ದೊಡ್ಡದಾಗಿ ಮಾತಾಡುವ ಪ್ರದೀಪ್ ಈಶ್ವರ್ ಬಲಿಜ ಸಮುದಾಯಕ್ಕೆ ನೀಡಿರುವ ಕೊಡುಗೆ ಏನು? ಪಿಸಿ ಮೋಹನ್
ಬಸವರಾಜ ಬೊಮ್ಮಾಯಿ ಅವರು ಕೈವಾರ ತಾತಯ್ಯನವರ ಜಯಂತ್ಯುತ್ಸವವನ್ನು ಬ್ಯಾಂಕ್ವೆಟ್ ಹಾಲ್ನಲ್ಲಿ ಅದ್ದೂರಿಯಾಗಿ ಆಯೋಜಿಸಿದ್ದನ್ನು ಕಾರ್ಯಕ್ರಮದಲ್ಲಿ ಯಾರೋ ಹೇಳಿದ್ದಕ್ಕೆ ಪ್ರದೀಪ್ ಈಶ್ವರ್ಗೆ ಸಹಿಸಲಾಗಿಲ್ಲ. ತಮ್ಮ ಭಾಷಣದ ಸರದಿ ಬಂದಾಗ, ಇದು ಸಿದ್ದರಾಮಯ್ಯ ಸರ್ಕಾರದ ಕಾರ್ಯಕ್ರಮ, ಯಾರಪ್ಪನ ಕಾರ್ಯಕ್ರಮವೇನೂ ಅಲ್ಲ, ಬಿಜೆಪಿ ಸರ್ಕಾರದ ಗುಣಗಾನ ಮಾಡಲು ಖಾಸಗಿ ಕಾರ್ಯಕ್ರಮ ಆಯೋಜಿಸಿಕೊಳ್ಳಿ ಅಂತೆಲ್ಲ ಕೂಗಾಡಿದ್ದಾರೆ.
ಬೆಂಗಳೂರು, 15 ಮಾರ್ಚ್: ಬಿಜೆಪಿ ಸಂಸದ ಪಿಸಿ ಮೋಹನ್ ಮಾಧ್ಯಮಗಳೊಂದಿಗೆ ಮಾತಾಡೋದು ಕಡಿಮೆ ಸಂದರ್ಭಗಳಲ್ಲಿ ಮಾತ್ರ. ಇವತ್ತು ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಅವರು ಚಿಕ್ಕಬಳ್ಳಾಪುರದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಅವರನ್ನು ತರಾಟೆಗೆ ತೆಗೆದುಕೊಂಡರು. ನಿನ್ನೆ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ ಕಾಲಜ್ಞಾನಿ ಕೈವಾರ ತಾತಯ್ಯ ಅವರ 299 ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಪ್ರದೀಪ್ ಈಶ್ವರ್, ತಾತಯ್ಯನವರನ್ನು ಬಿಟ್ಟು ತಮ್ಮ ಸರ್ಕಾರದ ಬಗ್ಗೆ ಮಾತಾಡುತ್ತಾ, ಹಿಂದಿನ ಬಿಜೆಪಿ ಸರ್ಕಾರವನ್ನು ತೆಗಳಲಾರಂಭಿಸಿದ್ದರು. ಅವರ ಮಾತುಗಳಿಂದ ಸಭಿಕರು ಸಹ ಬೇಸತ್ತು ಆಕ್ರೋಶ ವ್ಯಕ್ತಪಡಿಸಿದ್ದರು. ಪ್ರದೀಪ್, ಲಕ್ಷ್ಮಣ ರೇಖೆಯನ್ನು ದಾಟಿದಾಗ ವೇದಿಕೆಯ ಮೇಲಿದ್ದ ಮೋಹನ್ ಅವರಿಗೂ ರೋಸಿ, ನಾನು ಬಿಜೆಪಿಯ ಸಂಸದ, ಇಲ್ಲಿ ಕೂರುವದಕ್ಕಿಂತ ಎದ್ದು ಹೋಗೋದೇ ವಾಸಿ ಎಂದರಂತೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ವೇದಿಕೆ ಮೇಲೆಯೇ ವಾಗ್ವಾದಕ್ಕಿಳಿದ ಸಂಸದ ಪಿಸಿ ಮೋಹನ್, ಶಾಸಕ ಪ್ರದೀಪ್ ಈಶ್ವರ್