ಮಟ ಮಟ ಮಧ್ಯಾಹ್ನ ಫುಲ್ ಟೈಟ್ ಆಗಿ ಬಂದು ಬಸ್ ಕೆಳಗೆ ಮಲಗಿದ ಕುಡುಕ, ಮುಂದೇನಾಯ್ತು..?
ವ್ಯಕ್ತಿಯೋರ್ವ ಕಂಠಪೂರ್ತಿ ಕುಡಿದು ಕೆಎಸ್ಆರ್ಟಿಸಿ ಬಸ್ ಚಕ್ರದಡಿ ಮಲಗಿ ದೊಡ್ಡ ಅವಾಂತರ ಸೃಷ್ಟಿಸಿದ್ದಾನೆ. ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಕೆಂಗಾನೂರಿನಲ್ಲಿ ಘಟನೆ ನಡೆದಿದೆ. ವಿಠ್ಠಲ್ ಗಾಣಿಗೇರ(24) ಎನ್ನುವ ವ್ಯಕ್ತಿ ಎಣ್ಣೆ ಹೊಡೆದು ಫುಲ್ ಟೈಟ್ ಆಗಿ ಬಳಿಕ ಬಸ್ ಕೆಳಗೆ ಬಂದು ಮಲಗಿದ್ದಾನೆ. ಇದರಿಂದ ಕುಡುಕನ ಕಾಟಕ್ಕೆ ಪೊಲೀಸರು, ಪ್ರಯಾಣಿಕರು, ಕಂಟೆಕ್ಟರ್, ಡ್ರೈವರ್ ಹೈರಾಣಾಗಿದ್ದಾರೆ.
ಬೆಳಗಾವಿ, (ಮಾರ್ಚ್ 15): ವ್ಯಕ್ತಿಯೋರ್ವ ಕಂಠಪೂರ್ತಿ ಕುಡಿದು ಕೆಎಸ್ಆರ್ಟಿಸಿ ಬಸ್ ಚಕ್ರದಡಿ ಮಲಗಿ ದೊಡ್ಡ ಅವಾಂತರ ಸೃಷ್ಟಿಸಿದ್ದಾನೆ. ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಕೆಂಗಾನೂರಿನಲ್ಲಿ ಘಟನೆ ನಡೆದಿದೆ. ವಿಠ್ಠಲ್ ಗಾಣಿಗೇರ(24) ಎನ್ನುವ ವ್ಯಕ್ತಿ ಎಣ್ಣೆ ಹೊಡೆದು ಫುಲ್ ಟೈಟ್ ಆಗಿ ಬಳಿಕ ಬಸ್ ಕೆಳಗೆ ಬಂದು ಮಲಗಿದ್ದಾನೆ. ಆಚೆ ಬಾ ಅಂದರೂ ಯಾವುದನ್ನು ತಲೆ ಕೆಡಿಸಿಕೊಳ್ಳದೇ ಆಯಾಗಿ ಮಲಗಿದ್ದಾನೆ. ಬಳಿಕ ಬಸ್ ಚಾಲಕ 112ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಬಸ್ ಕೆಳೆಗೆ ಮಲಗಿದ್ದ ವಿಠ್ಠಲ್ ಗಾಣಿಗೇರನನ್ನು ಆಚೆ ಬರುವಂತೆ ಹೇಳಿದ್ದಾರೆ. ಆದರೂ ಪೊಲೀಸರ ಮಾತಿಗೆ ಡೋಂಟ್ ಕೇರ್ ಎಂದಿದ್ದಾನೆ. ಇದರಿಂದ ಕುಡುಕನ ಕಾಟಕ್ಕೆ ಪೊಲೀಸರು, ಪ್ರಯಾಣಿಕರು, ಕಂಡಕ್ಟರ್ , ಡ್ರೈವರ್ ಹೈರಾಣಾಗಿದ್ದಾರೆ.
Published on: Mar 15, 2025 03:35 PM