Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜುಲೈ 10ರ ದಿನಭವಿಷ್ಯ

| Updated By: Rakesh Nayak Manchi

Updated on: Jul 10, 2023 | 1:00 AM

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜುಲೈ 10ರ ಸೋಮವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. 

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜುಲೈ 10ರ ದಿನಭವಿಷ್ಯ
ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜುಲೈ 10ರ ದಿನಭವಿಷ್ಯ
Image Credit source: istock
Follow us on

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜುಲೈ 10ರ ಸೋಮವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ಸಂಗಾತಿಯ ಜವಾಬ್ದಾರಿಗಳ ಪೈಕಿ ಕೆಲವನ್ನು ನೀವು ಹಂಚಿಕೊಳ್ಳಲಿದ್ದೀರಿ. ಸ್ವಂತ ವ್ಯಾಪಾರ- ವ್ಯವಹಾರ ನಡೆಸುತ್ತಿರುವವರಿಗೆ ಅಲ್ಪಪ್ರಗತಿ ಇದೆ. ರುಚಿಕಟ್ಟಾದ ಊಟ- ತಿಂಡಿ ಸವಿಯುವ ಯೋಗ ಇದೆ. ಅನಿರೀಕ್ಷಿತವಾಗಿ ಧನಾಗಮದ ಯೋಗ ಇದ್ದು, ಅದು ಹಾಗೇ ಖರ್ಚು ಕೂಡ ಆಗಬಹುದು. ಮೈಗ್ರೇನ್ ಸಮಸ್ಯೆ ಇರುವವರಿಗೆ ಅದು ಉಲ್ಬಣ ಆಗುವ ಸಾಧ್ಯತೆಗಳಿವೆ. ಪ್ರವಚನಕಾರರು, ಸಂಶೋಧನೆಗಳಲ್ಲಿ ತೊಡಗಿಕೊಂಡವರಿಗೆ ಉತ್ತಮ ಬೆಳವಣಿಗೆ ಇದೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ತೆರಳಬೇಕು ಎಂದಿರುವವರಿಗೆ ಅಗತ್ಯ ನೆರವು ದೊರೆಯಲಿದೆ. ಸ್ವಂತವಾಗಿ ಬ್ಯೂಟಿ ಪಾರ್ಲರ್ ನಡೆಸುತ್ತಿರುವವರಿಗೆ ಸಾಲ ಬಾಧೆ ಕಾಡಲಿದೆ. ಬ್ಯಾಂಕಿಂಗ್ ವ್ಯವಹಾರದಲ್ಲಿ ಇರುವವರಿಗೆ, ಸಂಗೀತಗಾರರಿಗೆ, ಪತ್ರಕರ್ತರಿಗೆ, ಕಲಾವಿದರಿಗೆ ಸಮಾಜದಲ್ಲಿ ಸನ್ಮಾನ ದೊರೆಯಲಿದೆ. ಹಿರಿಯ ಸಹೋದ್ಯೋಗಿಗಳಿಂದ ಅಮೂಲ್ಯವಾದ ಸಲಹೆ ದೊರೆಯಲಿದೆ. ಈ ಹಿಂದೆ ಹಣಕಾಸು ಹೂಡಿಕೆ ಮಾಡಿದ್ದಲ್ಲಿ ನಷ್ಟವು ಅನುಭವಕ್ಕೆ ಬರಲಿದೆ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ಮನೆಯ ಸದಸ್ಯರ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವ ಸೇರಿದಂತೆ ಶುಭ ಸಮಾರಂಭಗಳಿಗಾಗಿ ಮನೆಯಲ್ಲಿ ಸಂಭ್ರಮದ ವಾತಾವರಣ ಇರುತ್ತದೆ. ಕಿರುಪ್ರವಾಸಕ್ಕೆ ತೆರಳುವಂಥ ಯೋಗ ಇದೆ. ಇನ್ನು ಪ್ರೇಮಿಗಳಿಗೆ ಜತೆಯಾಗಿ ಸಮಯ ಕಳೆಯಲು ಅವಕಾಶ ದೊರೆಯುತ್ತದೆ. ಮಕ್ಕಳ ಮದುವೆಗಾಗಿ ಸೂಕ್ತ ಸಂಬಂಧಕ್ಕಾಗಿ ಹುಡುಕಾಟ ನಡೆಸುತ್ತಿದ್ದಲ್ಲಿ ಸೂಕ್ತ ವಧು ಅಥವಾ ವರ ದೊರೆಯಲಿದ್ದಾರೆ. ಸರ್ಕಾರಿ ಉದ್ಯೋಗಿಗಳಿಗೆ ವರ್ಗಾವಣೆ ಸಾಧ್ಯತೆಗಳಿವೆ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ಈ ದಿನ ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗುತ್ತದೆ. ಇಷ್ಟು ಸಮಯ ತೆಗೆದುಕೊಂಡ ನಿರ್ಧಾರವನ್ನು ಒಂದೊಂದಾಗಿ ಅಳೆದು- ತೂಗಿ ನೋಡುತ್ತೀರಿ. ವಿಮಾನದಲ್ಲಿ ಪ್ರಯಾಣ ಮಾಡಬೇಕಾದವರು ದಾಖಲೆಗಳನ್ನು ಸರಿಯಾಗಿ ಇರಿಸಿಕೊಂಡಿದ್ದೀರಾ ಎಂಬುದನ್ನು ಒಂದಕ್ಕೆ ಎರಡು ಬಾರಿ ಪರೀಕ್ಷಿಸಿಕೊಳ್ಳಿ. ಗಾರ್ಡನಿಂಗ್, ಹಾಡುಗಳನ್ನು ಕೇಳುವುದರಿಂದ ಮನಸ್ಸಿಗೆ ನೆಮ್ಮದಿ ದೊರೆಯಲಿದೆ. ಇತರರನ್ನು ಒಂದೇ ಸಲಕ್ಕೆ ನಂಬಿಬಿಡುವುದು ಅಪಾಯವನ್ನು ಮೈಮೇಲೆ ಎಳೆದುಕೊಂಡಂತೆ ಎಂಬುದು ನೆನಪಿರಲಿ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ಇತರರ ಬಗ್ಗೆ ನೀವು ತೋರಿಸುವ ಅಂತಃಕರಣ, ಮಮಕಾರ, ಪ್ರೀತಿ ಇಂಥವು ಹಲವು ಪಟ್ಟುಗಳು ಅಧಿಕವಾಗಿ ನಿಮ್ಮ ಬಳಿಗೆ ಹಿಂತಿರುಗಲಿವೆ. ಸ್ನೇಹಿತರು ಯಾವುದಾದರೂ ಉದ್ಯೋಗ, ಪ್ರಾಜೆಕ್ಟ್ ಅಥವಾ ಬೇರೇನೇ ಹೊಸ ವಿಚಾರಗಳನ್ನು ಹೇಳಿದರೂ ಆ ಬಗ್ಗೆ ಗಂಭೀರವಾಗಿ ಆಲೋಚನೆ ಮಾಡಿ. ಇನ್ನು ವಿದೇಶಕ್ಕೆ ತೆರಳಬೇಕು ಎಂದಿರುವವರಿಗೆ ಸ್ವಲ್ಪ ಮಟ್ಟಿಗೆ ನಿರಾಸೆ ಕಾಡುವಂಥ ಸಾಧ್ಯತೆ ಇದೆ. ಇತರರ ಕಾರಣಕ್ಕೆ ಕುಟುಂಬ ಸದಸ್ಯರ ಜತೆಗೆ ಜಗಳವೋ ಮಾತು ಬಿಡುವುದೋ ಇಂಥದ್ದನ್ನು ಮಾಡಬೇಡಿ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ಉದ್ಯಮದಲ್ಲಿ ಇರುವವರು, ವ್ಯಾಪಾರ- ವ್ಯವಹಾರ ನಡೆಸುತ್ತಿರುವವರು ಲಾಭ- ನಷ್ಟದ ಲೆಕ್ಕ ಹಾಕಿಕೊಳ್ಳದೆ ಉತ್ತಮ ಉದ್ದೇಶದಿಂದ ಕೆಲವು ಕೆಲಸಗಳನ್ನು ಮಾಡಲಿದ್ದೀರಿ. ಸೆಕೆಂಡ್ ಹ್ಯಾಂಡ್ ವಾಹನ ಖರೀದಿ- ಮಾರಾಟ ಮಾಡುವವರಿಗೆ ಲಾಭದ ಪ್ರಮಾಣ ಹೆಚ್ಚಾಗಲಿದೆ. ಮನೆಯಲ್ಲಿ ದೇವತಾರಾಧನೆ ಆಯೋಜಿಸುವ ಬಗ್ಗೆ ಆಲೋಚನೆ ಮಾಡುತ್ತೀರಿ. ಇದಕ್ಕಾಗಿ ಸಂಬಂಧಪಟ್ಟ ಕ್ಷೇತ್ರದಲ್ಲಿ ಹೆಸರಾದವರನ್ನು ಭೇಟಿ ಆಗಲಿದ್ದೀರಿ. ಕುಟುಂಬದಲ್ಲಿನ ಖರ್ಚಿನ ಪ್ರಮಾಣ ಹೆಚ್ಚಾಗಲಿದೆ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ಮೊದಲ ನೋಟಕ್ಕೆ ಸರಿ ಎನಿಸುವಂಥದ್ದನ್ನು ಒಪ್ಪಿಕೊಳ್ಳಿ. ಸೀದಾ ಸಾದಾ ಸಂಗತಿಗಳು ನಿಮ್ಮ ಪಾಲಿಗೆ ಅನುಕೂಲವಾಗಿ ಮಾರ್ಪಡಲಿವೆ. ಈ ಹಿಂದಿನ ಪ್ರಾಜೆಕ್ಟ್‌ಗಳು ಈಗ ನಿಮಗೆ ಹಣ ತಂದುಕೊಂಡುವ ಸಾಧ್ಯತೆಗಳಿವೆ. ಆದರೆ ಸಣ್ಣ- ಪುಟ್ಟ ವಿಚಾರಗಳನ್ನೂ ಮರೆಯದಿರಿ. ಮಡ್‌ಬಾತ್, ಸ್ಟೀಮ್‌ಬಾತ್ ಹೀಗೆ ದೇಹಕ್ಕೆ ಆರಾಮದಾಯಕ ಆಗುವಂಥದ್ದನ್ನು ಮಾಡಿಸಲು ಸಾಧ್ಯವಾದಲ್ಲಿ ಮಾಡಿಸಿಕೊಳ್ಳಿ, ಏಕೆಂದರೆ ಮುಂಬರುವ ದಿನಗಳಲ್ಲಿ ಬಹಳ ಬಿಜಿ ಆಗಿಬಿಡುತ್ತೀರಿ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ಯಾರ್ಯಾರು ಸಾಲ ಮಾಡಿಕೊಂಡು ಅಥವಾ ವಿವಿಧ ಮೂಲಗಳಿಂದ ಹಣ ಹೊಂದಿಸಿಕೊಂಡು, ಮನೆ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡಿದ್ದೀರೋ ಅಂಥವರಿಗೆ ಹಣಕಾಸಿನ ವಿಚಾರದಲ್ಲಿ ಹಿನ್ನಡೆ ಆಗಲಿದೆ. ಇನ್ನು ಕೃಷಿಕರಿಗೆ, ಡೇರಿ ವ್ಯವಹಾರ ಮಾಡುತ್ತಿರುವವರಿಗೆ ವಿಸ್ತರಣೆಗೆ ಅವಕಾಶಗಳಿವೆ. ಸ್ವ ಉದ್ಯೋಗಿಗಳಿಗೆ ಆದಾಯದ ಮೂಲದಲ್ಲಿ ಹೆಚ್ಚಳ ಆಗಲಿದ್ದು, ಮದುವೆ ಮತ್ತಿತರ ಶುಭ ಸಮಾರಂಭಗಳಿಗೆ ಓಡಾಟ ನಡೆಸಲಿದ್ದೀರಿ. ಸರ್ಕಾರಿ ಉದ್ಯೋಗಿಗಳಿಗೆ ಸಾಲ ಮಾಡಬೇಕಾದ ಅನಿವಾರ್ಯ ಸೃಷ್ಟಿ ಆಗಲಿದೆ. ಆದರೆ ದೇವತಾ ಅನುಗ್ರಹ ಇರಲಿದೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ನಿಮ್ಮದಲ್ಲದ್ದು ಅಂತ ಗೊತ್ತಾದ ಮೇಲೆ ಅದಕ್ಕೆ ಆಸೆ ಪಡಬೇಡಿ. ಯಾರಿಗೂ ಗೊತ್ತಾಗಲ್ಲ, ನಾನು ಬುದ್ಧಿವಂತಿಕೆಯಿಂದ ಎಲ್ಲವನ್ನೂ ನಿಭಾಯಿಸಬಲ್ಲೆ ಎಂಬ ಧೋರಣೆ ನಿಮ್ಮನ್ನು ಸಂಕಷ್ಟಕ್ಕೆ ದೂಡಲಿದೆ. ಯಾವುದೇ ಮುಖ್ಯ ಕೆಲಸಕ್ಕೆ ಹೊರಡುವ ಮುನ್ನ ಈ ದಿನ ದುರ್ಗಾ ದೇವಿಯ ಧ್ಯಾನ ಮಾಡಿ. ನಿಮ್ಮ ಧರ್ಮಾಚರಣೆ ಬೇರೆ ಆಗಿದ್ದಲ್ಲಿ ಬಿಳಿ ವಸ್ತ್ರವೊಂದನ್ನು ನಿಮ್ಮ ಪರ್ಸ್‌ ಅಥವಾ ವ್ಯಾನಿಟಿ ಬ್ಯಾಗ್‌ನಲ್ಲಿ ಇಟ್ಟುಕೊಳ್ಳಿ.