ವಿಶ್ವ ಏಡ್ಸ್ ಲಸಿಕೆ ದಿನ ಅಥವಾ ಹೆಚ್ಐವಿ ಲಸಿಕೆ ಜಾಗೃತಿ ದಿನವನ್ನು ಪ್ರತಿ ವರ್ಷ ಮೇ 18 ರಂದು ಆಚರಿಸಲಾಗುತ್ತದೆ. ಹೆಚ್ಐವಿ ಸೋಂಕು ಮತ್ತು ಏಡ್ಸ್ ತಡೆಗಟ್ಟುವ ಲಸಿಕೆಯನ್ನು ಅಭಿವೃದ್ಧಿಪಡಿಸುವ ತುರ್ತು ಅಗತ್ಯದ ಕುರಿತು ವಿವಿಧ ಸಂಸ್ಥೆಗಳು ಈ ದಿನದಂದು ಪ್ರಸ್ತಾಪಿಸುತ್ತವೆ. ಸುರಕ್ಷಿತ ಮತ್ತು ಪರಿಣಾಮಕಾರಿ ಏಡ್ಸ್ ಲಸಿಕೆ ಕಂಡುಹಿಡಿಯಲು ಒಟ್ಟಾಗಿ ಕೆಲಸ ಮಾಡುತ್ತಿರುವ ಸಾವಿರಾರು ಸ್ವಯಂಸೇವಕರು, ಸಮುದಾಯ ಸದಸ್ಯರು, ಆರೋಗ್ಯ ವೃತ್ತಿಪರರು, ಬೆಂಬಲಿಗರು ಮತ್ತು ವಿಜ್ಞಾನಿಗಳನ್ನು ಇಂದು ಅಂದರೆ ವಿಶ್ವ ಏಡ್ಸ್ ಲಸಿಕೆ ದಿನದಂದು ಸ್ಮರಿಸಲಾಗುತ್ತದೆ ಮತ್ತು ಅವರಿಗೆ ಧನ್ಯವಾದ ತಿಳಿಸಲಾಗುತ್ತದೆ.
ವಿಶ್ವ ಏಡ್ಸ್ ಲಸಿಕೆ ದಿನ ಎಂಬ ಪರಿಕಲ್ಪನೆಯನ್ನು 1997 ರ ಮೇ 18 ರಂದು ಮೋರ್ಗನ್ ಸ್ಟೇಟ್ ವಿಶ್ವವಿದ್ಯಾಲಯದಲ್ಲಿನ ಆಗಿನ ಅಧ್ಯಕ್ಷ ಕ್ಲಿಂಟನ್ ಮಾಡಿದ ಭಾಷಣದಲ್ಲಿ ಮೊದಲ ಬಾರಿಗೆ ಪ್ರಸ್ತಾಪಿಸಲಾಗಿದೆ. ಪರಿಣಾಮಕಾರಿ ಹೆಚ್ಐವಿ ಲಸಿಕೆ ಮಾತ್ರ ಏಡ್ಸ್ನ ಭಯವನ್ನು ಜಗತ್ತಿನಿಂದ ದೂರ ಮಾಡಲು ಸಾಧ್ಯ ಎಂದು ಕ್ಲಿಂಟನ್ ತನ್ನ ಭಾಷಣದ ಮೂಲಕ ಜಗತ್ತಿಗೆ ಈ ಸಂದರ್ಭದಲ್ಲಿ ಸವಾಲು ಹಾಕಿದ್ದರು.
ಜತೆಗೆ ವಿಜ್ಞಾನ ಮತ್ತು ತಂತ್ರಜ್ಞಾನದ ಉದಯೋನ್ಮುಖ ಯುಗದಲ್ಲಿ ಹೊಸ ಗುರಿಗಳನ್ನು ಸೃಷ್ಟಿಸಲು ಮತ್ತು ಮುಂದಿನ ದಶಕದಲ್ಲಿ ಏಡ್ಸ್ ಲಸಿಕೆಯನ್ನು ಅಭಿವೃದ್ಧಿಪಡಿಸಲು ಆ ಮೂಲಕ ಮುನ್ನುಡಿ ಬರೆದರು. ಹೀಗಾಗಿ ಕ್ಲಿಂಟನ್ ಅವರ ಈ ಭಾಷಣದ ನೆನಪಿಗಾಗಿ ಮೇ 18, 1998 ರಂದು ಮೊದಲ ಬಾರಿಗೆ ವಿಶ್ವ ಏಡ್ಸ್ ಲಸಿಕೆ ದಿನವನ್ನು ಆಚರಿಸಲಾಯಿತು. ಅಂದಿನಿಂದ ಈ ಆಚರಣೆ ಮುಂದುವರೆದಿದೆ.
ಪ್ರತಿ ವರ್ಷ ವಿಶ್ವದಾದ್ಯಂತ ಕೆಲವು ಸಾಮಾಜಿಕ ಪರಿಕಲ್ಪನೆಯನ್ನು ಹೊತ್ತ ಸಮುದಾಯಗಳು ಏಡ್ಸ್ ಲಸಿಕೆಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಹೆಚ್ಐವಿ ತಡೆಗಟ್ಟುವಿಕೆಯ ಬಗ್ಗೆ ಅರಿವು ಮೂಡಿಸಲು ವಿವಿಧ ರೀತಿಯ ಚಟುವಟಿಕೆಗಳನ್ನು ಆಯೋಜಿಸುತ್ತವೆ.
ಏಡ್ಸ್ಗೆ ಕಾರಣಗಳು:
ಏಡ್ಸ್ಗೆ ಚಿಕಿತ್ಸೆಗಳು:
ಒಟ್ಟಾರೆ ಹೆಚ್ಐವಿ ಸೋಂಕು ಒಮ್ಮೆ ದೇಹದಲ್ಲಿ ಸೇರಿದರೆ ಅದು ಹಾಗೆ ಇರುತ್ತದೆ. ಆದರೆ ಆಂಟಿರೆಟ್ರೋವೈರಲ್ ಚಿಕಿತ್ಸೆಯನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಿದರೆ, ಸೋಂಕಿನ ಪರಿಣಾಮ ಹೆಚ್ಚಾಗುತ್ತದೆ ಮತ್ತು ಹೆಚ್ಐವಿ ಪುನಃ ಸಿಡಿ4 ಜೀವಕಣಗಳ ಮೇಲೆ ಆಕ್ರಮಣವನ್ನು ಪ್ರಾರಂಭಿಸಿ ದೇಹವನ್ನು ಕುಗ್ಗಿಸುತ್ತದೆ.
ಇದನ್ನೂ ಓದಿ:
World AIDS Vaccine Day 2021: ಹೆಚ್ಐವಿ ಸೋಂಕು ನಿವಾರಣೆಯ ಲಸಿಕೆ ನೀರಿಕ್ಷೆಗೆ ಈ ವರ್ಷ ಉತ್ತರ ಸಿಗುತ್ತದೆಯೇ?
Published On - 10:06 am, Tue, 18 May 21