ರಾಶಿ ಭವಿಷ್ಯ ಪ್ರತಿಯೊಬ್ಬರ ಜೀವನದಲ್ಲಿ ವಿಭಿನ್ನವಾಗಿರುತ್ತದೆ. ಕೆಲವರು ಬೆಳಗ್ಗೆ ಎದ್ದ ಕೂಡಲೇ ರಾಶಿ ಭವಿಷ್ಯ (Daily horoscope) ತಪ್ಪದೇ ನೋಡುತ್ತಾರೆ. ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯದಿಂದ ತಿಳಿದುಕೊಳ್ಳುತ್ತಾರೆ. ಅದರ ಜೊತೆಗೆ ನಿತ್ಯಪಂಚಾಂಗ ಕೂಡ ಓದುತ್ತಾರೆ. ಹಾಗಾದರೆ ಇಂದಿನ (2023 ಜುಲೈ 6) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ?, ಯಾರಿಗೆ ಲಾಭ?, ಯಾರಿಗೆ ನಷ್ಟ?, ಯಾರಿಗೆ ಶುಭ, ಅಶುಭ? ಇಲ್ಲಿ ನೋಡಿ ನಿಮ್ಮ ಭವಿಷ್ಯ.
ನಿತ್ಯಭವಿಷ್ಯ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಮಿಥುನ ಮಾಸ, ಮಹಾನಕ್ಷತ್ರ: ಆರ್ದ್ರಾ, ಮಾಸ: ಆಷಾಢ, ಪಕ್ಷ: ಕೃಷ್ಣ, ವಾರ: ಗುರು, ತಿಥಿ: ತೃತೀಯಾ, ನಿತ್ಯನಕ್ಷತ್ರ: ಧನಿಷ್ಠಾ, ಯೋಗ: ವಿಷ್ಕಂಭ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 09 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 04 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 02:14 ರಿಂದ 03:51ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 06:10 ರಿಂದ 07:47ರ ವರೆಗೆ, ಗುಳಿಕ ಕಾಲ ಬೆಳಗ್ಗೆ 09:23 ರಿಂದ 11:00ರ ವರೆಗೆ.
ತುಲಾ: ನಿಮ್ಮ ಮಾತುಗಳನ್ನು ಸ್ಪಷ್ಟವಾಗಿ ತಿಳಿಸಿ. ಗೋಡೆಯ ಮೇಲಿನ ದೀಪದಂತೆ ಆಗುವುದು ಬೇಡ. ತಪ್ಪುಗಳನ್ನು ತಿದ್ದಿಕೊಳ್ಳಲು ಅವಕಾಶ ಕೊಡುವುದು ಉತ್ತಮ. ಭೂಮಿಯ ವ್ಯವಹಾರವು ಅಲ್ಪ ಅಭಿವೃದ್ಧಿಯನ್ನು ಕಾಣಲಿದೆ. ಆರ್ಥಿಕ ಒತ್ತಡವು ಮನೆಯಲ್ಲಿ ಅಶಾಂತಿಯನ್ನು ಎಬ್ಬಿಸಬಹುದು. ನಿಮ್ಮ ಮನಸ್ಸಿನ ನಿಯಂತ್ರಣವು ನಿಮ್ಮ ಕೈಯಲ್ಲಿರಲಿ. ತಂತ್ರಜ್ಞರು ವಿದೇಶ ಪ್ರವಾಸವನ್ನು ಮಾಡಿ ಬರಲಿರುವರು. ನಿಮ್ಮವರನ್ನು ಬೀಳ್ಕೊಡಲು ನಿಮಗೆ ಕಷ್ಟವಾದೀತು. ನಿಮ್ಮ ಸ್ವಭಾವವನ್ನು ಸ್ವಲ್ಪ ಬದಲಾವಣೆ ಮಾಡಿಕೊಳ್ಳುವುದು ಉತ್ತಮ.
ವೃಶ್ಚಿಕ: ಅಂದುಕೊಂಡ ಸಮಯಕ್ಕೆ ಕೆಲಸಗಳು ಆಗದು ಎಂದು ಬೇಸರವಾಗಲಿದೆ. ಅದೃಷ್ಟವನ್ನು ನಂಬಿ ಕಾರ್ಯದಲ್ಲಿ ಪ್ರವೃತ್ತರಾಗಿ. ಗೊತ್ತಿಲ್ಲದ ವಿಚಾರವನ್ನು ಪ್ರಸಾರ ಮಾಡುವುದು ಬೇಡ. ಅನೇಕ ದಿನಗಳಿಂದ ಉದ್ಯೋಗ ನಿರ್ವಹಣೆಯು ಬೇಸರ ತರಿಸಿದ್ದು ಹೊರ ಕಡೆ ಸುತ್ತಾಡುವ, ವಿರಾಮ ಪಡೆಯುವ ಮನಸ್ಸಾಗಲಿದೆ. ಇಂದು ನಿಮ್ಮ ಕೆಲಸವು ಅಡೆತಡೆಗಳಿಲ್ಲದೆ ಮುಂದೆ ಸಾಗುತ್ತದೆ. ಮನೆಯಲ್ಲಿ ನೀವು ಸಂಭ್ರಮವನ್ನು ಆಚರಿಸುವಿರಿ. ಕಾಲಕ್ಕೆ ಬೇಕಾದ ಮಾರ್ಗದರ್ಶನದ ಅಗತ್ಯವಿರಲಿದೆ. ಆಗಿಹೋದುದಕ್ಕೆ ಕಾರಣವನ್ನು ಹುಡುಕುತ್ತ ಕುಳಿತುಕೊಳ್ಳಬೇಡಿ. ಮುಂದಿನದ್ದರ ಬಗ್ಗೆ ಆಲೋಚನೆ ಇರಲಿ.
ಧನಸ್ಸು: ಸ್ಥಿರಾಸ್ತಿಯನ್ನು ಕೊಡುವ ಆಲೋಚನೆಯನ್ನು ಮಾಡುವಿರಿ. ಮನೆಯ ಕೆಲಸದಿಂದ ನಿಮಗೆ ಅಧಿಕ ಶ್ರಮವಾಗಲಿದೆ. ಮನೆಯಲ್ಲಿ ಇಂದು ಬಹಳ ಸಂತೋಷದಿಂದ ಇರುವಿರಿ. ಬಹಳ ಹಿಂದಿನ ಆಸೆಯನ್ನು ಸಂಗಾತಿಯು ಪೂರೈಸುವನು. ಇಂದು ನಿಮ್ಮ ಅನಗತ್ಯ ಮಾತುಗಳಿಂದ ವಿವಾದವು ಹುಟ್ಟಬಹುದು. ನಿಮ್ಮದಲ್ಲದ ವಸ್ತುವಿನ ಬಗ್ಗೆ ನಿಮಗೆ ಚಿಂತೆ ಬೇಡ. ಸಾಲದ ಮರುಪಾವತಿಗೆ ಸಮಯವನ್ನು ಕೇಳುವಿರಿ. ವಿದ್ಯಾರ್ಥಿಗಳು ಅಧ್ಯಯನಕ್ಜೆ ಆಯ್ಕೆ ಮಾಡೊಕೊಂಡ ವಿಷಯದಲ್ಲಿ ಪಾಂಡಿತ್ಯವನ್ನು ಪಡೆಯುವ ಸಾಧ್ಯತೆ ಇದೆ.
ಮಕರ: ಸಂತೋಷದಲ್ಲಿ ಮೈಮರೆತು ತುರ್ತು ಕೆಲಸವನ್ನು ಹಾಗೆಯೇ ಇಟ್ಟುಕೊಳ್ಳುವಿರಿ. ಅಸಹಜ ವರ್ತನೆಯು ಮನೆಯಲ್ಲಿ ಸಂದೇಹಕ್ಕೆ ಕಾರಣವಾಗುವುದು. ಹಿರಿಯರನ್ನು ಅನಾದರದಿಂದ ನೋಡಬೇಡಿ. ನಿಮ್ಮ ಅಸಮಾಧಾನವನ್ನು ಆಪ್ತರ ಬಳಿ ಹೇಳಿಕೊಳ್ಳಿ. ಉದ್ಯೋಗದಲ್ಲಿ ಎದುರಾದ ಸನ್ನಿವೇಶಗಳನ್ನು ಶಾಂತ ಮಾಡುವಿರಿ. ಇಂದು ಸಿಟ್ಟಗೊಂಡರೂ ಬೇಗ ಉಪಶಮನವಾಗಿ ಸಹಜ ಸ್ಥಿತಿಗೆ ಬರುವಿರಿ. ಸ್ವಂತ್ರವಾಗಿ ಜೀವನವನ್ನು ಸಾಗಿಸುವ ನಿರ್ಧಾರವನ್ನು ಮಾಡುವಿರಿ. ಕೇಳದೇ ಇರುವವರಿಗೆ ಏನನ್ನೂ ಕೊಡಬೇಡಿ. ನಿಮ್ಮ ಸುಪ್ತಮತಿಯನ್ನು ಪ್ರಕಟಿಸಿ.
ಕುಂಭ: ವಸ್ತುಗಳ ಮಾರಾಟದ ನಿಮಿತ್ತ ನೀವು ಪರ ಊರಿಗೆ ಹೋಗಲಿದ್ದೀರಿ. ನಿಮಗೆ ವಿವಾಹವಾಗಿಲ್ಲ ಎಂಬ ಕೊರಗು ಕಾಡುವುದು. ವಿವಾಹವಾಗಲು ಯಾರನ್ನಾದರೂ ನೀವೇ ಕೇಳುವ ಸ್ಥಿತಿ ಬರಲಿದೆ. ನಿಮ್ಮ ಸ್ವಭಾವಕ್ಕೆ ಹಿಂದಿಕೊಳ್ಳುವವರು ಸಿಗುವುದು ಕಷ್ಟವಾದೀತು. ಇಂದು ಮಾಡುವ ಪ್ರಯಾಣದಲ್ಲಿ ಅಪರಿಚಿತರ ಸಖ್ಯವಾಗಲಿದೆ. ನಿಮ್ಮ ಎಲ್ಲ ವಿವರಗಳನ್ನು ಇನ್ನೊಬ್ಬರ ಜೊತೆ ಹಂಚಿಕೊಳ್ಳುವುದು ಬೇಡ. ಯಥೇಷ್ಟ ಭೋಜನವು ಆರೋಗ್ಯದ ಮೇಲೆ ಪರಿಣಾಮವನ್ನು ಬೀರಲಿದೆ. ಇನ್ನೊಬ್ಬರ ಬಗ್ಗೆ ಅಸೂಯೆ ಉಂಟಾಗಬಹುದು.
ಮೀನ: ಉಪಕಾರ ಮಾಡಲು ಹೋಗಿ ಆಪತ್ತಿನಲ್ಲಿ ಸಿಲುಕಿಕೊಳ್ಳುವ ಸಾಧ್ಯತೆ ಇದೆ. ಸ್ನೇಹಿತರ ಜೊತೆ ನಿಮ್ಮ ನೋವನ್ನು ಹಂಚಿಕೊಳ್ಳುವಿರಿ. ತಂದೆಯ ಜೊತೆ ಸಮಾರಂಭಗಳಿಗೆ ಹೋಗುವಿರಿ. ಸ್ಥೂಲವಾದ ಲೆಕ್ಕಾಚಾರವನ್ನು ಇಟ್ಟುಕೊಂಡು ಮುಂದುವರಿಯಿರಿ. ವಾಹನ ರಿಪೇರಿಯ ಕೆಲಸದಲ್ಲಿ ಇಂದಿನ ಸಮಯವು ವ್ಯರ್ಥವಾಗಬಹುದು. ಮಕ್ಕಳು ನಿಮ್ಮ ಬಳಿ ನಾನಾ ಪ್ರಶ್ನೆಗಳನ್ನು ಕೇಳುವರು. ನಿಮ್ಮ ನಿಲುವನ್ನು ಸಮರ್ಥಿಸಿಕೊಳ್ಳುವಿರಿ. ಸ್ತ್ರೀಯರ ಮೇಲೆ ನಿಮಗೆ ಕರುಣೆ ಬರಬಹುದು. ಕೆಟ್ಟ ಗಳಿಗೆಯೊಂದು ಇಂದು ಹಾದುಹೋಗಿ ಸಣ್ಣ ಅವಘಡವನ್ನು ಮಾಡುವುದು.
Published On - 12:20 am, Thu, 6 July 23