ಅವರಿವರನ್ನು ನಿಮ್ಹಾನ್ಸ್ ಸೇರಿಸುವ ಬದಲು ಖುದ್ದು ಪ್ರದೀಶ್ ಈಶ್ವರ್ ದಾಖಲಾಗುವುದೇ ಒಳಿತು: ಎಸ್ ಮುನಿಸ್ವಾಮಿ
ಬಜೆಟ್ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಒಂದು ಸಮುದಾಯಕ್ಕೆ ಪ್ರಾಧಾನ್ಯತೆ ನೀಡಿ ಇತರ ಸಮುದಾಯಗಳನ್ನು ನಿರ್ಲಕ್ಷಿಸಿರುವುದು ಎಲ್ಲರಿಗೆ ಸ್ಪಷ್ಟವಾಗಿ ಗೊತ್ತಾಗುತ್ತಿದ್ದರೂ ಪ್ರದೀಪ್ ಈಶ್ವರ್ ಮಾತ್ರ ಮುಖ್ಯಮಂತ್ರಿಯವರನ್ನು ವಹಿಸಿಕೊಂಡು ಮಾತಾಡುತ್ತಾರೆ, ಬಜೆಟ್ ಟೀಕಿಸುವವರನ್ನು ನಿಮ್ಹಾನ್ಸ್ ಅಸ್ಪತ್ರೆಗೆ ಸೇರಿಸಬೇಕು ಎಂದು ಹೇಳುತ್ತಾರೆ, ಅವರನ್ನೇ ಅಲ್ಲಿ ಸೇರಿಸುವುದು ಒಳಿತು ಎಂದು ಮುನಿಸ್ವಾಮಿ ಹೇಳಿದರು.
ಕೋಲಾರ, ಮಾರ್ಚ್ 17: ಚಿಕ್ಕಬಳ್ಳಾಪುರದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ನಿಜಾರ್ಥದಲ್ಲಿ ಹುಚ್ಚ ವೆಂಕಟ್ ಎಂದು ಮಾಜಿ ಸಂಸದ ಎಸ್ ಮುನಿಸ್ವಾಮಿ (S Muniswamy) ಹೇಳಿದರು. ಮೊನ್ನೆ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಕೈವಾರ ತಾತಯ್ಯನವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಈಶ್ವರ್ ಬಳಸಿದ ಭಾಷೆ ಮತ್ತು ಮಾತು ಖಂಡನೀಯ, ಯಾರನ್ನೋ ಮೆಚ್ಚಿಸುವ ಭರದಲ್ಲಿ ಅವರು ಮನಬಂದಂತೆ ಮಾತಾಡುತ್ತಾರೆ, ಚಿಕ್ಕಬಳ್ಳಾಪುರದ ಜನತೆ ಯಾಕಾದರೂ ಇವರನ್ನು ಅರಿಸಿ ವಿಧಾನ ಸಭೆಗೆ ಕಳಿಸಿದೆವೋ ಅಂತ ಪರಿತಪಿಸುತ್ತಿರಬಹುದು ಎಂದು ಮುನಿಸ್ವಾಮಿ ಹೇಳಿದರು. ಬಲಿಜ ಸಮುದಾಯಕ್ಕೆ ಮಾಜಿ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಸಾಕಷ್ಟು ಮಾಡಿದ್ದಾರೆ ಎಂದು ಅವರು ಹೇಳಿದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಭಗವದ್ಗೀತೆ ಮೇಲೆ ತನ್ನೊಂದಿಗೆ ಚರ್ಚೆಗೆ ಬರಲು ಅಶೋಕ್, ಸಿಟಿ ರವಿ ಮತ್ತು ಯತ್ನಾಳ್ ಗೆ ಪ್ರದೀಪ್ ಈಶ್ವರ್ ಪಂಥಾಹ್ವಾನ
ಹಿಮಪಾತದಿಂದ ಜಮ್ಮು-ಶ್ರೀನಗರ ಹೈವೇ ಬಂದ್; ಪ್ರವಾಸಿಗರಿಗೆ ವಿಶೇಷ ರೈಲು ಸಂಚಾರ
ಗಂಗಾ ನದಿಯಲ್ಲಿ ಸ್ನಾನ ಮಾಡುವಾಗ ಮುಳುಗಿದ ಪ್ರವಾಸಿಗನ ಕಾಪಾಡಿದ ಗೈಡ್
ನನ್ನ ಅತ್ತೆ ಮಕ್ಕಳು ಜೀತಕ್ಕೆ ಇದ್ದರು: ಭಾವುಕವಾಗಿ ಮಾತನಾಡಿದ ದುನಿಯಾ ವಿಜಯ್
ಬೆಂಗಳೂರಿನಲ್ಲಿಲ್ಲೂ ಗನ್ ತೋರಿಸಿ ಬಂಗಾರದ ಅಂಗಡಿ ದರೋಡೆ

