ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಮೇ 14) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ: ಕೃತ್ತಿಕಾ, ಮಾಸ: ವೈಶಾಖ, ಪಕ್ಷ: ಶುಕ್ಲ, ವಾರ: ಮಂಗಳ, ತಿಥಿ: ಸಪ್ತಮೀ, ನಿತ್ಯನಕ್ಷತ್ರ: ಪುಷ್ಯ, ಯೋಗ: ಶೂಲ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 06 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 51 ನಿಮಿಷಕ್ಕೆ, ರಾಹು ಕಾಲ 15:40 ರಿಂದ 17:16ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 09:18 ರಿಂದ 10:53ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:29 ರಿಂದ 14:05ರ ವರೆಗೆ.
ಧನು ರಾಶಿ: ಇಂದು ನೀವು ಬಹಳ ಕಾಲದ ಅನಂತರ ಕುಟುಂಬದ ಜನರ ಜೊತೆ ಹೆಚ್ಚು ಬೆರೆಯುವಿರಿ. ಮನೆಯಲ್ಲಿಯೇ ಇದ್ದು ಮನೆಯಲ್ಲಿಯೇ ಆನಂದವನ್ನು ಪಡೆಯುವಿರಿ. ನಿಮ್ಮ ಹಣದ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವಿರಿ. ಸ್ನೇಹಿತರು ನಿಮಗೆ ಸಹಾಯ ಮಾಡಲಿದ್ದಾರೆ. ಕೆಲವು ಮಾತುಗಳಿಂದ ನೀವು ಚಂಚಲರಾಗುತ್ತೀರಿ. ಮಾತನಾಡಲು ಯಾರಿಲ್ಲದೇ ನಿಮ್ಮ ಸ್ನೇಹಿತರೊಂದಿಗೆ ಸಮಯ ಕಳೆಯಿರಿ. ನಿಮ್ಮನ್ನು ಸಂತೋಷದಿಂದ ಇಟ್ಟುಕೊಳ್ಳಲು ಬೇಕಾದ ಮಾರ್ಗವನ್ನು ಕಂಡುಕೊಳ್ಳಿ. ನಿಮ್ಮ ಪೋಷಕರ ಸಲಹೆಯನ್ನು ಅನುಸರಿಸಿ, ನಿಮ್ಮ ಸಂಬಂಧವನ್ನು ಉತ್ತಮವಾಗಿಸಿಕೊಳ್ಳಿ. ನಿಮ್ಮ ಮಾತುಗಳಿಂದ ಸ್ವಭಾವವು ಸ್ಪಷ್ಟವಾಗುವುದು. ಪುಣ್ಯಸ್ಥಳಗಳನ್ನು ಕುಟುಂಬ ಜೊತೆ ದರ್ಶನ ಪಡೆಯುವಿರಿ. ಅತಿಯಾದ ದೇಹದಂಡನೆಯಿಂದ ನಿಮಗೆ ಆಯಾಸವಾಗಲಿದೆ. ಕೊಟ್ಟ ಹಣವನ್ನು ನೀವು ಪುನಃ ಕೇಳುವುದರಿಂದ ಕಲಹವಾಗಬಹುದು ನಿಮ್ಮಿಂದ ಸಹಾಯವನ್ನು ಪಡೆದ ಹಿರಿಯರು ಆಶೀರ್ವದಿಸುವರು. ಇದರಿಂದ ಸಂತೋಷವಾಗಲಿದೆ.
ಮಕರ ರಾಶಿ: ನೀವು ಹೊಸತನ್ನು ಏನನ್ನಾದರೂ ಕಲಿಯಲು ಸಿದ್ಧರಾಗುವಿರಿ. ನಿಮ್ಮ ಕಡೆಯಿಂದ ಸ್ವಲ್ಪ ಕೆಲಸದಿಂದ ನೀವು ಗಣನೀಯ ಪ್ರಮಾಣದ ಹಣ ಪಡೆಯಬಹುದು. ನೀವು ಯುವಕರ ಜೊತೆ ಸಮಯ ಕಳೆಯುವಿರಿ. ನಿಮಗೆ ವಹಿಸಿದಷ್ಟು ಕೆಲಸವನ್ನು ಏಕಾಗ್ರತೆಯಿಂದ ಮಾಡಿ. ನೀವು ಸಾಲವನ್ನು ಪಡೆಯಲು ಆರ್ಥಿಕಸಂಸ್ಥೆಗಳಿಂದ ಆಹ್ವಾನ ಬರಬಹುದು. ದಾಂಪತ್ಯದಲ್ಲಿ ಮನಸ್ತಾಪಗಳು ಎದ್ದು ಶಾಂತವಾಗುವುದು. ಉಚಿತವಾದುದನ್ನು ಮಾತ್ರ ಪಡೆಯಿರಿ. ನಿಮ್ಮ ಆರೋಗ್ಯವು ಇಂದು ಚೆನ್ನಾಗಿರಲಿದೆ. ಹೆಣ್ಣು ಮಕ್ಕಳಿಂದ ನಿಮಗೆ ಯಶಸ್ಸು ಪ್ರಾಪ್ತಿ. ಕಛೇರಿಯ ವ್ಯವಹಾರದಲ್ಲಿ ನಿಮಗೆ ಒತ್ತಡವು ಬರಬಹುದು. ಹಳೆಯ ಸ್ನೇಹಿತೆಯ ಸಖ್ಯವಾಗಬಹುದು. ಮಕ್ಕಳ ಭವಿಷ್ಯವನ್ನು ಗಮನದಲ್ಲಿ ಇಟ್ಟುಕೊಂಡು ವ್ಯವಹರಿಸುವುದು ಉತ್ತಮ. ನಿಮ್ಮ ಮೇಲಿನ ಪ್ರೀತಿಯು ಅಧಿಕವಾಗುವುದು.
ಕುಂಭ ರಾಶಿ: ಇಂದು ಪೋಷಕರಿಂದ ನಿಮ್ಮ ಕಾರ್ಯಕ್ಕೆ ಬೆಂಬಲ ಸಿಗಲಿದೆ. ಕಾರ್ಯದ ಸ್ಥಳದಲ್ಲಿ ಒಳ್ಳೆಯ ಸುದ್ದಿಗಳು ಬರಲಿವೆ. ಇಂದು ಭೂಮಿಗೆ ಸಂಬಂಧಿಸಿದಂತೆ ಲಾಭ ಪಡೆಯುವಿರಿ. ವಿದ್ಯಾರ್ಥಿಗಳು ಸಾಧನೆಗಳನ್ನು ಮಾಡಲು ಇಚ್ಛಿಸುವರು. ಸಂಗಾತಿಯ ಜೊತೆ ನೀವು ಪ್ರವಾಸಕ್ಕೆ ತೆರಳಲು ಯೋಚಿಸುವಿರಿ. ದೂರದ ಸ್ಥಳಗಳಿಗೆ ಹೋಗುವು ಬೇಡ. ನಿಮ್ಮ ಪ್ರೀತಿಯನ್ನು ಯಾರೊಂದಿಗೂ ಹಂಚಿಕೊಂಡು ಸಮಾಧಾನವಾಗುವುದು. ನಿಮ್ಮ ಕೆಲಸಕ್ಕೆ ಪ್ರಶಂಸೆ ಸಿಗಲಿದೆ. ಸಹೋದರರ ಜೊತೆ ಪಾಲುದಾರಿಕೆಯಿಂದ ಉತ್ತಮಲಾಭವಿದೆ. ಅಪರೂಪದ ಬಂಧುಗಳ ಸಮಾಗಮವಾಗಲಿದ್ದು, ಸಂತೋಷವಾಗಲಿದೆ. ದೇವಾಲಯಕ್ಕೆ ಹೋಗಿ ನೆಮ್ಮದಿಯನ್ನು ಪಡೆದುಕೊಳ್ಳುವಿರಿ. ನೀವು ಎಣಿಸಿದಂತೆ ಆಗಿದ್ದು, ನಿಮಗೂ ಅಚ್ಚರಿಯಾದೀತು. ವಿದ್ಯಾಭ್ಯಾಸ ಮಹತ್ತ್ವದ ಅರಿವಾಗಬಹುದು. ಸಂಗಾತಿಯ ಅನಪೇಕ್ಷಿತ ಆಸೆಗಳನ್ನು ದೂರ ಮಾಡುವಿರಿ. ನಿಮ್ಮ ಮಾತುಗಳು ಕಠೋರವಾಗಿ ಇರುವುದು. ಏನನ್ನೋ ಸಾಧಿಸಲು ಹೋಗಿ ಮತ್ತೇನನ್ನೋ ಮಾಡಿಕೊಳ್ಳುವಿರಿ.
ಮೀನ ರಾಶಿ: ಇಂದು ನೀವು ಸ್ನೇಹಿತರ ಹೆಚ್ಚು ಸಮಯವನ್ನು ಕಳೆಯುವಿರಿ. ಯಾವುದೇ ಮಹತ್ವದ ಹಣಕಾಸಿನ ವಹಿವಾಟುಗಳಿಗೆ ಸಹಿ ಹಾಕುವ ಸಾಧ್ಯತೆ ಇದೆ. ನೀವು ಸಣ್ಣ ವಿಷಯಗಳ ಬಗ್ಗೆಯೂ ಗಾಢವಾಗಿ ಇಂದು ಚಿಂತಿಸುವಿರಿ. ಅಂತಹವುಗಳನ್ನು ಮರೆತು ಮುನ್ನಡೆಯಿರಿ. ಮನಸ್ಸು ಯಾವ ಸಂದರ್ಭದಲ್ಲಿಯೂ ಉದ್ವೇಗಕ್ಕೆ ಒಳಗಾಗುತ್ತದೆ ಎಂದು ನೋಡಿಕೊಳ್ಳಿ. ದೊಡ್ಡ ನಿರ್ಧಾರಗಳನ್ನು ನೀವೊಬ್ಬರೇ ತೆಗೆದುಕೊಂಡು ತಪ್ಪು ಮಾಡುವಿರಿ. ವ್ಯವಹಾರದಲ್ಲಿ ಪ್ರಾಮಾಣಿಕತೆಯನ್ನು ಉಳಿಸಿಕೊಳ್ಳಿ. ಸಂತೋಷಕ್ಕೆ ಅಡ್ಡಿಯಾಗುವ ಕಾರ್ಯವನ್ನು ಮಾಡಿಕೊಂಡು ಪಶ್ಚಾತ್ತಾಪ ಪಡುವಿರಿ. ಅಜಾಗರೂಕತೆಯಿಂದ ನಿಮ್ಮ ವಸ್ತುವು ಇನ್ನೊಬ್ಬರ ಪಾಲಾಗಬಹುದು. ಕಳೆದುಹೋದ ವಿಚಾರವನ್ನು ಮತ್ತೆ ಮತ್ತೆ ನೆನಪಿಸಿಕೊಂಡು ದುಃಖಿಸುವಿರಿ. ದೈವಭಕ್ತಿಯಲ್ಲಿ ಅಪರಿಚಿತ ಕರೆಗಳು ನಿಮ್ಮನ್ನು ಪೀಡಿಸಬಹುದು. ಇನ್ನೊಬ್ಬರ ಜವಾಬ್ದಾರಿಯನ್ನು ನೀವು ಕಸಿದುಕೊಳ್ಳುವ ಆಲೋಚನೆ ಮಾಡುವಿರಿ. ಬೇರೆ ಕಾರ್ಯದಿಂದಾಗಿ ನಿಮ್ಮ ಮುಖ್ಯ ಕಾರ್ಯವು ಹಿಂದುಳಿಯುವುದು.