ರಾಶಿ ಭವಿಷ್ಯ ಪ್ರತಿಯೊಬ್ಬರ ಜೀವನದಲ್ಲಿ ವಿಭಿನ್ನವಾಗಿರುತ್ತದೆ. ಪ್ರತಿನಿತ್ಯ ಬೆಳಗ್ಗೆ ಎದ್ದ ಕೂಡಲೇ ತಮ್ಮ ರಾಶಿ ಭವಿಷ್ಯ (Daily horoscope) ನೋಡುವುದು ಕೆಲವರಿಗೆ ಅಭ್ಯಾಸ. ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಜೊತೆಗೆ ಪಂಚಾಂಗವನ್ನು ಸಹ ಓದುತ್ತಾರೆ. ಹಾಗಾದರೆ ಇಂದಿನ (2023 ಆಗಸ್ಟ್ 29) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು,
ಸಿಂಹ ಮಾಸ, ಮಹಾನಕ್ಷತ್ರ: ಮಘಾ, ಮಾಸ: ನಿಜ ಶ್ರಾವಣ, ಪಕ್ಷ: ಶುಕ್ಲ, ವಾರ: ಮಂಗಳ, ತಿಥಿ: ತ್ರಯೋದಶೀ,
ನಿತ್ಯನಕ್ಷತ್ರ: ಶ್ರವಣಾ, ಯೋಗ: ಸೌಭಾಗ್ಯ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 21 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 45 ನಿಮಿಷಕ್ಕೆ, ರಾಹುಕಾಲ ಮಧ್ಯಾಹ್ನ 03:39 ರಿಂದ 05:12ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 09:27 ರಿಂದ 11:00ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:33 ರಿಂದ 02:06ರ ವರೆಗೆ.
ಸಿಂಹ ರಾಶಿ: ಪ್ರೇಮವು ನಿಮಗೆ ಬಂಧನದಂತೆ ತೋರಬಹುದು. ಮಕ್ಕಳ ಪ್ರಗತಿಯಿಂದ ಸಂತೋಷವು ಇರಲಿದೆ. ಸಹೋದರರ ನಡುವೆ ವಿನಾಕಾರಣ ಆರಂಭವಾದ ವಾಗ್ವಾದವು ದ್ವೇಷವಾಗಿ ಪರಿಣಮಿಸಬಹುದು. ನಿಮ್ಮ ಸೋಲನ್ನು ಒಪ್ಪಿಕೊಳ್ಳಲು ನೀವು ಸಿದ್ಧರಿರುವುದಿಲ್ಲ. ನಿಮ್ಮ ಎಲ್ಲ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಮುಗಿಸಿಕೊಳ್ಳುವುದು ಕಷ್ಟವಾದೀತು. ಯಾರದೋ ಒತ್ತಾಯಕ್ಕೆ ಹೂಡಿಕೆಯನ್ನು ಮಾಡಲು ಇಚ್ಛಿಸುವಿರಿ. ಉತ್ತಮ ಭೋಜನವನ್ನು ಮಾಡುವಿರಿ. ಎಲ್ಲರನ್ನೂ ಸಮಾನವಾಗಿ ಕಾಣುವುದು ನಿಮಗೆ ಬರದು. ಉಪಕಾರಕ್ಕೆ ಪ್ರತ್ಯುಪಕಾರವನ್ನು ಮಾಡುವ ಮನೋಭಾವವು ಬರಬಹುದು.
ಕನ್ಯಾ ರಾಶಿ: ದೇಹ ಪೀಡೆಯು ಅಧಿಕವಾಗಿ ಇರಲಿದೆ. ಇದರಿಂದ ನಿಮ್ಮ ಇಂದಿನ ಕೆಲಸವೂ ವಿಳಂಬವಾಗುವುದು. ಅನಿವಾರ್ಯ ನೀವು ಪ್ರಯಾಣವನ್ನು ಮಾಡಬೇಕಾಗಿಬರಬಹುದು. ಸರ್ಕಾರದ ನಿಮ್ಮ ಕೆಲಸಗಳು ಮುಂದೆ ಹೋಗದು. ನೀವು ಕಷ್ಟವನ್ನು ಅನುಭವಿಸುತ್ತಿರುವುದು ಸುಖವಿದೆ ಎಂಬ ಕಾರಣಕ್ಕೆ. ಸಿಗಬೇಕಾದ ವಸ್ತುವನ್ನು ನೀವು ಬಹಳ ಪ್ರಯತ್ನದಿಂದ ಪಡೆದುಕೊಳ್ಳುವಿರಿ. ಸಂಸಾರದಲ್ಲಿ ನಿಮಗೆ ಆಸಕ್ತಿಯು ಕಡಿಮೆ ಆಗಬಹುದು. ಯಾರ ಜೊತೆಯೂ ನಿಮ್ಮ ಮಾತು ಸರಿಯಾಗಿ ಇರದು. ಭೂವ್ಯವಹಾರದಿಂದ ನಿಮಗೆ ಕೆಲವು ತೊಂದರೆಗಳೂ ಬರಲಿವೆ. ನಿಮ್ಮನ್ನು ಯಾರೂ ಸೇರಿಸಿಕೊಳ್ಳದಿರುವುದರಿಂದ ಬಹಳ ದುಃಖಿಸುವಿರಿ.
ತುಲಾ ರಾಶಿ: ಇಂದು ನೀವು ಅಂದುಕೊಂಡ ವಿಚಾರದಲ್ಲಿ ಜಯವು ಸಿಗಲಿದೆ. ಕೆಟ್ಟವರ ಸಹವಾಸದಿಂದ ನಿಮಗೆ ಅಪಕೀರ್ತಿಯು ಬರುವುದು. ಕೆಲವು ವಿಚಾರಗಳಿಗೆ ನೀವು ಪ್ರತಿಕ್ರಿಯೆಯನ್ನು ನೀಡಬೇಕಿಲ್ಲ. ನಿಮ್ಮ ಕೆಲಸಗಳನ್ನು ನೀವು ಮುಂದುರಿಸುವಿರಿ. ಇಷ್ಟಪಟ್ಟವರು ಸಿಗದೇಹೋಗಬಹುದು. ಅವಕಾಶಗಳನ್ನು ಬಿಟ್ಟರೂ ನೀವು ಬೇಸರವನ್ನು ವ್ಯಕ್ತಪಡಿಸುವುದಿಲ್ಕ. ಕೋಪವನ್ನು ಕಡಿಮೆ ಮಾಡಿಕೊಂಡರೂ ತಾಳ್ಮೆ ಹೆಚ್ಚು ಮಾಡಿಕೊಳ್ಳಬೇಕಾಗುವುದು. ನಿಮ್ಮ ಮನಸ್ಸಿಗೆ ಬಾರದೇ ಯಾರಿಗೂ ಏನನ್ನೂ ಕೊಡುವುದಿಲ್ಲ. ಬಂಧುಗಳ ವಿಚಾರದಲ್ಲಿ ನಿಮಗೆ ಅಸಮಾಧನವು ಇರಲಿದ್ದು ಅದನ್ನು ಬೇರೆಯವರ ಬಳಿ ಹೇಳಿಕೊಳ್ಳುವಿರಿ. ಸೌಂದರ್ಯಕ್ಕೆ ಸಂಬಂಧಿಸಿದ ಉದ್ಯಮಕ್ಕೆ ಹೆಚ್ಚು ಲಾಭವಿರಲಿದೆ.
ವೃಶ್ಚಿಕ ರಾಶಿ: ಮನೆಯಲ್ಲಿಯೇ ಇದ್ದು ಬೇಸರ ಬಂದ ಕಾರಣ ಎಲ್ಲಿಗಾದರೂ ವಿಹಾರಕ್ಕೆ ಹೋಗುವಿರಿ. ಅಧಿಕಾರಿಗಳಿಂದ ನಿಮ್ಮ ಉದ್ಯಮದ ಪರಿಶೀಲನೆ ನಡೆಯುವುದು. ನಿಮಗೆ ಬೇಡ ಎನಿಸಿದ ವಿಚಾರವೇ ಮತ್ತೆ ಮತ್ತೆ ಕೇಳಿಬರುವುದು. ಮನೆಯಲ್ಲಿ ಜಗಳವಾಡಿ ನೀವು ದೂರವಿರಬೇಕಾಗುವುದು. ನೀವು ನಿರೀಕ್ಷಿಸಿದ ಸ್ಥಳದಲ್ಲಿ ಉದ್ಯೋಗವು ಸಿಗದೇ ಬೇಸರವಾಗುವುದು. ಮಕ್ಕಳ ವಿಚಾರದಲ್ಲಿ ನೀವು ಉತ್ತರಿಸಬೇಕಾಗಬಹುದು. ನಿಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲು ಸಾಧ್ಯವಾಗದು. ಕೊಟ್ಟ ಹಣವನ್ನು ವಾಪಾಸು ಪಡೆಯಲು ನೀವು ಬಹಳ ಪ್ರಯತ್ನಿಸುವಿರಿ. ಪುಣ್ಯಸ್ಥಳಗಳಿಗೆ ಹೋಗುವಿರಿ. ಆದಾಯಕ್ಕೆ ಸಮನಾದ ಖರ್ಚು ಇರಲಿದೆ.