‘ಬೊಂಬಾಟ್’; ಆರ್‌ಸಿಬಿ ಅಭಿಮಾನಿಗಳ ಬಗ್ಗೆ ಹೃದಯವಂತ ಕೊಹ್ಲಿ ಹೇಳಿದ್ದೇನು? ವಿಡಿಯೋ ನೋಡಿ
RCB Unbox Event: ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ ಅನ್‌ಬಾಕ್ಸ್ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿತು. ಈ ಈವೆಂಟ್ನಲ್ಲಿ ಹೊಸ ನಾಯಕನನ್ನು ಘೋಷಿಸಲಾಯಿತು. ಪುನೀತ್ ರಾಜ್‌ಕುಮಾರ್ ಅವರಿಗೆ ಗೌರವ ಸಲ್ಲಿಸಲಾಯಿತು. ವಿರಾಟ್ ಕೊಹ್ಲಿ ಅವರು ಆರ್‌ಸಿಬಿ ಅಭಿಮಾನಿಗಳನ್ನು "ಬೊಂಬಾಟ್" ಎಂದು ಕರೆದರು.
ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ ಅನ್‌ಬಾಕ್ಸ್ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿತು. ಈ ಕಾರ್ಯಕ್ರಮದಲ್ಲಿ ತಂಡದ ನೂತನ ನಾಯಕನನ್ನು ಅಧಿಕೃತವಾಗಿ ಘೋಷಿಸಲಾಯಿತು. ಹಾಗೆಯೇ ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಅವರಿಗೆ ಅವರ ಜನ್ಮದಿನದಂದು ವಿಶೇಷ ಗೌರವವನ್ನು ಸಲ್ಲಿಸಲಾಯಿತು. ಇದೇ ವೇಳೆ ಆರ್ಸಿಬಿಯ ಜೀವನಾಡಿಯಾಗಿರುವ ವಿರಾಟ್ ಕೊಹ್ಲಿಯ ಬಳಿ ಆರ್‌ಸಿಬಿ ಅಭಿಮಾನಿಗಳನ್ನು ಒಂದು ಪದದಲ್ಲಿ ವಿಶ್ಲೇಷಿಸಿ ಎಂಬ ಪ್ರಶ್ನೆಯನ್ನು ಕೇಳಲಾಯಿತು. ಇದಕ್ಕೆ ಕೊಹ್ಲಿ ಕನ್ನಡದಲ್ಲಿಯೇ ’ಬೊಂಬಾಟ್’ ಎಂಬ ಉತ್ತರವನ್ನು ನೀಡಿದರು. ಕಿಂಗ್ ಕೊಹ್ಲಿ ಈ ಮಾತನ್ನು ಹೇಳಿದ ಕೂಡಲೇ ಕ್ರೀಡಾಂಗಣದಲ್ಲಿ ನೆರೆದಿದ್ದ ಅಭಿಮಾನಿಗಳ ಹರ್ಷೋದ್ಘಾರ ಮುಗಿಲು ಮುಟ್ಟಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published on: Mar 17, 2025 10:43 PM
Latest Videos

Daily Devotional: ದೇವಾಲಯದ ಹೊಸ್ತಿಲು ಮುಟ್ಟಿ ನಮಸ್ಕರಿಸುವುದರ ಹಿಂದಿನ ಫಲ

ಗುರುದ್ವಾರ ರಕಬ್ಗಂಜ್ನಲ್ಲಿ ಪೂಜೆ ಸಲ್ಲಿಸಿದ ಮೋದಿ, ನ್ಯೂಜಿಲೆಂಡ್ ಪಿಎಂ

ಬೇರೆಯವರನ್ನು ನಿಂದಿಸುವ ಹಕ್ಕು ಪ್ರದೀಪ್ ಈಶ್ವರ್ಗಿಲ್ಲ: ಮುನಿಸ್ವಾಮಿ

ಇಫ್ತಾರ್ ಕೂಟದಲ್ಲಿ ಭಾಗವಹಿಸಿದ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ
