು ಶ್ವಾಸಕೋಶದಲ್ಲಿ ರಕ್ತಸ್ರಾವವನ್ನು ಉಂಟುಮಾಡಬಹುದು. ಇದು ಸಾವಿಗೆ ಕಾರಣವಾಗುತ್ತದೆ.

ಆರಂಭದಲ್ಲಿ ಕರ್ನಾಟಕದ ಪಶ್ಚಿಮ ಘಟ್ಟಗಳಿಗೆ ಸೀಮಿತವಾಗಿದ್ದ ಈ ರೋಗವು ಕಳೆದ 10 ವರ್ಷಗಳಿಂದೀಚೆಗೆ ಕೇರಳ, ಮಹಾರಾಷ್ಟ್ರ ಮತ್ತು ತಮಿಳುನಾಡಿನಂತಹ ಪಶ್ಚಿಮ ಘಟ್ಟಗಳಲ್ಲೂ ಕಾಣಿಸಿಕೊಳ್ಳುತ್ತಿದೆ. ಮಂಗನ ಕಾಯಿಲೆಯಿಂದ ಪಾರಾಗಲು ನಮ್ಮ ಸುತ್ತಲೂ ನೈರ್ಮಲ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ.

ಇದನ್ನೂ ಓದಿ: Monkeypox: ಮಲೆನಾಡಿನಲ್ಲಿ ಹೆಚ್ಚುತ್ತಲೇ ಇದೆ ಮಂಗನ ಕಾಯಿಲೆ; ಮಂಕಿಪಾಕ್ಸ್ ಲಕ್ಷಣಗಳಿವು

ಮಂಗ ಕಾಯಿಲೆಗೆ ಕಾರಣವಾಗುವ ವೈರಸ್ ಗರ್ಭಿಣಿಯರು, ಮಕ್ಕಳು ಮತ್ತು ರೋಗನಿರೋಧಕ ಶಕ್ತಿ ಕಡಿಮೆ ಇರುವ ಜನರಿಗೆ ತಗುಲುವ ಅಪಾಯ ಹೆಚ್ಚು. ಈ ವೈರಸ್‌ ಸೋಂಕಿತ ಮಂಗನ ಮೈಯಲ್ಲಿರುವ ಹುಳಗಳು ಮನುಷ್ಯರನ್ನು ಕಚ್ಚುವ ಮೂಲಕ ಅಥವಾ ಸೋಂಕಿತ ಪ್ರಾಣಿಯೊಂದಿಗೆ ಸಂಪರ್ಕಕ್ಕೆ ಬರುವ ಮೂಲಕ ಹರಡುತ್ತದೆ. ಆದರೆ, ಇದುವರೆಗೂ ವ್ಯಕ್ತಿಯಿಂದ ವ್ಯಕ್ತಿಗೆ ಈ ಸೋಂಕು ಹರಡಿದ ಉದಾಹರಣೆಗಳಿಲ್ಲ.

ಮಂಗನ ಕಾಯಿಲೆಯನ್ನು ಹೇಗೆ ತಡೆಯಬಹುದು?:

– ಆದಷ್ಟೂ ಕಾಡಿನ ಕಡೆಗೆ ಹೋಗದಿರುವುದು.

– ಕೀಟ ನಿವಾರಕಗಳನ್ನು ಬಳಸುವುದು.

– ದಟ್ಟವಾದ ಕಾಡು ಇರುವ ಅಥವಾ ಮಂಗಗಳು ಓಡಾಡುವ ಪ್ರದೇಶಗಳಲ್ಲಿ ರಕ್ಷಣಾತ್ಮಕ ಬಟ್ಟೆಗಳನ್ನು ಧರಿಸುವುದು.

– ಪ್ರಾಣಿಗಳಿಂದ ಅಂತರ ಕಾಪಾಡಿಕೊಳ್ಳುವುದು.

– ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಪೌಷ್ಟಿಕಾಂಶಯುಕ್ತ ಆಹಾರ ಸೇವಿಸುವುದು.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:36 pm, Fri, 9 February 24

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್