ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಶರದ್ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಹಸ್ತಾ, ಮಾಸ: ಆಶ್ವಯುಜ, ಪಕ್ಷ: ಶುಕ್ಲ, ವಾರ: ಭಾನು, ತಿಥಿ: ಏಕಾದಶೀ, ನಿತ್ಯನಕ್ಷತ್ರ: ಧನಿಷ್ಠಾ, ಯೋಗ: ಶೂಲಿ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 24 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 13 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 04:44 ರಿಂದ 06:13, ಯಮಘಂಡ ಕಾಲ ಮಧ್ಯಾಹ್ನ 12:19ರಿಂದ 01:47ರವರೆಗೆ, ಗುಳಿಕ ಕಾಲ ಮಧ್ಯಾಹ್ನ 03:16 ರಿಂದ 04:44 ರವರೆಗೆ.
ಧನು ರಾಶಿ: ಖುಷಿಯಾಗಿರಲು ಹಲವು ಸಂಗತಿಗಳಿದ್ದರೂ ಅದನ್ನು ನಿರ್ಲಕ್ಷಿಸುವಿರಿ. ತಪ್ಪು ತಿಳಿವಳಿಕೆಯಿಂದ ಸಂಬಂಧವು ದೂರಾಗುವ ಸಾಧ್ಯತೆ ಇದೆ. ನಿಮ್ಮ ಆತ್ಮಗೌರವಕ್ಕೆ ತೊಂದರೆ ಆಗುವ ಕಡೆ ನೀವು ಹೋಗಲಾರಿರಿ. ನಿಮಗೆ ನಿಶ್ಚಯಾತ್ಮಕ ಬುದ್ಧಿಯು ಇಂದು ಇರಲಾರದು. ವಿದ್ಯಾರ್ಥಿಗಳಿಗೆ ಓದಿನಲ್ಲಿ ಮನಸ್ಸಿಡಲು ಕಷ್ಟವಾದೀತು. ದೇಹಕ್ಕೆ ಹೆಚ್ಚು ಶ್ರಮವನ್ನು ಕೊಡುವಿರಿ. ಮತ್ತೆ ಮತ್ತೆ ನಿಮ್ಮ ವಿರುದ್ಧ ಶತ್ರುಗಳು ಕತ್ತಿಮಸೆಯಬಹುದು. ಸಾಮಾಜಿಕ ಮನ್ನಣೆಯನ್ನು ಪಡೆಯಲು ಬಯಸುವಿರಿ. ವಿದೇಶದಲ್ಲಿ ಇರುವವರಿಗೆ ಮನೆಯವರ ನೆನಪಾಗುವುದು. ಅಮೂಲ್ಯ ವಸ್ತುಗಳನ್ನು ನೀವು ಕಳೆದುಕೊಂಡು ಸಂಕಟಪಡುವಿರಿ. ಯಂತ್ರೋಪಕರಣಕ್ಕೆ ಹಣವನ್ನು ಖರ್ಚುಮಾಡುವಿರಿ. ಹಿರಿಯರ ಮೇಲೆ ಗೌರವ ಇರಲಿ. ಗೌರವವನ್ನು ಕೇಳಿಪಡೆಯುವುದಲ್ಲ, ಅದಾಗಿಯೇ ಬರುವಂತೆ ಇರಲಿ. ಮಕ್ಕಳು ನಿಮಗೆ ಬೇಕಾದ ಆರ್ಥಿಕ ನೆರವನ್ನು ಕೊಡುವರು. ನಿಮ್ಮ ದುರಭ್ಯಾಸವು ಅತಿಯಾಗಲಿದೆ. ವಸ್ತುಗಳನ್ನು ಸದುಪಯೋಗ ಮಾಡಲು ಕಲಿಯಬೇಕಾಗುವುದು.
ಮಕರ ರಾಶಿ: ನೀವು ಇಂದು ಸೇವಾಮನೋಭಾವದಿಂದ ಕಾರ್ಯದಲ್ಲಿ ತತ್ಪರರಾಗುವಿರಿ. ನಿಮಗೆ ಅನ್ಯತರ ಮಾತು ಬಹಳ ಹಿತವೆನಿಸವುದು. ಕಲಾವಿದರು ತಮ್ಮ ಇಂದಿನ ದಿನವನ್ನು ಸಂತೋಷದಿಂದ ಕಳೆಯುವರು. ಆರ್ಥಿಕಲಾಭವು ಇರಲಿದೆ. ವ್ಯಾಪಾರಕ್ಕೆ ಸಂಬಂಧಿಸಿದಂತೆ ತಪ್ಪು ನಿರ್ಧಾರವನ್ನು ತೆಗೆದುಕೊಳ್ಳುವಿರಿ. ನಿಮ್ಮವರ ಆರೋಗ್ಯದಲ್ಲಿ ಹಠಾತ್ ನ್ಯೂನತೆ ಕಾಣಿಸುವುದು. ಕೃಷಿಯಲ್ಲಿ ಹೆಚ್ಚು ಆಸಕ್ತಿಯು ಇದ್ದು ಇಂದು ಅದರ ಕಡೆ ಹೆಚ್ಚು ಗಮನವನ್ನು ಕೊಡುವಿರಿ. ವಾಹನಚಾಲನೆಯಲ್ಲಿ ಜಾಗರೂಕತೆ ಇರಲಿ. ಸಂಗಾತಿಯನ್ನು ನೀವು ಹೊರಗೆ ಕರೆದುಕೊಂಡು ಹೋಗಿ ಖುಷಿಪಡಿಸುವಿರಿ. ಉತ್ಸಾಹವು ಇಂದು ಹೆಚ್ಚಿರಲಿದೆ. ಸುಳ್ಳಾಡಲು ಹೋಗಿ ಸಿಕ್ಕಿಕೊಳ್ಳುವಿರಿ. ಪ್ರಾಮಾಣಿಕತೆಯು ನಿಮಗೆ ವರವಾಗಲಿದೆ. ಮರೆವು ಅತಿಯಾದಂತೆ ತೋರುವುದು. ಕುಟುಂಬದಲ್ಲಿ ಕೆಲವು ಸಮಸ್ಯೆಗಳಿರುತ್ತವೆ. ನಿಮ್ಮ ಬಗ್ಗೆ ಕುಟುಂಬದಲ್ಲಿ ಒಳ್ಳೆಯ ಅಭಿಪ್ರಾಯವು ಇರುವುದು.
ಕುಂಭ ರಾಶಿ: ವಿದ್ಯಾರ್ಥಿಗಳಿಗೆ ಮಾರ್ಗದರ್ಶನದ ಕೊರತೆ ಕಾಣಿಸುವುದು. ಮಿತ್ರರ ಜೊತೆ ನೀವು ಪಾಲುದಾರಿಕೆಯಲ್ಲಿ ಒಪ್ಪಂದವನ್ನು ಮಾಡಿಕೊಳ್ಳುವಿರಿ. ನಿಮ್ಮವರ ಬಗ್ಗೆ ನಿಮಗೆ ಪ್ರೀತಿ ಇರದು. ಸಂಬಂಧದಲ್ಲಿ ವ್ಯವಹಾರವು ಬೇಡ. ನಿಮ್ಮ ಶತ್ರುಗಳು ನಿಮ್ಮಿಂದ ಇಂದು ಅಪ್ರತ್ಯಕ್ಷವಾಗಿ ಪ್ರಯೋಜನವನ್ನು ಪಡೆವರು. ಅಸಂಬದ್ಧ ಮಾತುಗಳನ್ನು ಆಡುವುದು ಬೇಡ. ವೃತ್ತಿಯ ಸಂಕಟವನ್ನು ಆಪ್ತರ ಜೊತೆ ಹಂಚಿಕೊಳ್ಳುವಿರಿ. ವ್ಯಾಪಾರದಲ್ಲಿ ಅಧಿಕ ಲಾಭವನ್ನು ಗಳಿಸಲು ಹೋಗಿ ಇನ್ಯಾವುಕ್ಕೋ ಹಣವು ಖಾಲಿಯಾಗುಬಹುದು. ಸಂಗಾತಿಯ ಮಾತುಗಳಿಗೆ ನಿಮ್ಮ ವಿರೋಧವು ಉಚಿತವಾಗಿರುವುದು. ನೀವು ಉಪಾಯದ ಜೊತೆ ಅಪಾಯವನ್ನು ಯೋಜನೆಯಲ್ಲಿ ಚಿಂತಿಸುವ ಅಗತ್ಯ ಬರುವುದು. ಕುಟುಂಬದಲ್ಲಿ ಎಲ್ಲರನ್ನೂ ಸಮಾಧಾನ ಮಾಡಲಾಗದು. ನಿಮ್ಮ ಕರ್ತವ್ಯವನ್ನು ಮಾಡಿ ಮುಗಿಸಿದರೆ ಅಷ್ಟೇ ಸಾಕು. ರಾಜಕೀಯ ವ್ಯಕ್ತಿಗಳಿಗೆ ಬೆಂಬಲವಿರುವುದನ್ನು ಕಾಣಬಹುದು. ಆತುರಾತುರವಾಗಿ ಯಾವುದನ್ನೂ ಮಾಡಲು ಹೋಗುವುದು ಬೇಡ.
ಮೀನ ರಾಶಿ: ಹೊಸ ಜವಾಬ್ದಾರಿಗಳನ್ನು ನಿರ್ವಹಿಸುವ ಉತ್ಸಾಹದಲ್ಲಿ ಇರುವಿರಿ. ವ್ಯವಹಾರದ ವಿಚಾರದಲ್ಲಿ ಪೂರ್ವಾಪರ ವಿವೇಚನೆಯಿಂದ ಮುಂದುವರಿಯುವುದು ಉತ್ತಮ. ಸ್ತ್ರೀಯರಿಂದ ಅಪಮಾನವಾಗಬಹುದು. ವಿಳಂಬವಾಗಿ ಬರುತ್ತದೆ ಎಂದುಕೊಂಡ ಧನವು ಬೇಗ ಬರುವುದು. ಇಂದು ನೀವು ನಿಮ್ಮ ವೃತ್ತಿಯನ್ನು ನಿರ್ಧರಿಸುವಿರಿ. ವಿನಾ ಕಾರಣ ಸುತ್ತಾಡಿ ಆಯಾಸವಾಗುವುದು. ಸ್ವಾಭಿಮಾನವನ್ನು ಬಿಡಲು ನಿಮಗೆ ಆಗದು. ಆಪ್ತರನ್ನು ದೂರ ಮಾಡಿಕೊಳ್ಳುವಿರಿ. ತಾಯಿಯ ಜೊತೆ ವಾಗ್ವಾದ ಮಾಡಬಹುದು. ಧಾರ್ಮಿಕ ಶ್ರದ್ಧೆಯಿಂದ ದೇವತಾರಾಧನೆಯನ್ನು ಮಾಡುವಿರಿ. ಇಂದು ಹೆಚ್ಚಿನ ಸಮಯವನ್ನು ನೀವು ಭಕ್ತಿಗಾಗಿ ಮೀಸಲಿಡುವಿರಿ. ಆದಾಯದ ಮೂಲವನ್ನು ಹುಡುಕುವಿರಿ. ನೆಮ್ಮದಿಯು ನಿಮ್ಮ ಪಾಲಿಗೆ ಇರಲಿದೆ. ಸಮಾರಂಭದಲ್ಲಿ ಬಂಧುಗಳ ಭೇಟಿಯಾಗುವುದು. ಇನ್ನೊಬ್ಬರಿಗೆ ನೀವು ಸಹಾಯವನ್ನು ಮಾಡಲು ಹೆಚ್ಚು ಇಷ್ಟಪಡುವಿರಿ. ಸಕಾರಾತ್ಮಕ ಯೋಚನೆಗಳೂ ನಿಮಗೆ ಬಾಧೆಯನ್ನು ತರುವುದುಂಟು.