Horoscope: ದಿನಭವಿಷ್ಯ, ಆಕಸ್ಮಿಕವಾಗಿ ಸಿಕ್ಕ ಉದ್ಯೋಗವನ್ನು ಈ ರಾಶಿಯವರು ಸರಿಯಾಗಿ ಬಳಸಿಕೊಳ್ಳಿ

| Updated By: Rakesh Nayak Manchi

Updated on: Oct 17, 2023 | 12:30 AM

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಾಗಿದ್ದು, ಬೆಳಗ್ಗೆ ಎದ್ದು ಕೂಡಲೇ ನಿಮ್ಮ ಭವಿಷ್ಯದ ಬಗ್ಗೆ ತಿಳಿದುಕೊಳ್ಳುವ ಅಭ್ಯಾಸ ಇದೆಯೇ? ಹಾಗಿದ್ದರೆ ಇಂದಿನ (2023 ಅಕ್ಟೋಬರ್ 17) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿ ತಿಳಿದುಕೊಳ್ಳಿ.

Horoscope: ದಿನಭವಿಷ್ಯ, ಆಕಸ್ಮಿಕವಾಗಿ ಸಿಕ್ಕ ಉದ್ಯೋಗವನ್ನು ಈ ರಾಶಿಯವರು ಸರಿಯಾಗಿ ಬಳಸಿಕೊಳ್ಳಿ
ಇಂದಿನ ರಾಶಿಭವಿಷ್ಯ
Image Credit source: iStock Photo
Follow us on

ಇಂದಿನ ರಾಶಿ ಭವಿಷ್ಯ (Horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಇದರ ಜೊತೆಗೆ ಪಂಚಾಂಗ ಹೇಗಿದೆ? ಎಂಬುದನ್ನು ಒಂದಷ್ಟು ಮಂದಿ ನೋಡುತ್ತಾರೆ. ಹಾಗಾದರೆ ಇಂದಿನ (2023 ಅಕ್ಟೋಬರ್ 17) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಚಿತ್ರಾ, ಮಾಸ: ಆಶ್ವಯುಜ, ಪಕ್ಷ: ಶುಕ್ಲ, ವಾರ: ಮಂಗಳ, ತಿಥಿ: ತೃತೀಯಾ, ನಿತ್ಯನಕ್ಷತ್ರ: ಜ್ಯೇಷ್ಠಾ, ಯೋಗ: ಪ್ರೀತಿ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 25 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 10 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 03:14 ರಿಂದ 04:42ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 09:22 ರಿಂದ 10:50ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:18 ರಿಂದ 01:46ರ ವರೆಗೆ.

ಸಿಂಹ ರಾಶಿ: ಇಂದು ನಿಮಗೆ ದಾನದಲ್ಲಿ ಮನಸ್ಸಾಗುವುದು. ಉದ್ವೇಗದಲ್ಲಿ ಏನನ್ನಾದರೂ ಹೇಳುವಿರಿ. ಖುಷಿಗೆ ಅನೇಕ ಅವಕಾಶಗಳಿದ್ದರೂ ನೀವು ಅದೆಲ್ಲವನ್ನೂ ಬಿಟ್ಟು ನಕಾರಾತ್ಮಕವಾಗಿ ಯೋಚಿಸುವಿರಿ. ಹಳೆಯ ಮಿತ್ರನ ಭೇಟಿಯಾಗಿದ್ದು ಅವರ ಹೆಚ್ಚು ಸಮಯವನ್ನು ಕಳೆಯುವಿರಿ. ಹೂಡಿಕೆಯ ವಿಚಾರದ ಬಗ್ಗೆ ಚರ್ಚೆ ನಡೆಸುವಿರಿ. ಕಛೇರಿಯಲ್ಲಿ ಒತ್ತಡದ ಕಾರ್ಯವನ್ನು ಮುಗಿಸಿದರೂ ನಿಮ್ಮಲ್ಲಿ ಉತ್ಸಾಹವು ಅಧಿಕವಾಗಿರುವುದು. ಚರಾಸ್ತಿಯು ನಿಮಗೆ ಗೊತ್ತಾಗದಂತೆ ನಿಮ್ಮ ಕೈತಪ್ಪಿ ಹೋಗಲಿದೆ. ದಾಂಪತ್ಯದಲ್ಲಿ ಹೊಂದಾಣಿಕೆಯು ಕಷ್ಟವೆನಿಸುವಂತೆ ಆಗುವುದು. ಆರೋಗ್ಯಕ್ಕೆ ಸಂಬಂಧಿಸಿದಂತೆ ವೈದ್ಯರ ಸಲಹೆಯನ್ನು ಪಡೆಯಿರಿ. ಉದ್ಯಮಕ್ಕೆ ಸಂಬಂಧಿಸಿದಂತೆ ಯಾರನ್ನಾದರೂ ಭೇಟಿಯಾಗುವಿರಿ.

ಕನ್ಯಾ ರಾಶಿ: ಕುಟುಂಬದ ಸದಸ್ಯರೊಬ್ಬರನ್ನು ಕಳೆದುಕೊಳ್ಳಬೇಕಾದೀತು. ಆಪ್ತರ ನಡುವೆ ವಾಗ್ವಾದವು ನಡೆದು ವೈಮನಸ್ಯ ಉಂಟಾಗಬಹುದು. ಬೆನ್ನಿನ‌ ನೋವಿನಿಂದ ಸಂಕಟಪಡುವಿರಿ. ಸಂಗಾತಿಯು ನಿಮ್ಮ ಜೊತೆ ಸರಿಯಾಗಿ ಮಾತನಾಡದೇ ಇರಬಹುದು. ಯಾವುದೋ ಆಲೋಚನೆಯಲ್ಲಿ ನೀವು ಮುಳುಗಿ ಕಾರ್ಯವನ್ನು ಅಸ್ತವ್ಯಸ್ತ ಮಾಡಿಕೊಳ್ಳುವಿರಿ. ಸರ್ಕಾರದ ಕಾರ್ಯವು ಬಹಳ ದಿನಗಳಿಂದ ಹಾಗೆಯೇ ಉಳಿದಿದ್ದು ನಿಮಗೆ ಇದರಿಂದ ಬೇಸರವಾಗುವುದು. ನಿಮ್ಮ ಪ್ರತಿಭೆಯ ಪ್ರದರ್ಶನಕ್ಕೆ ಹಿಂಜರಿಯುವಿರಿ. ಸ್ತ್ರೀಯರು ನೂತನ ವಸ್ತುಗಳನ್ನು ಖರೀದಿಸಿ ಸಂತೋಷಪಡುವರು. ನಿಮ್ಮ ಅಕ್ಕಪಕ್ಕದವರ ಮೇಲೆ‌ ಸದಭಿಪ್ರಾಯವು ಇರದು. ನಿಮ್ಮ ವಿದ್ಯಾಭ್ಯಾಸದ ಬಗ್ಗೆ ನಿಮಗೆ ಅಹಂಕಾರವು ಬರುವುದು. ಇಂದು ನೀವು ಸಭ್ಯರಂತೆ ಕಾಣುವಿರಿ. ಕುಲದೇವರ ಆರಾಧನೆಯನ್ನು ವೈಭವದಿಂದ ಮಾಡಿರಿ.

ತುಲಾ ರಾಶಿ: ಸಾಲ ಕೊಟ್ಟವರು ನಿಮ್ಮನ್ನು ಪೀಡಿಸಬಹುದು. ಮೇಲಧಿಕಾರಿಗಳ ಜೊತೆ ದೂರ ಪ್ರಯಾಣವನ್ನು ಮಾಡಬೇಕಾಗುವುದು. ಮಕ್ಕಳ ವಿವಾಹವನ್ನು ನಿಶ್ಚಯಿಸಿ ನಿಶ್ಚಿಂತರಾಗುವಿರಿ. ಆದಾಯವನ್ನು ಹೆಚ್ಚು ಮಾಡಿಕೊಳ್ಳಲು ನಿಮಗೆ ಆಗದು. ಆಕಸ್ಮಿಕವಾಗಿ ಸಿಕ್ಕ ಉದ್ಯೋಗವನ್ನು ಸರಿಯಾಗಿ ಬಳಸಿಕೊಳ್ಳಿ. ಬಂಧುಗಳು ನಿಮ್ಮ‌ ಬಗ್ಗೆ ಸಲ್ಲದ ಅಭಿಪ್ರಾಯವನ್ನು ಹೇಳಿಯಾರು. ಯಾರ ಮೇಲೂ ಪಕ್ಷಪಾತ ಮಡುವುದು ಬೇಡ. ವ್ಯಾಪಾರದಲ್ಲಿ ಹಿನ್ನಡೆಯಾಗಲಿದ್ದು ಮಾನಸಿಕವಾಗಿ ಕುಗ್ಗುವಿರಿ. ಪುಣ್ಯಸ್ಥಳಗಳಿಗೆ ನೀವು ಹೋಗಬೇಕಾಗುವುದು. ದೂರ ಪ್ರಯಾಣವು ನಿಮ್ಮ ಆರೋಗ್ಯದ ಮೇಲೆ‌ ಪರಿಣಾಮ ಬೀರಬಹುದು. ಸಂಗಾತಿಯ ಎದುರು ಇಂದು ಮೌನವಾಗಿರುವಿರಿ. ಯಾವುದೇ ಮಾತುಗಳನ್ನಾಡಲು ಮನಸ್ಸಾಗದು. ದೇವಿಯನ್ನು ಅನನ್ಯ ಮನಸ್ಸಿನಿಂದ ಉಪಾಸನೆ ಮಾಡಿ.

ವೃಶ್ಚಿಕ ರಾಶಿ: ನೌಕರರು ನಿಮ್ಮ‌ಆಪ್ತರಾಗಿ ನಿಮ್ಮ ಕೆಲಸದಲ್ಲಿ ಭಾಗಿಯಾಗುವರು. ರಾಜಕೀಯದ ಬಲದಿಂದ ಕಾನೂನಿನ ಸಮರವು ನಿಮ್ಮ ಪರವಾಗಬಹುದು. ವಾಹನ ಚಲಾಯಿಸುವಾಗ ಜಾಗರೂಕತೆ ಮುಖ್ಯ. ಪರಪುರುಷರಿಂದ ಏನಾದರೂ ತೊಂದರೆಗಳು ಆಗಬಹುದು. ಕಾರ್ಯದಲ್ಲಿ ಗೊಂದಲವನ್ನು ಮಾಡಿಕೊಳ್ಳುವುದು ಬೇಡ. ನಿಮ್ಮ ಸಂಪತ್ತನ್ನು ಸದುಪಯೋಗ ಮಾಡಿಕೊಳ್ಳುವ ದಾರಿಯನ್ನು ಕಂಡುಕೊಳ್ಳಿ. ಮಕ್ಕಳ ಜೊತೆ ಸಂತೋಷದಿಂದ ಸಮಯವನ್ನು ಕಳೆಯುವಿರಿ. ಸಂಗಾತಿಯ ಮೇಲೆ ದ್ವೇಷದ‌ ಬುದ್ಧಿಯು ಬರಬಹುದು. ಮುಂಗೋಪವನ್ನು ಕಡಿಮೆ ಮಾಡಿಕೊಂಡರೂ ನಿಯಂತ್ರಣದಲ್ಲಿ. ಇರಲಿ. ನಿಮ್ಮ ಬಗ್ಗೆ ನೀವೇ ಹೇಳಿಕೊಳ್ಳುವುದು ಸರಿಯಾಗದು. ರಾಜರಾಜೇಶ್ವರಿಯ ಆರಾಧನೆಯಿಂದ ಶುಭವಿದೆ.

ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ