Daily Horoscope 14 August 2024: ಇಂದು ಈ ರಾಶಿಯವರ ಬಳಿ ಹಣ ಪಡೆದು ವಂಚಿಸುವ ಸಾಧ್ಯತೆಯಿದೆ-ಎಚ್ಚರ

| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 14, 2024 | 12:11 AM

ಆಗಸ್ಟ್​ 14,​ 2024ರ​​ ನಿಮ್ಮ ರಾಶಿಭವಿಷ್ಯ: ಆತುರದಲ್ಲಿ ಏನನ್ನಾದರೂ ಮಾಡಿಕೊಳ್ಳುವ ಸಾಧ್ಯತೆ ಇದೆ. ನಿಮ್ಮ ಶತ್ರುಗಳು ರಾಜಿಯಾಗಲು ಇಂದು ಬರಬಹುದು. ಹಿರಿಯರ ಮಧ್ಯಸ್ಥಿಕೆಯಲ್ಲಿ ಕಾರ್ಯಗಳು ಮುನ್ನಡೆದರೆ ಒಳ್ಳೆಯದು. ಹಾಗಾದರೆ ಆಗಸ್ಟ್​ 14ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Daily Horoscope 14 August 2024: ಇಂದು ಈ ರಾಶಿಯವರ ಬಳಿ ಹಣ ಪಡೆದು ವಂಚಿಸುವ ಸಾಧ್ಯತೆಯಿದೆ-ಎಚ್ಚರ
ರಾಶಿ ಭವಿಷ್ಯ
Follow us on

ಜ್ಯೋತಿಷ್ಯದಿಂದ ಮಾನವ ವ್ಯವಹಾರಗಳು ಮತ್ತು ಭೂಮಂಡಲದ ಸಂಗತಿಗಳನ್ನು ತಿಳಿಯಬಹುದಾಗಿದೆ. ಜಾತಕವನ್ನು ಸಾಮಾನ್ಯವಾಗಿ ಹನ್ನೆರಡು ಜ್ಯೋತಿಷ್ಯ ರಾಶಿಗಳನ್ನು ಹೊಂದಿದೆ. ಪ್ರತಿಯೊಂದೂ ವ್ಯಕ್ತಿಯ ಜೀವನ ಮತ್ತು ವ್ಯಕ್ತಿತ್ವದ ಮೇಲೆ ಪ್ರಭಾವ ಬೀರುತ್ತದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕರ್ಕಾಟಕ ಮಾಸ, ಮಹಾನಕ್ಷತ್ರ: ಆಶ್ಲೇಷಾ, ಮಾಸ: ಶ್ರಾವಣ, ಪಕ್ಷ: ಶುಕ್ಲ, ವಾರ: ಬುಧ, ತಿಥಿ: ದಶಮೀ, ನಿತ್ಯನಕ್ಷತ್ರ: ಜ್ಯೇಷ್ಠಾ, ಯೋಗ: ಐಂದ್ರ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 19 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06:54 ಗಂಟೆ, ರಾಹು ಕಾಲ ಮಧ್ಯಾಹ್ನ 12:37 ರಿಂದ ಸಂಜೆ 02:12, ಯಮಘಂಡ ಕಾಲ ಬೆಳಿಗ್ಗೆ 07:54 ರಿಂದ 09:29ರ ವರೆಗೆ, ಗುಳಿಕ ಕಾಲ 11:03 ರಿಂದ 12:37ರ ವರೆಗೆ.

ಮೇಷ ರಾಶಿ : ನಿಮಗೆ ನಂಬಿಕೆಯ ಮೇಲೆ ಆದ ಪ್ರಹಾರವನ್ನು ಸಹಿಸಲಾಗದು. ಬರಬೇಕಾದ ಸಂಪತ್ತು ನಿಮ್ಮ ಕೈಸೇರುವ ನಿರೀಕ್ಷೆ ಇರಲಿದೆ. ಅಧಿಕಾರಯುತವಾದ ಮಾತಿನಿಂದ ನಿಮ್ಮ ಕೆಲಸವನ್ನು ಸಾಧಿಸಿಕೊಳ್ಳುವಿರಿ. ಮನಸ್ಸಿನ ಚಾಂಚಲ್ಯವನ್ನು ಕಡಿಮೆ‌ಮಾಡಿಕೊಳ್ಳಲು ಪ್ರಯತ್ನಿಸುವಿರಿ. ಇಂದು ನೀವು ಕೆಲವು ಸಂದರ್ಭದಲ್ಲಿ ಮೌನ ವಹಿಸುವುದು ಉತ್ತಮ. ಬಳಕೆಯಲ್ಲಿ ಇಲ್ಲದೇ ನಿಮ್ಮ ಸಂಬಂಧಗಳು ಸಡಿಲಾಗಬಹುದು. ಎಷ್ಟೇ ಎಚ್ಚರಿಕೆಯಿಂದ ಇದ್ದರೂ ಯಾಮಾರುವ ಸನ್ನಿವೇಶ ಬರಬಹುದು. ವ್ಯಾಪಾರವನ್ನು ಬಹಳ ನಾಜೂಕಾಗಿ ಮಾಡಬೇಕಿದೆ. ನೀವಾಡಿದ ಸುಳ್ಳು ಮಾತುಗಳಿಂದಲೇ ನಿಮಗೆ ತೊಂದರೆಯಾಗಬಹುದು. ಮಾತಿನ‌ ಮೇಲೆ‌ ನಿಗಾ ಇರಲಿ. ನಿಮ್ಮಿಂದ ಹಣದ ಸಹಾಯವನ್ನು ಬಯಸುವವರು ವಂಚಿಸಲೂ ಸಾಧ್ಯವಿದೆ. ಬೇಡವಾದುದ್ದೇ ನಿಮ್ಮನ್ನು ಹೆಚ್ಚು ಆಕರ್ಷಿಸುವುದು. ನಿಮ್ಮ ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿ ಅನುಕೂಲತೆಯು ಕೆಲವು ಸಂದರ್ಭಗಳಲ್ಲಿ ಸಿಕ್ಕಿ ಸಂತೋಷವಾಗುವುದು. ಹಳೆಯ ಹಣಕಾಸಿನ ವ್ಯವಹಾರವನ್ನು ನೀವು ತೀರಿಸಿಕೊಳ್ಳುವಿರಿ.

ವೃಷಭ ರಾಶಿ : ಇಂದು ನೀವು ಸ್ತ್ರೀಯರ ವಿಚಾರದಲ್ಲಿ ಸೂಕ್ಷ್ಮಮತಿಗಳಾಗುವಿರಿ. ನೀವು ಸಮಸ್ಯೆಗೆ ಪರಿಹಾರ ಹುಡುಕಲು ಹೋಗಿ ಇನ್ನಷ್ಟು ಸಮಸ್ಯೆಯನ್ನು ಮಾಡಿಕೊಳ್ಳುವಿರಿ. ಆದರೆ ನಿಮ್ಮ ನಿರ್ಧಾರವು ಅಚಲವಾಗಿರಲಿ. ಎಂದೋ ಆರಂಭವಾದ ಕಾರ್ಯವು ಕುಂಟುತ್ತಾ ಸಾಗವುದು. ಜಾಡ್ಯದಿಂದ ನೀವು ಇಂದು ಮಾಡುವ ಕೆಲಸವನ್ನು ಮಾಡುವುದಿಲ್ಲ. ಹೊಸ ವಸ್ತುಗಳ ಮೇಲೆ ವ್ಯಾಮೋಹ ಕಾಣಿಸುವುದು. ನೂತನ ವಸ್ತುಗಳನ್ನು ಖರೀದಿಸುವಲ್ಲಿ ಮೋಸವಾಗಬಹುದು. ಸಣ್ಣ ವಿಷಯವನ್ನು ನೀವು ದೊಡ್ಡ‌ ಮಾಡುವುದು‌ ಬೇಡ. ಏಕಾಂತವು ನಿಮಗೆ ಹಿತವೆನಿಸಬಹುದು. ಫಲಾಪೇಕ್ಷೆಯಿಲ್ಲದೇ ಕರ್ತವ್ಯಗಳನ್ನು ಮಾಡಿರಿ. ಹೆಚ್ಚು ಸಮಯವನ್ನು ಕುಟುಂಬದೊಂದಿಗೆ ಕಳೆಯುವಿರಿ. ಆಲೋಚನೆ ಮಾಡುವಷ್ಟರಲ್ಲಿ ಕೆಲಸವೇ ಮುಗಿಯಬಹುದು. ಹಿತಶತ್ರುಗಳನ್ನು ದೂರವಿರಿಸುವುದು ಕಷ್ಟವಾದೀತು.

ಮಿಥುನ ರಾಶಿ : ನಕಾರಾತ್ಮಕ ಯೋಚನೆಗಳು ನಿಮ್ಮನ್ನು ಸುಮ್ಮನಿರಲು ಬಿಡದು. ಗುರುಸನ್ನಿಧಿಯನ್ನು ನೀವು ಇಂದು ಬಯಸುವಿರಿ. ದೇವರಿಗೆ ಸಂಬಂಧಿಸಿದ ವಿಚಾರದಲ್ಲಿ ನಿಮ್ಮ ಆಸಕ್ತಿ ಹೆಚ್ಚಾಗಬಹುದು. ಸ್ನೇಹಿತರು ಜಗಳವಾಡಿ ನಿಮ್ಮನ್ನು ಬಿಟ್ಟುಹೋಗುವ ಸಾಧ್ಯತೆ ಇದೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ತೊಡಗಲು ಕಷ್ಟಪಡುವರು. ಪ್ರೀತಿಯನ್ನು ಒಪ್ಪಿಕೊಳ್ಳುವ ಮೊದಲು ಹತ್ತು ಬಾರಿ ಯೋಚಿಸಿ. ಮಕ್ಕಳು ದಾರಿ ತಪ್ಪಬಹುದು. ಅವರಿಗೆ ಸರಿಯಾದ ಮಾರ್ಗದರ್ಶನ ಅಗತ್ಯ. ತಾಯಿಯ ಜೊತೆ ಕಲಹವಾಗುವ ಸಾಧ್ಯತೆ ಇದೆ. ನಿಮ್ಮನ್ನು ನೆಚ್ಚುವವರು ಹೆಚ್ಚಾಗಬಹುದು. ಅಧಿಕ ಮಾತನ್ನಾಡಯವುದು ಬೇಡ. ಮನೆಯಲ್ಲಿ ಸಂತೋಷಕೂಟವು ನಿರ್ಮಾಣವಾಗುವುದು. ಶ್ರಮಕ್ಕೆ ಯೋಗ್ಯವಾದ ಫಲವು ಲಭಿಸುವುದು. ಅಪರೂಪದ ವಸ್ತುವು ನಿಮಗೆ ಲಾಭವಾಗಲಿದೆ. ನೀವೇ ಮಾಡಿದ ಕಾರ್ಯವಾದರೂ ಪರಿಶೀಲನೆ ಮುಖ್ಯ.

ಕರ್ಕಾಟಕ ರಾಶಿ : ನೀವು ಇಂದು ಏನನ್ನು ಕೊಡುವುದಿದ್ದರೂ ಮನಃಪೂರ್ವಕವಾಗಿ ಕೊಡುವುದು ಉತ್ತಮ. ಬೇರೆಯವರಿಗೆ ಅಪಕೀರ್ತಿ ತರಲು ಹೋಗಿ ನಿಮ್ಮ ಯಶಸ್ಸನ್ನೇ ಹಾಳುಮಾಡಿಕೊಳ್ಳಬೇಕಾಗುವುದು. ಇಂದ್ರಿಯ ಸಂಯಮವನ್ನು ಸಾಧಿಸುವುದು ಕಷ್ಟವಾದೀತು. ಒತ್ತಾಯಕ್ಕೆ ಮಣಿದು ನಿಮ್ಮ ಪೂರ್ವಯೋಜನೆಯನ್ನು ಬದಲಿಸುವಿರಿ. ದೊಡ್ಡವರ ವಿಚಾರದಲ್ಲಿ ಮೂಗುತೂರಿಸುವಿರಿ. ನೂತನ ವಸ್ತ್ರಗಳನ್ನು ಧರಿಸುವಿರಿ. ಕಲಾವಿದರಿಗೆ ಉತ್ತಮ ಅವಕಾಶ ಸಿಗಲಿದೆ. ಹಿತಶತ್ರುಗಳು ಎಂದು ಅನ್ನಿಸಿದರೆ ಅವರನ್ನು ದೂರವಿಡುವುದು ಉತ್ತಮ. ಪಡೆದುಕೊಂಡಿದ್ದನ್ನು ಉಳಿಸಿಕೊಳ್ಳುವ ಜಾಗರೂಕತೆಯೂ ಬೇಕು. ಪಶ್ಚಾತ್ತಾಪ ಪಟ್ಟು ಪ್ರಯೋಜನವಾಗದು. ಆತ್ಮವಿಶ್ವಾಸದ ಕೊರತೆ ಎದ್ದು ಕಾಣುವುದು. ಆಕಸ್ಮಿಕ ವಿಚಾರಕ್ಕೆ ಗಲಿಬಿಲಿಯಾಗುವಿರಿ. ಪ್ರಯಾಣದ ಅಡೆತಡೆಯು ನಿಮಗೆ ಕೋಪ ತರಿಸಬಹುದು. ಸ್ವಂತಕ್ಕೆ ಪ್ರಯೋಜನವಿಲ್ಲದ ಯಾವ ಕಾರ್ಯವನ್ನೂ ನೀವು ಮಾಡಲಾರಿರಿ.

ಸಿಂಹ ರಾಶಿ : ನೀವು ಉಢಾಫೆ ಮಾಡುವ ಸಂಗತಿಗಳೇ ನಿಮಗೆ ಅಂಟಿಕೊಳ್ಳುವುದು. ಮಕ್ಕಳಿಂದ ನಿಮಗೆ ಶುಭವಾರ್ತಯು ಇರಬಹುದು. ಸರ್ಕಾರದಿಂದ ಆಗಬೇಕಾದ ಕೆಲಸವನ್ನು ನೀವು ಮಾಡಿಸಿಕೊಳ್ಳಲು ನೀವು ಶ್ರಮಪಡಬೇಕಾದೀತು. ಪ್ರಭಾವಿ ವ್ಯಕ್ತಿಗಳ ಸಂಪರ್ಕವಾಗಲಿದೆ. ವಾಹನವನ್ನು ಬದಲಾಯಿಸುವಿರಿ. ನಿಮ್ಮದಲ್ಲದ ವಸ್ತುವನ್ನು ಬಯಸಿ ಪಡೆದುಕೊಳ್ಳಲು ಕಷ್ಟಪಡುವಿರಿ. ಸುಂದರ ಸ್ಥಳಗಳನ್ನು ನೋಡಲು ನೀವು ಇಷ್ಟಪಡುವಿರಿ. ತಪ್ಪಿನ ಕಾರ್ಯದಿಂದ ಸಿಕ್ಕಿಕೊಳ್ಳುವ ಸಾಧ್ಯತೆ ಇದೆ. ನಿಮಗೆ ಸಹೋದ್ಯೋಗಿಗಳು ಬೆಂಬಲ ಕೊಡುವುದು ಕಷ್ಟವಾದೀತು. ಇಂದು ಇಡೀ ದಿನ ಕೋಪದಿಂದ ಇರುವಿರಿ. ಪ್ರಯಾಣದ ವಿಚಾರದಲ್ಲಿ ಕಲಹವಾಗಬಹುದು. ಅನ್ನಿಸಿದ್ದನ್ನು ಹೇಳುವ ರೀತಿಯಲ್ಲಿ ಹೇಳಿ. ಇಂದು ನಿಮ್ಮವರ ಬಗ್ಗೆಯೇ ಯೋಚಿಸಲು ಸಮಯ ಸಿಗದು. ದಿನದ ಆರಂಭವು ಬಹಳ ಉತ್ಸಾಹದಿಂದ ಇರಲಿದ್ದು ಎಲ್ಲ ಜೊತೆ ಸೌಹಾರ್ದವಾಗಿ ಇರುವಿರಿ.

ಕನ್ಯಾ ರಾಶಿ : ಮಹಿಳೆಯರ ಜೊತೆ ಕೆಲಸ ಮಾಡುವುದು ಕಷ್ಟವಾಗುವುದು. ಅವಮಾನದವನ್ನು ನೀವು ಅನುಭವಿಸುವ ಪ್ರಸಂಗವೂ ಬರಬಹುದು. ಪ್ರತ್ಯೇಕವಾಗಿ ನಿಮ್ಮನ್ನು ಗುರುತಿಸಿಕೊಳ್ಳಲು ಬಯಸುವಿರಿ. ನಿಮ್ಮ ಮಾತುಗಳು ನಿಮಗೆ ತಿರುಗುಬಾಣವಾಗಿ ಬರಬಹುದು.‌ ಸಂಗಾತಿಯು ಉದ್ಯಮದಲ್ಲಿ ಪ್ರವೇಶ ಮಾಡಬಹುದು. ಆಪತ್ಕಾಲದ ಸಂಪತ್ತನ್ನು ಇಂದು ಬಳಸಿಕೊಳ್ಳುವಿರಿ. ಬಂಗಾರದ ವ್ಯಾಪಾರಿಗಳು ಅಧಿಕ ಲಾಭವನ್ನು ಗಳಿಸಲಿದ್ದಾರೆ. ಸ್ನೇಹಿತರ ಮೇಲೆ ಅನುಮಾನಪಟ್ಟುಕೊಂಡು ಅವರನ್ನು ದೂರವಿರಿಸುವಿರಿ. ಸರ್ಕಾರಿ ಉದ್ಯೋಗವನ್ನು ಪಡೆಯಲು ಬಹಳ ಪ್ರಯತ್ನಪಡುವಿರಿ. ನಷ್ಟವಾದುದರ ಅನುಭವವು ನಿಮಗಾಗುವುದು. ಈ ಕಾರಣಕ್ಕೆ ನಿಮಗೆ ಕೆಲಸದ ಪ್ರದೇಶದಲ್ಲಿ ಅಸ್ಥಿರತೆ ಇರುತ್ತದೆ. ಕಷ್ಟದ ಫಲವು ನಿಮಗೆ ಇಂದು ಗೊತ್ತಾಗಲಿದೆ. ಸಮಯದೊಂದಿಗೆ ಚಲಿಸುವ ಮೂಲಕ ನೀವು ಪ್ರಗತಿ ಹೊಂದುತ್ತೀರಿ.

ತುಲಾ ರಾಶಿ : ನಿಮ್ಮ ಇಂದಿನ ಕಾರ್ಯವು ತಾರ್ಕಿಕ ಅಂತ್ಯವನ್ನು ಕಾಣದೇ ಹೋಗಬಹುದು. ನಿಮ್ಮ ಚಂಚಲವಾದ ಮನಸ್ಸನ್ನು ನಿಗ್ರಹಿಸಲು ನಿಮಗೆ ಕಷ್ಟವಾದೀತು. ಕೃಷಿಕರಿಗೆ ಹೆಚ್ಚಿನ ಆದಾಯವು ಬರಬಹುದು. ಭೂಮಿಯನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಕಲಾವಿದರಿಗೆ ಪ್ರೋತ್ಸಾಹ ಸಿಗದೇ ಬೇಸರ ಮಾಡಿಕೊಳ್ಳಬೇಕಾಗಬಹುದು. ಉತ್ತಮ ಭೋಜನವನ್ನು ನೀವಿಂದು ಮಾಡುವಿರಿ. ಏಕಾಂತದಲ್ಲಿ ಸಮಯವನ್ನು ಕಳೆಯುವಿರಿ. ನಿಮ್ಮ ಕೆಲವು ಸ್ವಭಾವವನ್ನು ಸಂಗಾತಿಯು ತಿದ್ದಲು ಬಯಸಬಹುದು. ಅಕಾರಣವಾಗಿ ನಿಮ್ಮವರನ್ನು ನೀವು ತೆಗಳುವಿರಿ. ದೈವದಲ್ಲಿ ನಂಬಿಕೆ ಕಡಿಮೆಯಾದೀತು. ಮಿತ್ರರಿಗೋಸ್ಕರ ತಿರುಗಾಟ ಮಾಡಬೇಕಾದೀತು. ಉದ್ಯೋಗದಲ್ಲಿ ಅಕಸ್ಮಾತ್ ಬದಲಾವಣೆಗಳು ಆಗಬಹುದು. ನಿಮ್ಮ ವಾಹನದಿಂದ ನಿಮಗೆ ಅಲ್ಪ ಲಾಭವಾಗುವುದು. ಆಪ್ತರ ಭೇಟಿಯು ಬಹಳ ದಿನಗಳ ಅನಂತರ ಆಗಬಹುದು.

ವೃಶ್ಚಿಕ ರಾಶಿ : ಜವಾಬ್ದಾರಿಗಳು ನಿಮಗೆ ಭಾರವೆನಿಸಬಹುದು. ನಿಮ್ಮಿಂದಾಗದು ಎಂಬ ವಿಚಾರವನ್ನು ನೀವು ಹಠವಾಗಿ ತೆಗೆದುಕೊಳ್ಳುವಿರಿ. ನೀವು ಎಲ್ಲರ ವಿರೋಧದ ನಡುವೆಯೂ ನೀವು ಮಾಡಬೇಕಾದುದನ್ನು ಮಾಡುವಿರಿ. ಹೊಸ ಪ್ರೇಮಾಂಕುರವು ಹುಟ್ಟಿಕೊಳ್ಳಲಿದೆ. ಇಂದಿನ ಕೆಲಸವನ್ನು ಬಹಳ ಶ್ರಮದಿಂದ ಮಾಡುವಿರಿ. ಸಹಿಸಿಕೊಳ್ಳಲಾಗದ ನೋವನ್ನು ನೀವು ಅನುಭವಿಸುವಿರಿ. ಪ್ರೀತಿಯಿಂದ ನಿಮಗೆ ಸಂತೋಷವು ಸಿಗುವುದು. ಇದ್ದಕ್ಕಿದ್ದಂತೆ ಏನ್ನಾದರೂ ಹೊಸತನ್ನು ಮಾಡಲು ಉತ್ಸಾಹ ಬರಲಿದೆ. ಇಂದು ನಿಮ್ಮದೇ ಜಗತ್ತಿನಲ್ಲಿ ಇರುವಿರಿ. ನಿಮ್ಮ ಕಾರ್ಯವನ್ನು ಕೆಲವರು ಆಡಿಕೊಳ್ಳಬಹುದು. ಸಂಗಾತಿಯ ಮಾತುಗಳಿಂದ ಸಿಟ್ಟಾಗುವ ಸಾಧ್ಯತೆ ಇದೆ. ತಂದೆಯ ಮಾತನ್ನು ಗೌರವಿಸುವಿರಿ. ನಿಜ ಸಂಗತಿಗಳನ್ನು ಯಾರಿಗೂ ಹೇಳದೇ ಮುಚ್ಚಿಡುವಿರಿ. ಭೂ ವ್ಯವಹಾರದಲ್ಲಿ ಯಶಸ್ಸು ಸಿಗುವುದು.

ಧನು ರಾಶಿ : ನಿರುದ್ಯೋಗಿಗಳಿಗೆ ಸ್ನೇಹಿತರಿಂದ ಸಹಕಾರವು ಸಿಗುವುದು. ಇದು ನಿಮ್ಮನ್ನು ಉದ್ವೇಗಕ್ಕೆ ತಳ್ಳಬಹುದು. ಇಂದು ಸಭೆ ಸಮಾರಂಭಗಳಿಗೆ ಹೋಗುವ ಸಾಧ್ಯತೆ ಇದೆ. ಅನ್ಯರ ಮೂಲಕ ಇಂದು ಮಾಡಿಸಿದ ಎಲ್ಲ ಕೆಲಸಗಳು ಹಾಳಾಗಬಹುದು. ಸ್ತ್ರೀಯರು ನೋವನ್ನು ಅನುಭವಿಸಬೇಕಾದೀತು. ಸಹೋದ್ಯೋಗಿಗಳು ನಿಮ್ಮ ಸಹಾಯಕ್ಕೆಂದು ಬರಬಹುದು. ಅದೃಷ್ಟವು ಕೈಕೊಡುವುದು. ಆಕಸ್ಮಿಕ ಧನಲಾಭವು ಆಗುವುದು. ಹಿರಿಯರು ನಿಮಗೆ ಲಾಭದಾಯಕವಾದ ಕೆಲಸವೊಂದನ್ನು ಮಾಡುವರು. ಅಶಿಸ್ತಿನಿಂದ ಇಂದು ನೀವು ವರ್ತಿಸುವಿರಿ. ತಾಳ್ಮೆಯನ್ನು ಬೆಳೆಸಿಕೊಳ್ಳುವುದು ಉತ್ತಮ. ಯಂತ್ರೋಪಕರಣ ಅಥವಾ ವಾಹನದಿಂದ ಧನವು ನಷ್ಟವಾಗಿ ಬೇಸರವೂ ಆಗಲಿದೆ. ನಿಮಗೆ ಆಗಬೇಕಾದ ಕಾರ್ಯಕ್ಕೆ ಹಣವೂ ಓಡಾಟವೂ ಅತಿಯಾಯಿತು ಎಂದು ಅನ್ನಿಸುವುದು. ವಿದ್ಯಾಭ್ಯಾಸದ ಪ್ರಗತಿಯು ಖುಷಿಕೊಡುವುದು.

ಮಕರ ರಾಶಿ : ಕಛೇರಿಯ ವ್ಯವಹಾರವು ನಿಮಗೆ ಚಿಂತೆಯನ್ನು ಹೆಚ್ಚು ಮಾಡಬಹುದು. ಉದ್ಯಮದಲ್ಲಿ ಇರುವ ದೌರ್ಬಲ್ಯವನ್ನು ಸರಿ ಮಾಡಿಕೊಳ್ಳಿ. ಅದಕ್ಕಾಗಿ ದೇಹವನ್ನು ದೃಢವಾಗಿಸಿಕೊಳ್ಳುವ ಕುರಿತು ಪ್ರಯತ್ನಿಸುವಿರಿ. ಬೇಡದ ಕಡೆ ಹಣವನ್ನು ವ್ಯಯಿಸುವುದು ಮನೆಯವರಿಗೆ ಇಷ್ಟವಾಗದು. ಉಳಿತಾಯ ಮಾಡದೇ ಖರ್ಚು ಮಾಡಿದ್ದಕ್ಕೆ ಇಂದು ಪಶ್ಚಾತ್ತಾಪ ಪಡಬೇಕಾದೀತು. ವಿದ್ಯಾರ್ಥಿಗಳಿಂದ ಸಮ್ಮಾನ ದೊರೆಯುವುದು. ಅಧಿಕೃತವಾಗಿ ನಿಮಗೆ ಆಧಿಕಾರವು ನಿಮಗೆ ದೊರೆಯಬಹುದು. ಸಂತಾನವಿಲ್ಲ ಎಂಬ ಚಿಂತೆ ನಿಮ್ಮನ್ನು ಅಧಿಕವಾಗಿ ಕಾಡಲಿದೆ. ನೆಮ್ಮದಿಗೆಂದು ವಾಯುವಿಹಾರಕ್ಕೆ ಹೋಗಲು ಇಚ್ಛಿಸುವಿರಿ. ಧೈರ್ಯದಿಂದ ನೀವು ಕಾರ್ಯಗಳನ್ನು ಮಾಡಲು ಹಿಂಜರಿಯುವಿರಿ. ಏನನ್ನಾದರೂ ಮಾತನಾಡಿ ಸಿಕ್ಕಿಬೀಳುವಿರಿ. ತಪ್ಪನ್ನು ನೀವೇ ತಿದ್ದಿಕೊಂಡರೆ ಒಳ್ಳೆಯದು. ಕುಟುಂಬಕ್ಕೆ ನಿಮ್ಮಿಂದ ಆಗಬೇಕಾದ ಕಾರ್ಯಗಳ ಬಗ್ಗೆ ತಿಳಿದುಕೊಳ್ಳುವಿರಿ. ನಿಮ್ಮ ವಿದೇಶ ಪ್ರವಾಸವು ಕಾರಣಾಂತರಗಳಿಂದ ರದ್ದಾಗುವುದು.

ಕುಂಭ ರಾಶಿ : ಆತುರದಲ್ಲಿ ಏನನ್ನಾದರೂ ಮಾಡಿಕೊಳ್ಳುವ ಸಾಧ್ಯತೆ ಇದೆ. ನಿಮ್ಮ ಶತ್ರುಗಳು ರಾಜಿಯಾಗಲು ಇಂದು ಬರಬಹುದು. ಹಿರಿಯರ ಮಧ್ಯಸ್ಥಿಕೆಯಲ್ಲಿ ಕಾರ್ಯಗಳು ಮುನ್ನಡೆದರೆ ಒಳ್ಳೆಯದು. ದೂರದಲ್ಲಿ ಉದ್ಯೋಗ ಮಾಡುತ್ತಿರುವವರಿಗೆ ವೃತ್ತಿಯು ಸಾಕೆನಿಸಬಹುದು. ಅತಿಯಾದ ನಿರೀಕ್ಷೆಯನ್ನು ಇಟ್ಟುಕೊಳ್ಳುವ ಅವಶ್ಯಕತೆ ಇಲ್ಲ. ನೀವು ಇಂದು ಉದ್ಯಮಿಗಳ ಜೊತೆ ಮುಖಾಖಿಯಾಗಲಿದ್ದೀರಿ. ವ್ಯವಹಾರವನ್ನು ಮಾಡುವಾಗ ನೀವು ಗ್ರಾಹಕರ ಬಗ್ಗೆ ಗಮನವಿಡುವುದು ಮುಖ್ಯವಾಗಲಿದೆ. ಯಂತ್ರಗಳ ಮಾರಾಟವು ನಿಮಗೆ ಅಧಿಕಲಾಭವನ್ನು ಕೊಟ್ಟೀತು. ಮನಶ್ಚಾಂಚಲ್ಯಕ್ಕೆ ಉಪಶಮನ ಮಾಡಿಕೊಳ್ಳುವುದು ಒಳ್ಳೆಯದು. ನಿಮ್ಮ ನಿರ್ಧಾರವನ್ನು ನೀವು ಇಂದು ಸಡಿಲಮಾಡುವಿರಿ. ಒಂದೇ ಕೆಲಸದಿಂದ ಎರಡು ಫಲವನ್ನು ಪಡೆಯುವ ಸಾಧ್ಯತೆ ಇದೆ. ಬಂಧುಗಳ ವಿಚಾರಕ್ಕೆ ಆರ್ಥಿಕನಷ್ಟವಾಗುವುದು. ಸಂಗಾತಿಯ ಬಗ್ಗೆ ಪೂರ್ವಾಗ್ರಹವು ಇರುವ ಕಾರಣ ಯಾವ ಇಷ್ಟವಾಗದು. ಹೂಡಿಕೆಯಿಂದ ಇಂದು ದೂರವಿರುವಿರಿ. ಕುಟುಂಬದ ಮೇಲಿರುವ ಅಭಿಪ್ರಾಯವು ಬದಲಾಗುವುದು.

ಮೀನ ರಾಶಿ : ಗೊಂದಲದ ಕಾರಣದಿಂದ ಯಾವುದನ್ನೂ ಪೂರ್ಣವಾಗಿ ನಿರ್ಧಾರ ಮಾಡಲಾಗಸು. ನೀವು ದಿನದ ಆರಂಭದಿಂದ ಕೊನೆಯ ತನಕ ಉತ್ಸಾಹವಿರುವುದು. ಗೊತ್ತಿಲ್ಲ ವಿಚಾರಗಳನ್ನು ಅನುಭವಿಗಳಿಂದ, ಹಿರಿಯರಿಂದ ತಿಳಿದುಕೊಳ್ಳಲು ಪ್ರಯತ್ನಿಸಿ. ನಿಮ್ಮನ್ನು ನೀವು ಬುದ್ಧಿವಂತರೆಂದು ತಿಳಿದುಕೊಂಡಿದ್ದರೆ ಅದು ಸುಳ್ಳಾಗಬಹುದು. ಉದ್ಯಮವನ್ನು ವಿಸ್ತರಿಸುವ ಬಗ್ಗೆ ಸ್ಥಳ ಪರಿಶೀಲನೆ ಮಾಡುವಿರಿ. ಇನ್ನೊಬ್ಬರ ಹಿತಚಿಂತನೆಯಲ್ಲಿ ನೀವು ಭಾಗಿಯಾಗುವಿರಿ. ಕಳೆದ ಸಮಯದ ಮೆಲುಕನ್ನು ನೀವು ಹಾಕುವಿರಿ. ಇಂದು ನಿಮಗೆ ಹಿತಕರವಾದ ವಾರ್ತೆತೊಂದು ಬರಲಿದ್ದು ಮನಸ್ಸು ಉಲ್ಲಾಸದಿಂದ ಕೂಡಿರಲಿದೆ. ಕುಟುಂಬದ ಜೊತೆ ಸಂತೋಷದಿಂದ ಕಾಲಕಳೆಯುವಿರಿ. ನಿಮ್ಮಿಷ್ಟವರ ಜೊತೆ ಸಮಯವನ್ನು ಕಳೆಯುವಿರಿ. ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ ಆಗಲಿದ್ದು ಅತ್ತ ಕಡೆ ಗಮನವಿರುವುದು. ನಿಮ್ಮ ಹೊಸ ಪ್ರಯತ್ನಕ್ಕೆ ಕುಟುಂಬದ ಬೆಂಬಲವು ಸಿಗುವುದು. ಅಲ್ಪಾವಧಿಯಲ್ಲಿ ಹೆಚ್ಚು ಪಡೆಯಬೇಕು ಎನ್ನುವ ಅತಿಯಾದ ಆಸೆ ಬೇಡ. ಸಂಗಾತಿಯ ಜೊತೆ ಕಲಹವಾಗದಂತೆ ನಿಮ್ಮ ಮಾತಿರಲಿ.

-ಲೋಹಿತ ಹೆಬ್ಬಾರ್ – 8762924271 (what’s app only)