ರಾಶಿ ಭವಿಷ್ಯ ಪ್ರತಿಯೊಬ್ಬರ ಜೀವನದಲ್ಲಿ ವಿಭಿನ್ನವಾಗಿರುತ್ತದೆ. ಕೆಲವರು ಬೆಳಗ್ಗೆ ಎದ್ದ ಕೂಡಲೇ ರಾಶಿ ಭವಿಷ್ಯ (Daily horoscope) ತಪ್ಪದೇ ನೋಡುತ್ತಾರೆ. ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯದಿಂದ ತಿಳಿದುಕೊಳ್ಳುತ್ತಾರೆ. ಅದರ ಜೊತೆಗೆ ನಿತ್ಯಪಂಚಾಂಗ ಕೂಡ ಓದುತ್ತಾರೆ. ಹಾಗಾದರೆ ಇಂದಿನ (2023 ಜುಲೈ 18) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ?, ಯಾರಿಗೆ ಲಾಭ?, ಯಾರಿಗೆ ನಷ್ಟ?, ಯಾರಿಗೆ ಶುಭ, ಅಶುಭ? ಇಲ್ಲಿ ನೋಡಿ ನಿಮ್ಮ ಭವಿಷ್ಯ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕರ್ಕಾಟಕ ಮಾಸ, ಮಹಾನಕ್ಷತ್ರ: ಪುನರ್ವಸು, ಮಾಸ: ಅಧಿಕ ಶ್ರಾವಣ, ಪಕ್ಷ: ಶುಕ್ಲ, ವಾರ: ಮಂಗಳ, ತಿಥಿ: ಪ್ರತಿಪತ್, ನಿತ್ಯನಕ್ಷತ್ರ: ಪುಷ್ಯ, ಯೋಗ: ವ್ಯಾಘಾತ, ಕರಣ: ಕಿಂಸ್ತುಘ್ನ, ಸೂರ್ಯೋದಯ ಬೆಳಗ್ಗೆ 06 ಗಂಟೆ 13 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 03 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 03:51 ರಿಂದ 05:27ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 09:26 ರಿಂದ 11:02ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:39 ರಿಂದ 02:15ರ ವರೆಗೆ.
ತುಲಾ: ಯಾರು ಏನೇ ಅಂದರೂ ನಿಮ್ಮ ತೀರ್ಮಾನವನ್ನು ಬದಲಿಸಿಕೊಳ್ಳಲಾರಿರಿ. ಸಾಮರಸ್ಯವನ್ನು ತಂದುಕೊಳ್ಳಲು ದಂಪತಿಗಳು ಶ್ರಮಿಸುವರು. ನಿಮಗೆ ಹಳೆಯ ಘಟನೆಗಳು ನೆನಪಾಗಿ ದುಃಖಿಸುವಿರಿ. ನೀವು ತಪ್ಪುಗಳನ್ನು ಒಪ್ಪಿಕೊಳ್ಳದೇ ಅಹಂಕಾರವನ್ನು ತೋರುವಿರಿ. ನಿಮ್ಮ ಬಗ್ಗೆ ಕಲಿಕಾರಭಾವವು ಇರಲಿದೆ. ನಿಮ್ಮಅಸಾಮಾನ್ಯ ಚಿಂತನೆಯಿಂದ ನೀವು ದೊಡ್ಡವರಾಗಬಹುದು. ಹೊಸ ಉದ್ಯೋಗವನ್ನು ಆರಂಭಿಸುವ ಬಗ್ಗೆ ನಿಮ್ಮೊಳಗೆ ಚಿಂತನೆಗಳು ನಡೆಯಬಹುದು. ನಿಮ್ಮ ಮಾತುಗಳು ನೇರವೂ ಕಠೋರವೂ ಅಗಿರಲಿದ್ದು, ನಿಮ್ಮ ಇಷ್ಟಪಡದವರ ಗುಂಪೊಂದು ತಯಾರಾಗಲಿದೆ.
ವೃಶ್ಚಿಕ: ಭಾವನಾತ್ಮಕ ವಿಚಾರಗಳಿಗೆ ಸ್ಪಂದಿಸಲು ಕಷ್ಟವಾದೀತು. ನಿಮ್ಮವರ ಮಾತುಗಳು ಬೇಸರವನ್ನು ತರಿಸಬಹುದು. ಸಾಲಗಾರರ ಕಿರಿಕಿರಿ ಅತಿಯಾಗಲಿದೆ. ಜನಜಾಗರಣ ಕಾರ್ಯದಲ್ಲಿ ಇಂದು ತೊಡಗಿಕೊಳ್ಳುವಿರಿ. ವಿದೇಶಕ್ಕೆ ಬರಲು ಆಹ್ವಾನವೂ ಬರಲಿದೆ. ಆತುರದ ಪ್ರಯಾಣವು ಬೇಡ. ಇಚ್ಛೆ ಇಲ್ಲದಿದ್ದರೂ ಸ್ನೇಹಿತರ ಮನೆಗೆ ಹೊಗಬೇಕಾದೀತು. ಆದಾಯದ ಬಗ್ಗೆ ಗಮನಹರಿಸಿ ಆರೋಗ್ಯವನ್ನು ಕಡೆಗಣಿಸುವಿರಿ. ಪುತ್ರೋತ್ಸವದ ಸುದ್ದಿಯಿಂದ ಖುಷಿ ಇರಲಿದೆ. ನಿಮ್ಮವರ ಮಾತಿನಲ್ಲಿ ಸತ್ತ್ವವಿಲ್ಲ ಎನಿಸಬಹುದು. ಉದ್ಯೋಗವನ್ನು ಹುಡುಕುವಲ್ಲಿ ಮಗ್ನರಾಗುವಿರಿ.
ಧನುಸ್ಸು: ವೃತ್ತಿಯಲ್ಲಿ ಯಾವುದೇ ತೊಂದರೆಗಳಿಲ್ಲದೇ ಎಲ್ಲವೂ ಮುಗಿಯಬಹುದು. ಸ್ತ್ರೀಯರಿಗೆ ಸಂಬಂಧಿಸಿದ ಖಾಯಿಲೆಯು ಹೆಚ್ಚಾಗಬಹುದು. ಬೇರೆ ಊರಿಗೆ ಹೋಗಿ ಸಂಕಟಪಡುವಿರಿ. ದಾಂಪತ್ಯದಲ್ಲಿ ಹೊಂದಾಣಿಯನ್ನು ತರಲು ಬಹಳ ಶ್ರಮವನ್ನು ವಹಿಸಬೇಕಾದೀತು. ಅಪರಿಚಿತ ವ್ಯಕ್ತಿಯಿಂದ ನೀವು ಹೆದರಿ ಸಂಪತ್ತನ್ನು ಕಳೆದುಕೊಳ್ಳಲಿದ್ದೀರಿ. ನಿಮಗೆ ಪ್ರೀತಿ ಪಾತ್ರರಿಂದ ಉಡುಗೊರೆ ಸಿಗಲಿದೆ. ವಿದ್ಯಾಭ್ಯಾಸವು ಯೋಗ್ಯರೀತಿಯಲ್ಲಿ ನಡೆಯಲಿದೆ. ಸ್ಥಳಾಂತರದ ಭೀತಿ ನಿಮ್ಮನ್ನು ಕಾಡಬಹುದು. ನಿಮ್ಮವರನ್ನು ನೀವು ಕಳೆದುಕೊಳ್ಳುವ ಭೀತಿಯಲ್ಲಿ ಇರುವಿರಿ. ಮಕ್ಕಳ ಜೊತೆ ಕಾಲವನ್ನು ಕಳೆಯುವಿರಿ.
ಮಕರ: ಮಾನಸಿಕ ನೋವಿನಿಂದ ಬಳಲುವಿರಿ. ಹೊಸತನ್ನು ಅಭ್ಯಾಸ ಮಾಡಬೇಕು ಎನ್ನುವ ಹಂಬಲವು ನಿಲ್ಲುವುದು. ನಟನೆಗೆ ಆಸಕ್ತಿಯು ಬರಲಿದೆ. ಸಾಮಾಜಿಕ ಕಾರ್ಯದಲ್ಲಿ ಮೆಚ್ಚುಗೆ ಸಿಗಲಿದೆ. ಕುಲದೇವರ ದರ್ಶನವನ್ನು ಮಾಡುವಿರಿ. ಆಕರ್ಷಕ ವಸ್ತುಗಳನ್ನು ಖರೀದಿಸಲಿದ್ದೀರಿ. ಅಧಿಕಾರ ವಿಶ್ವಾಸವನ್ನು ಗಳಿಸಿ ಹೆಚ್ಚಿನ ಜವಾಬ್ದಾರಿಯನ್ನು ಪಡೆಯುವಿರಿ. ಕೆಲಸದಲ್ಲಿ ನಿಮಗೆ ಗೊಂದಲವಿರಲಿದೆ. ರಾಜಕಾರಿಣಿಗಳ ಭೇಟಿಯಾಗಲಿದೆ. ನಿಮ್ಮ ಸಾಮರ್ಥ್ಯವನ್ನು ಪ್ರದರ್ಶಿಸುವಿರಿ. ಪ್ರವಾಸದಿಂದ ನಿಮಗೆ ತೊಂದರೆಯಾಗಲಿದೆ.
ಕುಂಭ: ಉದ್ಯೋಗವನ್ನು ಬದಲಿಸಲು ಇಚ್ಛೆ ಇಲ್ಲದಿದ್ದರೂ ನಿಮಗೆ ಅನಿವಾರ್ಯ ಆದೀತು. ಬಿದ್ದು ಪೆಟ್ಟು ಮಾಡಿಕೊಳ್ಳುವ ಸಾಧ್ಯತೆ ಇದೆ. ಬಂಧುಗಳು ನಿಮಗೆ ಸಹಕಾರವನ್ನು ಕೊಡದೇ ಹೋಗಬಹುದು. ಮಾನಸಿಕ ನೋವನ್ನು ಮರೆಯಲು ಎಲ್ಲಿಗಾದರೂ ದೂರ ಹೋಗಲಿದ್ದೀರಿ. ಅಧ್ಯಾತ್ಮಕ್ಕೆ ಸಮಯ ಕೊಡುವುದು ಕಷ್ಟವಾದೀತು. ತೀರ್ಥಕ್ಷೇತ್ರಗಳ ದರ್ಶನವನ್ನು ನೀವು ಪಡೆಯುವಿರಿ. ಅನಾರೋಗ್ಯದಿಂದ ಕೆಲಸಗಳಿಗೆ ತೊಂದರೆಯಾಗಲಿದೆ. ಇನ್ನೊಬ್ಬರ ಮಾತಿನ್ನು ಕೇಳಿ ಯಾವ ತೀರ್ಮಾನವನ್ನು ತೆಗೆದುಕೊಳ್ಳುವುದು ಬೇಡ. ಹಿರಿಯರ ಮಾರ್ಗದರ್ಶನ ಸಿಗಲಿದೆ.
ಮೀನ: ಸ್ಥಿರಾಸ್ತಿಯನ್ನು ಖರೀದಿಸುವ ಸಂದರ್ಭದಲ್ಲಿ ನಾನಾ ತೊಂದರೆಗಳು ಬರಬಹುದು. ಗೊಂದಲಗಳು ನಿಮ್ಮ ಖರೀದಿಸುವ ತೀರ್ಮಾನವನ್ನು ಬದಲಿಸಲೂಬಹುದು. ಆರ್ಥಿಕ ಒತ್ತಡದಿಂದ ನೀವು ಆಚೆ ಬಂದು ನೆಮ್ಮದಿಯನ್ನು ಕಾಣುವಿರಿ. ನಿಮ್ಮಲ್ಲಿ ಇಂದು ಹೆಚ್ಚು ಉತ್ಸಾವಿರಲಿದ್ದು ಕೆಲಸಕ್ಕೆ ಪೂರಕವಾಗಲಿದೆ. ಹಣದ ಹರಿವು ಸಾಧಾರಣವಾಗಿ ಇರುವುದು. ಪ್ರೀತಿಪಾತ್ರರ ವರ್ತನೆಯಿಂದ ಕಿರಿಕಿರಿ ಉಂಟಾಗಲಿದೆ. ನೀವೇ ನಿಮ್ಮ ಬಗ್ಗೆ ಹೇಳಿಕೊಳ್ಳುವುದು ಸರಿಯಾಗಲಾರದು. ಉಳಿದವರಿಗೆ ಇದು ಮುಜುಗರವನ್ನು ತಂದೀತು. ಉದ್ಯೋಗದಲ್ಲಿ ಆಲಸ್ಯದಿಂದ ಇರುವ ಕಾರಣ ಅಧಿಕಾರಿಗಳಿಂದ ಎಚ್ಚರಿಕೆಯ ಮಾತುಗಳೂ ಬರಬಹುದು.