Daily Horoscope 19 July: ಇಂದಿನ ರಾಶಿಭವಿಷ್ಯ, ಪ್ರೀತಿಯನ್ನು ಈ ರಾಶಿಯವರು ಲಘುವಾಗಿ ಸ್ವೀಕರಿಸಿ ಪ್ರಿಯಕರನಿಂದ ದೂರಾಗುವ ಸಾಧ್ಯತೆ ಇದೆ

ಇಂದಿನ (2023 ಜುಲೈ​ 19) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

Daily Horoscope 19 July: ಇಂದಿನ ರಾಶಿಭವಿಷ್ಯ, ಪ್ರೀತಿಯನ್ನು ಈ ರಾಶಿಯವರು ಲಘುವಾಗಿ ಸ್ವೀಕರಿಸಿ ಪ್ರಿಯಕರನಿಂದ ದೂರಾಗುವ ಸಾಧ್ಯತೆ ಇದೆ
ದಿನಭವಿಷ್ಯImage Credit source: Getty Images
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: Rakesh Nayak Manchi

Updated on: Jul 19, 2023 | 12:01 AM

ರಾಶಿ ಭವಿಷ್ಯ ಪ್ರತಿಯೊಬ್ಬರ ಜೀವನದಲ್ಲಿ ವಿಭಿನ್ನವಾಗಿರುತ್ತದೆ. ಪ್ರತಿನಿತ್ಯ ಬೆಳಗ್ಗೆ ಎದ್ದ ಕೂಡಲೇ ತಮ್ಮ ರಾಶಿ ಭವಿಷ್ಯ (Daily horoscope) ನೋಡುವುದು ಕೆಲವರಿಗೆ ಅಭ್ಯಾಸ. ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಜೊತೆಗೆ ಪಂಚಾಗವನ್ನು ಸಹ ಓದುತ್ತಾರೆ. ಹಾಗಾದರೆ ಇಂದಿನ (2023 ಜುಲೈ​ 19) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕರ್ಕಾಟಕ ಮಾಸ, ಮಹಾನಕ್ಷತ್ರ: ಪುನರ್ವಸು, ಮಾಸ: ಅಧಿಕ ಶ್ರಾವಣ, ಪಕ್ಷ: ಶುಕ್ಲ, ವಾರ: ಬುಧ, ತಿಥಿ: ದ್ವಿತೀಯಾ, ನಿತ್ಯನಕ್ಷತ್ರ: ಆಶ್ಲೇಷಾ, ಯೋಗ: ವಜ್ರ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 13 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 03 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:39 ರಿಂದ 02:15ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 07:50 ರಿಂದ 09:26ರ ವರೆಗೆ, ಗುಳಿಕ ಕಾಲ ಬೆಳಗ್ಗೆ 11:02 ರಿಂದ ಮಧ್ಯಾಹ್ನ 12:39ರ ವರೆಗೆ.

ಮೇಷ: ಸಮಸ್ಯೆಯ ಕುರಿತೇ ಹೆಚ್ಚು ಆಲೋಚನೆಯನ್ನು ಮಾಡುವಿರಿ. ಅಪ್ರಧಾನವಾದ ವಿಚಾರವು ನಿಮನ್ನು ಕಾಡಬಹುದು. ದೇಹದಲ್ಲಿ ಕೆಲವು ಕೆಲಸಗಳನ್ನು ಬಿಡುವಿರಿ. ನಾಯಕತ್ವವನ್ನು ನೀವು ನಿರಾಕರಿಸಬಹುದು. ಕೃಷಿಯಲ್ಲಿ ಆಸಕ್ತಿಯು ಹೆಚ್ಚಿದ್ದು ಮಾರ್ಗದರ್ಶನವನ್ನು ನೀವು ಬಯಸುವಿರಿ. ಅಪವ್ಯಯವನ್ನು ಕಡಿಮೆ ಮಾಡಿಕೊಳ್ಳಿ. ಉಳಿತಾಯಕ್ಕೆ ಬೇಕಾದ ಯೋಚನೆ ಇರಲಿ. ಮೌನವಾಗಿದ್ದು ನಿಮ್ಮ ಕಾರ್ಯವನ್ನು ಸಾಧಿಸುವಿರಿ. ಕುಟುಂಬದವರ ಜೊತೆ ಹೆಚ್ಚು ಕಾಲವನ್ನು ಕಳೆಯಲು ಆಗದು. ಸಂಗಾತಿಯ ಪ್ರೀತಿಯು ನಿಮಗೆ ಸಿಗಲಿದೆ.

ವೃಷಭ: ನಿಮ್ಮ ಆಲೋಚನೆಯಲ್ಲಿ ವ್ಯತ್ಯಾಸವಾಗಲಿದೆ. ವೃತ್ತಿಯಲ್ಲಿ ಬದಲಾವಣೆಯನ್ನು ಬಯಸುವಿರಿ. ಕಣ್ಣಿಗೆ ಕಾಣಿಸಿದ್ದನ್ನು ನೀವು ನಂಬಲಾರಿರಿ. ಸ್ನೇಹಿತರಿಂದ ಹಣಕಾಸಿನ ಸಹಾಯವನ್ನು ಬಯಸುವಿರಿ. ಹೊಸ ರೀತಿಯ ಆಲೋಚನೆಯಲ್ಲಿ ಮಾನಸಿಕ ಹಿತವು ಸಿಗಲಿದೆ. ಯಾರನ್ನೂ ಮೆಚ್ಚುವ ನಿಮ್ಮ ಗುಣವು ಶ್ಲಾಘನೀಯವಾಗಲಿದೆ. ಮನೆಯಿಂದ ಹೊರಗೆ ಭೋಜನವನ್ನು ಮಾಡುವಿರಿ. ಪ್ರಾರಂಭಿಸಿದ ಕೆಲಸದಲ್ಲಿ ಉತ್ಸಾಹ ಹೆಚ್ಚಿರಲಿದೆ. ತಲೆ ನೋವು ಇಂದು ಪೀಡಿಸಬಹುದು. ಪ್ರತ್ಯೇಕತೆಯಲ್ಲಿ ನಿಮಗೆ ಸುಖವಿದೆ ಎನಿಸಬಹುದು.

ಮಿಥುನ: ಇಂದು ಒತ್ತಡವಿಲ್ಲದೇ ಕಾರ್ಯವನ್ನು ಮಾಡುವಿರಿ. ದುರಭ್ಯಾಸವನ್ನು ನೀವು ರೂಢಿಸಿಕೊಂಡಿರುವುದು ಅರಿವಿಗೆ ಬರಲಿದೆ. ನಿಮ್ಮೊಳಗೆ ಅಳುಕು ಇರಲಿದ್ದು ಅದನ್ನು ಬಿಟ್ಟು ಮುನ್ನಡೆಯಬೇಕು. ಸಾಮಾಜಿಕ ಕಾರ್ಯಕ್ಕೆ ನಿಮಗೆ ಬೆಂಬಲವು ಸಿಗಲಿದೆ. ಸ್ನೇಹಿತರಿಂದ ನಿಮಗೆ ಉಡುಗೊರೆ ಸಿಗಲಿದೆ. ಖುಷಿಯಾಗಿರಲು ನಿಮಗೆ ಅನೇಕ ಕಾರಣಗಳು ಸಿಗಲಿದೆ. ಪ್ರಾಮಾಣಿಕತೆಯು ನಿಮಗೆ ಇಷ್ಟವಾಗಲಿದೆ. ಮಕ್ಕಳ ಜೊತೆ ಕಳೆಯಬೇಕು ಎನಿಸಬಹುದು. ತಾಳ್ಮೆಯ ಪರೀಕ್ಷೆಯೂ ಆಗಬಹುದು. ನಿಮ್ಮನ್ನು ಇಷ್ಟಪಡುವವರ ಸಂಖ್ಯೆ ಹೆಚ್ಚಾಗಲಿದೆ.

ಕಟಕ: ಇನ್ನೊಬ್ಬರ ವಿಷಯದಲ್ಲಿ ಮೂಗುತೂರಿಸುವ ಕೆಲಸವು ಅನವಶ್ಯಕ. ನಿಮ್ಮ ಶ್ರಮಕ್ಕೆ ಯೋಗ್ಯ ಆದಾಯವು ಇಲ್ಲ ಎನಿಸಬಹುದು. ಕುಟುಂಬವನ್ನು ಇಷ್ಟಪಡುವಿರಿ. ಕಾರಣಾಂತರಗಳಿಂದ ನಿಮ್ಮ ಜೀವನದ ಮಾರ್ಗವು ಬದಲಾಗಬಹುದು. ವಾದದಲ್ಲಿ ಸೋಲಾಗಬಹುದು. ನಿಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲು ಹೋಗಿ ಮುಗ್ಗರಿಸುವಿರಿ. ನೀವು ಮೋಸದ ಜಾಲಕ್ಕೆ ಸಿಕ್ಕಿಕೊಳ್ಳುವ ಸಂದರ್ಭವಿರಲಿದೆ. ನಿಮ್ಮ ಬೇಡಿಕೆಯನ್ನು ಮೇಲಧಿಕಾರಿಗಳು ಸ್ವೀಕರಿಸುವರು. ನಿಮ್ಮನ್ನು ಸಂಗಾತಿಯು ದೂರಬಹುದು. ಸರ್ಕಾರದ ಕೆಲಸವು ನಿಧಾನಗತಿಯಲ್ಲಿ ಸಾಗುವುದು. ಆರೋಗ್ಯವನ್ನು ಕಾಪಾಡಿಕೊಳ್ಳಿ.

ಸಿಂಹ: ಸಂಕಟವನ್ನು ಪರಿಹರಿಸಿಕೊಳ್ಳುವ ಮಾರ್ಗವು ವಿಳಂಬವಾಗಿ ಸಿಗಲಿದೆ. ಇದು ನಿಮ್ಮ ಇಂದಿನ ಖುಷಿಯ ಸಂಗತಿಯೂ ಹೌದು. ಪರರ ವಸ್ತುವನ್ನು ಅವರಿಗೆ ಹಿಂತಿರುಗಿಸಿ. ನಿದ್ರೆ ಇಲ್ಲದೇ ಮನಸ್ಸಿಗೆ ಕಿರಿಕಿರಿಯಾಗಲಿದೆ. ದಾಂಪತ್ಯದಲ್ಲಿ ಹೊಂದಾಣಿಕೆಗೆ ಇಬ್ಬರೂ ಕಷ್ಟಪಡುವಿರಿ. ವಿದೇಶದಲ್ಲಿರುವ ಬಂಧುಗಳಿಗೆ ಆರೋಗ್ಯದಲ್ಲಿ ತೊಂದರೆಯಾಗಬಹುದು. ನಿಮ್ಮಿಂದ ಆಗದ ಕೆಲಸವನ್ನು ಮತ್ತೊಬ್ಬರು ಮಾಡಿ ಮುಗಿಸುವರು. ಸಣ್ಣ ವಿಚಾರವನ್ನು ದೊಡ್ಡ ಮಾಡಿಕೊಳ್ಳಬೇಡಿ. ಸುಮ್ಮನೇ ಸಮಯವು ವ್ಯರ್ಥವಾಗುತ್ತಿದೆ ಎಂದನಿಸಬಹುದು. ಶಿವನಿಗೆ ರುದ್ರಾಭಿಷೇಕವನ್ನು ಮಾಡಿಸಿ.

ಕನ್ಯಾ: ಇಂದಿನ ಕಾರ್ಯದ ಗುರಿಯನ್ನು ನೀವು ಸಹೋದ್ಯೋಗಿಗಳ ಸಹಕಾರದಿಂದ ಮಾಡುವಿರಿ. ನಿಮಗೆ ನಿರೀಕ್ಷಿತ ಉದ್ಯೋಗವು ಸಿಗಲಿದ್ದು ಮನೆಯಲ್ಲಿ ಚರ್ಚೆಗಳು ನಡೆಯಬಹುದು. ನಿಮ್ಮ ದಿವಸದ ವ್ಯವಸ್ಥೆಯನ್ನು ಸರಿಮಾಡಿಕೊಳ್ಳಿ. ಇನ್ನೊಬ್ಬರ ಮಾತಿನಿಂದ ಯಾರನ್ನೂ ಅಳೆಯುವುದು ಬೇಡ. ನಿಮ್ಮದೇ ಆದ ಸಂಸ್ಥೆಯನ್ನು ಹುಟ್ಟು ಹಾಕಲು ಪ್ರಯತ್ನಿಸುವಿರಿ. ಆಯಾಸದಿಂದ ನೀವು ವಿಶ್ರಾಂತಿಯನ್ನು ಪಡೆಯುವಿರಿ. ನಿಮ್ಮವರ ಮೇಲೆ ಸಿಡಿಮಿಡಿಗೊಳ್ಳುವಿರಿ. ಸಂಗಾತಿಯು ನಿಮ್ಮನ್ನು ಸಮಾಧಾನ ಮಾಡಬಹುದು.

ತುಲಾ: ಭೂಮಿಯನ್ನು ಖರೀದಿಸುವ ಯೋಗವು ಬಂದಿದ್ದರೂ ಹಣವನ್ನು ಸೇರಿಸಲು ಕಷ್ಟವಾದೀತು. ನಿಮ್ಮ ಸಮಯಪಾಲನೆಗೆ ಅಧಿಕಾರಿಗಳಿಂದ ಪ್ರಶಂಸೆಯು ಸಿಕ್ಕೀತು. ನೀವು ನಿಮ್ಮದೇ ಆದ ಚೌಕಟ್ಟನ್ನು ರಚಿಸಿಕೊಳ್ಳಬೇಕಾಗಬಹುದು‌. ಸ್ನೇಹಿತರ ಜೊತೆ ಸುತ್ತಾಟ ಮಾಡುವಿರಿ. ಮರೆಯಲ್ಲಿದ್ದ ಪ್ರೇಮವನ್ನು ನೀವು ತಿಳಿಸಬೇಕಾದವರಿಗೆ ಹೇಳುವಿರಿ. ನಿಮ್ಮ ಸ್ಥಾನಕ್ಕಾಗಿ ಮತ್ಯಾರನ್ನೋ ಕೆಳಗಿಳಿಸುವ ಹುನ್ನಾರ ನಡೆಸುವಿರಿ. ನಿಮ್ಮ ಬಂಧುಗಳನ್ನು‌ ನೀವು ಬಹಳ ಎಚ್ಚರಿಕೆಯಿಂದ ಕರೆದುಕೊಂಡು ಹೋಗಬೇಕಾದೀತು.‌ ನಿಮ್ಮ ಪ್ರತಿ ಮಾತೂ ತೂಕಕ್ಕೆ ಹೋಗಬಹುದು.

ವೃಶ್ಚಿಕ: ಮೇಲಧಿಕಾರಿಗಳ ಕಿರುಕುಳವು ನಿಮಗೆ ಬಹಳ ಕಷ್ಟವಾದೀತು. ಉದ್ಯೋಗವನ್ನು ಬದಲಿಸಲು ಸ್ನೇಹಿತರ ಸಲಹೆಯನ್ನು ಪಡೆಯುವಿರಿ. ಸ್ವಾರ್ಥವನ್ನು ಬಿಡಲು ನಿಮಗೆ ಇಂದು ಸುಸಂದರ್ಭ. ದೂರದಲ್ಲಿ ಇರುವ ನಿಮಗೆ ಕುಟುಂಬದ ವಾರ್ತೆಯು ಸಂತೋಷವನ್ನು ತರುವುದು. ಪ್ರೀತಿಯನ್ನು ನೀವು ಲಘುವಾಗಿ ಸ್ವೀಕರಿಸಿ ಪ್ರಿಯಕರನಿಂದ ದೂರಾಗುವ ಸಾಧ್ಯತೆ ಇದೆ. ಬೇಗ ಮುಗಿಯಬಹುದಾದ ಕೆಲಸವನ್ನು ಮೊದಲು ಮಾಡಿ ಮುಗಿಸಿ. ಸಹೋದರನ ಆರೋಗ್ಯವು ನಿಮ್ಮನ್ನು ಕುಗ್ಗಿಸಬಹುದು. ಆರೋಗ್ಯದ ಸುಧಾರಣೆಗೆ ದೇವರಲ್ಲಿ ಪ್ರಾರ್ಥನೆಯನ್ನು ಸಲ್ಲಿಸಿ.‌ ಗೋವಿನ ಸೇವೆಯು ನಿಮಗೆ ಹೆಚ್ಚು ಅನುಕೂಲವಾಗಲಿದೆ.

ಧನುಸ್ಸು: ಯಂತ್ರೋಪಕರಣವನ್ನು ಬಳಸಿಕೊಂಡು ಹೊಸ ಉದ್ಯೋಗವನ್ನು ನೀವು ಆರಂಭಿಸಲಿದ್ದೀರಿ. ವಿದೇಶದಲ್ಲಿ ಇರುವವರಿಗೆ ಸಂಕಟವಾಗಬಹುದು. ಪುರಾಣಪ್ರವಚನದಲ್ಲಿ ನೀವು ಭಾಗವಹಿಸುವಿರಿ. ನಿಮ್ಮ ದೌರ್ಬಲ್ಯವನ್ನು ನೀವು ವರವಾಗಿ ಪಡೆದು ಸಾಧಿಸಬೇಕೆನಿಸಬಹುದು. ವಿದೇಶದ ಬಂಧುಗಳು ನಿಮ್ಮ ಉದ್ಯಮಕ್ಕೆ ಬೇಕಾದ ಸಹಾಯವನ್ನು ಮಾಡುವರು. ಪೂರ್ವಯೋಜಿತ ಕಾರ್ಯಕ್ಕೆ ನೀವು ಸಮಯವನ್ನು ಹೊಂದಿಸಿಕೊಳ್ಳಲು ಕಷ್ಟವಾದೀತು. ನಿಮ್ಮ ದುಂದು ವೆಚ್ಚಕ್ಕೆ ಸಂಗಾತಿಯು ಬ್ರೇಕ್ ಹಾಕಬಹುದು. ಇಂದು ನಿಮಗೆ ಪ್ರತಿಭಟನೆಯ ಮನೋಭಾವವು ಇರಲಿದೆ.

ಮಕರ: ಆರ್ಥಿಕ ಲಾಭದಿಂದ ನೀವು ಸಂತೋಷವಾಗಿ ಇರಲಿದ್ದು ನಿಮ್ಮ ಮುಖದಲ್ಲಿ ನೆಮ್ಮದಿಯು ಕಾಣಲಿದೆ. ವಾಹನವನ್ನು ಖರೀದಿಸುವ ಮೊದಲು ಆಪ್ತರ ಸಲಹೆಯನ್ನು ಪಡೆಯಿರಿ. ಸಾಲ ಮಾಡುವಾಗ ನಿಮ್ಮ ಆದಾಯವನ್ನು ಗಮನದಲ್ಲಿ ಇಟ್ಟುಕೊಳ್ಳಿ. ತಾಯಿಯ ಆರೋಗ್ಯವನ್ನು ಸರಿಮಾಡಿಸಲು ಹಣಕಾಸಿನ ವ್ಯಯವಾಗಲಿದೆ. ಪ್ರಭಾವೀ ಜನರ ಭೇಟಿಯಿಂದ ನಿಮಗೆ ಅನೇಕ ಲಾಭಗಳು ಆಗಲಿದೆ. ಮಹತ್ಕಾರ್ಯಕ್ಕೆ ನಿಮ್ಮದೊಂದು ಸಣ್ಣ ಕೊಡುಗೆ ಇರಲಿದೆ. ನಿಮಗೆ ಕೊಟ್ಟ ಜವಾಬ್ದಾರಿಯಿಂದ ನೀವು ಹಿಮ್ಮುಖರಾಗುವಿರಿ. ಅಗ್ನಿಭೀತಿಯು ನಿಮ್ಮನ್ನು ಕಾಡಬಹುದು.

ಕುಂಭ: ನಿಮ್ಮ ವ್ಯವಹಾರದಲ್ಲಿ ನಿಮಗೆ ವಂಚನೆಯಾಗಲಿದೆ. ಆರೋಗ್ಯವನ್ನು ಸರಿಮಾಡಿಕೊಳ್ಳಲು ವೈದ್ಯರ ಭೇಟಿ ಮಾಡುವಿರಿ. ನೀವು ಹಾಕಿಕೊಂಡ ದಿನಚರಿಯನ್ನು ಬದಲಾಯಿಸಿಕೊಳ್ಳುವಿರಿ. ನಿಮ್ಮ ಕಳುವಾದ ವಸ್ತುವು ಸಿಗಲಿದೆ. ರಾಜಕೀಯದಿಂದ ಪ್ರೇರಿತವಾದ ಮಾತುಗಳು ನಿಮಗೆ ಶೋಭೆಯನ್ನು ತರದು. ಆಸಕ್ತಿ ಇಲ್ಲದೇ ಇದ್ದರೂ ಕೆಲವು ಕೆಲಸಗಳನ್ನು ಮಾಡಲೇಬೇಕಾದೀತು. ಮನಸ್ಸು ಚಂಚಲವಾಗಿವ ಯಾರ ಮಾತನ್ನೂ ಕೇಳುವ ಮನಃಸ್ಥಿತಿ ಇರದು. ದೂರದ ಬಂಧುಗಳು ಪರಿಚಿತರಾಗಿ ಹತ್ತಿರವಾಗಬಹುದು. ವಿದ್ಯಾರ್ಥಿಗಳು ಓದಿನತ್ತ ಗಮನಕೊಡುವುದು ಒಳ್ಳೆಯದು. ಕೃತಜ್ಞತೆ ಇರಲಿ. ಕುಲದೇವರ ಸನ್ನಿಧಿಗೆ ಹೋಗಲಿದ್ದೀರಿ.

ಮೀನ: ಇಂದು ನಿಮ್ಮ‌ ಮಾತಿನ ಮೇಲೆ‌ ನಿಯಂತ್ರಣ ಅತ್ಯವಶ್ಯಕ. ನಿಮ್ಮ ವಸ್ತುವು ಕಳ್ಳತನ ಆಗುವ ಭಯವು ಕಾಡಲಿದೆ. ಇನ್ನೊಬ್ಬರ ಬಳಿ‌ ಇರುವ ನಿಮ್ಮ‌ ವಸ್ತುವನ್ನು ನೀವು ಪಡೆದುಕೊಳ್ಳುವಿರಿ. ನಿಮ್ಮ ಬಂಧುಗಳ ಸಹಕಾರದಿಂದ ನಿಮ್ಮ ಸಾಲಬಾಧೆಯು ಪರಿಹಾರವಾಗಲಿದೆ. ಅನಾರೋಗ್ಯವನ್ನು ಸರಿ ಮಾಡಿಕೊಳ್ಳುವಲ್ಲಿ ನಿಮ್ಮ ಪ್ರಯತ್ನವಿರುವುದು. ಇಂದು ವಿವಾಹದ ಮಾತುಕತೆಗಳನ್ನು ಆಡಲು ಹೋಗಲಿದ್ದೀರಿ. ನಿಮ್ಮ ಸಮಯವನ್ನು ಇತರರು ವ್ಯರ್ಥ ಮಾಡಬಹುದು. ನಿಮ್ಮ ಬಗ್ಗೆ ಕೆಲವು ಊಹಾಪೋಹಗಳು ಹರಡುವುವು.

ಮುಡಾ ಅಧಿಕಾರಿಗಳು ತಾಯಿಯ ಒಡಲನ್ನು ಬಗೆಯುತ್ತಿದ್ದಾರೆ: ಸ್ನೇಹಮಯಿ ಕೃಷ್ಣ
ಮುಡಾ ಅಧಿಕಾರಿಗಳು ತಾಯಿಯ ಒಡಲನ್ನು ಬಗೆಯುತ್ತಿದ್ದಾರೆ: ಸ್ನೇಹಮಯಿ ಕೃಷ್ಣ
ದಾಸರಹಳ್ಳಿ ವಲಯ ಕಚೇರಿ ಇಂಜನೀಯರ್ ಯದುಕೃಷ್ಣ ಸಿಕ್ಕಿಬಿದ್ದ ಅಧಿಕಾರಿ
ದಾಸರಹಳ್ಳಿ ವಲಯ ಕಚೇರಿ ಇಂಜನೀಯರ್ ಯದುಕೃಷ್ಣ ಸಿಕ್ಕಿಬಿದ್ದ ಅಧಿಕಾರಿ
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್