Daily Devotional: 2026ಕ್ಕೆ ಈ ರಾಶಿಗಳಿಗೆ ಅದೃಷ್ಟವೋ ಅದೃಷ್ಟ!
ಬೆಂಗಳೂರು, ಡಿಸೆಂಬರ್ 14: 2026ರಲ್ಲಿ ಗುರು ಗ್ರಹ ಜೂನ್ 2ರಂದು ಮತ್ತು ರಾಹು-ಕೇತು ಗ್ರಹಗಳು ಡಿಸೆಂಬರ್ 5ರಂದು ಸ್ಥಾನ ಬದಲಾವಣೆ ಮಾಡಲಿವೆ. ಶನಿ ಗ್ರಹ ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ. ಈ ಗ್ರಹಗಳ ಸ್ಥಾನ ಬದಲಾವಣೆಗಳು ಮೂರು ರಾಶಿಗಳಿಗೆ ಅಪಾರ ಅದೃಷ್ಟವನ್ನು ತರಲಿವೆ. ಈ ಅದೃಷ್ಟಶಾಲಿ ರಾಶಿಗಳು ಆರ್ಥಿಕ, ಆರೋಗ್ಯ, ವ್ಯಾಪಾರ, ಕೀರ್ತಿ-ಪ್ರತಿಷ್ಠೆಗಳಲ್ಲಿ ಉತ್ತಮ ಫಲಿತಾಂಶಗಳನ್ನು ಕಾಣಲಿವೆ. ಜನವರಿ 2026ರಿಂದ ಜನವರಿ 2027ರವರೆಗಿನ ಅವಧಿಯಲ್ಲಿ ಈ ರಾಶಿಗಳಿಗೆ ಒಂದಲ್ಲ ಒಂದು ಶುಭ ಫಲಗಳು ದೊರೆಯಲಿವೆ ಎಂದು ತಿಳಿಸಲಾಗಿದೆ. ಮೀನ, ತುಲಾ ಮತ್ತು ಕುಂಭ ರಾಶಿಗಳು ಈ ಅದೃಷ್ಟಶಾಲಿಗಳ ಪಟ್ಟಿಯಲ್ಲಿವೆ. ಪ್ರಯತ್ನಕ್ಕೆ ಫಲವಿರುವುದರಿಂದ, ಈ ರಾಶಿಗಳವರು ತಮ್ಮ ಪ್ರಯತ್ನಗಳನ್ನು ಮುಂದುವರಿಸಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಎಲ್ಲಾ ರಾಶಿಗಳಿಗೂ 2026 ಶುಭ ತರಲಿ ಎಂದು ಬಸವರಾಜ್ ಗುರೂಜಿ ಹೇಳಿದ್ದಾರೆ.