Astrology: ಆತುರದಿಂದ ಇಂದು ಯಾವ ವ್ಯವಹಾರವನ್ನೂ ಮಾಡುವುದು ಬೇಡ

| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 16, 2024 | 12:30 AM

ರಾಶಿ ಭವಿಷ್ಯ, ಬುಧವಾರ(ಅಕ್ಟೋಬರ್: 16): ಉದ್ಯೋಗ ಬದಲಾವಣೆಯು ನಿಮಗೆ ಕಿರಿಕಿರಿ ಎನಿಸಬಹುದು. ನಿಮ್ಮ ಅನುಮಾನದ ಕಾರಣದಿಂದ ಸಂಗಾತಿಯನ್ನು ದ್ವೇಷಿಸುವಿರಿ. ಒಂದೇ ಕೆಲಸವನ್ನು ಹೆಚ್ಚು ಸಮಯ ಮಾಡಲು ತೆಗೆದುಕೊಳ್ಳುವಿರಿ. ಹಾಗಾದರೆ ಅಕ್ಟೋಬರ್: 16ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Astrology: ಆತುರದಿಂದ ಇಂದು ಯಾವ ವ್ಯವಹಾರವನ್ನೂ ಮಾಡುವುದು ಬೇಡ
ರಾಶಿ ಭವಿಷ್ಯ
Follow us on

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಶರದ್ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಚಿತ್ರಾ, ಮಾಸ: ಆಶ್ವಯುಜ, ಪಕ್ಷ: ಶುಕ್ಲ, ವಾರ: ಬುಧ, ತಿಥಿ: ಚತುರ್ದಶೀ, ನಿತ್ಯನಕ್ಷತ್ರ: ಉತ್ತರಾಭಾದ್ರ, ಯೋಗ: ಧ್ರುವ​, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 25 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 10 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:18 ರಿಂದ 01:46, ಯಮಘಂಡ ಕಾಲ ಬೆಳಿಗ್ಗೆ 07:53ರಿಂದ 09:22ರವರೆಗೆ, ಗುಳಿಕ ಕಾಲ ಬೆಳಿಗ್ಗೆ 10:50 ರಿಂದ 12:18 ರವರೆಗೆ.

ಧನು ರಾಶಿ : ಕೌಟುಂಬಿಕ ಜವಾಬ್ದಾರಿಗಳು ಬರಬಹುದು.‌ ನಿಮ್ಮ ಕಾರ್ಯಕ್ಕೆ ಹೆಚ್ಚಿನ ವೇತನವು ಸಿಗಬಹುದು. ಅನಗತ್ಯ ಖರ್ಚನ್ನು ಮಾಡಬೇಕಾಗಬಹುದು. ದೂರದ ಬಂಧುಗಳ ಭೇಟಿಯು ಸಂತಸವನ್ನು ಕೊಡಬಹುದು. ಎದುರಿನವರ ಜೊತೆ ನಿಮ್ಮದೇ ಸರಿ ಎಂಬಂತೆ ತಪ್ಪಿದ್ದರೂ ವಾದಿಸುವಿರಿ. ಶತ್ರುಗಳನ್ನು ತಿಳಿದುಕೊಳ್ಳುವ ಅಶಕ್ತಿಯು ನಿಮಗೆ ಇರುವುದು. ಆತುರದಿಂದ ಯಾವ ವ್ಯವಹಾರವನ್ನೂ ಮಾಡುವುದು ಬೇಡ. ನಿಮ್ಮ ಕೆಲಸಕ್ಕೆ ಸಮಯದ ಮಿತಿಯನ್ನು ಹಾಕಿಕೊಳ್ಳಿ. ಅಹಂಕಾರದಿಂದ ಬೀಗುವ ಅವಶ್ಯಕತೆ ಇಲ್ಲ. ಸಮಾಧಾನದಿಂದ ನೀವು ಮುಂದುವರಿಯುವುದು ಸೂಕ್ತ. ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಮನೋವ್ಯಥೆಯ ಕಾರಣ ಎಲ್ಲರ ಮೇಲೂ ಸಿಟ್ಟಾಗುವಿರಿ. ನಿಮ್ಮ ಹಾರಿಕೆಯ ಮಾತುಗಳು ನಿಮ್ಮ ಬಗ್ಗೆ ನಂಬಿಕೆಯು ಇರದಂತೆ ಮಾಡುವುದು. ಯಂತ್ರದಿಂದ‌ ಕೆಲಸ ಮಾಡುವವರಿಗೆ ಕಷ್ಟವಾದೀತು. ಇಂದು ನಿಮಗೆ ಅಸ್ವತಂತ್ರತೆ ಕಾಡುವುದು.

ಮಕರ ರಾಶಿ : ನಿಮ್ಮಿಂದ ಉಪಕಾರ ಪಡೆದವರು ಕೃತಜ್ಞತೆ ಸಲ್ಲಿಸಬಹುದು. ಮನಸ್ಸು ಹತೋಟಿಯಲ್ಲಿ ಇಟ್ಟುಕೊಳ್ಳುವುದು ಅಗತ್ಯ. ನಿಮ್ಮ ಮಾತಿನ ಹಾಸ್ಯವು ಇನ್ನೊಬ್ಬರಿಗೆ ನೋವನ್ನು ಮಾಡೀತು. ಆಕಸ್ಮಿಕ ಧನಲಾಭದ ನಿರೀಕ್ಷೆಯಲ್ಲಿ ಇರುವಿರಿ. ಇನ್ನೊಬ್ಬರ ಮೇಲಿಟ್ಟ ನಂಬಿಕಯು ಕಳೆದುಹೋಗಬಹುದು. ಸ್ಥಳದ ವ್ಯತ್ಯಾಸದಿಂದ ಆರೋಗ್ಯದ ಮೇಲೆ‌ ದುಷ್ಪರಿಣಾಮವನ್ನು ಉಂಟುಮಾಡಬಹುದು. ಉದ್ಯೋಗದ ಕಾರಣ ಹೊರಗಡೆ ಹೋಗಬೇಕಾಗಬಹುದು. ನಿಷ್ಠುರ ನಡತೆಯ ಕಾರಣ ನೀವು ಎಲ್ಲರಿಂದ ದೂರವಿರಬೇಕಾಗಬಹುದು. ನಿಮ್ಮದೇ ಕೆಲಸಗಳನ್ನು ಮಾಡುತ್ತ ಆರಾಮಾಗಿ ದಿನವನ್ನು ಕಳೆಯುವಿರಿ. ವ್ಯಾಪಾರಸ್ಥರು ಬಹುಮಟ್ಟಿಗೆ ಲಾಭವನ್ನೇ ಪಡೆಯುವರು. ಹಿರಿಯರಿಂದ ಆಶೀರ್ವಾದ ಸಿಗಲಿದೆ. ಪ್ರೇಯಸಿಯನ್ನು ದೂರಮಾಡಿಕೊಂಡು ದುಃಖಿಸುವ ಸಾಧ್ಯತೆ ಇದೆ. ನಿಮ್ಮ ಸಾಮರ್ಥ್ಯವನ್ನು ಸುಧಾರಿಸಲು ಒಂದು ಅವಕಾಶ ಸಿಗಲಿದೆ.

ಕುಂಭ ರಾಶಿ : ದೈವಭಕ್ತಿಯಿಂದ ನೀವು ನೆಮ್ಮದಿ ಕಾಣಲು ಸಾಧ್ಯ. ಇಂದು ಹೆಚ್ಚು ಮಾನಸಿಕ ಒತ್ತಡವು ಇರದಿದ್ದರೂ ಕೆಲಸವು ಬಹಳ ಇರಲಿದೆ. ಒಂದು ಕ್ಷಣವೂ ವಿರಾವಿಲ್ಲದಂತೆ ಕಾರ್ಯವನ್ನು ಮಾಡುವಿರಿ. ಇಷ್ಟವಿಲ್ಲದ ಕಾರ್ಯಕ್ಕೆ ಎಷ್ಟೇ ಒತ್ತಾಯ ಮಾಡಿದರೂ ನೀವು ಒಪ್ಪುವುದಿಲ್ಲ. ನಿಮ್ಮ ಸ್ವಭಾವವು ಕೆಲವರಿಗೆ ಇಷ್ಟವಾಗದೇ ಹೋಗುವುದು. ಸ್ವತಂತ್ರವಾಗಲು ನೀವು ಬಯಸುವಿರಿ. ವೃತ್ತಿಯಲ್ಲಿ ಬದಲಾವಣೆಯನ್ನು ಬಯಸುವಿರಿ. ಅಪರಿಚಿತರ ನಿಮಗೆ ಕೆಲವು ತೊಂದರೆಗಳು ಬರಬಹುದು. ಸೌಂದರ್ಯದ ಕಡೆ ನಿಮ್ಮ ಗಮನವು ಹೆಚ್ಚಿರುವುದು. ನಿಮ್ಮ ಉದ್ದೇಶವನ್ನು ಸಾಕಾರಗೊಳಿಸಲು ಪ್ರಯತ್ನಿಸುವಿರಿ. ಉನ್ನತ ವಿದ್ಯಾಭ್ಯಾಸವನ್ನು ಮಾಡುವ ಇಚ್ಛೆಯನ್ನು ಉಳಿಸಿಕೊಳ್ಳುವಿರಿ. ಪ್ರಯತ್ನಪಟ್ಟು ಮಾಡುವ ಕೆಲಸವು ನಿಮಗೆ ಅನುಕೂಲವನ್ನು ಮಾಡುವುದು. ಉದ್ವಿಗ್ನತೆಯು ಉಂಟಾಗ ಏನನ್ನಾದರೂ ಮಾಡಿಕೊಳ್ಳುವಿರಿ. ನಿಮ್ಮ ಶಕ್ತಿಗೆ ಯೋಗ್ಯ ಕಾರ್ಯವನ್ನು ಮಾಡಿ.

ಮೀನ ರಾಶಿ : ಉದ್ಯೋಗ ಬದಲಾವಣೆಯು ನಿಮಗೆ ಕಿರಿಕಿರಿ ಎನಿಸಬಹುದು. ನಿಮ್ಮ ಅನುಮಾನದ ಕಾರಣದಿಂದ ಸಂಗಾತಿಯನ್ನು ದ್ವೇಷಿಸುವಿರಿ. ಒಂದೇ ಕೆಲಸವನ್ನು ಹೆಚ್ಚು ಸಮಯ ಮಾಡಲು ತೆಗೆದುಕೊಳ್ಳುವಿರಿ. ಒತ್ತಡ ನಿವಾರಣೆಗೆ ಧ್ಯಾನ ಹಾಗೂ ಯೋಗಾಭ್ಯಾಸವನ್ನು ಮಾಡಬೇಕಾದೀತು. ಅಪರಿಚಿತರು ಆಪ್ತರಾಗಬಹುದು ಮಾತುಕತೆಯಿಂದ.‌ ದುರಭ್ಯಾಸಕ್ಕೆ ಅವಕಾಶಗಳು ಬರಬಹುದು. ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಳ್ಳಿ. ನಿಮ್ಮ ವರ್ತನೆಯನ್ನು ಯಾರಾದರೂ ಕಂಡು ನಕ್ಕಾರು. ಅಹಂಕಾರವು ನಿಮ್ಮನ್ನೇ ನುಂಗಬಹುದು. ನಿಮ್ಮ‌ವೇಷಭೂಷಣದ ಬಗ್ಗೆ ಟೀಕೆಗಳನ್ನು ಮಾಡಬಹುದು. ಯಾವುದನ್ನೂ ನೀವು ಮನಸ್ಸಿಗೆ ತೆಗೆದುಕೊಳ್ಳದೇ ಇರುವಿರಿ. ಆರ್ಥಿಕತೆಯು ಬಲವನ್ನು ಪಡೆದುಕೊಂಡಿದ್ದು ನಿಮಗೆ ಸಂತೋಷವನ್ನು ತರುವುದು. ವಿವಿಧ ಮೂಲಗಳಿಂದ ಧನಾಗಮನವಾಗುವುದು. ಇಂದು ನೀವು ಹೊಸ ಹೂಡಿಕೆಗೆ ಮನಸ್ಸು ಮಾಡುವಿರಿ. ಅತಿಯಾದ ಆಸೆಯಿಂದ ನಿಮಗೆ ಕೆಲವು ತೊಂದರೆಗಳು ಬರಬಹುದು.

-ಲೋಹಿತ ಹೆಬ್ಬಾರ್ – 8762924271 (what’s app only)