Horoscope: ದಿನಭವಿಷ್ಯ, ಈ ರಾಶಿಯವರು ಸ್ತ್ರೀಯರ ಜೊತೆ ವ್ಯವಹಾರ ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸಿ

| Updated By: Rakesh Nayak Manchi

Updated on: Aug 18, 2023 | 12:30 AM

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಆಗಸ್ಟ್ 18) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Horoscope: ದಿನಭವಿಷ್ಯ, ಈ ರಾಶಿಯವರು ಸ್ತ್ರೀಯರ ಜೊತೆ ವ್ಯವಹಾರ ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸಿ
ಪ್ರಾತಿನಿಧಿಕ ಚಿತ್ರ
Image Credit source: iStock Photo
Follow us on

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಆಗಸ್ಟ್ 18 ಶುಕ್ರವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಮಘಾ, ಮಾಸ: ನಿಜ ಶ್ರಾವಣ, ಪಕ್ಷ: ಶುಕ್ಲ, ವಾರ: ಶುಕ್ರ, ತಿಥಿ: ದ್ವಿತೀಯಾ, ನಿತ್ಯನಕ್ಷತ್ರ: ಪೂರ್ವಾಫಲ್ಗುಣೀ, ಯೋಗ: ಶಿವ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ರಿಂದ 20 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 52 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 11:02 ರಿಂದ ಮಧ್ಯಾಹ್ನ 12:36 ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 03:44 ರಿಂದ 05:18ರ ವರೆಗೆ, ಗುಳಿಕ ಕಾಲ ಬೆಳಗ್ಗೆ 07:54 ರಿಂದ 09:28ರ ವರೆಗೆ.

ಸಿಂಹ ರಾಶಿ: ಅಧಿಕಾರದಿಂದ ನಿಮ್ಮ ವರ್ತನೆಯು ಬದಲಾಗಬಹುದು. ನೌಕರರ ಬಗ್ಗೆ ನಿಮಗೆ ಅಸಮಾಧಾನ ಇರುವುದು. ಸಂತೋಷವನ್ನು ನೀವು ಹಂಚಿಕೊಳ್ಳುವಿರಿ. ನಿಮ್ಮ ಕಾರ್ಯಸಾಧನೆಗೆ ಯಾರನ್ನಾದರೂ ಬಳಸಿಕೊಳ್ಳುವಿರಿ. ನಿಮ್ಮ ಕೆಲಸಗಳಿಗೆ ನಿಗದಿತ ಸಮಯವನ್ನು ಕೊಡುವುದು ಮುಖ್ಯವಾಗಬಹುದು. ನಿಮ್ಮವರಿಗೆ ಉಡುಗೊರೆಯನ್ನು ಕೊಡಲು ಇಚ್ಛಿಸುವಿರಿ. ಸಂಗಾತಿಯ ವರ್ತನೆಯ ಬಗ್ಗೆ ನಿಮಗೆ ಹೆಚ್ಚು ಬೇಸರವಾಗಬಹುದು. ಹಣದ ವಿಚಾರವನ್ನು ಇಂದು ಹೆಚ್ಚು ಮಾಡುವಿರಿ. ಧಾರ್ಮಿಕ ಆಚರಣೆಯಲ್ಲಿ ಸ್ವಲ್ಪ ತೊಡಗುವಿರಿ.

ಕನ್ಯಾ ರಾಶಿ: ನಿಮ್ಮ ಕಡೆಗಣಿಸುತ್ತಿರುವುದು ನಿಮಗೆ ಗೊತ್ತಾಗಿ ಬೇಸರವಾಗುವುದು. ಸ್ನೇಹಿತರಿಂದ ನೀವು ಸಹಾಯವನ್ನು ಬಯಸುವಿರಿ. ಕಛೇರಿಯ ಕೆಲಸಕ್ಕಾಗಿ ಓಡಾಟವು ಇರಲಿದೆ. ನಿಮ್ಮದಲ್ಲದ ಕೆಲಸವು ನಿಮಗೇ ಬರಬಹುದು. ಮನೋರಂಜನೆಯಲ್ಲಿ ಹೆಚ್ಚಿನ ಸಮಯವನ್ನು ಕಳೆಯುವಿರಿ. ಸಹೋದ್ಯೋಗಿಗಳ ಸಹವಾಸದಿಂದ ಕೆಟ್ಟ ಅಭ್ಯಾಸವನ್ನು ಕಲಿಯುವಿರಿ. ಓದಿನಲ್ಲಿ ಏಕಾಗ್ರತೆಯ ಕೊರತೆ ಕಾಣಲಿದೆ.‌ ತಂದೆಯ ಜೊತೆ ಕಲಹವಾಗಿ ಮನೆಯಿಂದ ದೂರವಿರುವಿರಿ. ನಿಮ್ಮ ಮಾತುಗಳು ಕೆಲವರಿಗೆ ಇಷ್ಟವಾಗದೇ ಹೋಗುವುದು.

ತುಲಾ ರಾಶಿ: ಮಾನಸಿಕವಾಗಿ ಸಬಲರಾಗುವ ಅವಶ್ಯಕತೆ ಇರಲಿದೆ‌. ಸ್ವಂತ ಉದ್ಯಮವನ್ನು ಮಾಡುತ್ತಿದ್ದರಿಗೆ ನಿರೀಕ್ಷಿತ ಲಾಭದ ಮಟ್ಟವನ್ನು ತಲುಪುವುದು ಕಷ್ಟವಾಗುವುದು. ಸ್ತ್ರೀಯರ ಜೊತೆ ನಿಮ್ಮ ವ್ಯವಹಾರವು ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸಿ. ವೃತ್ತಿಯ ಸ್ಥಳದಲ್ಲಿ ನಿಮಗೆ ಬೇಸರ ತರಿಸುವ ಸಂಗತಿಗಳು ನಡೆಯಬಹುದು. ಬೇರೆಯವರು ನಿಮ್ಮ ಪ್ರಭಾವವನ್ನು ಬೀರಲು ಹೋಗಿ ಅಪಹಾಸ್ಯಕ್ಕೆ ಒಳಗಾಗುವಿರಿ. ನಿಮಗೆ ಸಿಕ್ಕ ಸ್ಥಾನವು ಉತ್ತಮವಾಗಿದ್ದು ಅದನ್ನು ಸರಿಯಾಗಿ ಬಳಸಿಕೊಳ್ಳಿ. ಪಿತ್ರಾರ್ಜಿತ ಆಸ್ತಿಯು ನಿಮ್ಮ ಕೈ ಸೇರುವ ಸಾಧ್ಯತೆ ಇದೆ. ತಾಳ್ಮೆಯನ್ನು ಇಟ್ಟುಕೊಳ್ಳುವುದು ಅಗತ್ಯವಾಗಬಹುದು.

ವೃಶ್ಚಿಕ ರಾಶಿ: ತಂದೆಯ ವಿಚಾರದಲ್ಲಿ ನಿಮಗೆ ಅಸಮಾಧನ ಇರಲಿದ್ದು ಅವರ ಮೇಲೆ ಕೋಪಗೊಳ್ಳುವಿರಿ. ನಿಮ್ಮ ತನವನ್ನು ಬಿಟ್ಟು ನೀವು ಹೊಂದಾಣಿಕೆಯನ್ನು ಮಾಡಿಕೊಳ್ಳಲಾರಿರಿ. ಯಾರ ಸಹಾಯವನ್ನೂ ಪಡೆಯದೆ ನೀವು ನಿಮ್ಮ ಕಾರ್ಯವನ್ನು ನಿಧಾನವಾಗಿಯೇ ಮಾಡುವಿರಿ. ಶುಭ ಸಮಾರಂಭಗಳಿಗೆ ಭೇಟಿ ಮಾಡುವ ಸಂದರ್ಭವು ಬರಬಹುದು. ಸಾಮಾಜಿಕ ಚಟುವಟಿಕೆಗಳನ್ನು ಮಾಡಲು ಆಸಕ್ತಿಯು ಇರದು. ನಿರುದ್ಯೋಗಿಗಳು ಉದ್ಯೋಗದ ಅನ್ವೇಷಣೆಯನ್ನು ಮಾಡುವರು. ನಿಮ್ಮದಾದ ಕೆಲವು ವಿಚಾರಗಳನ್ನು ಅನ್ಯರ ಮೇಲೆ ಹೇರುವಿರಿ. ಅಮೂಲ್ಯ ವಸ್ತುವೊಂದು ಕಣ್ಮರೆಯಾಗಬಹುದು.

ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ