ಬೆಂಗಳೂರು: ಜಿಂಕೆ ಕೊಂಬು, ಆನೆ ದಂತ, ಎರಡು ತಲೆ ಹಾವು ಸೇಲ್​ ಮಾಡುತ್ತಿದ್ದ ಐವರು ಅರೆಸ್ಟ್

ವೈಯಾಲಿ ಕಾವಲ್ 18ನೇ ಕ್ರಾಸ್ ಹಾಗೂ ಗುಟ್ಟಹಳ್ಳಿ ಸರ್ಕಲ್ ಬಳಿ ಜಿಂಕೆ ಕೊಂಬು, ಆನೆ ದಂತ, ಎರಡು ತಲೆ ಹಾವು ಸೇರಿದಂತೆ ಅಕ್ರಮವಾಗಿ ವನ್ಯಜೀವಿ ಉತ್ಪನ್ನಗಳ ಮಾರಾಟ ಮಾಡುತ್ತಿದ್ದ ಐವರು ಆರೋಪಿಗಳನ್ನು ವೈಯಾಲಿ ಕಾವಲ್ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 5 ಲಕ್ಷ ಮೌಲ್ಯದ ಆನೆ ದಂತ, 12 ಲಕ್ಷ ಮೌಲ್ಯದ 12 ಜಿಂಕೆ ಕೊಂಬು ಹಾಗೂ 10 ಲಕ್ಷ ಮೌಲ್ಯದ ಎರಡು ತಲೆಯ ಎರಡು ಹಾವುಗಳನ್ನು ವಶಕ್ಕೆ ಪಡೆಯಲಾಗಿದೆ.

ಬೆಂಗಳೂರು: ಜಿಂಕೆ ಕೊಂಬು, ಆನೆ ದಂತ, ಎರಡು ತಲೆ ಹಾವು ಸೇಲ್​ ಮಾಡುತ್ತಿದ್ದ ಐವರು ಅರೆಸ್ಟ್
ಆರೋಪಿಗಳಿಂದ ವಶಕ್ಕೆ ಪಡೆದ ವಸ್ತುಗಳು
Follow us
Jagadisha B
| Updated By: ಆಯೇಷಾ ಬಾನು

Updated on: Nov 07, 2023 | 12:48 PM

ಬೆಂಗಳೂರು, ನ.05: ಜಿಂಕೆ ಕೊಂಬು, ಆನೆ ದಂತ, ಎರಡು ತಲೆ ಹಾವು ಸೇರಿದಂತೆ ಅಕ್ರಮವಾಗಿ ವನ್ಯಜೀವಿ ಉತ್ಪನ್ನಗಳ ಮಾರಾಟ ಮಾಡುತ್ತಿದ್ದ ಐವರು ಆರೋಪಿಗಳನ್ನು ವೈಯಾಲಿ ಕಾವಲ್ ಪೊಲೀಸರು (Vyalikaval police) ಬಂಧಿಸಿದ್ದಾರೆ. ಕನಕಪುರ ಹಾಗೂ ಮೈಸೂರು ಮೂಲದ ಚಂದ್ರಶೇಖರ್, ರಂಗಸ್ವಾಮಿ, ಲೋಕೇಶ್, ಶೇಖರ್ ಹಾಗೂ ರೈಮಂಡ್ ಬಂಧಿತ ಆರೋಪಿಗಳು. ಬಂಧಿತರಿಂದ 5 ಲಕ್ಷ ಮೌಲ್ಯದ ಆನೆ ದಂತ, 12 ಲಕ್ಷ ಮೌಲ್ಯದ 12 ಜಿಂಕೆ ಕೊಂಬು ಹಾಗೂ 10 ಲಕ್ಷ ಮೌಲ್ಯದ ಎರಡು ತಲೆಯ ಎರಡು ಹಾವುಗಳನ್ನು ವಶಕ್ಕೆ ಪಡೆಯಲಾಗಿದೆ.

ಆರೋಪಿಗಳು ವೈಯಾಲಿ ಕಾವಲ್ 18ನೇ ಕ್ರಾಸ್ ಹಾಗೂ ಗುಟ್ಟಹಳ್ಳಿ ಸರ್ಕಲ್ ಬಳಿ ಮಾರಾಟ ಮಾಡುತ್ತಿದ್ದರು. ಈ ಸಂಬಂಧ ವೈಯಾಲಿ ಕಾವಲ್ ಪೊಲೀಸ್ ಠಾಣೆಯಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಕುಡಿಯುವ ನೀರಿನ‌ ಕಾಮಗಾರಿಯ ಪೈಪ್ ಕಳವು, ಆರೋಪಿ ಅರೆಸ್ಟ್

ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಕೇಡಲಸರ ಗ್ರಾಮದಲ್ಲಿ ಶಾಲಾ ಆವರಣದಲ್ಲಿ ಕಳ್ಳತನ ನಡೆದಿತ್ತು. ಬಹುಗ್ರಾಮ ಕುಡಿಯುವ ನೀರಿನ‌ ಕಾಮಗಾರಿಯ ಪೈಪ್ ಕಳ್ಳತನ ಮಾಡಲಾಗಿತ್ತು. ಸದ್ಯ ಪೈಪ್ ಕಳ್ಳನನ್ನು ಸಾಗರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸಾಗರ ತಾಲೂಕಿನ ಹೊಸೂರು ಗ್ರಾಮದ ವೇಗರಾಜ್ (40) ಬಂಧಿತ ಆರೋಪಿ. 1 ಲಕ್ಷದ 15 ಸಾವಿರ ರೂ ಮೌಲ್ಯದ ಪೈಪ್ ಹಾಗು ಪೈಪ್ ಸಾಗಾಟಕ್ಕೆ ಬಳಸಿದ ವಾಹನ ಸೀಜ್ ಮಾಡಲಾಗಿದೆ. ಕುಡಿಯುವ ನೀರಿನ‌ ಕಾಮಗಾರಿಗೆ ಪೈಪ್ ಗಳನ್ನು ಶಾಲೆಯ ಆವರಣದಲ್ಲಿ ಸಂಗ್ರಹಿಸಲಾಗಿತ್ತು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಜೋರಾದ ಕ್ರಿಕೆಟ್​ ಬೆಟ್ಟಿಂಗ್​: 11 ಅಡ್ಡೆಗಳ ಮೇಲೆ ದಾಳಿ, 13 ಜನರ ಬಂಧನ

ಮುರುಗಮಲ್ಲದಲ್ಲಿ ಗಂಡು ಮಗು ಕಿಡ್ನ್ಯಾಪ್

ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಮುರುಗಮಲ್ಲದಲ್ಲಿ ಗಂಡು ಮಗು ಅಪಹರಣವಾಗಿದೆ. ಪವಿತ್ರ ಯಾತ್ರಾ ಸ್ಥಳದಲ್ಲೇ ಎರಡು ವರ್ಷದ ಬಾಲಕನನ್ನ ಅಪಹರಣ ಮಾಡಿದ್ದಾರೆ. ಬೆಂಗಳೂರು ಮೂಲದ ಜಬೀವುಲ್ಲಾ, ಸುಮೈಯಾ ದಂಪತಿಯ ಪುತ್ರ ಅಜ್ಜಿ-ತಾತನ ಜೊತೆ ಅಮ್ಮಜಾನ್ ಬಾವಜಾನ್ ದರ್ಗಾಗೆ ಬಂದಿದ್ದ. ಜನಸಂದಣಿಯಲ್ಲಿ ಒಳಗೆ ಹೋಗುವಾಗ ಬಾಲಕನನ್ನ ಕಿಡ್ನ್ಯಾಪ್ ಮಾಡಿದ್ದಾರೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ