World AIDS Vaccine Day 2021: ಹೆಚ್‌ಐವಿ ಸೋಂಕು ನಿವಾರಣೆಯ ಲಸಿಕೆ ನೀರಿಕ್ಷೆಗೆ ಈ ವರ್ಷ ಉತ್ತರ ಸಿಗುತ್ತದೆಯೇ?
HIV Vaccine: ಹೆಚ್‌ಐವಿಯು ಸಮಯ ಕಳೆದಂತೆ ಅಕ್ವೈರ್ಡ್ ಇಮ್ಯುನೊ ಡಿಫಿಷಿಯನ್ಸಿ ಸಿಂಡ್ರೋಮ್ (ಏಡ್ಸ್) ಗೆ ಕಾರಣವಾಗುತ್ತದೆ - ಇದು ಒಬ್ಬ ವ್ಯಕ್ತಿಯ ದೇಹದ ರೋಗನಿರೋಧಕ ಶಕ್ತಿಯನ್ನು ನಾಶಪಡಿಸುವ ಸ್ಥಿತಿಯಾಗಿದ್ದು, ದೇಹವು ಕ್ರಮೇಣ ಇನ್ನಿತರ ಕಾಯಿಲೆಗೆ ತುತ್ತಾಗುತ್ತದೆ ಹಾಗೂ ಕಾಯಿಲೆಯ ವಿರುದ್ಧ ಹೋರಾಡುವಲ್ಲಿ ಕೂಡ ವಿಫಲವಾಗುವಂತೆ ಮಾಡುತ್ತದೆ.
ಪ್ರಪಂಚವು ಕೊರೊನಾ ಸೋಂಕಿನ ಸಾಂಕ್ರಾಮಿಕ ರೋಗದೊಂದಿಗೆ ಹೋರಾಡುತ್ತಿದ್ದಂತೆ, ನಾವು ಹಲವು ವರ್ಷಗಳಿಂದ ಹೋರಾಡುತ್ತಾ ಬಂದಿರುವ ಮತ್ತೊಂದು ಅಪಾಯಕಾರಿ ಸೋಂಕು ಅಂದರೆ ಏಡ್ಸ್ . ಈ ಕಾಯಿಲೆಗೆ ಇನ್ನು ಕೂಡ ಔಷಧಿ ಸಿಕ್ಕಿಲ್ಲ ಎನ್ನುವುದು ವಿಷಾದಕರ ಸಂಗತಿ. ಆದರೆ ಪ್ರತಿ ವರ್ಷ ಮೇ 18 ರಂದು ರಾಷ್ಟ್ರೀಯ ಹೆಚ್‌ಐವಿ ಲಸಿಕೆ ಜಾಗೃತಿ ದಿನವನ್ನಾಗಿ ಆಚರಿಸಲಾಗುತ್ತದೆ. ಈ ದಿನ ಸಮೀಪಿಸುತ್ತಿದ್ದಂತೆ ಈ ಕಾಯಿಲೆಗೆ ಲಸಿಕೆ ತಯಾರಿಸುವಲ್ಲಿ ನಾವು ಎಷ್ಟು ಸಫಲರಾಗಿದ್ದೇವೆ? ಇಷ್ಟೊಂದು ಸಮಯವಾದರೂ ಸಹ, ವಿಜ್ಞಾನಿಗಳಿಗೆ ಪರಿಹಾರ ಕಂಡುಹಿಡಿಯಲು ಏಕೆ ಸಾಧ್ಯವಾಗುತ್ತಿಲ್ಲ ಎಂಬ ಸಂಗತಿಯನ್ನು ಗಮನಿಸಬೇಕಾಗುತ್ತದೆ.
ಹೆಚ್‌ಐವಿಗೆ ಯಾವುದೇ ಪರಿಣಾಮಕಾರಿ ಚಿಕಿತ್ಸೆ ಇಲ್ಲ. ಹೆಚ್‌ಐವಿ ನಿಯಂತ್ರಿಸಲು ವೈದ್ಯರು ರೋಗಿಗಳಿಗೆ ಅನುಗುಣವಾಗಿ ವಿವಿಧ ರೀತಿಯ ಔಷಧಿಗಳನ್ನು ಸೂಚಿಸುತ್ತಾರೆ ಅಷ್ಟೇ. ಹೆಚ್‌ಐವಿಯು ಸಮಯ ಕಳೆದಂತೆ ಅಕ್ವೈರ್ಡ್ ಇಮ್ಯುನೊ ಡಿಫಿಷಿಯನ್ಸಿ ಸಿಂಡ್ರೋಮ್ (ಏಡ್ಸ್) ಗೆ ಕಾರಣವಾಗುತ್ತದೆ – ಇದು ಒಬ್ಬ ವ್ಯಕ್ತಿಯ ದೇಹದ ರೋಗನಿರೋಧಕ ಶಕ್ತಿಯನ್ನು ನಾಶಪಡಿಸುವ ಸ್ಥಿತಿಯಾಗಿದ್ದು, ದೇಹವು ಕ್ರಮೇಣ ಇನ್ನಿತರ ಕಾಯಿಲೆಗೆ ತುತ್ತಾಗುತ್ತದೆ ಹಾಗೂ ಕಾಯಿಲೆಯ ವಿರುದ್ಧ ಹೋರಾಡುವಲ್ಲಿ ಕೂಡ ವಿಫಲವಾಗುತ್ತದೆ.
1966 ರಲ್ಲಿ ನಾರ್ವೆಯಲ್ಲಿ ಮೊದಲ ಏಡ್ಸ್ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ. ಆದರೆ, ಇದರ ಬಗ್ಗೆ ಯಾವುದೇ ಅಧಿಕೃತ ವರದಿಯಿಲ್ಲ. ಆದರೂ ಸಹ, ಇದನ್ನು ಜೋಶುವಾ ಲೆಡರ್ಬರ್ಗ್ ರವರು ಬರೆದ ಎನ್ಸೈಕ್ಲೋಪೀಡಿಯಾ ಆಫ್ ಮೈಕ್ರೋಬಯಾಲಜಿ ನಲ್ಲಿ ಉಲ್ಲೇಖಿಸಲಾಗಿದೆ.
ಲಸಿಕೆಗಳು ಪರೀಕ್ಷಾ ಹಂತದಲ್ಲಿ ಇದೆಯೇ? ಹೌದು. ಸೆಂಟರ್ ಫಾರ್ ಕಮ್ಯುನಿಟಿ ಪ್ರಾಕ್ಟೀಸ್ ವರದಿಯ ಪ್ರಕಾರ, ಹೆಚ್‌ಐವಿ ಅಥವಾ ಎಸ್‌ಟಿಡಿ ತಡೆಗಟ್ಟುವಿಕೆಗಾಗಿ ಪ್ರಸ್ತುತ ಮೂರು ಲಸಿಕೆ ಪ್ರಯೋಗಗಳನ್ನು ವಿಶ್ವದ ವಿವಿಧ ಭಾಗಗಳಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಅವುಗಳನ್ನು ಹೆಚ್‌ವಿಟಿಎನ್ 702, ಇಂಬೊಕೊಡೊ ಮತ್ತು ಮೊಸೈಕೊ ಎಂದು ಕರೆಯಲಾಗುತ್ತದೆ. ವಿಜ್ಞಾನಿಗಳು ಪ್ರಯೋಗದಲ್ಲಿ ಸಫಾಲರಾಗುವ ನಿರೀಕ್ಷೆಯಲ್ಲಿದ್ದಾರೆ. ಆದರೆ, ಇದು ವಿಫಲವಾಗಲೂಬಹುದು ಎಂಬ ಅಂಶದ ಬಗ್ಗೆಯೂ ಅವರಿಗೆ ಅರಿವಿದೆ. ಆದಾಗ್ಯೂ, ಜಗತ್ತು ಹೆಚ್‌ಐವಿ ವಿರುದ್ಧ ಹೋರಾಡಲು ಪ್ರಾರಂಭಿಸಿದಾಗಿನಿಂದ ಆದ ಪ್ರಯೋಗಗಳಲ್ಲಿ ಈ ಲಸಿಕೆಗಳು ಒಂದು ಹೆಜ್ಜೆ ಮುಂದೆ ಇದೆ ಇದ್ದವು.
ಅಮೇರಿಕಾದಲ್ಲಿನ ಸ್ಯಾನ್ ಫ್ರಾನ್ಸಿಸ್ಕೋ ಸಾರ್ವಜನಿಕ ಆರೋಗ್ಯ ಇಲಾಖೆಯ ಹೆಚ್‌ಐವಿ ಸಂಶೋಧನಾ ಕಾರ್ಯಕ್ರಮದ ನಿರ್ದೇಶಕ ಮತ್ತು ಇಂಬೊಕೊಡೊ ಮತ್ತು ಮೊಸೈಕೊ ಲಸಿಕೆ ಪ್ರಯೋಗಗಳ ಅಧ್ಯಕ್ಷರಾದ ಡಾ. ಸುಸಾನ್ ಬುಚ್‌ಬಿಂದರ್, ಹೇಳುವ ಪ್ರಕಾರ ಇದು ಬಹುಶಃ ನಾವು ಅನುಭವಿಸಿದ ಅತ್ಯಂತ ಆಶಾವಾದಿ ಕ್ಷಣಗಳಲ್ಲಿ ಒಂದಾಗಿದೆ ಎಂದು ತಿಳಿಸಿರುವ ಅವರು ನಮ್ಮಲ್ಲಿ ಪ್ರಸ್ತುತ ಮೂರು ಲಸಿಕೆಗಳನ್ನು ಹೆಚ್ಚು ಪರಿಣಾಮಕಾರಿ ಪ್ರಯೋಗಗಳ ಮೂಲಕ ಪರೀಕ್ಷಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಪ್ರಯೋಗ ಹಂತದಲ್ಲಿರುವ ಮೂರು ಲಸಿಕೆಗಳು ಆರ್‌ವಿ 144 ಅನ್ನು ಆಧರಿಸಿದ ಹೆಚ್‌ವಿಟಿಎನ್ 702 ಲಸಿಕೆ ಅತ್ಯಂತ ಹಳೆಯ ಪ್ರಯೋಗ ಹಂತದಲ್ಲಿರುವ ಲಸಿಕೆಯಾಗಿದೆ. ಆರ್‌ವಿ 144 ಫಲಿತಾಂಶಗಳನ್ನು ತೋರಿಸಿತ್ತು , ಆದರೆ ಅದು ತೃಪ್ತಿಕರವಾಗಿಲ್ಲ ಜತೆಗೆ ಈ ಲಸಿಕೆ ಹೆಚ್‌ಐವಿ ಸೋಂಕಿನ ಪ್ರಮಾಣವನ್ನು ಸುಮಾರು 30 ಪ್ರತಿಶತದಷ್ಟು ಕಡಿಮೆಗೊಳಿಸಿದೆ ಎಂದು ಕ್ಲಿನಿಕಲ್ ಟ್ರಯಲ್ ಸಂಶೋಧನೆಗಳು ತೋರಿಸಿಕೊಟ್ಟಿತ್ತು. ಇಂದಿಗೂ ಸಹ ಆರ್‌ವಿ 144 ಲಸಿಕೆ ಸೋಂಕಿನ ವಿರುದ್ಧ ಪರಿಣಾಮಕಾರಿಯಾದ ಏಕೈಕ ಎಚ್ಐವಿ ಲಸಿಕೆಯಾಗಿದೆ. ಹೆಚ್‌ವಿಟಿಎನ್ 702 ಲಸಿಕೆ, ಆರ್‌ವಿ 144 ಲಸಿಕೆಯ ವೈಫಲ್ಯದ ನಂತರ ಅಂಗೀಕರಿಸಲ್ಪಟ್ಟ ಮೊದಲ ಪ್ರಾಯೋಗಿಕ ಲಸಿಕೆಯಾಗಿದೆ ಮತ್ತು ಇದನ್ನು ದಕ್ಷಿಣ ಆಫ್ರಿಕಾದಲ್ಲಿ ಪ್ರಾರಂಭಿಸಲಾಯಿತು.
ರಾಷ್ಟ್ರೀಯ ಅಲರ್ಜಿ ಮತ್ತು ಸಾಂಕ್ರಾಮಿಕ ರೋಗಗಳ ಸಂಸ್ಥೆ ಹೆಚ್‌ವಿಟಿಎನ್ 702 ಲಸಿಕೆಯು ಆರ್‌ವಿ 144 ಲಸಿಕೆಗಿಂತ ಹೆಚ್ಚಿನ ಮತ್ತು ನಿರಂತರ ರಕ್ಷಣೆ ನೀಡುವ ಗುರಿಯನ್ನು ಹೊಂದಿದೆ ಎಂದು ತಿಳಿಸಿದೆ.
ಎರಡನೇ ಪ್ರಯೋಗವಾದ ಇಂಬೊಕೊಡೊ 2017 ರಲ್ಲಿ ದಕ್ಷಿಣ ಆಫ್ರಿಕಾದ ಐದು ರಾಷ್ಟ್ರಗಳಲ್ಲಿ ಪ್ರಾರಂಭವಾಯಿತು. 2,600 ಮಹಿಳೆಯರನ್ನು ಈ ಪ್ರಯೋಗಕ್ಕೆ ಗುರಿಪಡಿಸಲಾಗಿತ್ತು ಎಂದು ವರದಿಯಾಗಿದೆ. ಶೇಕಡಾ 50ರಷ್ಟು ಪರಿಣಾಮಕಾರಿಯಾದ ಈ ಲಸಿಕೆಯನ್ನು ಸ್ವೀಕರಿಸುವಲ್ಲಿ ನಂಬಿಕೆಯುಳ್ಳ ಡಾ. ಆಂಥೋನಿ ಫೌಸಿ, ಭಿನ್ನಲಿಂಗೀಯ ಮಹಿಳೆಯರು ವೈರಸ್‌ಗೆ ತುತ್ತಾಗುವ ಅಪಾಯ ಹೇಗೆ ಹೆಚ್ಚು ಎಂಬುದರ ಕುರಿತು ಮಾತನಾಡುತ್ತಾ, ಇದು ಬಹುತೇಕ ನಂಬಲು ಅಸಾಧ್ಯವಾಗಿದೆ, ಆದರೆ ನಿಜ, 18 ರಿಂದ 25 ವರ್ಷದೊಳಗಿನ ಮಹಿಳೆಯರಲ್ಲಿ ಸೋಂಕಿನ ಹರಡುವಿಕೆಯು 50 ಪ್ರತಿಶತಕ್ಕಿಂತ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.
ನೀವು ಅತ್ಯಂತ ಬೇಗ ಒಂದು ಲಸಿಕೆಯ ಕಾರ್ಯಕ್ಷಮತೆಯನ್ನು ಪರೀಕ್ಷಿಸಬೇಕಾದರೆ ಅದನ್ನು ಮಹಿಳೆಯರಲ್ಲಿ ಪರೀಕ್ಷೆಸಬೇಕು. ಇಂಬೊಕೊಡೊ ಲಸಿಕೆಯು ಹೆಚ್‌ವಿಟಿಎನ್ 702 ಲಸಿಕೆಗಿಂತ ಭಿನ್ನವಾಗಿದೆ. ಈ ಲಸಿಕೆಯಲ್ಲಿನ ಅಂಶಗಳು ವಿವಿಧ ರೀತಿಯ ಜಾಗತಿಕ ಹೆಚ್‌ಐವಿ ತಳಿಗಳ ವಿರುದ್ಧ ರೋಗನಿರೋಧಕ ಪ್ರತಿಕ್ರಿಯೆಗಳನ್ನು ಉಂಟು ಮಾಡಲು ವಿನ್ಯಾಸಗೊಳಿಸಲಾಗಿದೆ ಎಂದು ಡಾ. ಆಂಥೋನಿ ಫೌಸಿ ತಿಳಿಸಿದ್ದಾರೆ.
ಮೂರನೆಯ ಹೆಚ್‌ಐವಿ ಕ್ಲಿನಿಕಲ್ ಪ್ರಯೋಗದಲ್ಲಿರುವ ಲಸಿಕೆಯನ್ನು ಮೊಸೈಕೊ ಎಂದು ಕರೆಯಲಾಗುತ್ತದೆ. ಇದು 2019ರ ನವೆಂಬರ್ನಲ್ಲಿ ಪ್ರಾರಂಭವಾಯಿತು. ಹೆಸರೇ ಸೂಚಿಸುವಂತೆ ಮೊಸೈಕೊಗೆ ಮೊಸಾಯಿಕ್ ಇಮ್ಯುನೊಜೆನ್‌ಗಳನ್ನು ಬಳಸಲಾಗುತ್ತದೆ. ಇಂಬೊಕೊಡೊ ಮತ್ತು ಮೊಸೈಕೊ ಲಸಿಕೆಗಳು ಹೆಚ್ಚಾಗಿ ಒಂದೇ ಆಗಿವೆ. ಇವು ತಲಾ ಆರು ಲಸಿಕೆಗಳನ್ನು ಒಳಗೊಂಡಿರುತ್ತವೆ. ಆದರೆ ಅಂತಿಮವಾಗಿ ಎರಡು ವಿಭಿನ್ನವಾದ ಲಸಿಕೆಯನ್ನು ನೀಡಲಾಗುತ್ತದೆ ಎಂದು ಹೆಚ್‌ಐವಿ ಅಥವಾ ಎಸ್‌ಟಿಡಿ ತಡೆಗಟ್ಟುವಿಕೆ ಮತ್ತು ಕ್ಲಿನಿಕಲ್ ಕೇರ್ ಹೇಳಿದೆ.
ಯುನೈಟೆಡ್ ಸ್ಟೇಟ್ಸ್, ಲ್ಯಾಟಿನ್ ಅಮೇರಿಕಾ ಮತ್ತು ಯುರೋಪ್ನಲ್ಲಿ ನಡೆಯಲಿರುವ ಮೊಸೈಕೊ ಲಸಿಕೆಯ ಪ್ರಯೋಗದಲ್ಲಿ ಸುಮಾರು 3800 ಸಲಿಂಗ ಪುರುಷರು ಹಾಗೂ ತೃತೀಯ ಲಿಂಗಿ ಜನರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಈ ಲಸಿಕೆ ವಿಭಿನ್ನ ಜನಸಂಖ್ಯೆಯಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ಸಾಭಿತುಪಡಿಸಲು ಈ ಪ್ರಯೋಗ ಅವಶ್ಯಕವಾಗುತ್ತದೆ ಎಂದು ಫೌಸಿ ವಿವರಿಸಿದರು.
ಇಂಬೊಕೊಡೊದ ಫಲಿತಾಂಶಗಳನ್ನು 2021 ರಲ್ಲಿ ನಿರೀಕ್ಷಿಸಲಾಗಿದೆ ಮತ್ತು ಮೊಸೈಕೊದಿಂದ 2023 ರಲ್ಲಿ ಏಡ್ಸ್ ಕುರಿತ ಪ್ರಯೋಗದ ಅಂತಿಮ ಫಲಿತಾಂಶಗಳನ್ನು ನಿರೀಕ್ಷಿಸಬಹುದಾಗಿದೆ.
ಇದನ್ನೂ ಓದಿ:
World Cancer Day 2021 ಕ್ಯಾನ್ಸರ್ಗೆ ಕಾರಣಗಳು ಒಂದೆರಡಲ್ಲ.. ಬೊಜ್ಜು, ಅತಿಯಾದ ತೂಕದಿಂದಲೂ ಅಪಾಯ !
Published On - 7:30 am, Tue, 18 May 21