Horoscope 18 August: ದಿನಭವಿಷ್ಯ, ಬಂಧುಗಳೊಂದಿಗಿನ ಹಣಕಾಸಿನ ವ್ಯವಹಾರದಲ್ಲಿ ಪಾರದರ್ಶಕತೆ ಒಳ್ಳೆಯದು, ಆರ್ಥಿಕ ನಷ್ಟ ಅನುಭವಿಸಬೇಕಾದೀತು
ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹಾಗಾದರೆ ಇಂದಿನ (2023 ಆಗಸ್ಟ್ 18) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ರಾಶಿ ಭವಿಷ್ಯ ಪ್ರತಿಯೊಬ್ಬರ ಜೀವನದಲ್ಲಿ ವಿಭಿನ್ನವಾಗಿರುತ್ತದೆ. ಪ್ರತಿನಿತ್ಯ ಬೆಳಗ್ಗೆ ಎದ್ದ ಕೂಡಲೇ ತಮ್ಮ ರಾಶಿ ಭವಿಷ್ಯ (Daily horoscope) ನೋಡುವುದು ಕೆಲವರಿಗೆ ಅಭ್ಯಾಸ. ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಜೊತೆಗೆ ಪಂಚಾಂಗವನ್ನು ಸಹ ಓದುತ್ತಾರೆ. ಹಾಗಾದರೆ ಇಂದಿನ (2023 ಆಗಸ್ಟ್ 18) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಮಘಾ, ಮಾಸ: ನಿಜ ಶ್ರಾವಣ, ಪಕ್ಷ: ಶುಕ್ಲ, ವಾರ: ಶುಕ್ರ, ತಿಥಿ: ದ್ವಿತೀಯಾ, ನಿತ್ಯನಕ್ಷತ್ರ: ಪೂರ್ವಾಫಲ್ಗುಣೀ, ಯೋಗ: ಶಿವ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ರಿಂದ 20 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 52 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 11:02 ರಿಂದ ಮಧ್ಯಾಹ್ನ 12:36 ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 03:44 ರಿಂದ 05:18ರ ವರೆಗೆ, ಗುಳಿಕ ಕಾಲ ಬೆಳಗ್ಗೆ 07:54 ರಿಂದ 09:28ರ ವರೆಗೆ.
ಮೇಷ ರಾಶಿ: ಕಲೆಯನ್ನು ಅಭಿರುಚಿಯು ಹೆಚ್ಚು ಇರಲಿದೆ. ಹಣಕಾಸಿನ ವಿಚಾರದಲ್ಲಿ ಎಲ್ಲವೂ ಸರಿಯಿದ್ದರೂ ನೆಮ್ಮದಿಯು ಸರಿಯಾಗಿರದು. ನಿಮ್ಮ ವರ್ತನೆಯನ್ನು ಕೈ ಮಾಡಿ ತೋರಿಸಬಹುದು. ಅತಿಯಾದ ಮಾತು ಇತರರಿಗೆ ತೊಂದರೆ ಕೊಡಬಹುದು. ಹಿತಶತ್ರುಗಳ ಪೀಡೆಯು ಉತ್ಸಾಹವು ಕುಗ್ಗಿಸಬಹುದು ಅಥವಾ ಅನ್ಯ ಕೆಲಸಗಳನ್ನು ಮಾಡಲು ಅವಕಾಶಗಳನ್ನು ಕೊಡದೇ ಹೋಗಬಹುದು. ಉತ್ತಮ ಆಹಾರವನ್ನು ನೀವು ಸೇವಿಸಲಿದ್ದೀರಿ. ಬರಹಗಾರರಿಗೆ ಸ್ವಲ್ಪಮಟ್ಟಿಗೆ ಹಿನ್ನಡೆಯಾಗಬಹುದು. ಯಾವ ವಿಚಾರಗಳಿಗೂ ಅತಿಯಾದ ಚಿಂತೆಯ ಅವಶ್ಯಕತೆ ಇರದು.
ವೃಷಭ ರಾಶಿ: ಖರೀದಿಸಬೇಕಾದ ವಸ್ತಗಳು ಬಹಳ ಇರಲಿವೆ. ಭವಿಷ್ಯದ ಬಗ್ಗೆ ನಿಮಗೆ ಕೆಲವರು ಮಾರ್ಗದರ್ಶನ ಮಾಡಬಹುದು. ಒತ್ತಡವನ್ನು ನೀವಾಗಿಯೇ ತಂದುಕೊಳ್ಳಲಿದ್ದೀರಿ. ಉದ್ಯೋಗಕ್ಕೆ ಹತ್ತಾರು ಅವಕಾಶಗಳು ತೆರೆದುಕೊಳ್ಳಬಹುದು. ನಿಮ್ಮರಿಗೆ ನೀವು ಬೆಲೆಯನ್ನು ಕೊಡುವಿರಿ. ಸಾಧ್ಯವಾದಷ್ಟು ಎಲ್ಲರ ಜೊತೆ ಬೆರೆಯುವ ಮನಃಸ್ಥಿತಿಯನ್ನು ಇಟ್ಟುಕೊಳ್ಳಿ. ನಿಮ್ಮ ಮೂಗಿನ ನೇರಕ್ಕೆ ಆಗಬೇಕು ಎಲ್ಲವು ಎಂಬ ಧೋರಣೆ ಸರಿಯಾಗದು. ಸ್ವೇಚ್ಛೆಯಿಂದ ಇಂದಿನ ದಿನವನ್ನು ಕಳೆಯುವಿರಿ. ಅವಶ್ಯಕತೆ ಇರುವ ವಸ್ತುಗಳನ್ನು ಯಾರಿಂದಲೂ ಕೇಳಿ ಪಡೆಯಲಾರಿರಿ. ಮಕ್ಕಳ ಮಾತುಗಳು ನಿಮಗೆ ಹಾಸ್ಯದಂತೆ ಕಾಣಿಸುವುದು.
ಮಿಥುನ ರಾಶಿ: ನಿಮಗೆ ಅಸಾಧ್ಯ ಎಂದು ಗೊತ್ತಿದ್ದರೂ ಬೇರೆಯವರ ಒತ್ತಾಯಕ್ಕೆ ಕೆಲಸವನ್ನು ಮಾಡುವಿರಿ. ನಿಮ್ಮ ನೈಜಸ್ವಭಾವವು ನಿಮಗೆ ತಿಳಿಯಲಿದೆ. ನಿಮ್ಮ ಅಭಿಪ್ರಾಯವನ್ನು ತಿಳಿಸಲು ನಿಮಗೆ ಯಾವ ಅಡ್ಡಿಯೂ ಇರುವುದಿಲ್ಲ. ಕುಟುಂಬದ ಜೊತೆ ಸಮಯವನ್ನು ಕಳೆಯಲು ಇಚ್ಛಿಸಿದರೂ ಕೆಲಸಕ್ಕೆ ತೆರಳಬೇಕಾದ ಸ್ಥಿತಿ ಇರುವುದು. ಆದಾಯ ಮೂಲದ ಬಗ್ಗೆ ನಿಮಗೆ ಅಸಮಾಧನವು ಇರಲಿದೆ. ಯಾರದೋ ವಿಚಾರಕ್ಕೆ ನೀವು ಮಧ್ಯಪ್ರವೇಶಿಸುವ ಅಗತ್ಯವಿಲ್ಲ. ನಿದ್ರೆಯಲ್ಲಿ ದುಃಸ್ವಪ್ನಗಳು ನಿಮ್ಮ ಆಲೋಚನೆಯ ದಿಕ್ಕನ್ನು ತಪ್ಪಿಸಬಹುದು. ಸಂಗಾತಿಯ ಜೊತೆ ವಿಹಾರವನ್ನು ಮಾಡುವಿರಿ.
ಕರ್ಕ ರಾಶಿ: ನಿಮ್ಮ ಉದ್ಯೋಗವು ಗೋಡೆಯ ಮೇಲಿರುವ ದೀಪದಂತೆ ಇರುವುದು. ನಿಮ್ಮ ಸಾಮಾಜಿಕ ಕಾರ್ಯದಲ್ಲಿ ತೊಡಕುಗಳು ಬರಬಹುದು. ಆರೋಗ್ಯದ ಸಮಸ್ಯೆಯು ಗಂಭೀರವಾಗಿ ಇರಲಿದೆ. ನಿಮ್ಮ ಇಷ್ಟದವರ ಭೇಟಯಿಂದ ಖುಷಿಯು ಹೆಚ್ಚಾಗಲಿದೆ. ಕಡಿಮೆ ಖರ್ಚಿದ್ದರೂ ದೈಹಿಕ ಶ್ರಮವು ಹೆಚ್ಚಾಗುವುದು. ಸರ್ಕಾರಿ ಉದ್ಯೋಗವನ್ನು ಮಾಡುತ್ತಿದ್ದರೆ ಒತ್ತಡವು ನಿಮಗೆ ಅಧಿಕವಾಗಲಿದೆ. ಆಸ್ತಿಯನ್ನು ನಿಮ್ಮದಾಗಿಸಿಕೊಳ್ಳಲು ಹೆಚ್ಚು ಹಣವನ್ನು ಖರ್ಚುಮಾಡುವಿರಿ. ದುಸ್ಸಾಧ್ಯವಾದ ಕೆಲಸಗಳಿಗೆ ನೀವು ಪ್ರಯತ್ನಶೀಲರಾಗುವುದು ಬೇಡ.
ಸಿಂಹ ರಾಶಿ: ಅಧಿಕಾರದಿಂದ ನಿಮ್ಮ ವರ್ತನೆಯು ಬದಲಾಗಬಹುದು. ನೌಕರರ ಬಗ್ಗೆ ನಿಮಗೆ ಅಸಮಾಧಾನ ಇರುವುದು. ಸಂತೋಷವನ್ನು ನೀವು ಹಂಚಿಕೊಳ್ಳುವಿರಿ. ನಿಮ್ಮ ಕಾರ್ಯಸಾಧನೆಗೆ ಯಾರನ್ನಾದರೂ ಬಳಸಿಕೊಳ್ಳುವಿರಿ. ನಿಮ್ಮ ಕೆಲಸಗಳಿಗೆ ನಿಗದಿತ ಸಮಯವನ್ನು ಕೊಡುವುದು ಮುಖ್ಯವಾಗಬಹುದು. ನಿಮ್ಮವರಿಗೆ ಉಡುಗೊರೆಯನ್ನು ಕೊಡಲು ಇಚ್ಛಿಸುವಿರಿ. ಸಂಗಾತಿಯ ವರ್ತನೆಯ ಬಗ್ಗೆ ನಿಮಗೆ ಹೆಚ್ಚು ಬೇಸರವಾಗಬಹುದು. ಹಣದ ವಿಚಾರವನ್ನು ಇಂದು ಹೆಚ್ಚು ಮಾಡುವಿರಿ. ಧಾರ್ಮಿಕ ಆಚರಣೆಯಲ್ಲಿ ಸ್ವಲ್ಪ ತೊಡಗುವಿರಿ.
ಕನ್ಯಾ ರಾಶಿ: ನಿಮ್ಮ ಕಡೆಗಣಿಸುತ್ತಿರುವುದು ನಿಮಗೆ ಗೊತ್ತಾಗಿ ಬೇಸರವಾಗುವುದು. ಸ್ನೇಹಿತರಿಂದ ನೀವು ಸಹಾಯವನ್ನು ಬಯಸುವಿರಿ. ಕಛೇರಿಯ ಕೆಲಸಕ್ಕಾಗಿ ಓಡಾಟವು ಇರಲಿದೆ. ನಿಮ್ಮದಲ್ಲದ ಕೆಲಸವು ನಿಮಗೇ ಬರಬಹುದು. ಮನೋರಂಜನೆಯಲ್ಲಿ ಹೆಚ್ಚಿನ ಸಮಯವನ್ನು ಕಳೆಯುವಿರಿ. ಸಹೋದ್ಯೋಗಿಗಳ ಸಹವಾಸದಿಂದ ಕೆಟ್ಟ ಅಭ್ಯಾಸವನ್ನು ಕಲಿಯುವಿರಿ. ಓದಿನಲ್ಲಿ ಏಕಾಗ್ರತೆಯ ಕೊರತೆ ಕಾಣಲಿದೆ. ತಂದೆಯ ಜೊತೆ ಕಲಹವಾಗಿ ಮನೆಯಿಂದ ದೂರವಿರುವಿರಿ. ನಿಮ್ಮ ಮಾತುಗಳು ಕೆಲವರಿಗೆ ಇಷ್ಟವಾಗದೇ ಹೋಗುವುದು.
ತುಲಾ ರಾಶಿ: ಮಾನಸಿಕವಾಗಿ ಸಬಲರಾಗುವ ಅವಶ್ಯಕತೆ ಇರಲಿದೆ. ಸ್ವಂತ ಉದ್ಯಮವನ್ನು ಮಾಡುತ್ತಿದ್ದರಿಗೆ ನಿರೀಕ್ಷಿತ ಲಾಭದ ಮಟ್ಟವನ್ನು ತಲುಪುವುದು ಕಷ್ಟವಾಗುವುದು. ಸ್ತ್ರೀಯರ ಜೊತೆ ನಿಮ್ಮ ವ್ಯವಹಾರವು ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸಿ. ವೃತ್ತಿಯ ಸ್ಥಳದಲ್ಲಿ ನಿಮಗೆ ಬೇಸರ ತರಿಸುವ ಸಂಗತಿಗಳು ನಡೆಯಬಹುದು. ಬೇರೆಯವರ ನಿಮ್ಮ ಪ್ರಭಾವವನ್ನು ಬೀರಲು ಹೋಗಿ ಅಪಹಾಸ್ಯಕ್ಕೆ ಒಳಗಾಗುವಿರಿ. ನಿಮಗೆ ಸಿಕ್ಕ ಸ್ಥಾನವು ಉತ್ತಮವಾಗಿದ್ದು ಅದನ್ನು ಸರಿಯಾಗಿ ಬಳಸಿಕೊಳ್ಳಿ. ಪಿತ್ರಾರ್ಜಿತ ಆಸ್ತಿಯು ನಿಮ್ಮ ಕೈ ಸೇರುವ ಸಾಧ್ಯತೆ ಇದೆ. ತಾಳ್ಮೆಯನ್ನು ಇಟ್ಟುಕೊಳ್ಳುವುದು ಅಗತ್ಯವಾಗಬಹುದು.
ವೃಶ್ಚಿಕ ರಾಶಿ: ತಂದೆಯ ವಿಚಾರದಲ್ಲಿ ನಿಮಗೆ ಅಸಮಾಧನ ಇರಲಿದ್ದು ಅವರ ಮೇಲೆ ಕೋಪಗೊಳ್ಳುವಿರಿ. ನಿಮ್ಮ ತನವನ್ನು ಬಿಟ್ಟು ನೀವು ಹೊಂದಾಣಿಕೆಯನ್ನು ಮಾಡಿಕೊಳ್ಳಲಾರಿರಿ. ಯಾರ ಸಹಾಯವನ್ನೂ ಪಡೆಯದೆ ನೀವು ನಿಮ್ಮ ಕಾರ್ಯವನ್ನು ನಿಧಾನವಾಗಿಯೇ ಮಾಡುವಿರಿ. ಶುಭ ಸಮಾರಂಭಗಳಿಗೆ ಭೇಟಿ ಮಾಡುವ ಸಂದರ್ಭವು ಬರಬಹುದು. ಸಾಮಾಜಿಕ ಚಟುವಟಿಕೆಗಳನ್ನು ಮಾಡಲು ಆಸಕ್ತಿಯು ಇರದು. ನಿರುದ್ಯೋಗಿಗಳು ಉದ್ಯೋಗದ ಅನ್ವೇಷಣೆಯನ್ನು ಮಾಡುವರು. ನಿಮ್ಮದಾದ ಕೆಲವು ವಿಚಾರಗಳನ್ನು ಅನ್ಯರ ಮೇಲೆ ಹೇರುವಿರಿ. ಅಮೂಲ್ಯ ವಸ್ತುವೊಂದು ಕಣ್ಮರೆಯಾಗಬಹುದು.
ಧನು ರಾಶಿ: ಹಣದ ವಿಷಯದಲ್ಲಿ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ನಿಮಗೆ ಕಷ್ಟವೆನಿಸಬಹುದು. ನಿಮ್ಮವರನ್ನು ಅವಶ್ಯಕತೆಗಷ್ಟೇ ಬಳಸಿಕೊಳ್ಳುವಿರಿ. ನಿಮ್ಮ ಬಗ್ಗೆ ತಪ್ಪು ಕಲ್ಪನೆಗಳು ಮೂಡಲಿದ್ದು ಅದನ್ನು ಸರಿ ಮಾಡಿಕೊಳ್ಳಲು ಬಯಸುವಿರಿ. ಅನಗತ್ಯ ಕಾರ್ಯಗಳನ್ನು ಮಾಡಲು ಸಮಯವನ್ನು ಕೊಡುವ ಬದಲು ಸದುಪಯೋಗವಾಗುವಂತೆ ಇರಲಿ. ತುರ್ತು ಕಾರ್ಯದ ಕಾರಣಕ್ಕೆ ಪ್ರಯಾಣವನ್ನು ಮಾಡುವಿರಿ. ನೀವು ಆಡಿದ ಮಾತು ನಿಜವೇ ಆಗಿದ್ದರೂ ಕೂಡಲೇ ನಂಬುವುದು ಕಷ್ಟವಾದೀತು. ನಿಮ್ಮ ಸ್ಚಂತ ಕೆಲಸಕ್ಕಾಗಿ ಅಧಿಕಾರಿಗಳ ಮೇಲೆ ಒತ್ತಡವನ್ನು ಹೇರುವಿರಿ. ಅರೋಗ್ಯದ ವಿಚಾರದಲ್ಲಿ ನಿಮ್ಮ ನಿರ್ಲಕ್ಷ್ಯ ಬೇಡ.
ಮಕರ ರಾಶಿ: ಹೂಡಿಕೆಯನ್ನು ಮಾಡುವ ವಿಚಾರವು ನಿಮ್ಮಲ್ಲಿ ಬಲವಾಗಿ ಇರುವುದು. ಅಧಿಕ ಶ್ರಮವಿದ್ದರೂ ಫಲವು ಮಾತ್ರ ಅಲ್ಪವೇ ಸಿಗುವುದು. ದೂರ ಪ್ರಯಾಣದಿಂದ ಪ್ರಯಾಸವಾಗುವುದು. ಇಂದಿನ ನಿಮ್ಮ ಆಲೋಚನೆಗಳಿಗೆ ಹಲವರಿಂದ ಮಾನ್ಯತೆ ಪಡೆಯುವುದು. ದೃಷ್ಟಿ ದೋಷವು ಕಾಣಿಸಿಕೊಳ್ಳಬಹುದು. ಹೆಚ್ಚಿನ ಉತ್ಸಾಹದಿಂದ ಇರುವ ನಿಮಗೆ ಕೆಲವು ಜವಾಬ್ದಾರಿಗಳು ಬರಬಹುದು. ಸ್ನೇಹಸಂಬಂಧಗಳು ದೂರವಾಗಬಹುದು. ಕೃಷಿಯಲ್ಲಿ ಅಧಿಕ ಆದಾಯವನ್ನು ಪಡೆಯಬೇಕು ಎನ್ನಿಸುವುದು. ನೀರನಲ್ಲಿ ಹೆಚ್ಚು ಸಮಯವನ್ನು ಕಳೆಯುವಿರಿ.
ಕುಂಭ ರಾಶಿ: ನಿಮ್ಮ ಮನಸ್ಸು ಕಿರಿಕಿರಿಯಿಂದ ಹೊರಬರಲು ಸಮಯವನ್ನು ತೆಗೆದುಕೊಳ್ಳುವುದು. ವಿದ್ಯಾರ್ಥಿಗಳು ತಮ್ಮ ನಿಶ್ಚಿತ ಗುರಿಯನ್ನು ಮುಟ್ಟಲು ಹೆಚ್ಚು ಶ್ರಮ ಹಾಗೂ ಸಮಯವನ್ನು ಕೊಡಬೇಕಾಗುವುದು. ಪ್ರಯಾಣವು ಸುಖಕರ ಎನಿಸದರೂ ಅನಂತರ ಅದರ ನೋವು ನಿಮಗೆ ಗೊತ್ತಾಗುವುದು. ಉತ್ತಮ ಉದ್ಯೋಗದ ಅವಕಾಶವು ಬಂದರೂ ನಿಮ್ಮ ಅಜ್ಞಾನದ ಕೊರತೆಯಿಂದ ಬಿಡುವಿರಿ. ನೀವು ಇಂದು ಅಪರಿಚಿತ ವ್ಯಕ್ತಿಗಳ ನಡುವೆ ಇರುವಿರಿ. ಸಂಗಾತಿಯ ಮಾತುಗಳು ನಿಮಗೆ ಮನಸ್ಸಿಗೆ ನಾಟುವುದು. ಅಸಂಬದ್ಧ ಮಾತುಗಳನ್ನು ಕಡಿಮೆ ಮಾಡಿ. ಕೇಳಿದಷ್ಟಕ್ಕೆ ಮಾತ್ರ ನಿಮ್ಮ ಉತ್ತರವಿರಲಿ.
ಮೀನ ರಾಶಿ: ಆಕಸ್ಮಿಕವಾಗಿ ಅಲ್ಪ ಸಂಪತ್ತು ಬಂದರೂ ಅದು ನಷ್ಟವಾಗಿ ಹೋಗುವುದು. ದಾಂಪತ್ಯದಲ್ಲಿ ಒಲವು ಹೆಚ್ಚಾಗುವುದು. ತಾಳ್ಮೆಯನ್ನು ಕಳೆದುಕೊಳ್ಳುವಷ್ಟು ಕೋಪವು ಬೇಡ. ಹಲವು ಆದಾಯ ಮೂಲಗಳಲ್ಲಿ ಇಂದು ಒಂದು ಮಾತ್ರ ಉಳಿದುಕೊಳ್ಳುವುದು. ಬಂಧುಗಳ ಜೊತೆ ಹಣಕಾಸಿನ ವ್ಯವಹಾರವನ್ನು ಮಾಡಬೇಕಾಗಿ ಬಂದರೆ ಪಾರದರ್ಶಕತೆಯೇ ಮುಖ್ಯವಾಗಿ ಇಟ್ಟುಕೊಳ್ಳಿ. ಒಂದೇ ವಿಚಾರವನ್ನು ಹಲವರಿಂದ ಕೇಳಿ ಮನಸ್ಸು ಭಾರವಾಗುವುದು. ನಿಮ್ಮ ಉದ್ಯಮವನ್ನು ನಿಲ್ಲಿಸುವ ಚಿಂತನೆ ಮಾಡುವಿರಿ. ನಿಮ್ಮ ಆರ್ಥಿಕತೆಯನ್ನು ಯಾರ ಜೊತೆಯೂ ಹಂಚಿಕೊಳ್ಳುವುದು ಬೇಡ.
ಲೋಹಿತಶರ್ಮಾ – 8762924271 (what’s app only)