ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಏಪ್ರಿಲ್ 10ರ ಸೋಮವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ನಿಮ್ಮ ನಿಷ್ಠೆಯೇ ನಿಮ್ಮನ್ನು ಕಾಪಾಡಲಿದೆ. ಈ ಹಿಂದೆ ಶ್ರಮಪಟ್ಟು ಮಾಡಿದ ಕೆಲಸದ ಫಲಿತವನ್ನು ಕಾಣಲಿದ್ದೀರಿ. ಯಾರದಾದರೂ ದೃಷ್ಟಿ ದೋಷ ನಿಮ್ಮನ್ನು ಕಾಡಬಹುದು. ಈ ದಿನ ಕಪ್ಪು ಬಟ್ಟೆಯನ್ನು ಧರಿಸಬೇಡಿ. ಮನೆಯಿಂದ ಹೊರಡುವಾಗ ದುರ್ಗಾದೇವಿಯನ್ನು ಮನಸ್ಸಿನಲ್ಲಿ ಸ್ಮರಣೆ ಮಾಡಿದರೆ ಉತ್ತಮ. ನಿಮ್ಮ ಹೆಸರನ್ನು ಕೆಲವರು ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆ ಇದೆ. ಹಾಗೆ ಆಗದಂತೆ ಬಹಳ ಎಚ್ಚರಿಕೆಯನ್ನು ತೆಗೆದುಕೊಳ್ಳಿ. ನೇರವಾಗಿ ಹೇಳಬೇಕಾದ ವಿಚಾರಕ್ಕೆ ದಾಕ್ಷಿಣ್ಯ ಪಡಬೇಡಿ.
ನಿಮ್ಮಲ್ಲಿ ಕೆಲವರಿಗೆ ಈ ದಿನ ವಿಪರೀತ ಮರೆವಿನ ಸಮಸ್ಯೆ ಕಾಡುತ್ತದೆ. ಅದಕ್ಕೆ ಮುಖ್ಯವಾದ ಕಾರಣ ಒತ್ತಡದ ಸನ್ನಿವೇಶಗಳು ಅಥವಾ ನೀವಾಗಿಯೇ ಹಾಕಿಕೊಳ್ಳುವ ಅಸಾಧ್ಯವಾದ ಗುರಿಗಳು. ಯಾರೋ ಒಬ್ಬರ ಮೇಲಿನ ಸಿಟ್ಟಿನಿಂದ ಎಲ್ಲರಿಗೂ ಅನ್ವಯ ಆಗುವಂಥ ಕಠಿಣ ನಿಯಮಗಳನ್ನು ತರುವುದು ಸರಿಯಲ್ಲ. ನಿಶ್ಚಿತವಾದ ಗುರಿ ಇಟ್ಟುಕೊಂಡು ಮುಂದಕ್ಕೆ ಸಾಗಿ. ಊಟ- ತಿಂಡಿಯನ್ನು ಸಮಯಕ್ಕೆ ಸರಿಯಾಗಿ ಮಾಡುವುದರ ಕಡೆಗೆ ಲಕ್ಚ್ಯ ನೀಡಿ. ಈ ದಿನ ಸಾಧ್ಯವಾದಲ್ಲಿ ಹತ್ತು ನಿಮಿಷಗಳ ಕಾಲ ಧ್ಯಾನವನ್ನು ಮಾಡುವುದು ಉತ್ತಮ.
ಬಿಡುವಿಲ್ಲದಂಥ ಕೆಲಸಗಳಿಂದ ನಿಮ್ಮ ವೈಯಕ್ತಿಕ ವಿಚಾರಗಳ ಬಗ್ಗೆ ಹೆಚ್ಚಿನ ನಿಗಾ ಮಾಡುವುದಕ್ಕೆ ಸಾಧ್ಯವಾಗದೇ ಹೋಗಬಹುದು. ಆದ್ದರಿಂದ ಕೆಲವು ಸಣ್ಣ- ಪುಟ್ಟ ಬೇಸರಕ್ಕೆ ಕಾರಣ ಆಗಲಿದೆ. ಆದರೆ ಇದಕ್ಕೆ ಉಪಶಮನ ಕೂಡ ದೊರೆಯಲಿದೆ. ಸ್ವತಂತ್ರವಾಗಿ ಕೆಲಸ ಮಾಡಬೇಕು ಎಂದು ಬಯಸುವವರಿಗೆ ಕೆಲವು ಅಡತಡೆಗಳು ಎದುರಾಗಲಿದೆ. ಆದರೆ ತಾಳ್ಮೆ ಕಳೆದುಕೊಳ್ಳಬೇಡಿ, ಇದು ತಾತ್ಕಾಲಿಕವಾದ ಹಿನ್ನಡೆ ಮಾತ್ರ. ಇತರರ ಸಲಹೆಗಳನ್ನು ಪಾಲಿಸುವ ಮುನ್ನ ಅಳೆದು- ತೂಗಿ ನೋಡಿ.
ಪ್ರಯಾಣದಲ್ಲಿ ಸಮಸ್ಯೆಗಳಾಗುವಂಥ ಸಾಧ್ಯತೆಗಳಿವೆ. ನಿಮ್ಮದಲ್ಲದ ತಪ್ಪಿಗೆ ಇತರರು ನಿಮ್ಮ ಮೇಲೆ ನಿಂದೆ ಹೊರೆಸಲಿದ್ದಾರೆ. ಸಾಧ್ಯವಾದಷ್ಟು ಸಾಲವನ್ನು ಮಾಡದೇ ಇರುವುದು ಉತ್ತಮ. ಕಡಿಮೆ ಬಡ್ಡಿ ಅಥವಾ ದೀರ್ಘಾವಧಿಗೆ ಸಾಲ ಸಿಗುತ್ತದೆ ಹೀಗೆ ಏನೇ ಕಾರಣಗಳಿರಬಹುದು, ಸಾಲದ ಅಗತ್ಯ ಇಲ್ಲ ಎಂದಾದರೆ ಮಾಡದಿರುವುದು ಉತ್ತಮ. ಗಂಡು ಮಕ್ಕಳಿರುವವರು ಅವರು ಯಾರ ಜತೆಗೆ ಸ್ನೇಹ ಮಾಡುತ್ತಿದ್ದಾರೆ ಎಂಬ ಬಗ್ಗೆ ನಿಗಾ ಮಾಡುವುದು ಉತ್ತಮ.
ಹಳೇ ನೆನಪುಗಳು ವಿಪರೀತವಾಗಿ ಕಾಡಲಿದೆ. ಧೈರ್ಯದಿಂದ ಕೆಲವು ನಿರ್ಧಾರಗಳನ್ನು ಮಾಡಬೇಕಾಗುತ್ತದೆ. ಇತರರ ಸಲಹೆಯನ್ನು ಕೇಳಿಕೊಂಡು ಮಾಡಿದ ಕೆಲಸದಲ್ಲಿ ಸ್ವಲ್ಪ ಮಟ್ಟಿಗೆ ನಷ್ಟವಾಗುವಂಥ ಸಾಧ್ಯತೆ ಇದೆ. ಭವಿಷ್ಯದಲ್ಲಿ ಅನುಕೂಲ ಆಗಬಹುದು ಎಂಬ ಗುರಿಯೊಂದಿಗೆ ಸಾಲ ಮಾಡಿಯಾದರೂ ಹೂಡಿಕೆ ಮಾಡಲಿದ್ದೀರಿ. ಇತರರ ವೈಯಕ್ತಿಕ ವಿಚಾರಗಳಿಗೆ ಮೂಗು ತೂರಿಸಬೇಡಿ. ನಿಮಗಿಂತ ಚಿಕ್ಕ ವಯಸ್ಸಿನವರ ಜತೆ ಮಾತುಕತೆ ಆಡುವಾಗ ಎಚ್ಚರಿಕೆ ಅಗತ್ಯ.
ನಿಮ್ಮ ಕ್ರಿಯೇಟಿವಿಟಿಗೆ ಗೌರವ ದೊರೆಯುವ ದಿನ ಇದೆ. ಮೇಲಧಿಕಾರಿಗಳು ಅಥವಾ ಯಾವುದಾದರೂ ನಿರ್ದಿಷ್ಟ ಪ್ರಾಜೆಕ್ಟ್ ಮೇಲೆ ಕೆಲಸ ಮಾಡುತ್ತಿದ್ದಲ್ಲಿ ಅದರ ಮುಖ್ಯಸ್ಥರಿಗೆ ನಿಮ್ಮ ಶ್ರಮ ಅರ್ಥ ಆಗಲಿದೆ. ಹೊಸದಾಗಿ ಗ್ಯಾಜೆಟ್, ಮೊಬೈಲ್ ಫೋನ್ ಖರೀದಿ ಮಾಡುವಂಥ ಯೋಗ ಇದೆ. ದೂರ ಪ್ರಯಾಣಕ್ಕೆ ಸಿದ್ಧತೆ ಮಾಡಿಕೊಳ್ಳಲಿದ್ದೀರಿ. ಸ್ನೇಹಿತರು ನಿಮ್ಮ ಸಹಾಯವನ್ನು ಕೇಳಿಕೊಂಡು ಬರಲಿದ್ದಾರೆ. ಉದ್ಯೋಗಾವಕಾಶ ದೊರೆಯುವ ಅವಕಾಶ ಇದ್ದು, ಸರಿಯಾದ ನಿರ್ಧಾರ ಮಾಡಬೇಕಾಗುತ್ತದೆ.
ಎಲ್ಲರನ್ನೂ ಒಪ್ಪಿಸಿ ಅಥವಾ ಮೆಚ್ಚಿಸಿ ಕೆಲಸ ಮಾಡುವುದು ಅಸಾಧ್ಯದ ಮಾತು. ವಾಸ್ತವವನ್ನು ಒಪ್ಪಿಕೊಳ್ಳುವುದಕ್ಕೆ ಸಿದ್ಧರಾಗಿ. ದಾಕ್ಷಿಣ್ಯದ ಮಾತಿಗೆ ಸಿಲುಕಿಕೊಂಡು, ನಿಮ್ಮ ಕೈಯಿಂದ ಹಣ ಕಳೆದುಕೊಳ್ಳುವಂಥ ಸನ್ನಿವೇಶ ಸೃಷ್ಟಿಯಾಗಲಿದೆ. ಉನ್ನತ ಶಿಕ್ಷಣಕ್ಕಾಗಿ ಈಗಾಗಲೇ ಪ್ರಯತ್ನಿಸುತ್ತಿದ್ದಲ್ಲಿ ಗೊಂದಲದ ಸನ್ನಿವೇಶ ಸೃಷ್ಟಿಯಾಗುತ್ತದೆ. ಸೆಕೆಂಡ್ ಹ್ಯಾಂಡ್ ಸ್ಕೂಟರ್, ಬೈಕ್ ಖರೀದಿ ಮಾಡುವಂತೆ ಸ್ನೇಹಿತರು, ಸಂಬಂಧಿಗಳು ಸಲಹೆ ನೀಡಿದರೆ ಅಥವಾ ನಿಮಗೇ ಆ ಆಲೋಚನೆ ಇದ್ದಲ್ಲಿ ಅದನ್ನು ಮನಸ್ಸಿನಿಂದ ತೆಗೆದುಹಾಕಿ.
ಸಣ್ಣ- ಪುಟ್ಟ ವಿಚಾರಗಳಿಗೂ ಸಿಟ್ಟು ಮಾಡಿಕೊಳ್ಳಲಿದ್ದೀರಿ. ಕಾಲಿನ ಪಾದದಲ್ಲಿ ಸಮಸ್ಯೆಗಳು ಕಾಣಿಸಬಹುದು. ನೀವು ಬಳಸುವ ಪಾದರಕ್ಷೆ ಬಗ್ಗೆ ಗಮನ ನೀಡಿ ಹಾಗೂ ಬರಿಗಾಲಲ್ಲಿ ನಡೆದಾಡುವ ಸನ್ನಿವೇಶಗಳನ್ನು ಸಾಧ್ಯವಾದಷ್ಟೂ ಕಡಿಮೆ ಮಾಡಿಕೊಳ್ಳಿ. ನಿಶ್ಚಿತ ಆದಾಯವನ್ನು ತಂದುಕೊಳ್ಳುವ ಉದ್ದೇಶದಿಂದ ಪ್ರಯತ್ನಗಳನ್ನು ಮಾಡುತ್ತಿರುವವರಿಗೆ ಸರಿಯಾದ ದಾರಿ ಕಾಣಿಸಲಿದೆ. ಅಗತ್ಯ ಬಿದ್ದಲ್ಲಿ ಅನುಭವಿಗಳ ಮಾರ್ಗದರ್ಶನವನ್ನು ಪಡೆದುಕೊಳ್ಳಿ.
ಚತುರೋಪಾಯಗಳಾದ ಸಾಮ, ದಾನ, ಭೇದ, ದಂಡ ಹೀಗೆ ಯಾರಿಗೆ ಯಾವುದನ್ನು ಬಳಸಿ ಕೆಲಸ ಮಾಡಿಸಿಕೊಳ್ಳಬೇಕೋ ಅದನ್ನು ಬಳಸಿ, ಕೆಲಸ ಪೂರ್ಣಗೊಳಿಸುವ ಬಗ್ಗೆ ಆಲೋಚಿಸಿ. ವಿವಾಹಿತರಿಗೆ ಅದರ ಆಚೆಗಿನ ಸಂಬಂಧದ ಕಡೆಗೆ ಸೆಳೆತ ಮೂಡುವ ಸಾಧ್ಯತೆ ಇದೆ. ಇದರಿಂದ ಉಪದ್ರವ, ಅವಮಾನ ಎರಡೂ ಅನುಭವಿಸಬೇಕಾದೀತು, ಎಚ್ಚರ. ಕ್ರಿಯೇಟಿವ್ ಕ್ಷೇತ್ರದಲ್ಲಿ ಇರುವವರಿಗೆ ಜವಾಬ್ದಾರಿ ಹೆಚ್ಚಲಿದೆ.
ಲೇಖನ- ಎನ್.ಕೆ.ಸ್ವಾತಿ