Horoscope: ರಾಶಿಭವಿಷ್ಯ, ಈ ರಾಶಿಯವರು ಇಂದು ದುರ್ಗೆಯನ್ನು ತ್ರಿಕರಣಪೂರ್ವಕ ಆರಾಧಿಸಿ, ಮನೋಭೀಷ್ಟವು ಪೂರ್ಣವಾಗುವುದು
ನೀವು ಧನು, ಮಕರ, ಕುಂಭ, ಮೀನ ರಾಶಿಯವರಾಗಿದ್ದು, ಬೆಳಗ್ಗೆ ಎದ್ದು ಕೂಡಲೇ ನಿಮ್ಮ ಭವಿಷ್ಯದ ಬಗ್ಗೆ ತಿಳಿದುಕೊಳ್ಳುವ ಅಭ್ಯಾಸ ಇದೆಯೇ? ಹಾಗಿದ್ದರೆ ಇಂದಿನ (2023 ಅಕ್ಟೋಬರ್ 17) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿ ತಿಳಿದುಕೊಳ್ಳಿ.
ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಇದರ ಜೊತೆಗೆ ಪಂಚಾಂಗ ಹೇಗಿದೆ? ಎಂಬುದನ್ನು ಒಂದಷ್ಟು ಮಂದಿ ನೋಡುತ್ತಾರೆ. ಹಾಗಾದರೆ ಇಂದಿನ (2023 ಅಕ್ಟೋಬರ್ 17) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಚಿತ್ರಾ, ಮಾಸ: ಆಶ್ವಯುಜ, ಪಕ್ಷ: ಶುಕ್ಲ, ವಾರ: ಮಂಗಳ, ತಿಥಿ: ತೃತೀಯಾ, ನಿತ್ಯನಕ್ಷತ್ರ: ಜ್ಯೇಷ್ಠಾ, ಯೋಗ: ಪ್ರೀತಿ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 25 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 10 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 03:14 ರಿಂದ 04:42ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 09:22 ರಿಂದ 10:50ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:18 ರಿಂದ 01:46ರ ವರೆಗೆ.
ಧನು ರಾಶಿ: ಉದ್ಯೋಗಕ್ಕೆ ಸಂಬಂಧಿಸಿದಂತೆ ನೀವು ಬಂಧುಗಳ ಸಹಾಯವನ್ನು ಕೇಳುವಿರಿ. ವ್ಯಾಪಾರದಲ್ಲಿ ಅನುಕೂಲತೆ ಇದ್ದರೂ ಉದರ ಪೀಡಿಯು ನಿಮ್ಮ ವ್ಯಾಪಾರದ ಉತ್ಸಾಹವನ್ನು ಕಡಿಮೆ ಮಾಡುವುದು. ನಿಮ್ಮ ಅಭಿಪ್ರಾಯವು ಸ್ಪಷ್ಟವಾಗಿ ಇರಲಿ. ಆಸ್ತಿಯನ್ನು ಸ್ವಂತಕ್ಕೆ ಮಾಡಿಕೊಳ್ಳುವ ಉಪಾಯವು ಹೊಳೆಯಬಹುದು. ಅಧ್ಯಾತ್ಮದಲ್ಲಿ ಹೆಚ್ಚು ತೊಡಗಿಕೊಳ್ಳುವಿರಿ. ಪ್ರೇಮ ವಿವಾಹವು ನಿಮಗೆ ಖಷಿಕೊಡದು. ಯಾರನ್ನಾದರೂ ಪ್ರೀತಿಸುವ ಮನಸ್ಸಾಗುವುದು. ಮನೆಯ ಜವಾಬ್ದಾರಿಯನ್ನು ಅನಿವಾರ್ಯವಾಗಿ ತೆಗೆದುಕೊಳ್ಳಬೇಕಾಗುವುದು. ನಿಮ್ಮ ವಸ್ತುಗಳು ಇಲ್ಕವಾಗಿದ್ದು ನಿಮಗೆ ಗೊತ್ತಾಗದೇಹೋಗುವುದು. ವಿವಾಹ ಸಮಾರಂಭಗಳಿಗೆ ಕುಟುಂಬದ ಜೊತೆ ಹೋಗುವಿರಿ.
ಮಕರ ರಾಶಿ: ಪಾಲುದಾರಿಕೆಯಲ್ಲಿ ನಿಮಗೆ ಸೂಕ್ತ ವ್ಯಕ್ತಿಗಳ ಕೊರತೆ ಕಾಣಿಸುವುದು. ವಿದೇಶೀಯ ವ್ಯವಹಾರದ ಮಾರ್ಗವು ನಿಮಗೆ ತೆರೆದುಕೊಳ್ಳುವುದು. ಸಹೋದ್ಯೋಗಿಗಳ ಸಹಾಕಾರವು ನೀವು ನಿರೀಕ್ಷಿಸಿದಂತೆ ಸಿಗಲಿದೆ. ನಿಮ್ಮ ಶ್ರಮದಿಂದ ಎಣಿಸಿದಷ್ಟು ಲಾಭವು ಆಗುವುದು. ಲಾಭದ ಮುಂದೆ ಆಯಾಸವು ನಗಣ್ಯವಾಗಲಿದೆ. ಪುಣ್ಯಕ್ಷೇತ್ರಗಳ ದರ್ಶನದ ಬಗ್ಗೆ ನೀವು ಹೆಚ್ಚು ಉತ್ಸುಕರಾಗಿರುವಿರಿ. ನಿಮ್ಮ ಕಡೆಯಿಂದ ಆದ ತಪ್ಪಿಗೆ ಕ್ಷಮೆಯನ್ನು ಕೇಳಿ ಸರಿ ಮಾಡಿಕೊಳ್ಳಿ. ಸರಳವಾದುದನ್ನು ಸಂಕೀರ್ಣ ಮಾಡಿಕೊಳ್ಳುವಿರಿ. ನೀವು ಕುಟುಂಬದ ಬಗ್ಗೆ ತೆಗೆದುಕೊಂಡ ತೀರ್ಮಾನವು ಇತರರಿಗೂ ಸರಿಯಾಗುವುದು. ಹೊಸ ಸಂಬಂಧದಲ್ಲಿ ನಿಮಗೆ ಆಸಕ್ತಿಯು ಹೆಚ್ಚಿರುವುದು. ನಿಮಗೆ ಬರುವ ಜವಾಬ್ದಾರಿಯನ್ನು ಅಕಾರಣವಾಗಿ ತಳ್ಳಿಹಾಕುವಿರಿ. ದುರ್ಗಾ ಮಾತೆಯನ್ನು ಅನನ್ಯವಾಗಿ ಪೂಜಿಸಿ.
ಕುಂಭ ರಾಶಿ: ಸ್ನೇಹಿತರು ಕೊಟ್ಟ ಹಣವನ್ನು ಪುನಃ ಕೇಳಿದ್ದು ನಿಮಗೆ ಅಪಮಾನವಾಗುವುದು. ಅಪಘಾತಗಳು ಸಂಭವಿಸಬಹುದು. ದ್ವಿಚಕ್ರ ವಾಹನ ಸವಾರರು ಎಚ್ಚರಿಕೆಯಿಂದ ಚಾಲಾಯಿಸಿ. ಮಕ್ಕಳ ಜೊತೆ ವಿದೇಶ ಪ್ರವಾಸಕ್ಕೆ ತೆರಳುವಿರಿ. ನಿಮ್ಮ ಮನಸ್ಸಿಗೆ ಇಷ್ಟವಾಗದ ಘಟನೆಯು ದಿನವಿಡೀ ನಿಮ್ಮನ್ನು ಕಾಡುವುದು. ಉದ್ಯೋಗದ ಬಗ್ಗೆ ಅನೇಕ ಸಲಹೆಗಳು ಬರಬಹುದು. ಎಲ್ಲವನ್ನೂ ಸಮಾಧಾನ ಚಿತ್ತದಿಂದ ಆಲಿಸಿ. ನಿಮ್ಮ ನೋವಿಗೆ ಯಾರೂ ಸ್ಪಂದಿಸದಿರುವುದು ನಿಮಗೆ ಬೇಸರವಾಗುವುದು. ಕಷ್ಟವಾದರೂ ಇಂದು ವೃತ್ತಿಯನ್ನು ಮಾಡುವಿರಿ. ಇಂದು ನಿಮ್ಮ ಸಾಮರ್ಥ್ಯದ ಮೇಲೆ ಪೂರ್ಣವಿಶ್ವಾಸವು ಇರದು. ತಂದೆ ಹಾಗೂ ತಾಯಿಗಳ ಆಶೀರ್ವಾದವೇ ನಿಮಗೆ ಬಲ. ಯಾರದೋ ಆಮಿಷಕ್ಕೆ ಕಾನೂನಿಗೆ ವಿರುದ್ಧವಾದ ಕಾರ್ಯವನ್ನು ಮಾಡುವಿರಿ. ದುರ್ಗಾರ್ತಿನಾಶಿನಿಯಾದ ದೇವಿಯನ್ನು ಭಕ್ತಿಯಿಂದ ಪ್ರಾರ್ಥಿಸಿ.
ಮೀನ ರಾಶಿ: ನಿಮ್ಮ ಒತ್ತಡಗಳು ಎಂದಿಗಿಂತ ಕಡಿಮೆ ಇರಲಿದೆ. ದುರಭ್ಯಾಸದಿಂದ ದೂರವಿರಬೇಕು ಎನ್ನಿಸಬಹುದು. ಭೂಮಿಯ ಒಳಗೆ ಸಿಗುವ ವಸ್ತುಗಳಿಂದ ಲಾಭವನ್ನು ಪಡೆಯಬಹುದು. ಮನಸ್ಸು ಅಮೂರ್ತವಾದ ಅನಂದದಲ್ಲಿ ಇರಲಿದೆ. ಉನ್ನತವಾದ ಸ್ಥಾನಕ್ಕೆ ಏರಲು ನಿಮ್ಮೆದುರು ಅವಕಾಶವು ತೆರೆದುಕೊಳ್ಳುವುದು. ಆಪ್ತರನ್ನು ಅನುಮಾನಿಸುವುದು ಬೇಡ. ನಿಮ್ಮ ಸಂಬಂಧಿಸದ ವಿಚಾರದಲ್ಲಿ ಮಧ್ಯಪ್ರವೇಶವನ್ನು ಮಾಡುವುದು ಬೇಡ. ನೂತನ ಗೃಹನಿರ್ಮಾಣವನ್ನು ಮಾಡಲು ಚಿಂತಿಸುವಿರಿ. ನಿಮಗೆ ಸಿಗಬೇಕಾದುದನ್ನು ಧೈರ್ಯದಿಂದ ಕೇಳಿ ಪಡೆದುಕೊಳ್ಳಿ. ಯಾರಾದರೂ ಸಂಗಾತಿಯ ಬಗ್ಗೆ ಕಿವಿಚುಚ್ಚಬಹುದು. ಪಿತ್ರಾರ್ಜಿತ ಆಸ್ತಿಯನ್ನು ಸಹೋದರನಿಗೆ ನೀಡಿ ಮನೆಯಿಂದ ದೂರ ಇರುವಿರಿ. ದುರ್ಗೆಯನ್ನು ತ್ರಿಕರಣಪೂರ್ವಕ ಆರಾಧಿಸಿ, ಮನೋಭೀಷ್ಟವು ಪೂರ್ಣವಾಗುವುದು.
ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ